AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಚಾರ ನಿಯಂತ್ರಕರ ಕೊಠಡಿಗೇ ನುಗ್ಗಿದ BMTC ಬಸ್! ವಿಡಿಯೋ ನೋಡಿ

ಸಂಚಾರ ನಿಯಂತ್ರಕರ ಕೊಠಡಿಗೇ ನುಗ್ಗಿದ BMTC ಬಸ್! ವಿಡಿಯೋ ನೋಡಿ

Kiran Surya
| Edited By: |

Updated on: Mar 20, 2026 | 10:02 AM

Share

ಬೆಂಗಳೂರಿನ ಪೀಣ್ಯ 2ನೇ ಹಂತದ ಬಿಎಂಟಿಸಿ ಡಿಪೋದಲ್ಲಿ ಎಲೆಕ್ಟ್ರಿಕ್ ಬಸ್ಸನ್ನು ಚಾಲಕ ಹ್ಯಾಂಡ್ ಬ್ರೇಕ್ ಹಾಕದೇ ನಿಲ್ಲಿಸಿ ತೆರಳಿದ್ದರಿಂದ ಅಪಘಾತ ಸಂಭವಿಸಿದೆ. ಬಸ್ ಸೀದಾ ಸಂಚಾರ ನಿಯಂತ್ರಕರ ಕೊಠಡಿಗೇ ನುಗ್ಗಿದೆ. ಘಟನೆಯಲ್ಲಿ ನಾಲ್ಕು ಬೈಕ್​ಗಳು ಜಖಂ ಆಗಿವೆ. ಅದೃಷ್ಟವಶಾತ, ಸಾವು-ನೋವು ಸಂಭವಿಸಿಲ್ಲ. ವಿಡಿಯೋ ಇಲ್ಲಿದೆ ನೋಡಿ.

ಬೆಂಗಳೂರು, ಮಾರ್ಚ್ 20: ಚಾಲಕನ ನಿರ್ಲಕ್ಷ್ಯದಿಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸೊಂದು ಸಂಚಾರ ನಿಯಂತ್ರಕರ ಕೊಠಡಿಗೇ ನುಗ್ಗಿದ ಘಟನೆ ಪೀಣ್ಯ 2ನೇ ಹಂತದ ಬಿಎಂಟಿಸಿ ಡಿಪೋದಲ್ಲಿ ನಡೆದಿದೆ. ಅದೃಷ್ಟವಶಾತ್, ದೊಡ್ಡ ಅವಘಡ ತಪ್ಪಿದೆ. KA 51 AK 4169 ಸಂಖ್ಯೆಯ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸನ್ನು ಚಾಲಕ ಹ್ಯಾಂಡ್ ಬ್ರೇಕ್ ಹಾಕದೇ ನಿಲ್ಲಿಸಿ ತೆರಳಿದ ಪರಿಣಾಮ, ಬಸ್ ಸ್ವಯಂಚಾಲಿತವಾಗಿ ಮುಂದೆ ಚಲಿಸಿ ಡಿಪೋ ಒಳಗೆ ನುಗ್ಗಿದೆ. ಈ ವೇಳೆ ಡಿಪೋದ ಸಂಚಾರ ನಿಯಂತ್ರಕರ ಕೊಠಡಿಗೆ ಬಸ್ ಡಿಕ್ಕಿ ಹೊಡೆದಿದೆ.

ಬಸ್ ಗುದ್ದಿದ ಪರಿಣಾಮ ನಾಲ್ಕು ಬೈಕ್‌ಗಳು ಜಖಂ ಆಗಿವೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ಬಳಿಕ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us