Rishab Shetty
ರಿಷಬ್ ಶೆಟ್ಟಿ ಕನ್ನಡದ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ. ಕನ್ನಡ ಸಿನಿಮಾಗಳನ್ನು ಮಾಡಿ ಫೇಮಸ್ ಆಗಿದ್ದಾರೆ. ಮೊದಲು ಅವರು ನಟನಾಗಿ ಫೇಮಸ್ ಆದರು. ಆ ಬಳಿಕ ‘ರಿಕ್ಕಿ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದರು. ‘ಕಿರಿಕ್ ಪಾರ್ಟಿ’ (2016) ಅವರಿಗೆ ಜನಪ್ರಿಯತೆ ನೀಡಿತು. ನಂತರ ನಿರ್ದೇಶನದಲ್ಲಿ ಹೆಚ್ಚು ತೊಡಗಿಕೊಂಡರು. ನಟನಾಗಿಯೂ ಗಮನ ಸೆಳೆದರು. ‘ಕಾಂತಾರ’ (2022) ಚಿತ್ರದಿಂದ ಅವರು ಅಪಾರ ಮನ್ನಣೆ ಪಡೆದರು. ಇದರಿಂದ ಪ್ಯಾನ್ ಇಂಡಿಯಾ ಹೀರೋ ಆದರು. ಈ ಸಿನಿಮಾ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸುವುದರೊಂದಿಗೆ ಭಾರಿ ಯಶಸ್ಸನ್ನು ಗಳಿಸಿತು. ವಿಶಿಷ್ಟವಾದ ಪ್ರಾದೇಶಿಕ ನಿರೂಪಣೆಗಳೊಂದಿಗೆ ಸಿನಿಮಾ ಗೆದ್ದಿತ್ತು. ಅವರ ಸಿನಿಮಾದಲ್ಲಿ ಸ್ಥಳೀಯ ಸಂಸ್ಕೃತಿ ಮತ್ತು ಜಾನಪದ ಅಂಶವನ್ನು ತಮ್ಮ ಸಿನಿಮಾದಲ್ಲಿ ತರುತ್ತಾರೆ. ಅವರು ಪ್ರಗತಿ ಶೆಟ್ಟಿಯನ್ನು ಮದುವೆ ಆಗಿದ್ದಾರೆ