AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೈವ ಅವಮಾನಿಸಿದ ರಣವೀರ್​ಗೆ ರಿಷಬ್ ಕೊಟ್ಟ ಉತ್ತರ ಹೇಗಿತ್ತು ನೋಡಿ

ಗೋವಾ ಸಿನಿಮೋತ್ಸವದಲ್ಲಿ ರಣವೀರ್ ಸಿಂಗ್ ದೈವವನ್ನು ಅಸಭ್ಯವಾಗಿ ಅನುಕರಿಸಿ ವಿವಾದ ಸೃಷ್ಟಿಸಿದರು. 'ಕಾಂತಾರ'ದ ಬಗ್ಗೆ ಹೊಗಳಿದರೂ, ದೈವವನ್ನು 'ದೆವ್ವ' ಎಂದಿದ್ದಲ್ಲದೆ ಅವಮಾನ ಮಾಡಿದರು. ಇದಕ್ಕೆ ರಿಷಬ್ ಶೆಟ್ಟಿ ವೇದಿಕೆಯಲ್ಲೇ ನೇರವಾಗಿ ಹೇಳದೆ, ಸಂಜ್ಞೆ ಮೂಲಕ ರಣವೀರ್‌ಗೆ ಸಭ್ಯ ಉತ್ತರ ನೀಡಿದ್ದು ಈಗ ವೈರಲ್ ಆಗಿದೆ.

ದೈವ ಅವಮಾನಿಸಿದ ರಣವೀರ್​ಗೆ ರಿಷಬ್ ಕೊಟ್ಟ ಉತ್ತರ ಹೇಗಿತ್ತು ನೋಡಿ
ರಣವೀರ್-ರಿಷಬ್
ರಾಜೇಶ್ ದುಗ್ಗುಮನೆ
|

Updated on: Dec 01, 2025 | 12:38 PM

Share

ರಿಷಬ್ ಶೆಟ್ಟಿ (Rishab Shetty) ಅವರು ಇತ್ತೀಚೆಗೆ ಗೊವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದರು. ಅವರು ಮಾಡಿದ ‘ಕಾಂತಾರ: ಚಾಪ್ಟರ್ 1’ ಚಿತ್ರದ ಬಗ್ಗೆ ಈ ಸಿನಿಮೋತ್ಸವದಲ್ಲಿ ಚರ್ಚೆಯಾಯಿತು. ಅವರಿಗೆ ಸಿಕ್ಕ ಬಹುತೇಕರು ಸಿನಿಮಾನ ಹೊಗಳಿದರು. ಇದಕ್ಕೆ ರಣವೀರ್ ಸಿಂಗ್ ಕೂಡ ಹೊರತಾಗಿಲ್ಲ. ಆದರೆ, ಅವರು ಈ ವೇಳೆ ಎಡವಟ್ಟು ಮಾಡಿಕೊಂಡರು. ದೈವವನ್ನು ದೆವ್ವ ಎಂದರು. ಅಲ್ಲದೆ, ದೈವವನ್ನು ಅನುಕರಿಸಲು ಹೊಗಿ ಟೀಕೆಗೆ ಗುರಿಯಾಗಿದ್ದಾರೆ. ರಿಷಬ್ ಅವರು ರಣವೀರ್​ಗೆ ಅದೇ ವೇದಿಕೆ ಮೇಲೆ ಉತ್ತರ ನೀಡಿದ್ದಾರೆ. ಈ ವಿಡಿಯೋ ತಡವಾಗಿ ವೈರಲ್ ಆಗಿದೆ.

ರಣವೀರ್ ಸಿಂಗ್ ಅವರು ‘ಧರುಂದರ್’ ಹೆಸರಿನ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಪ್ರಚಾರವನ್ನು ರಣವೀರ್ ಈ ವೇದಿಕೆ ಮೇಲೆ ಮಾಡಿದ್ದಾರೆ. ಸಣ್ಣ ವಿಷಯ ಸಿಕ್ಕರೂ ಹೆಚ್ಚು ಎಗ್ಸೈಟ್ ಆದಂತೆ ನಟಿಸೋದು ರಣವೀರ್ ಅವರ ಅಭ್ಯಾಸ. ‘ಕಾಂತಾರ’ ಹೊಗಳುವಲ್ಲಿ ಅವರು ಇದನ್ನೇ ಮಾಡಿದರು. ಆಗ ಎಡವಟ್ಟು ಸಂಭವಿಸಿತು. ರಿಷಬ್ ಅವರ ನಟನೆ ಹೊಗಳಿದ ರಣವೀರ್ ಅವರು, ‘ದೆವ್ವ ಮೈಮೇಲೆ ಬಂದಂತೆ ನಟಿಸಿದ್ದು ಅದ್ಭುತವಾಗಿತ್ತು’ ಎಂದು ರಣವೀರ್ ಹೇಳಿದ್ದಾರೆ.

ಇದನ್ನೂ ಓದಿ: ದೈವ ಅವಮಾನಿಸಿದ ರಣವೀರ್ ಸಿಂಗ್​ಗೆ ಕೌಂಟರ್ ಕೊಟ್ಟ ಅಮೇಜಾನ್ ಪ್ರೈಮ್ ವಿಡಿಯೋ

ರಣವೀರ್ ಅವರು ಇಷ್ಟಕ್ಕೆ ನಿಲ್ಲಿಸಿಲ್ಲ. ದೈವವನ್ನು ಅವರು ತಮ್ಮ ವಿಚಿತ್ರ ಸ್ಟೈಲ್​ನಲ್ಲಿ ಅನುಕರಿಸಿದ್ದಾರೆ. ಈ ಮೂಲಕ ಸಂಸ್ಕೃತಿಗೆ ಅವರು ಅವಮಾನ ಮಾಡಿದ್ದಾರೆ.ಈ ಸಂದರ್ಭದಲ್ಲಿ ರಿಷಬ್ ಅವರು ಮುಖ ಮುಚ್ಚಿಕೊಳ್ಳುತ್ತಿದ್ದರು. ಅವರಿಗೆ ಏನು ಹೇಳಬೇಕು ಎಂಬುದೇ ಗೊತ್ತಾಗಿಲ್ಲ. ರಿಷಬ್ ಅವರು ರಣವೀರ್​ಗೆ ಉತ್ತರ ನೀಡಬೇಕಿತ್ತು ಎಂಬುದು ಅನೇಕರ ಅಭಿಪ್ರಾಯ ಆಗಿತ್ತು. ಅಸಲಿಗೆ ರಿಷಬ್ ಅವರು ರಣವೀರ್​ಗೆ ಉತ್ತರ ನೀಡಿಯೇ ಬಂದಿದ್ದಾರೆ.

ವೇದಿಕೆಯಿಂದ ಇಳಿದು ಬಂದ ರಣವೀರ್ ಸಿಂಗ್ ಅವರು ರಿಷಬ್​ನ ಹಗ್​ ಮಾಡಲು ಬಂದರು. ಆಗ ಅವರು ಮತ್ತೆ ದೈವವನ್ನು ಅನುಕರಿಸುವ ಪ್ರಯತ್ನ ಮಾಡಿದ್ದಾರೆ. ಆಗ ರಿಷಬ್ ಅವರು ಹಾಗೆ ಮಾಡಬಾರದು ಎಂದು, ಬೆರಳಲ್ಲೇ ಸನ್ನೆ ಮಾಡಿ ತೋರಿಸಿದ್ದಾರೆ. ರಣವೀರ್ ಸಿಂಗ್ ಅವರು ಬಾಲಿವುಡ್​ನ ಖ್ಯಾತ ನಟ. ಅವರಿಗೆ ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಲು ಸಾಧ್ಯವಿಲ್ಲ. ಹೀಗಾಗಿ, ರಿಷಬ್ ಅವರು ಈ ತಂತ್ರ ಉಪಯೋಗಿಸಿದರು. ಆದರೂ ಅವರು ತಿದ್ದಿಕೊಂಡಂತೆ ಕಾಣಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ