ಟಾಪ್ನಲ್ಲಿ ಯಾರೂ ಊಹಿಸದ ಸೀರಿಯಲ್; ‘ಅಮೃತಧಾರೆ’ಗೆ ಎಷ್ಟನೇ ಸ್ಥಾನ?
35ನೇ ವಾರದ ಕನ್ನಡ ಧಾರಾವಾಹಿಗಳ TRP ರಿಪೋರ್ಟ್ ಬಿಡುಗಡೆಯಾಗಿದೆ. ‘ಅಮೃತಧಾರೆ’ ಎರಡನೇ ಸ್ಥಾನದಲ್ಲಿದ್ದರೆ, ಮೊದಲ ಸ್ಥಾನದಲ್ಲಿ ಯಾರೂ ಊಹಿಸದ ಧಾರಾವಾಹಿ ಇದೆ. ಈ ಧಾರಾವಾಹಿಯಲ್ಲಿ ಹಲವು ತಿರುವುಗಳು ಎದುರಾಗಿದ್ದು, ಎಲ್ಲವೂ ಮಹತ್ವದ ಬೆಳವಣಿಗೆಗಳೇ ಆಗಿವೆ. ಇದು ಧಾರಾವಾಹಿ ಟಿಆರ್ಪಿ ಹೆಚ್ಚಲು ಕಾರಣ.

ಧಾರಾವಾಹಿಗಳ ಟಿಆರ್ಪಿಗಳಲ್ಲಿ ಪ್ರತಿ ವಾರ ಬದಲಾವಣೆ ಸಾಮಾನ್ಯ. ಆಯಾ ವಾರಗಳಲ್ಲಿ ಧಾರಾವಾಹಿಗಳ ಕಥೆ ಯಾವ ರೀತಿಯಲ್ಲಿ ಸಾಗಿದೆ ಎಂಬುದರ ಆಧಾರದ ಮೇಲೆ ಧಾರಾವಾಹಿಯ ಟಿಆರ್ಪಿ ನಿರ್ಧಾರ ಆಗುತ್ತದೆ. ಈಗ 35ನೇ ವಾರದ ಧಾರಾವಾಹಿಗಳ ಟಿಆರ್ಪಿ ಹೊರ ಬಂದಿದೆ. ಈ ಪೈಕಿ ಯಾರೂ ಊಹಿಸದ ಧಾರಾವಾಹಿ ಟಾಪ್ನಲ್ಲಿ ಇದೆ. ‘ಅಮೃತಧಾರೆ’ ಧಾರಾವಾಹಿಗೆ (Serials) ಎರಡನೇ ಸ್ಥಾನ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ವಿವರ.
ಮೊದಲ ಸ್ಥಾನದಲ್ಲಿ ‘ಕರ್ಣ’ ಧಾರಾವಾಹಿ ಇದೆ. ಈ ಧಾರಾವಾಹಿ ಕಳೆದ ವಾರ ಎರಡನೇ ಸ್ಥಾನ ಪಡೆದುಕೊಂಡಿತ್ತು. ಈ ಧಾರಾವಾಹಿಯ ಕಥೆಯಲ್ಲಿ ಹೆಚ್ಚಿನ ಬದಲಾವಣೆ ಏನೂ ಆಗುತ್ತಾ ಇರಲಿಲ್ಲ. ಈ ಕಾರಣದಿಂದಲೇ ಅನೇಕರು ಈ ಧಾರಾವಾಹಿ ಕಥೆಯನ್ನು ನಿಂತ ನೀರು ಎಂದು ಕರೆದಿದ್ದರು. ಹೀಗಾಗಿ, ಈ ಧಾರಾವಾಹಿ ಮೊದಲ ಸ್ಥಾನ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಈಗ ಒಳ್ಳೆಯ ಟಿಆರ್ಪಿ ಜೊತೆ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ.
ಇನ್ನು, ಎರಡನೇ ಸ್ಥಾನದಲ್ಲಿ ‘ಅಮೃತಧಾರೆ’, ‘ಅಣ್ಣಯ್ಯ ಧಾರಾವಾಹಿ ಇದೆ. ಈ ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆದುಕೊಂಡಿದೆ. ಈ ಧಾರಾವಾಹಿಯಲ್ಲಿ ಹಲವು ತಿರುವುಗಳು ಎದುರಾಗಿದ್ದು, ಎಲ್ಲವೂ ಮಹತ್ವದ ಬೆಳವಣಿಗೆಗಳೇ ಆಗಿವೆ. ಶಕುಂತಲಾಳ ನಿಜವಾದ ಮುಖ ಕಳಚೋದು, ಆಕೆಯ ಕೆನ್ನೆಗೆ ಭೂಮಿಕಾ ಹೊಡೆಯೋದು ಈ ರೀತಿಯ ಎಪಿಸೋಡ್ಗಳಿಂದ ಧಾರಾವಾಹಿ ಎರಡನೇ ಸ್ಥಾನ ಪಡೆದುಕೊಂಡಿದೆ. ‘ಅಣ್ಣಯ್ಯ’ ಧಾರಾವಾಹಿ ಕೂಡ ಸ್ಥಿರವಾಗಿ ಪ್ರದರ್ಶನ ನೀಡುತ್ತಾ ಬರುತ್ತಿದೆ.
ಇದನ್ನೂ ಓದಿ: ನಿಧಿ-ನಿತ್ಯಾ ಇಬ್ಬರನ್ನೂ ಮದವೆ ಆಗ್ತಾನೆ ಕರ್ಣ? ಸಿಕ್ತು ದೊಡ್ಡ ಸೂಚನೆ
ಇನ್ನು, ಮೂರನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿ ಜನರ ಮೆಚ್ಚುಗೆ ಪಡೆದಿದೆ. ಈ ಧಾರಾವಾಹಿ ಈ ಮೊದಲು ಮೊದಲ ಸ್ಥಾನ ಪಡೆದುಕೊಂಡ ಉದಾಹರಣೆ ಸಾಕಷ್ಟಿದೆ. ನಾಲ್ಕನೇ ಸ್ಥಾನದಲ್ಲಿ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಇದೆ. ಹಾರರ್ ಅಂಶಗಳನ್ನು ಈ ಧಾರಾವಾಹಿ ಒಳಗೊಂಡಿದೆ. ಜೀ ಕನ್ನಡದಲ್ಲೇ ಪ್ರಸಾರ ಕಾಣುತ್ತಿರುವ ‘ಬ್ರಹ್ಮಗಂಟು’ ಧಾರಾವಾಹಿ ಕೂಡ ಟಾಪ್ ಐದರಲ್ಲಿ ಸ್ಥಾನ ಪಡೆದಿದೆ. ಈ ಧಾರಾವಾಹಿಗೆ ಐದನೇ ಸ್ಥಾನ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








