AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದಪ್ಪಾ ಸೇಡು ಅಂದ್ರೆ; ಸಲ್ಮಾನ್ ಖಾನ್​ಗೆ ಸೆಡ್ಡು ಹೊಡೆದು ರಿಯಾಲಿಟಿ ಶೋ ಹೋಸ್ಟ್ ಆದ ಅಶ್ನೀರ್

ಸಲ್ಮಾನ್ ಖಾನ್ ಅವರು ಅಶ್ನೀರ್ ಅವರ ಮೇಲೆ ಅಸಮಾಧಾನ ಹೊರಹಾಕಿದ್ದರು. ಈಗ ಅಶ್ನೀರ್ ಒಂದು ರಿಯಾಲಿಟಿ ಶೋ ಹೋಸ್ಟ್ ಆಗಿದ್ದಾರೆ. ಇದನ್ನು ಅನೇಕರು ಸಲ್ಮಾನ್ ಖಾನ್ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರಯತ್ನ ಎಂದು ಪರಿಗಣಿಸಿದ್ದಾರೆ. ಅಶ್ನೀರ್ ಸಲ್ಮಾನ್ ಖಾನ್ ಅವರನ್ನು ನೇರವಾಗಿ ಉಲ್ಲೇಖಿಸದೆ, ರಿಯಾಲಿಟಿ ಶೋಗಳಲ್ಲಿನ ಸ್ಪರ್ಧಿಗಳಿಗಿಂತ ಸೆಲೆಬ್ರಿಟಿಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವುದನ್ನು ಟೀಕಿಸಿದ್ದಾರೆ.

ಇದಪ್ಪಾ ಸೇಡು ಅಂದ್ರೆ; ಸಲ್ಮಾನ್ ಖಾನ್​ಗೆ ಸೆಡ್ಡು ಹೊಡೆದು ರಿಯಾಲಿಟಿ ಶೋ ಹೋಸ್ಟ್ ಆದ ಅಶ್ನೀರ್
ಅಶ್ನೀರ್-ಸಲ್ಲು
ರಾಜೇಶ್ ದುಗ್ಗುಮನೆ
|

Updated on: Sep 12, 2025 | 2:46 PM

Share

ಉದ್ಯಮಿ ಅಶ್ನೀರ್ ಗ್ರೋವರ್ ಹಾಗೂ ನಟ ಸಲ್ಮಾನ್ ಖಾನ್ (Salman Khan) ಮಧ್ಯೆ ಯಾವುದೂ ಸರಿ ಇಲ್ಲ ಎಂಬುದು ಗೊತ್ತೇ ಇದೆ. ಸಲ್ಮಾನ್ ಖಾನ್ ಅವರು ಅಶ್ನೀರ್ ವಿರುದ್ಧ ನೇರವಾಗಿ ಅಸಮಾಧಾನ ಹೊರಹಾಕಿದ್ದರು. ಈಗ ಸಲ್ಮಾನ್ ಖಾನ್ ವಿರುದ್ಧ ಅಶ್ನೀರ್ ಸೇಡು ತೀರಿಸಿಕೊಂಡಂತೆ ಇದೆ. ಏಕೆಂದರೆ ರಿಯಾಲಿಟಿ ಶೋ ಒಂದಕ್ಕೆ ಅಶ್ನೀರ್ ಹೋಸ್ಟ್ ಆಗಿದ್ದಾರೆ. ಇದು ಸಲ್ಲು ವಿರುದ್ಧ ತೆಗೆದುಕೊಂಡ ರಿವೇಂಜ್ ಎಂದು ಅನೇಕರು ಹೇಳಿದ್ದಾರೆ.

ಜಿದ್ದಿಗೆ ಬಿದ್ದ ಅಶ್ನೀರ್

ಅಮೇಜಾನ್ ಎಂಎಕ್ಸ್ ಪ್ಲೇಯರ್​ನಲ್ಲಿ ‘ರೈಸ್ ಆ್ಯಂಡ್ ಫಾಲ್ ಹೆಸರಿನ ಶೋ ಬರುತ್ತಿದೆ. ಇದಕ್ಕೆ ಅಶ್ನೀರ್ ಅವರು ಹೋಸ್ಟ್ ಆಗಿದ್ದಾರೆ. ಅವರು ಸಲ್ಮಾನ್ ಖಾನ್​ಗೆ ಟಾಂಟ್ ಕೊಟ್ಟಿದ್ದಾರೆ. ಅದು ಕೂಡ ಹೆಸರು ಉಲ್ಲೇಖಿಸದೇ. ‘ರಿಯಾಲಿಟಿ ಶೋ ಎಂದರೆ ಅದು ಸ್ಪರ್ಧಿಗಳ ಬಗ್ಗೆ ಆಗಿರಬೇಕು. ಆದರೆ, ಅದೃಷ್ಟವೋ ಅಥವಾ ದುರಾದೃಷ್ಟವೋ ಭಾರತದಲ್ಲಿ ಒಂದು ದೊಡ್ಡ ಶೋ ಇದೆ ಮತ್ತು ಅದರಲ್ಲಿ ದೊಡ್ಡ ಸ್ಟಾರ್ ಇದ್ದಾರೆ. ಹೀಗಾಗಿ ಆ ಶೋ ಅವರ ಬಗ್ಗೆ ಫೋಕಸ್ ಆಗಿದೆಯೇ ಹೊರತು, ಸ್ಪರ್ಧಿಗಳ ಬಗ್ಗೆ ಅಲ್ಲ’ ಎಂದಿದ್ದಾರೆ.

‘ವಾಸ್ತವ ಏನು ಎಂದರೆ ಸ್ಪರ್ಧಿಗಳು 24 ಗಂಟೆ ಎಫರ್ಟ್ ಹಾಕುತ್ತಾರೆ. ನೀವು ಬಿಡಿ ವೀಕೆಂಡ್​ನಲ್ಲಿ ಮಾತ್ರ ಬರುತ್ತೀರಿ’ ಎಂದು ಅಶ್ನೀರ್ ಹೇಳಿದ್ದಾರೆ. ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಅಶ್ನೀರ್ ಅವರು ರಿಯಾಲಿಟಿ ಶೋ ಹೋಸ್ಟ್ ಮಾಡಲು ಬಂದಿದ್ದಾರೆ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ
Image
ಅಕ್ಷಯ್ ಹೇಗೆ ಅಷ್ಟು ಬೇಗ ಸಿನಿಮಾ ಮಾಡ್ತಾರೆ? ಅಜಯ್ ದೇವಗನ್ ಫನ್ನಿ ವಿವರಣೆ
Image
ಟಾಪ್​ನಲ್ಲಿ ಯಾರೂ ಊಹಿಸದ ಸೀರಿಯಲ್; ‘ಅಮೃತಧಾರೆ’ಗೆ ಎಷ್ಟನೇ ಸ್ಥಾನ?
Image
ಮದುವೆ ಬಳಿಕ ಕೆಲಸಕ್ಕೆ ಮರಳಿದ ಅನುಶ್ರೀ ಈ ವಿಚಾರದಲ್ಲಿ ತಪ್ಪು ಮಾಡಲಿಲ್ಲ
Image
ಹಠ ಮಾಡಿ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ್ದ ನಟ ಅಕ್ಷಯ್ ಕುಮಾರ್

ಕಿತ್ತಾಟಕ್ಕೆ ಕಾರಣ ಏನು?

‘ಸಲ್ಮಾನ್ ಖಾನ್ ಅವರ ಜೊತೆ ಚೌಕಾಸಿ ಮಾಡಿ ಕಡಿಮೆ ಹಣಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಲು ಒಪ್ಪಿಸಿದ್ದೆ’ ಎಂದು ಅಶ್ನಿರ್ ಹೇಳಿದ್ದರು. ಸಲ್ಲು ಜೊತೆ ಫೋಟೋ ಕೇಳಬಾರದು ಎಂದು ಮ್ಯಾನೇಜರ್ ಹೇಳಿದ್ದರಂತೆ. ‘ನನಗೇಕೆ ಅವರ ಜೊತೆ ಫೋಟೋ ಬೇಕು ಎಂದು ಅಶ್ನೀರ್ ಪ್ರಶ್ನೆ ಮಾಡಿದ್ದರಂತೆ. ಈ ಎಲ್ಲಾ ವಿಚಾರಗಳು ಸಲ್ಲು ಕಿವಿ ಮುಟ್ಟಿದ್ದವು.

ಇದನ್ನೂ ಓದಿ: ತಮ್ಮ ಬಗ್ಗೆ ಆಡಿದ್ದ ಮಾತನ್ನು ಅಶ್ನೀರ್ ಎದುರೇ ಎತ್ತಿದ ಸಲ್ಲು: ಉದ್ಯಮಿಗೆ ನಡುಕ

ಕಳೆದ ಬಿಗ್ ಬಾಸ್​​ನಲ್ಲಿ ಅಶ್ನೀರ್ ಹಾಗೂ ಸಲ್ಲು ಮುಖಾ ಮುಖಿ ಆದರು. ಈ ವೇಳೆ ಸಲ್ಮಾನ್ ಖಾನ್ ಅವರು ಅಶ್ನೀರ್​ಗೆ ಕ್ಲಾಸ್ ತೆಗೆದುಕೊಂಡರು. ‘ನೀವು ಮಾತನಾಡುವಾಗ ಹೇಗೆ ಮಾತನಾಡುತ್ತೀರಿ ಎಂಬುದು ಮುಖ್ಯವಾಗುತ್ತದೆ’ ಎಂದು ಎಚ್ಚರಿಸಿದ್ದರು. ಆ ಬಳಿಕ ಅಶ್ನೀರ್ ಕ್ಷಮೆ ಕೇಳಿದ್ದರು.  ‘ಈಗ ಸರಿಯಾದ ಆ್ಯಟಿಟ್ಯೂಡ್ ಬರ್ತಿದೆ’ ಎಂದಿದ್ದರು ಸಲ್ಮಾನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.