ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸುದ್ದಿಬಿಡುಗಡೆ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಪ್ರಜಾ ಟಿ.ವಿಯ ಉಡುಪಿ ಜಿಲ್ಲಾ ವರದಿಗಾರರಾಗಿ ಒಂದು ವರ್ಷ ಏಳು ತಿಂಗಳು ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ, ಒಂದು ವರ್ಷ ನಾಲ್ಕು ತಿಂಗಳಿನಿಂದ ಟಿ.ವಿ 9 ವಾಹಿನಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ ಇಂಡಿಯಾ ಟೆಲಿವಿಷನ್ . ಕಾಮ್ 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.
ಕರ್ನಾಟಕಕ್ಕೆ ಬರ್ತಿತ್ತು ಕೇರಳದ ಕೊಳಚೆ ತ್ಯಾಜ್ಯ: ಟಿವಿ9 ವರದಿ ಬೆನ್ನಲ್ಲೇ ಮಂಗಳೂರು ಪಾಲಿಕೆಗೆ ಸಿಎಂ ಕಚೇರಿಯಿಂದ ಮಹತ್ವದ ಸೂಚನೆ
ಕೇರಳದ ಕೊಳಚೆ ತ್ಯಾಜ್ಯವನ್ನು ಮಂಗಳೂರಿನಲ್ಲಿ ಅಕ್ರಮವಾಗಿ ಸುರಿಯುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಟಿವಿ9 ಸುದ್ದಿ ಪ್ರಸಾರದ ಬಳಿಕ ಮುಖ್ಯಮಂತ್ರಿಗಳ ಕಚೇರಿಯಿಂದ ಪಾಲಿಕೆಗೆ ಸೂಚನೆ ನೀಡಲಾಗಿದೆ. ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿ, ಪೊಲೀಸ್ ದೂರು ದಾಖಲಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ತಿಳಿಸಿದೆ.
- Ashok
- Updated on: Mar 19, 2025
- 10:37 am
ಪುಣ್ಯ ಸ್ನಾನದ ಹೆಸ್ರಲ್ಲಿ ಮಲಿನ: ನೇತ್ರಾವತಿ ಒಡಲಿಂದ ಲೋಡ್ ಗಟ್ಟಲೆ ಬಟ್ಟೆ ರಾಶಿ ಹೊರತೆಗೆದ ಸ್ವಯಂಸೇವಕರು
ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಮಂಗಳೂರಿನ ನೇತ್ರಾವತಿ ನದಿಯಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ ನಡೆಯಿತು. ಸುಮಾರು ಒಂದು ಸಾವಿರ ಸ್ವಯಂಸೇವಕರು, ಪೊಲೀಸ್ ಇಲಾಖೆ ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ನದಿಯಿಂದ ಟನ್ಗಟ್ಟಲೆ ತ್ಯಾಜ್ಯವನ್ನು ತೆಗೆದರು. ಪುಣ್ಯಸ್ನಾನದ ಹೆಸರಿನಲ್ಲಿ ನದಿಯನ್ನು ಮಾಲಿನ್ಯಗೊಳಿಸುವುದನ್ನು ತಡೆಯಲು ಜಾಗೃತಿ ಮೂಡಿಸಲಾಗಿದೆ.
- Ashok
- Updated on: Mar 16, 2025
- 4:41 pm
ಕೋಟಿ ಕೋಟಿ ವಹಿವಾಟು ನಡೆಸುವ ಮೀನುಗಾರಿಕೆಗೆ ತಟ್ಟಿದ ತಾಪಮಾನದ ಬಿಸಿ: ಮೀನು ಸಿಗದೆ ಕಂಗಾಲಾದ ಮೊಗವೀರರು
ಕರ್ನಾಟಕದ ಕರಾವಳಿಯಲ್ಲಿ ಉಷ್ಣಾಂಶದ ಏರಿಕೆಯಿಂದಾಗಿ ತೀವ್ರ ಬಿಸಿಲಿನಿಂದಾಗಿ ಮೀನುಗಾರಿಕಾ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಮುದ್ರದ ತಾಪಮಾನ ಹೆಚ್ಚಳದಿಂದಾಗಿ ಮೀನುಗಳು ಆಳಕ್ಕೆ ಹೋಗುತ್ತಿರುವುದರಿಂದ ಮೀನುಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಸಾವಿರಾರು ಬೋಟ್ಗಳು ಬಂದರಿನಲ್ಲೇ ಲಂಗರು ಹಾಕಿದ್ದು, ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.
- Ashok
- Updated on: Mar 12, 2025
- 5:44 pm
ಮಂಗಳೂರು ವಿದ್ಯಾರ್ಥಿ ನಾಪತ್ತೆ ಕೇಸ್: ಮನೆಗೆ ಹೋಗಲು ಒಪ್ಪದ ದಿಗಂತ್, ಪೊಲೀಸ್ ವರದಿ
ಬಂಟ್ವಾಳದ ಫರಂಗಿಪೇಟೆ ನಿವಾಸಿ ದಿಗಂತ್ ಕಾಣೆಯಾಗಿದ್ದ ಪ್ರಕರಣದ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಿತು. ಪೊಲೀಸರು ಸಲ್ಲಿಸಿದ ಅಫಿಡವಿಟ್ನಲ್ಲಿ ದಿಗಂತ್ ತನ್ನ ಪೋಷಕರ ಬಳಿ ಹೋಗಲು ನಿರಾಕರಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ. ದಿಗಂತ್ ಪರೀಕ್ಷಾ ಭಯದಿಂದ ಮನೆಯಿಂದ ಹೊರಟಿದ್ದಾನೆ ಎಂದು ಹೇಳಿಕೆ ನೀಡಿದ್ದಾನೆ. ಹೈಕೋರ್ಟ್ ಪರೀಕ್ಷೆ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳದಂತೆ ಸೂಚಿಸಿ, ಮಕ್ಕಳ ಕಲ್ಯಾಣ ಸಮಿತಿಯ ನಿರ್ಧಾರಕ್ಕಾಗಿ ವಿಚಾರಣೆಯನ್ನು ಮುಂದೂಡಿದೆ.
- Ashok
- Updated on: Mar 12, 2025
- 1:23 pm
ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗುವಂತೆ ಚಕ್ರವರ್ತಿ ಸೂಲಿಬೆಲೆ ಕರೆ: ವ್ಯಾಪಕ ವಿರೋಧ
ಹಿಂದೂ ಯುವಕರು ಅನ್ಯ ಧರ್ಮದ ಯುವತಿಯರನ್ನು ಮದುವೆಯಾಗಬೇಕೆಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಂಗಳೂರಿನಲ್ಲಿ ಕರೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ಚಕ್ರವರ್ತಿ ಹೇಳಿಕೆಗೆ ಡಿವೈಎಫ್ಐ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ. ಹಾಗಾದರೆ, ಚಕ್ರವರ್ತಿ ಹೇಳಿದ್ದೇನು? ಏನೆಲ್ಲ ವಿರೋಧ ವ್ಯಕ್ತವಾಯಿತು? ಇಲ್ಲಿದೆ ವಿವರ.
- Ashok
- Updated on: Mar 10, 2025
- 2:14 pm
ಮಂಗಳೂರು ವಿದ್ಯಾರ್ಥಿ ನಿಗೂಢ ನಾಪತ್ತೆ ಪ್ರಕರಣ: ಬಾಲಕ ಕೊನೆಗೂ ಉಡುಪಿಯಲ್ಲಿ ಪತ್ತೆ
ವಿದ್ಯಾರ್ಥಿ ದಿಗಂತ್ ನಾಪತ್ತೆಯಾದ ಪ್ರಕರಣ ಕೊನೆಗೂ ಸುಖಾಂತ್ಯವಾಗಿದೆ. ಫೆಬ್ರವರಿ 25 ರಿಂದ ನಾಪತ್ತೆಯಾಗಿದ್ದ ದಿಗಂತ್ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ. ಹೈಕೋರ್ಟ್ ಮಧ್ಯಪ್ರವೇಶ, ತೀವ್ರ ಪೊಲೀಸ್ ಕಾರ್ಯಾಚರಣೆ ನಂತರ ಈ ಪ್ರಕರಣ ಬೇಧಿಸಲಾಗಿದೆ. ದಿಗಂತ್ ತನ್ನ ತಾಯಿಗೆ ಫೋನ್ ಮಾಡಿ ಉಡುಪಿಯಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾನೆ. ಸದ್ಯ ಆತನನ್ನು ಪೊಲೀಸರು ಮಂಗಳೂರಿಗೆ ಕರೆತಂದಿದ್ದಾರೆ.
- Ashok
- Updated on: Mar 8, 2025
- 6:07 pm
ಮಂಗಳೂರು ವಿದ್ಯಾರ್ಥಿ ನಾಪತ್ತೆ: ಮಂಗಳಮುಖಿಯರ ಜೊತೆ ಹೋದ್ನಾ ದಿಗಂತ? ಸಹೋದರ ಹೇಳಿದ್ದಿಷ್ಟು
ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ದಿಗಂತ ಮಂಗಳಮುಖಿಯರ ಜೊತೆ ಹೋಗಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಬ್ಬುತ್ತಿರುವ ವದಂತಿಗಳನ್ನು ಪೊಲೀಸರು ನಿರಾಕರಿಸಿದ್ದಾರೆ. ದಿಗಂತ್ನ ಕುಟುಂಬ ಮತ್ತು ಸ್ನೇಹಿತರು ಆತನನ್ನು ತ್ವರಿತವಾಗಿ ಪತ್ತೆಹಚ್ಚುವಂತೆ ಒತ್ತಾಯಿಸಿದ್ದಾರೆ.
- Ashok
- Updated on: Mar 8, 2025
- 12:19 pm
ಪಿಯುಸಿ ವಿದ್ಯಾರ್ಥಿ ನಿಗೂಢ ನಾಪತ್ತೆ: ಸಿಗದ ಸುಳಿವು, ಪೊಲೀಸರಿಗೆ ಹೈಕೋರ್ಟ್ ಖಡಕ್ ಸೂಚನೆ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ಫೆಬ್ರವರಿ 25ರಿಂದ ನಾಪತ್ತೆಯಾಗಿದ್ದ. ಹಲವು ದಿನಗಳ ಹುಡುಕಾಟದ ನಂತರವೂ ಸುಳಿವು ಸಿಗದ ಕಾರಣ, ಅವರ ಪೋಷಕರು ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಪೊಲೀಸರಿಗೆ ತನಿಖೆ ನಡೆಸಿ ಮಾರ್ಚ್ 12ರೊಳಗೆ ವರದಿ ಸಲ್ಲಿಸುವಂತೆ ಆದೇಶಿಸಿದೆ.
- Ashok
- Updated on: Mar 6, 2025
- 4:15 pm
ಕಾಸರಗೋಡು: ಡಿವೈಡರ್ಗೆ ಡಿಕ್ಕಿಯಾದ ಕಾರು, ಮೂವರ ಸಾವು
ಮಂಗಳೂರಿನ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವಾಮಂಜೂರು ಬಳಿ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜನಾರ್ದನ, ಅವರ ಪುತ್ರ ವರುಣ್ ಮತ್ತು ಕಿಶನ್ ಮೃತಪಟ್ಟವರು. ಕುಟುಂಬದ ಇನ್ನೊಬ್ಬ ಸದಸ್ಯೆ ರತ್ನಾ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ಉಪ್ಪಳದ ನಿವಾಸಿಗಳು. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Ashok
- Updated on: Mar 4, 2025
- 7:19 am
ಮಂಗಳೂರಿನಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಏರಿಕೆ: ಜನರು ತತ್ತರ, ಆರೋಗ್ಯ ಇಲಾಖೆ ಕೊಟ್ಟ ಸೂಚನೆ ಏನು?
ಮಂಗಳೂರಿನಲ್ಲಿ ದಾಖಲೆಯ ಪ್ರಮಾಣದಲ್ಲಿ ತಾಪಮಾನ ಏರಿಕೆಯಾಗಿದ್ದು, ರಾಜ್ಯ ಕರಾವಳಿ ಬಿಸಿಲಿನಿಂದ ತತ್ತರಿಸಿದೆ. ನಡು ಮಧ್ಯಾಹ್ನ ಹೊರಗಡೆ ಹೋಗುವುದು ಕಷ್ಟವಾಗಿದೆ. ಆರೋಗ್ಯ ಇಲಾಖೆ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದು, ಸಾಕಷ್ಟು ನೀರು ಕುಡಿಯಲು, ಬಿಸಿಲಿನಿಂದ ರಕ್ಷಿಸಿಕೊಳ್ಳುವುದು ಅಗತ್ಯವಾಗಿದೆ. ಹೀಗಾಗಿ ಜನ ಅತೀ ಹೆಚ್ಚಿನ ಮುಂಜಾಗ್ರತೆ ಕ್ರಮ ವಹಿಸಬೇಕಾದ ಅನಿವಾರ್ಯತೆಯಿದೆ.
- Ashok
- Updated on: Mar 2, 2025
- 5:25 pm
ಮಂಗಳೂರು: ವಿದ್ಯಾರ್ಥಿ ದಿಗಂತ್ ನಾಪತ್ತೆ, ವಿಹೆಚ್ಪಿ ಪ್ರತಿಭಟನೆ, ಗಾಂಜಾ ವ್ಯಸನಿಗಳ ಕೈವಾಡ ಶಂಕೆ
ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿದ್ದು, ಐದು ದಿನಗಳಾದರೂ ಪತ್ತೆಯಾಗಿಲ್ಲ. ಪೊಲೀಸರ ನಿಷ್ಕ್ರಿಯತೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ರೈಲ್ವೇ ಹಳಿಯಲ್ಲಿ ಚಪ್ಪಲಿ ಮತ್ತು ಮೊಬೈಲ್ ಪತ್ತೆಯಾಗಿದೆ. ಪೊಲೀಸರು ಮೂರು ತನಿಖಾ ತಂಡಗಳನ್ನು ರಚಿಸಿದ್ದಾರೆ. ಗಾಂಜಾ ವ್ಯಸನಿಗಳ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.
- Ashok
- Updated on: Mar 1, 2025
- 12:26 pm
ಕೋಟೆಕಾರು ಬ್ಯಾಂಕ್ ದರೋಡೆ: ಪ್ರಮುಖ ಸೂತ್ರಧಾರ ಭಾಸ್ಕರ್ ಬೆಳ್ಚಪಾಡನ ಹಿನ್ನೆಲೆಯೇ ರೋಚಕ!
ಉಳ್ಳಾಲದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಸೂತ್ರಧಾರರಾದ 69 ವರ್ಷದ ಭಾಸ್ಕರ್ ಬೆಳ್ಚಪಾಡ ಮತ್ತು ನಜೀರ್ನನ್ನು ಪೊಲೀಸರು ಬಂಧಿಸಿದ್ದಾರೆ. ಭಾಸ್ಕರ್ ಅನೇಕ ವಿಫಲ ದರೋಡೆ ಯತ್ನಗಳನ್ನು ಮಾಡಿದ್ದ ಎಂಬುದು ಬಹಿರಂಗವಾಗಿದೆ. ಕೋಟೆಕಾರು ದರೋಡೆಯನ್ನು ಸ್ಥಳೀಯ ನಜೀರ್ ಜೊತೆ ಯೋಜಿಸಿದ್ದ ಭಾಸ್ಕರ್, ಮುಂಬೈನಲ್ಲಿ ಹಲವು ವರ್ಷಗಳಿಂದ ಅಪರಾಧ ಜೀವನ ನಡೆಸುತ್ತಿದ್ದ. ಈತ ಮಾಡಿದ್ದ ಹಲವು ವಿಫಲ ದರೋಡೆ ಯತ್ನಗಳ ರೋಚಕ ಸಂಗತಿ ಇಲ್ಲಿದೆ.
- Ashok
- Updated on: Feb 28, 2025
- 8:27 am