AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಪ್ರಚಾರ ಹೀಗೂ ಮಾಡ್ತಾರಾ? ರಾಜಮೌಳಿ ಬುದ್ಧಿವಂತಿಕೆ ಮೆಚ್ಚಲೇಬೇಕು

ರಾಜಮೌಳಿ ತಮ್ಮ 'ವಾರಣಾಸಿ' ಚಿತ್ರದ ಪ್ರಚಾರಕ್ಕೆ ವಿಶಿಷ್ಟ ತಂತ್ರ ಬಳಸಿದ್ದಾರೆ. ಸಿನಿಮಾ ಹೆಸರಿಲ್ಲದೆ, ಕೇವಲ ಬಿಲ್ ಬೋರ್ಡ್‌ಗಳಲ್ಲಿ ರಿಲೀಸ್ ದಿನಾಂಕ 'ಏಪ್ರಿಲ್ 7, 2027' ಘೋಷಿಸುವ ಮೂಲಕ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದ್ದಾರೆ. ಮಹೇಶ್ ಬಾಬು, ಪ್ರಿಯಾಂಕಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಬಹುಕೋಟಿ ವೆಚ್ಚದ ಸಿನಿಮಾ.

ಸಿನಿಮಾ ಪ್ರಚಾರ ಹೀಗೂ ಮಾಡ್ತಾರಾ? ರಾಜಮೌಳಿ ಬುದ್ಧಿವಂತಿಕೆ ಮೆಚ್ಚಲೇಬೇಕು
ರಾಜಮೌಳಿ Image Credit source: Twitter
ರಾಜೇಶ್ ದುಗ್ಗುಮನೆ
|

Updated on:Jan 30, 2026 | 7:32 AM

Share

ಸಿನಿಮಾ ಮೇಕಿಂಗ್ ವಿಷಯದಲ್ಲಿ ರಾಜಮೌಳಿ (SS Rajamouli) ಎಷ್ಟು ಗಮನ ಹರಿಸುತ್ತಾರೋ ಅದೇ ರೀತಿ ಸಿನಿಮಾ ಪ್ರಚಾರಕ್ಕೂ ಅವರು ಅಷ್ಟೇ ಪ್ರಾಮುಖ್ಯತೆ ನೀಡುತ್ತಾರೆ. ಈ ಕಾರಣದಿಂದಲೇ ರಾಜಮೌಳಿ ಅವರ ಸಿನಿಮಾ ಅಷ್ಟು ದೊಡ್ಡ ಮಟ್ಟದಲ್ಲಿ ತಲುಪುತ್ತದೆ. ಈಗ ಅವರು ‘ವಾರಣಾಸಿ’ ಸಿನಿಮಾ ಪ್ರಚಾರಕ್ಕೆ ದೊಡ್ಡ ಮಟ್ಟದ ಯೋಜನೆ ರೂಪಿಸಿದ್ದಾರೆ. ಸಿನಿಮಾ ಟೈಟಲ್ ಹಾಕದೆ ರಿಲೀಸ್ ದಿನಾಂಕ ಘೋಷಿಸಿದ್ದಾರೆ.

ರಾಜಮೌಳಿ ‘ವಾರಣಾಸಿ’ ಸಿನಿಮಾ ಘೋಷಣೆ ಮಾಡಿದ್ದಾರೆ. ಮಹೇಶ್ ಬಾಬು ಚಿತ್ರಕ್ಕೆ ಹೀರೋ. ಈ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ. ಆದರೆ, ಸಿನಿಮಾ ತಂಡ ರಿಲೀಸ್ ದಿನಾಂಕ ಘೋಷಣೆ ಮಾಡಿರಲಿಲ್ಲ. ಈಗ ವಾರಾಣಸಿಯಲ್ಲಿ ದೊಡ್ಡದಾದ ಬಿಲ್ ಬೋರ್ಡ್​​ಗಳು ರಾರಾಜಿಸಿದ್ದು‘ಏಪ್ರಿಲ್ 7, 2027’ ಎಂದು ಬರೆಯಲಾಗಿದೆ.

ಎಲ್ಲಿಯೂ ರಾಜಮೌಳಿ ಅವರು ತಮ್ಮ ಸಿನಿಮಾ ಹೆಸರನ್ನು ಹಾಕಿಲ್ಲ. ಕೊನೆ ಪಕ್ಷ ಇದು ಯಾವ ಸಿನಿಮಾ ಎಂದು ಊಹಿಸುವ ಪೋಸ್ಟರ್​​ಗಳನ್ನು ಕೂಡ ಬಳಕೆ ಮಾಡಿಲ್ಲ. ಆದಾಗ್ಯೂ ಇದು ರಾಜಮೌಳಿ ಅವರದ್ದೇ ಸಿನಿಮಾ ಎಂದು ಅನೇಕರು ಊಹಿಸಿದ್ದಾರೆ. ವಾರಾಣಸಿಯಲ್ಲೇ ಅವರು ಈ ರೀತಿ ಸಿನಿಮಾ ರಿಲೀಸ್ ದಿನಾಂಕ ತಿಳಿಸಿರೋದು ವಿಶೇಷ ಎನಿಸಿಕೊಂಡಿದೆ. ಏಪ್ರಿಲ್ 7 ಯುಗಾದಿ. ಹಬ್ಬದ ಸಮಯದಲ್ಲೇ ಸಿನಿಮಾ ತೆರೆಗೆ ಬರುತ್ತಿದೆ.

ರಾಜಮೌಳಿ ಫ್ಲೆಕ್ಸ್​​​ಗಳನ್ನು ಹಾಕಿದ್ದು ವಾರಾಣಸಿಯಲ್ಲೇ ಆದರು, ‘ವಾರಣಾಸಿ’ ಸಿನಿಮಾದ ರಿಲೀಸ್ ದಿನಾಂಕದ ವಿಷಯ ಇಡೀ ದೇಶಾದ್ಯಂತ ಚರ್ಚೆ ಆಗಿದೆ. ಆ ಸಂದರ್ಭದಲ್ಲಿ ಶಾಲೆಗಳು ಕೂಡ ಪೂರ್ಣಗೊಂಡಿರುತ್ತವೆ. ಹೀಗಾಗಿ, ಕುಟುಂಬ ಸಮೇತ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಿರುತ್ತದೆ.

ಈ ಮೊದಲು ರಾಜಮೌಳಿ ಅವರು ‘ವಾರಣಾಸಿ’ ಟೈಟಲ್ ಲಾಂಚ್ ಮಾಡಲು ದೊಡ್ಡದಾದ ಈವೆಂಟ್ ಮಾಡಿದ್ದರು. ಹೈದರಾಬಾದ್​​ನಲ್ಲಿ ಈ ಈವೆಂಟ್ ನಡೆದಿತ್ತು. ಇದಕ್ಕೆ 20-25 ಕೋಟಿ ರೂಪಾಯಿ ಖರ್ಚಾಗಿತ್ತು ಎನ್ನಲಾಗಿದೆ. ಈಗ ಅವರು ಬಿಲ್​​ಬೋರ್ಡ್​​ಗಳನ್ನು ನಿಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ: ರಾಜಮೌಳಿಯ ‘ವಾರಣಾಸಿ’ಗಿಂತ ಮೂರು ಪಟ್ಟು ಹೆಚ್ಚು ವೀವ್ಸ್ ಪಡೆದ ‘ಟಾಕ್ಸಿಕ್’ ಟೀಸರ್

‘ವಾರಣಾಸಿ’ ಸಿನಿಮಾ ದೊಡ್ಡ ಬೆಜಟ್​​ನಲ್ಲಿ ರೆಡಿ ಆಗುತ್ತಿರುವ ಸಿನಿಮಾ. ತೆಲುಗು ಜೊತೆಗೆ ಪರಭಾಷೆಗಳಲ್ಲೂ ಸಿನಿಮಾ ಡಬ್ ಆಗಲಿದೆ. ‘ಆರ್​ಆರ್​ಆರ್’ ಬಳಿಕ ಬರುತ್ತಿರುವ ಸಿನಿಮಾ ಇದಾಗಿದೆ. ಮಹೇಶ್ ಬಾಬು, ಪ್ರಿಯಾಂಕಾ ಜೊತೆ ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್ ಕೂಡ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:31 am, Fri, 30 January 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ
ಮಾಗಡಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಸ ಕಂಡು ಗರಂ ಆದ್ರು ಸಚಿವ ಬಾಲಕೃಷ್ಣ!
ಮಾಗಡಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಸ ಕಂಡು ಗರಂ ಆದ್ರು ಸಚಿವ ಬಾಲಕೃಷ್ಣ!
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!