ರಾಯರಲ್ಲಿ ತಾಯಿ ಹರಕೆ; ರಿಷಬ್ ಶೆಟ್ಟಿ ಜನಿಸಿದ್ದೇ ಗುರುವಾರ: ಅಚ್ಚರಿಯ ವಿಷಯ ತಿಳಿಸಿದ ನಟ
ಮಂತ್ರಾಲಯದಲ್ಲಿ ರಾಯರ ಗುರುವೈಭವೋತ್ಸವ ಕಾರ್ಯಕ್ರಮ ನಡೆದಿದೆ. ರಿಷಬ್ ಶೆಟ್ಟಿ, ಜಗ್ಗೇಶ್ ಮುಂತಾದವರು ಅದರಲ್ಲಿ ಭಾಗಿ ಆಗಿದ್ದಾರೆ. ಈ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಅವರು ಮಾತನಾಡಿದರು. ರಾಯರಲ್ಲಿ ತಾಯಿ ಹರಕೆ ಕಟ್ಟಿಕೊಂಡಿದ್ದರಿಂದ ತಾವು ಗುರುವಾರವೇ ಜನಿಸಿದ್ದು ಎಂದು ರಿಷಬ್ ಶೆಟ್ಟಿ ಅವರು ಹೇಳಿದರು.
ಮಂತ್ರಾಲಯದಲ್ಲಿ ರಾಯರ ಗುರುವೈಭವೋತ್ಸವ ಕಾರ್ಯಕ್ರಮ ನಡೆದಿದೆ. ಅದರಲ್ಲಿ ಜಗ್ಗೇಶ್ (Jaggesh), ರಿಷಬ್ ಶೆಟ್ಟಿ ಮುಂತಾದವರು ಭಾಗಿ ಆಗಿದ್ದಾರೆ. ಈ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಅವರು ಮಾತನಾಡಿದರು. ರಾಯರಲ್ಲಿ ತಾಯಿ ಹರಕೆ ಕಟ್ಟಿಕೊಂಡಿದ್ದರಿಂದ ತಾವು ಗುರುವಾರವೇ ಜನಿಸಿದ್ದು ಎಂದು ರಿಷಬ್ ಶೆಟ್ಟಿ ಅವರು ಹೇಳಿದರು. ‘ಇದು ನಾನು ಎಲ್ಲಿಯೂ ಹಂಚಿಕೊಳ್ಳದೇ ಇರುವ ವಿಚಾರ. ಆಗ ನಾನು ಹುಟ್ಟಿರಲಿಲ್ಲ. ನಮ್ಮ ಮನೆ ತುಂಬಾ ಕಷ್ಟದಲ್ಲಿ ಇದ್ದಂತಹ ಕಾಲ ಅದು. ಮಗ ಹುಟ್ಟಲಿ, ಅವನು ಹುಟ್ಟಿದ ಮೇಲೆ ಒಳ್ಳೆಯದಾಗಲಿ ಅಂತ ರಾಯರಲ್ಲಿ ನಮ್ಮ ತಾಯಿ ಹರಕೆ ಹೊತ್ತುಕೊಂಡರು. ಆನಂತರವೇ ನಾನು ಹುಟ್ಟಿದ್ದು. ನಾನು ಗುರುವಾರವೇ ಜನಿಸಿದ್ದು. ಏನೇ ಕಷ್ಟ ಬಂದರೂ ರಾಯರಿಂದ ಒಳ್ಳೆಯದಾಗತ್ತೆ ಅಂತ ನಮ್ಮ ತಾಯಿ ಹೇಳುತ್ತಾರೆ. ಶೂಟಿಂಗ್ ವೇಳೆ ಏನೇ ಸಮಸ್ಯೆ ಬಂದರೂ ರಾಯರನ್ನು ನೆನಪಿಸಿಕೊಂಡರೆ ಪರಿಹಾರ ಆಗುತ್ತದೆ’ ಎಂದು ರಿಷಬ್ ಶೆಟ್ಟಿ (Rishab Shetty) ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಸೆಲೆಬ್ರಿಟಿಗಳಿಗೆ ಏಕೆ ಅಗ್ನಿಪರೀಕ್ಷೆ ಇಲ್ಲ? ಕಿಚ್ಚ ಸುದೀಪ್ ಸ್ಪಷ್ಟನೆ

