AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೈವ ಅವಮಾನಿಸಿದ ರಣವೀರ್ ಸಿಂಗ್​ಗೆ ಕೌಂಟರ್ ಕೊಟ್ಟ ಅಮೇಜಾನ್ ಪ್ರೈಮ್ ವಿಡಿಯೋ

ನಟ ರಣವೀರ್ ಸಿಂಗ್ ಗೋವಾದಲ್ಲಿ ಕಾಂತಾರ ದೈವವನ್ನು 'ದೆವ್ವ' ಎಂದಿದ್ದು ವಿವಾದ ಸೃಷ್ಟಿಸಿದೆ. ರಿಷಬ್ ಶೆಟ್ಟಿಗೂ ಮುಜುಗರ ತಂದ ಈ ಘಟನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗ ಅಮೇಜಾನ್ ಪ್ರೈಮ್ ವಿಡಿಯೋ, ರಣವೀರ್ ಹೇಳಿದ್ದ ದೃಶ್ಯವನ್ನೇ ಹಂಚಿಕೊಂಡು ಕೌಂಟರ್ ನೀಡಿದೆ ಎಂದು ಹಲವರು ಭಾವಿಸಿದ್ದಾರೆ. ಕಾಂತಾರ 'ದೈವ'ದ ಬಗ್ಗೆ ರಣವೀರ್ ತಿಳುವಳಿಕೆ ಕೊರತೆಗೆ ಟೀಕೆ ವ್ಯಕ್ತವಾಗಿದೆ.

ದೈವ ಅವಮಾನಿಸಿದ ರಣವೀರ್ ಸಿಂಗ್​ಗೆ ಕೌಂಟರ್ ಕೊಟ್ಟ ಅಮೇಜಾನ್ ಪ್ರೈಮ್ ವಿಡಿಯೋ
ರಿಷಬ್-ರಣವೀರ್
ರಾಜೇಶ್ ದುಗ್ಗುಮನೆ
|

Updated on: Dec 01, 2025 | 7:04 AM

Share

ನಟ ರಣವೀರ್ ಸಿಂಗ್ (Ranveer Singh) ಅವರು ಇತ್ತೀಚೆಗೆ ವಿವಾದ ಒಂದನ್ನು ಮಾಡಿಕೊಂಡಿದ್ದರು. ದೈವವನ್ನು ಅವರು ದೆವ್ವ ಎಂದು ಕರೆದರು. ಅಷ್ಟೇ ಅಲ್ಲ, ದೈವವನ್ನು ಅನುಕರಿಸಲು ಹೋಗಿ ಹೀಯಾಳಿಸಿದಂತೆ ಕಾಣಿಸಿದೆ. ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಘಟನೆ ನಡೆಯಿತು. ಅಲ್ಲಿಯೇ ಕುಳಿತಿದ್ದ ರಿಷಬ್ ಶೆಟ್ಟಿಗೂ ಸಾಕಷ್ಟು ಮುಜುಗರ ತಂದಿತ್ತು. ಈಗ ಅಮೇಜಾನ್ ಪ್ರೈಮ್ ವಿಡಿಯೋ ಈ ಬಗ್ಗೆ ಪೋಸ್ಟ್ ಮಾಡಿದೆ. ಈ ಮೂಲಕ ರಣವೀರ್ ಸಿಂಗ್​ಗೆ ಕೌಂಟರ್ ಕೊಟ್ಟಿದೆ ಎಂದು ಹೇಳಲಾಗುತ್ತಿದೆ.

ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪ ಸಮಾರಂಭ ನಡೆಯುತ್ತಿತ್ತು. ರಣವೀರ್ ಸಿಂಗ್ ಅವರು ತಮ್ಮ ‘ಧುರಂದರ್’ ಸಿನಿಮಾ ಪ್ರಚಾರ ಮಾಡಲು ಅಲ್ಲಿಗೆ ಬಂದಿದ್ದರು. ರಣವೀರ್ ಸಿಂಗ್ ಅವರು ‘ಕಾಂತಾರ’ ಚಿತ್ರವನ್ನು ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡರು.

ಇದನ್ನೂ ಓದಿ: ದೈವವನ್ನು ದೆವ್ವ ಎಂದ ಬಾಲಿವುಡ್ ಸ್ಟಾರ್: ರಿಷಬ್ ಮುಂದೆಯೇ ಅವಮಾನ

‘ರಿಷಬ್ ಅವರೇ ನಿಮ್ಮದು ಅದ್ಭುತ ನಟನೆ. ಮಹಿಳಾ ದೆವ್ವ ನಿಮ್ಮ ದೇಹದ ಒಳಗೆ ಹೋದಾಗ ನಿಮ್ಮ ನಟನೆ ಅದ್ಭುತವಾಗಿತ್ತು’ ಎಂದು ರಣವೀರ್ ಸಿಂಗ್ ಹೇಳಿದರು. ದೈವಕ್ಕೂ ದೆವ್ವಕ್ಕೂ ವ್ಯತ್ಯಾಸ ಗೊತ್ತಿಲ್ಲದೇ ಮಾತನಾಡಿದ್ದು ಮೊದಲನೆಯ ತಪ್ಪು ಆ ಬಳಿಕ ಅವರು ದೈವವನ್ನು ಅನುಕರಿಸಲು ಹೋಗಿದ್ದು ಮತ್ತೊಂದು ತಪ್ಪು. ಈಗ ಅಮೇಜಾನ್ ಪ್ರೈಮ್ ವಿಡಿಯೋ ರಣವೀರ್​ಗೆ ಕೌಂಟರ್ ಕೊಟ್ಟಿದೆ.

ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ‘ಕಾಂತಾರ: ಚಾಪ್ಟರ್ 1’ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾದ ಹಿಂದಿ ವರ್ಷನ್ ಕ್ಲಿಪ್​ನ ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಅದು ಯಾವುದೋ ಒಂದು ದೃಶ್ಯ ಎಂದಾದರೆ ಅಷ್ಟಾಗಿ ಚರ್ಚೆ ಆಗುತ್ತಿರಲಿಲ್ಲ. ಇಲ್ಲಿ ಪ್ರೈಮ್ ವಿಡಿಯೋ ಶೇರ್ ಮಾಡಿಕೊಂಡಿರೋದು ರಣವೀರ್ ಸಿಂಗ್ ದೈವವನ್ನು ದೆವ್ವ ಎಂದು ವಿವರಿಸಿದ ದೃಶ್ಯವೇ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ರಣವೀರ್​ಗೆ ಕೌಂಟರ್ ಕೊಡಲು ಪ್ರೈಮ್ ವಿಡಿಯೋ ಈ ರೀತಿ ಮಾಡಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.