
kantara
‘ಕಾಂತಾರ’ ಸಿನಿಮಾ ರಿಷಬ್ ಶೆಟ್ಟಿ ನಿರ್ದೇಶಿಸಿದ ಚಿತ್ರ. ಇದರ ಪ್ರೀಕ್ವೆಲ್ ಆಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಡಿ ಬಂದಿದೆ. ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಇದೆ. ದೊಡ್ಡ ಬಜೆಟ್ನಲ್ಲಿ ಸಿದ್ಧ ಆಗುತ್ತಿರುವ ಈ ಸಿನಿಮಾ 2025ರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಮೊದಲ ಭಾಗದಲ್ಲಿ ದೈವದ ಕಥೆ ಹೇಳಲಾಗಿತ್ತು. ಈಗ ‘ಕಾಂತಾರ: ಚಾಪ್ಟರ್ 1’ ಚಿತ್ರದ ಕಥೆಯು ಕದಂಬರ ಕಾಲದಲ್ಲಿ ಸಾಗುತ್ತದೆ. ಇದರಲ್ಲೂ ದೈವದ ವಿಚಾರವೇ ಹೈಲೈಟ್ ಆಗಲಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ಗಳು ಗಮನ ಸೆಳೆದಿವೆ. ಈ ಚಿತ್ರವು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುವ ನಿರೀಕ್ಷೆ ಇದೆ. ಈ ಚಿತ್ರದ ಶೂಟಿಂಗ್ ಕುಂದಾಪುರದಲ್ಲಿ ನಡೆಯುತ್ತಿದೆ. ರಿಷಬ್ ಜೊತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಚಿತ್ರದ ಹವಾ; ಸೂಪರ್ ಸ್ಟಾರ್ಗಳನ್ನು ಹಿಂದಿಕ್ಕಿದ ರಿಷಬ್ ಶೆಟ್ಟಿ
ಪರಭಾಷೆಯ ಘಟಾನುಘಟಿ ನಟರ ಸಿನಿಮಾಗಳನ್ನು ‘ಕಾಂತಾರ: ಚಾಪ್ಟರ್ 1’ ಚಿತ್ರ ಹಿಂದಿಕ್ಕಿದೆ. ಆ ಮೂಲಕ ನಂಬರ್ ಒನ್ ಸ್ಥಾನ ಪಡೆದಿದೆ. ರಿಷಬ್ ಶೆಟ್ಟಿ ಅವರ ಮೇಲೆ ಸಿನಿಪ್ರಿಯರಿಗೆ ಎಷ್ಟು ನಿರೀಕ್ಷೆ ಇದೆ ಎಂಬುದಕ್ಕೆ ಇದೇ ಸಾಕ್ಷಿ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ.
- Madan Kumar
- Updated on: Apr 24, 2025
- 6:16 pm
ರಿಷಬ್ ಶೆಟ್ಟಿ ಸಂಸಾರದ ಬಗ್ಗೆ ದೈವ ಹೇಳಿದ್ದೇನು? ಸಂಸಾರ ಪದಕ್ಕೆ ಇದೆ ಬೇರೆ ಅರ್ಥ
ರಿಷಬ್ ಶೆಟ್ಟಿ ಅವರು ವಾರಾಹಿ ಪಂಜುರ್ಲಿ ದೈವದ ಎದುರು ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಈ ವೇಳೆ ದೈವ ಹೇಳಿದ ಮಾತುಗಳ ಬಗ್ಗೆ ಕೆಲವರಿಗೆ ಗೊಂದಲ ಮೂಡಿದೆ. ರಿಷಬ್ ಶೆಟ್ಟಿ ಸಂಸಾರದ ಬಗ್ಗೆ ದೈವ ನುಡಿದಿದೆ. ಆದರೆ ಇಲ್ಲಿ ಸಂಸಾರ ಎಂದರೆ ಬೇರೆಯೇ ಅರ್ಥ ಇದೆ.
- Ashok
- Updated on: Apr 7, 2025
- 6:22 pm
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು? ಇಲ್ಲಿದೆ ವಿವರ
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ವಾರಾಹಿ ಪಂಜುರ್ಲಿ ದೈವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆ ಸಂದರ್ಭದಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ದೈವಸ್ಥಾನದ ಗೌರವಾಧ್ಯಕ್ಷರಾದ ರವಿ ಪ್ರಸನ್ನ ಅವರು ವಿವರಿಸಿದ್ದಾರೆ. ಪತ್ನಿ ಹಾಗೂ ಮಕ್ಕಳ ಜೊತೆ ಬಂದು ರಿಷಬ್ ಶೆಟ್ಟಿ ಅವರು ದೈವದ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.
- Ashok
- Updated on: Apr 7, 2025
- 4:30 pm