AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

75ನೇ ವಯಸ್ಸಿನಲ್ಲೂ ಕಾಮದಾಹ: ಸೊಸೆಯನ್ನೂ ಬಿಡದ ಕಾಮುಕ ತಂದೆಯನ್ನ ಕೊಂದ ಮಗ

ಯಾದಗಿರಿ ಜಿಲ್ಲೆಯ ಗೋನಾಳ ಗ್ರಾಮದಲ್ಲಿ ನಡೆದ 75 ವರ್ಷದ ವೃದ್ಧನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಸ್ತಿ ಇದೆ ಅಂತ ಮೋಜು ಮಸ್ತಿ ಮಾಡಿಕೊಂಡು ಸಿಕ್ಕ ಸಿಕ್ಕ ಮಹಿಳೆಯರೊಂದಿಗೆ ತನ್ನ ಕಾಮದಾಹ ತೀರಿಸಿಕೊಳ್ಳುತ್ತಿದ್ದ. ಸಾಲದಕ್ಕೆ ಮಗನ ಹೆಂಡ್ತಿ ಅಂದ್ರೆ ಸೊಸೆಯನ್ನೂ ಸಹ ತನ್ನ ತೀಟೆಗೆ ಬಳಿಸಿಕೊಂಡಿದ್ದು, ಇದೀಗ ಅದೇ ಕಾಮ ವೃದ್ಧನ ಬಲಿ ಪಡೆದುಕೊಂಡಿದೆ.

75ನೇ ವಯಸ್ಸಿನಲ್ಲೂ ಕಾಮದಾಹ: ಸೊಸೆಯನ್ನೂ ಬಿಡದ ಕಾಮುಕ ತಂದೆಯನ್ನ ಕೊಂದ ಮಗ
ಪಂಪಣ್ಣ, ಕೊಲೆಯಾದ ವೃದ್ಧ
ಅಮೀನ್​ ಸಾಬ್​
| Edited By: |

Updated on:Mar 19, 2026 | 11:04 PM

Share

ಯಾದಗಿರಿ, (ಮಾರ್ಚ್ 19):  ಜಿಲ್ಲೆಯ ಗೋನಾಳ ಗ್ರಾಮದ ಮಗನಿಂದಲೇ ತಂದೆ ಕೊಲೆ ಪ್ರಕರಣಕ್ಕೆ (Gonal Pampanna Murder Case) ಟ್ವಿಸ್ಟ್ ಸಿಕ್ಕಿದೆ. 75 ವಯಸ್ಸಾಗಿದ್ರೂ ಕಾಮದಾಟಕ್ಕಾಗಿ ಮಹಿಳೆಯರ ಜೊತೆ ಸಂಬಂಧ (illicit relationship )ಇಟ್ಟುಕೊಂಡು, ಸೊಸೆಯನ್ನೂ ಬಿಡದ ತಂದೆಯನ್ನು ಕಂಡು ಮಾರ್ಯಾದೆಗೆ ಹೆದರಿ ಮಗನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ತನಿಖೆ ವೇಳೆ ಬಯಲಾಗಿದೆ. ಹೌದು… ಗೋನಾಳ ಗ್ರಾಮದಲ್ಲಿ 6 ದಿನಗಳ ಹಿಂದೆ ಅಂದ್ರೆ ಮಾರ್ಚ್ 12 ರ ರಾತ್ರಿ 74 ವರ್ಷದ ಪಂಪಣ್ಣ ಸಜ್ಜನ ಎಂಬಾತನ ಕೊಲೆಯಾಗಿತ್ತು. ಕೊಲೆ ನಡೆದ ಬಳಿಕ ಈ ಹಂಪಣ್ಣ ಸಜ್ಜನ ಪುತ್ರ ಶರಣಬಸಪ್ಪ ವಡಗೇರ ಪೊಲೀಸ್ ಠಾಣೆಗೆ ದೂರು ನೀಡಿದ್ದ.ಬಳಿಕ ಕೇಸ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರಂಭದಲ್ಲಿ ಕೊಲೆ ಯಾರು ಮಾಡಿದ್ದಾರೆ ಎಂದು ಗೊತ್ತಾಗದ ಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ ಕೊಲೆ ನಡೆದ ನಾಲ್ಕು ದಿನಗಳ ಬಳಿಕ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು.  ಹಂತಕರಾದ ರಮೇಶ್, ಜಿ.ವಿರೇಶ್, ಎಂ.ವಿರೇಶ್ ಹಾಗೂ ಕೃಷ್ಟನನ್ನು ವಡಗೇರಾ ಪೊಲೀಸರು ಬಂಧಿಸಿದ್ದಾರೆ.

ಮಗನೇ ತಂದೆ ಹತ್ಯೆಗೆ ಸುಪಾರಿ

ಪೊಲೀಸರು ಆರೋಪಿಗಳನ್ನ ಅರೆಸ್ಟ್ ಮಾಡಿದ ಬಳಿಕ 75 ವರ್ಷ ವೃದ್ದ ಹಂಪಣ್ಣನ ಕೊಲೆ ಹಿಂದಿನ ರಹಸ್ಯ ಬಯಲಿಗೆ ಬಂದಿದೆ. ಕೊಲೆ ಮಾಡಿದ್ದು ಮಾತ್ರ ತಿರುಪತಿ ಮೂಲದ ನಾಲ್ಕು ಜನರು. ಆದ್ರೆ, ಕೊಲೆಗೆ ಸುಪಾರಿ ಕೊಟ್ಟಿದ್ದು ಮಾತ್ರ ಹಂಪಣ್ಣ ಸಜ್ಜನ ಪುತ್ರ ನರಸರೆಡ್ಡಿ. ಮಗನೇ ತಂದೆಯನ್ನ ಸುಪಾರಿ ಕೊಟ್ಟು ಕೊಲೆ ಮಾಡಿಸಿದರ ಹಿಂದೆ ಒಂದು ಕಾರಣವೂ ಸಹ ಇದೆ. ಅದನ್ನೂ ಪೊಲೀಸರು ಹಂತಕರಿಂದ ಕಕ್ಕಿಸಿದ್ದಾರೆ. ಮೊದಲು  ಆಸ್ತಿಗಾಗಿ ಕೊಲೆ ಮಾಡಿರುವುದಾಗಿ ಶಂಕಿಸಿದ್ದರು. ಆದರೆ ತನಿಖೆ ವೇಳೆ, ಕೊಲೆಯಾದ ತಂದೆಯ ಮೊಬೈಲ್‌ನಲ್ಲಿ ಫೋಟೋಗಳು ಸಿಕ್ಕಿದ್ದು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಇದನ್ನೂ ಓದಿ: 76ರ ವಯಸ್ಸಿನಲ್ಲಿ ಅಕ್ರಮ ಸಂಬಂಧ?: ಒಬ್ಬಂಟಿಯಾಗಿದ್ದ ವೃದ್ಧನ ಭೀಕರ ಹತ್ಯೆ

ಮೊಬೈಲ್‌ನಲ್ಲಿ ಸಿಕ್ಕಿದ್ದೇನು?

ಮೃತನ ಮೊಬೈಲ್‌ನಲ್ಲಿ ಹಲವು ಮಹಿಳೆಯರ ಜೊತೆ ತೆಗೆದುಕೊಂಡ ಫೋಟೋ ಸಿಕ್ಕಿದ್ದು, ಅನೈತಿಕ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ. ಕೊಲೆಯಾದ ವ್ಯಕ್ತಿ ತನ್ನ ಮಕ್ಕಳ ಜೊತೆ ಊರಲ್ಲಿ ಇರದೇ ಕಾಮದಾಟಕ್ಕಾಗಿ ಹೊಲದಲ್ಲಿ ವಾಸವಾಗಿದ್ದ. 48 ಎಕರೆ ಜಮೀನು ಹೊಂದಿದ್ದು, ಇದರಲ್ಲಿ  ತನ್ನ ಮೂರು ಜನ ಮಕ್ಕಳಿಗೆ ತಲಾ 4 ಎಕರೆ ಎಂಬಂತೆ 12 ಎಕರೆ ಜಮೀನು ನೀಡಿದ್ದ. ಇನ್ನುಳಿದ 36 ಎಕರೆ ಜಮೀನು ತನ್ನ ಹೆಸರಿಗೆ ಇಟ್ಟುಕೊಂಡು ಬಂದ ಆದಾಯದಲ್ಲಿ ಶೋಕಿ ಮಾಡುತ್ತಿದ್ದ.

ಸೊಸೆಯನ್ನೂ ಬಿಡದೇ ಸಿಕ್ಕ ಸಿಕ್ಕ ಮಹಿಳೆಯರ ಜತೆ ಕಾಮದಾಟ

ಊರಲ್ಲಿ ಮೂರ ಜನ ಮಕ್ಕಳ ಮನೆ ಇದ್ದರೂ ಸಹ ಕಳೆದ 15 ವರ್ಷಗಳಿಂದ ಜಮೀನಲ್ಲಿ ಶೆಡ್ ಹಾಕಿಕೊಂಡು ಪತ್ನಿ ಜೊತೆ ವಾಸವಾಗಿದ್ದ. ಆದ್ರೆ,  ಕಳೆದ 8 ವರ್ಷಗಳ ಹಿಂದೆ ಪತ್ನಿ ಸಾವನ್ನಪ್ಪಿದ್ದ ಬಳಿಕವೂ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ. ಅಲ್ಲದೇ ಮದ್ಯವ್ಯಸನಿಯೂ ಕೂಡ ಆಗಿದ್ದ. ತನ್ನ ಕಾಮತೃಷೆ ಈಡೇರಿಸಿಕೊಳ್ಳಲು ದುಡ್ಡು ಕೊಟ್ಟು ಬೇರೆ ಮಹಿಳೆಯರನ್ನು ಶೆಡ್​​ಗೆ ಕರೆಸಿಕೊಳ್ಳುತ್ತಿದ್ದ. ಅದೇ ರೀತಿ ಮಗನ ಹೆಂಡ್ತಿ ಅಂದರೆ ಸೊಸೆ, ಜಮೀನಿಗೆ ಕೆಲಸಕ್ಕೆ ಬಂದವರನ್ನೂ ಬಿಡುತ್ತಿರಲಿಲ್ಲ.  ಕೊನೆಗೆ ತನ್ನ ಪತ್ನಿಯ ಜೊತೆಗೆ ತಂದೆ ಅನೈತಿಕ ಸಂಬಂಧ ಹೊಂದಿರುವ ವಿಚಾರ ಗೊತ್ತಾಗಿದ್ದೇ ತಡ ನರಸರೆಡ್ಡಿ ರೊಚ್ಚಿಗೆದ್ದಿದ್ದು, ತಂದೆಯನ್ನೇ ಮುಗಿಸಿಬಿಡುವ ಪ್ಲ್ಯಾನ್ ಮಾಡಿದ್ದ. ಕಾಮಿಷ್ಟ ತಂದೆಯಿಂದ ಬೇಸತ್ತು ಹೋಗಿದ್ದ ಮಗ ನಾಲ್ವರನ್ನು ಕರೆಸಿ, 2 ಲಕ್ಷ ರೂ. ನೀಡಿ ಕೊಲೆ ಮಾಡುವಂತೆ ಸುಪಾರಿ ಕೊಟ್ಟಿದ್ದ ಎಂದು ತನಿಖೆ ವೇಳೆ ಬಯಲಿಗೆ ಬಂದಿದೆ.

ಒಟ್ಟಿನಲ್ಲಿ 74 ವಯಸ್ಸಾಗಿದ್ದರೂ ಸಹ ಹಂಪಣ್ಣ ತನ್ನ ಕಾಮದಾಹ ತೀರಿಸಿಕೊಳ್ಳಲು ಹಣದ ಆಮೀಷ ತೋರಿಸಿ ಅನೇಕ ಮಹಿಳೆಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಸಾಲದಕ್ಕೆ ತನ್ನ ಮಗನ ಪತ್ನಿಯನ್ನೂ ಸಹ ತನ್ನ ಕಾಮದಾಟಕ್ಕೆ ಬಳಸಿಕೊಂಡು ಕೊಲೆಯಾಗಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:44 pm, Thu, 19 March 26

Follow Us
ಕಡುವಿನಹೊಸಹಳ್ಳಿಯಲ್ಲಿ ಯುಗಾದಿ ಹೊನ್ನಾರು ಸಂಭ್ರಮ
ಕಡುವಿನಹೊಸಹಳ್ಳಿಯಲ್ಲಿ ಯುಗಾದಿ ಹೊನ್ನಾರು ಸಂಭ್ರಮ
ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌ ಅಭ್ಯಾಸ; ವಿಡಿಯೋ ನೋಡಿ
ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌ ಅಭ್ಯಾಸ; ವಿಡಿಯೋ ನೋಡಿ
ಹುತ್ತಕ್ಕೆ ಕೈಹಾಕಿ ಹಾವನ್ನೆತ್ತಿ ಆಡಿದ ಬಾಲಕ; ಶಾಕಿಂಗ್ ವಿಡಿಯೋ ನೋಡಿ
ಹುತ್ತಕ್ಕೆ ಕೈಹಾಕಿ ಹಾವನ್ನೆತ್ತಿ ಆಡಿದ ಬಾಲಕ; ಶಾಕಿಂಗ್ ವಿಡಿಯೋ ನೋಡಿ
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು!
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು!
'ಕೈ' ಟಿಕೆಟ್​​ ಸಿಗದಿದ್ರೆ BJPಯಿಂದ ಶಾಮನೂರು ಮೊಮ್ಮಗ ಸ್ಪರ್ಧೆ!: ಯತ್ನಾಳ್​
'ಕೈ' ಟಿಕೆಟ್​​ ಸಿಗದಿದ್ರೆ BJPಯಿಂದ ಶಾಮನೂರು ಮೊಮ್ಮಗ ಸ್ಪರ್ಧೆ!: ಯತ್ನಾಳ್​
ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್​ನ ಅತಿದೊಡ್ಡ ಎಲ್​ಎನ್​ಜಿ ಸ್ಥಾವರ
ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್​ನ ಅತಿದೊಡ್ಡ ಎಲ್​ಎನ್​ಜಿ ಸ್ಥಾವರ
ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್​​ ಹೇಳಿಕೆಗೆ ಡಿಕೆಶಿ ಉತ್ತರ ನೋಡಿ
ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್​​ ಹೇಳಿಕೆಗೆ ಡಿಕೆಶಿ ಉತ್ತರ ನೋಡಿ
ಸೊಸೆ ಕೈ ಮುರಿದಿದೆ ಕಷ್ಟವಾಗುತ್ತೆಂದು ರೊಟ್ಟಿ ಲಟ್ಟಿಸಿಕೊಟ್ಟ ಮಾವ
ಸೊಸೆ ಕೈ ಮುರಿದಿದೆ ಕಷ್ಟವಾಗುತ್ತೆಂದು ರೊಟ್ಟಿ ಲಟ್ಟಿಸಿಕೊಟ್ಟ ಮಾವ
ಯುಗಾದಿ ವರ್ಷ ಭವಿಷ್ಯ; ಈ ವರ್ಷ ಮೀನ ರಾಶಿಯವರಿಗೆ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ವರ್ಷ ಮೀನ ರಾಶಿಯವರಿಗೆ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ವರ್ಷ ಕುಂಭ ರಾಶಿಯವರಿಗೆ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ವರ್ಷ ಕುಂಭ ರಾಶಿಯವರಿಗೆ ಹೇಗಿರಲಿದೆ?