AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ: ಚಾಪ್ಟರ್ 1’ದಲ್ಲಿ ನಟಿಸಿದ್ದಾರೆ ಕನ್ನಡದ ಈ ಹಿರಿಯ ಕಲಾವಿದ; ಸೆನ್ಸಾರ್ ಸರ್ಟಿಫಿಕೇಟ್​ನಿಂದ ಹೊರ ಬಿತ್ತು ವಿಚಾರ

"ಕಾಂತಾರ: ಚಾಪ್ಟರ್ 1" ಸಿನಿಮಾದಲ್ಲಿ ಈ ಹಿರಿಯ ನಟ ನಟಿಸುತ್ತಿರುವುದು ದೃಢಪಟ್ಟಿದೆ. ಈ ಚಿತ್ರವು ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ ಮತ್ತು ಅಕ್ಟೋಬರ್ 1 ರಂದು ಪ್ರೀಮಿಯರ್ ಶೋ ನಡೆಯಲಿದೆ. ಚಿತ್ರಕ್ಕೆ 'ಯುಎ 16+' ಸೆನ್ಸಾರ್ ಪ್ರಮಾಣಪತ್ರ ದೊರೆತಿದ್ದು, ಪ್ರಕಾಶ್ ತುಮಿನಾಡ್ ಮತ್ತು ಪ್ರಮೋದ್ ಶೆಟ್ಟಿ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಕಾಂತಾರ: ಚಾಪ್ಟರ್ 1’ದಲ್ಲಿ ನಟಿಸಿದ್ದಾರೆ ಕನ್ನಡದ ಈ ಹಿರಿಯ ಕಲಾವಿದ; ಸೆನ್ಸಾರ್ ಸರ್ಟಿಫಿಕೇಟ್​ನಿಂದ ಹೊರ ಬಿತ್ತು ವಿಚಾರ
Kantara Chapter 1
ರಾಜೇಶ್ ದುಗ್ಗುಮನೆ
|

Updated on:Sep 24, 2025 | 12:51 PM

Share

‘ಕಾಂತಾರ: ಚಾಪ್ಟರ್ 1’ (Kantara) ಸಿನಿಮಾದ ಪಾತ್ರವರ್ಗದ ಬಗ್ಗೆ ರಿಷಬ್ ಶೆಟ್ಟಿ ಸಾಕಷ್ಟು ಗುಟ್ಟು ಕಾಯ್ದುಕೊಂಡು ಬಂದಿದ್ದರು. ಟ್ರೇಲರ್ ರಿಲೀಸ್ ಸಮೀಪಿಸಿದ ಬಳಿಕ ಒಂದೊಂದಾಗೇ ಪಾತ್ರಗಳ ಅನಾವರಣ ಆಗುತ್ತಾ ಬಂತು. ‘ಕಾಂತಾರ’ ಸಿನಿಮಾದಲ್ಲಿ ನಟಿಸಿದ್ದ ಅನೇಕ ಕಲಾವಿದರು ಈ ಚಿತ್ರದ ಭಾಗ ಕೂಡ ಆಗಿದ್ದಾರೆ. ಈಗ ಸಿನಿಮಾದಲ್ಲಿ ಓರ್ವ ಪ್ರಮುಖ ಕಲಾವಿದ ನಟಿಸಿರೋ ವಿಷಯ ರಿವೀಲ್ ಆಗಿದೆ. ಅದುವೇ ಅಚ್ಯುತ್ ಕುಮಾರ್. ಈ ವಿಷಯ ಅನೇಕರಿಗೆ ಅಚ್ಚರಿ ಮೂಡಿಸಿದೆ.

‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಆಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಕಥೆ ಸಾಗೋದು 4ನೇ ಶತಮಾನದ ಸಂದರ್ಭದಲ್ಲಿ. ಈ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ‘ಕಾಂತಾರ’ ಸಿನಿಮಾದಲ್ಲಿ ನಟಿಸಿದ್ದ ಪ್ರಕಾಶ್ ತುಮಿನಾಡ್ ಹಾಗೂ ಪ್ರಮೋದ್ ಶೆಟ್ಟಿ ‘ಕಾಂತಾರ: ಚಾಪ್ಟರ್ 1’ ಟ್ರೇಲರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಅಚ್ಯುತ್ ಕುಮಾರ್ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ
Image
ಪುನೀತ್ ರಾಜ್​ಕುಮಾರ್ ಯಾವಾಗಲೂ ಸರಳ ಉಡುಗೆ ಧರಿಸುತ್ತಿದ್ದಿದ್ದೇಕೆ?
Image
ಸಾಯಿ ಪಲ್ಲವಿ ಪಡಿಯಚ್ಚು ಪೂಜಾ ಕಣ್ಣನ್;  ಕನ್​ಫ್ಯೂಸ್ ಆಗೋದು ಗ್ಯಾರಂಟಿ
Image
‘ಓಜಿ’ ಟ್ರೇಲರ್ ಈವೆಂಟ್​ನಲ್ಲಿ ಮಳೆಯಲ್ಲಿ ನೆನೆದು ಹಾಸಿಗೆ ಹಿಡಿದ ಪವನ್
Image
‘BBK 12’ ಆರಂಭಕ್ಕೆ ಕೆಲವೇ ದಿನ ಬಾಕಿ ಇರುವಾಗ ಬಂತು ಸ್ಪರ್ಧಿಗಳ ಹೊಸ ಪಟ್ಟಿ

ಸದ್ಯ ‘ಕಾಂತಾರ’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ.  ಸೆನ್ಸಾರ್ ಪ್ರಮಾಣ ಪತ್ರದ ಫೋಟೋ ವೈರಲ್ ಆಗಿದೆ. ಚಿತ್ರಕ್ಕೆ ‘ಯುಎ 16+’ ಪ್ರಮಾಣ ಪತ್ರ ಸಿಕ್ಕಿದೆ. ಅಂದರೆ, 16 ವರ್ಷಕ್ಕಿಂತ ಕೆಳಗಿನವರು ಈ ಚಿತ್ರವನ್ನು ಪಾಲಕರ ಜೊತೆ ವೀಕ್ಷಿಸಬಹುದು. ಉಳಿದಂತೆ 16 ವರ್ಷ ಮೇಲ್ಪಟ್ಟವರು ಸಿನಿಮಾ ನೋಡಲು ಯಾವುದೇ ತೊಂದರೆ ಇಲ್ಲ ಎಂದರ್ಥ.

ಸೆನ್ಸಾರ್ ಪ್ರಮಾಣಪತ್ರದಲ್ಲಿ ಪ್ರಮುಖ ಪಾತ್ರಧಾರಿಗಳ ಹೆಸರು ಉಲ್ಲೇಖ ಆಗಿದೆ. ಇದರಲ್ಲಿ ಅಚ್ಯುತ್ ಕುಮಾರ್ ಹೆಸರು ಕೂಡ ಇದೆ. ಈ ಮೂಲಕ ಅವರು ಕೂಡ ಈ ಸಿನಿಮಾದಲ್ಲಿ ನಟಿಸಿರೋದು ಪಕ್ಕಾ ಎನ್ನಲಾಗುತ್ತಿದೆ. ದೀಪಕ್ ರೈ ಪಣಜೆ ಕೂಡ ಚಿತ್ರದಲ್ಲಿ ಇದ್ದಾರೆ.

ಇದನ್ನೂ ಓದಿ: ‘ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ರಾಜ್, ರಕ್ಷಿತ್ ಸಹಾಯ ಮಾಡಿಲ್ಲ’; ರಿಷಬ್ ಶೆಟ್ಟಿ

‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಅಂದರೆ ಅಕ್ಟೋಬರ್ 1ರಂದು ಚಿತ್ರದ ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:51 pm, Wed, 24 September 25

ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ವಿಧಾನಸಭೆ ಚುನಾವಣೆಗೆ ತಾನು ಈ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿ ಎಂದ ಪ್ರತಾಪ್​
ವಿಧಾನಸಭೆ ಚುನಾವಣೆಗೆ ತಾನು ಈ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿ ಎಂದ ಪ್ರತಾಪ್​