AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸತೊಡಕು ಸಡಗರ: ಮಟನ್ ಬೆಲೆ 1500 ರೂ. ತಲುಪಿದ್ರೂ ಕಮ್ಮಿ ಆಗಿಲ್ಲ ಜನಜಂಗುಳಿ

ಹೊಸತೊಡಕು ಸಡಗರ: ಮಟನ್ ಬೆಲೆ 1500 ರೂ. ತಲುಪಿದ್ರೂ ಕಮ್ಮಿ ಆಗಿಲ್ಲ ಜನಜಂಗುಳಿ

ಅಕ್ಷಯ್​ ಪಲ್ಲಮಜಲು​​
|

Updated on: Mar 20, 2026 | 8:06 AM

Share

ಯುಗಾದಿ ಹಬ್ಬದ ಮರುದಿನ ಆಚರಿಸಲಾಗುವ ಹೊಸತೊಡಕಿಗೆ, ರಾಜ್ಯಾದ್ಯಂತ ಮಾಂಸದ ಖರೀದಿಯ ಭರಾಟೆ ಜೋರಾಗಿದೆ. ಬೆಂಗಳೂರು, ಮೈಸೂರು, ದೇವನಹಳ್ಳಿ, ಮಂಡ್ಯ ಸೇರಿದಂತೆ ಹಲವೆಡೆ ಮಟನ್ ಬೆಲೆ ಕೆ.ಜಿ.ಗೆ 1000 ರೂ.ನಿಂದ 1500 ರೂ. ವರೆಗೆ ತಲುಪಿದೆ. ಬೆಳ್ಳಂಬೆಳಗ್ಗೆಯೇ ಮಾಂಸದಂಗಡಿಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತು ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರು, ಮಾ.20: ನೆನ್ನೆಯಷ್ಟೇ (ಮಾ.19) ಯುಗಾದಿ ಹಬ್ಬವನ್ನು ರಾಜ್ಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಅದರ ಮರುದಿನವಾದ ಇಂದು, ಹೊಸತೊಡಕು ಆಚರಣೆಗೆ ಜನರು ಭರ್ಜರಿ ಮಾಂಸ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರು, ದೇವನಹಳ್ಳಿ, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವು ನಗರಗಳಲ್ಲಿ ಮಾಂಸದಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ಹೊಸತೊಡಕಿನ ಹಿನ್ನೆಲೆಯಲ್ಲಿ, ಮಟನ್ ಬೆಲೆ ಒಂದು ಕೆಜಿಗೆ 1000 ರೂ.ನಿಂದ 1500 ರೂ. ವರೆಗೆ ಏರಿಕೆ ಕಂಡಿದೆ. ಬೆಲೆ ಎಷ್ಟೇ ಹೆಚ್ಚಿದ್ದರೂ, ಜನರು ತಮ್ಮ ಸಾಂಪ್ರದಾಯಿಕ ಆಚರಣೆಯನ್ನು ಪೂರೈಸಲು ಉತ್ಸಾಹದಿಂದ ಮಾಂಸ ಖರೀದಿಸುತ್ತಿದ್ದಾರೆ. ಬೆಂಗಳೂರಿನ ಪಾಪಣ್ಣ ಮಟನ್ ಸ್ಟಾಲ್, ದೇವನಹಳ್ಳಿಯ ಎಲಿಯೂರು ಮತ್ತು ಮೈಸೂರಿನ ಕನ್ನೇಗೌಡನ ಕೊಪ್ಪಲ್ ಸೇರಿದಂತೆ ಪ್ರಮುಖ ಮಾಂಸದ ಮಳಿಗೆಗಳಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಮಟನ್ ಖರೀದಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಪ್ರತಿ ವರ್ಷದಂತೆ, ಈ ವರ್ಷವೂ ಕೂಡ ಹೊಸತೊಡಕಿಗೆ ಮಾಂಸದ ಬೇಡಿಕೆ ಹೆಚ್ಚಿದ್ದು, ಜನರು ಸಂಭ್ರಮದಿಂದ ಖರೀದಿಯಲ್ಲಿ ನಿರತರಾಗಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More