AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಬಿಗ್​​ಬಾಸ್​​ನಲ್ಲಿ ಸಂಜನಾ ಗಲ್ರಾನಿಗೆ ಸಿಗುತ್ತಿರುವ ಸಂಭಾವನೆ ಎಷ್ಟು?

Bigg Boss Telugu 09: ಕನ್ನಡದ ನಟಿ ಸಂಜನಾ ಗಲ್ರಾನಿ ಇದೀಗ ತೆಲುಗು ಬಿಗ್​​ಬಾಸ್ ಮನೆ ಸೇರಿಕೊಂಡಿದ್ದಾರೆ. ತೆಲುಗು ಬಿಗ್​​ಬಾಸ್ ಸೀಸನ್ 9ರ ಭಾಗವಾಗಿದ್ದಾರೆ. ಮೊದಲ ವಾರದಲ್ಲಿಯೇ ಸಾಕಷ್ಟು ಡ್ರಾಮಾ ಅನ್ನು ಸಂಜನಾ ಗಲ್ರಾನಿ ಕ್ರಿಯೇಟ್ ಮಾಡಿದ್ದು ಗಮನ ಸೆಳೆದಿದ್ದಾರೆ. ಅಂದಹಾಗೆ ಬಿಗ್​​ಬಾಸ್ ಮನೆಗೆ ಹೋಗಲು ಸಂಜನಾ ಗಲ್ರಾನಿ ಪಡೆದಿರುವ ಸಂಭಾವನೆ ಎಷ್ಟು ಗೊತ್ತೆ?

ತೆಲುಗು ಬಿಗ್​​ಬಾಸ್​​ನಲ್ಲಿ ಸಂಜನಾ ಗಲ್ರಾನಿಗೆ ಸಿಗುತ್ತಿರುವ ಸಂಭಾವನೆ ಎಷ್ಟು?
Sajnana Galrani
ಮಂಜುನಾಥ ಸಿ.
|

Updated on: Sep 11, 2025 | 12:27 PM

Share

ತೆಲುಗು ಬಿಗ್​​ಬಾಸ್ ಆರಂಭವಾಗಿ ಕೆಲ ದಿನಗಳಾಗಿವೆ. ಒಂದೇ ವಾರಕ್ಕೆ ಮನೆಯಲ್ಲಿ ಗುಂಪುಗಳು ನಿರ್ಮಾಣವಾಗಿವೆ. ಮೊದಲ ಕೆಲ ದಿನಗಳಲ್ಲಿ ಕೆಲವರು ತಮ್ಮ ದೊಡ್ಡ ಗಂಟಲಿನಿಂದ ಸದ್ದು, ಸುದ್ದಿ ಮಾಡಿದ್ದಾರೆ. ಅವರಲ್ಲಿ ಕನ್ನಡದ ನಟಿ ಸಂಜನಾ ಗಲ್ರಾನಿ ಸಹ ಒಬ್ಬರು. 12 ವರ್ಷಗಳ ಹಿಂದೆ ಕನ್ನಡದ ಮೊದಲ ಬಿಗ್​​ಬಾಸ್ ಪ್ರಸಾರವಾದಾಗ ಅದರ ಭಾಗವಾಗಿದ್ದ ಸಂಜನಾ ಗಲ್ರಾನಿ, ಈಗ ತೆಲುಗು ಬಿಗ್​​ಬಾಸ್ ಸೀಸನ್ 9ರ ಭಾಗವಾಗಿದ್ದು, ಮೊದಲ ವಾರದಲ್ಲಿಯೇ ಮನೆಯ ಸದಸ್ಯರ ವಿರೋಧವನ್ನು ಕಟ್ಟಿಕೊಂಡಿದ್ದಾರೆ. ಮೊದಲ ವಾರ ಸಾಕಷ್ಟು ಫುಟೇಜ್ ಪಡೆದುಕೊಂಡಿರುವ ಸಂಜನಾ, ದೊಡ್ಡ ಮೊತ್ತದ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ. ಎಷ್ಟು ಗೊತ್ತೆ?

ಸಂಜನಾ ಗಲ್ರಾನಿ, ಕನ್ನಡದ ನಟಿ ಆದರೆ ತೆಲುಗಿನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, ತೆಲುಗು ಪ್ರೇಕ್ಷಕರಿಗೂ ಸಹ ಸಾಕಷ್ಟು ಪರಿಚಿತರು. ಹಾಗಾಗಿ ಆಂಧ್ರ-ತೆಲಂಗಾಣದಲ್ಲಿ ಅವರು ಸೆಲೆಬ್ರಿಟಿ, ಹಾಗಾಗಿ ದೊಡ್ಡ ಮೊತ್ತದ ಸಂಭಾವನೆಯನ್ನೇ ಸಂಜನಾ ಗಲ್ರಾನಿ ಬಿಗ್​​ಬಾಸ್ ಸೀಸನ್ 9ಕ್ಕಾಗಿ ಪಡೆದುಕೊಳ್ಳುತ್ತಿದ್ದಾರೆ. ತೆಲುಗು ಬಿಗ್​​ಬಾಸ್ ಮನೆಯಲ್ಲಿ ಒಟ್ಟು 13 ಮಂದಿ ಸ್ಪರ್ಧಿಗಳಿದ್ದು, ಅತಿ ಹೆಚ್ಚು ಸಂಭಾವನೆ ಪಡೆವ ಎರಡನೇ ಸ್ಪರ್ಧಿ ಎನಿಸಿಕೊಂಡಿದ್ದಾರೆ ನಟಿ ಸಂಜನಾ ಗಲ್ರಾನಿ.

ಮೂಲಗಳ ಪ್ರಕಾರ ಸಂಜನಾ ಗಲ್ರಾನಿ ಅವರಿಗೆ ಒಂದು ವಾರಕ್ಕೆ 2.75 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಬಿಗ್​​ಬಾಸ್ ತೆಲುಗು ಆಯೋಜಕರು ನೀಡುತ್ತಿದ್ದಾರೆ. ಅಂದರೆ ಸಂಜನಾಗೆ ಒಂದು ದಿನಕ್ಕೆ 39,285 ರೂಪಾಯಿಗಳನ್ನು ನೀಡಲಾಗುತ್ತಿದೆ. ಮೊದಲ ವಾರ ಸಂಜನಾ ಆಡಿರುವುದು ನೋಡಿದರೆ ಕೊಟ್ಟ ಹಣಕ್ಕೆ ಮೋಸ ಮಾಡಿಲ್ಲ ಅನಿಸುತ್ತದೆ ಸಂಜನಾ. ಮೊದಲ ವಾರ ಸಾಕಷ್ಟು ಡ್ರಾಮಾ ಅನ್ನು ಮನೆಯಲ್ಲಿ ಕ್ರಿಯೇಟ್ ಮಾಡಿದ್ದು, ಎಲ್ಲ ಸ್ಪರ್ಧಿಗಳ ಬಾಯಲ್ಲೂ ಹೆಸರಿರುವಂತೆ ಮಾಡಿದ್ದಾರೆ. ಸಂಜನಾ ಆಡುತ್ತಿರುವ ರೀತಿ ನೋಡಿದರೆ ಕನಿಷ್ಟ ಒಂದು ತಿಂಗಳಾದರೂ ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ. ಅಂದಹಾಗೆ ಈ ವಾರ ಅವರು ನಾಮಿನೇಟ್ ಆಗಿದ್ದಾರೆ.

ಇದನ್ನೂ ಓದಿ:ಸಂಜನಾ ಗಲ್ರಾನಿ ಆರ್ಭಟಕ್ಕೆ ಹೆದರಿದ ಮನೆ ಮಂದಿ, ಕಣ್ಣೀರು ಹಾಕಿದ ನಟಿ

ಇನ್ನು ಸಂಜನಾ ಗಲ್ರಾನಿಗಿಂತಲೂ ಹೆಚ್ಚಿನ ಸಂಭಾವನೆ ಪಡೆಯುತ್ತಿರುವುದು ನಟಿ ಫ್ಲೋರಾ ಸೈನಿ. ಕನ್ನಡದ ‘ಕೋದಂಡರಾಮ’, ಸುದೀಪ್ ನಟನೆಯ ‘ನಮ್ಮಣ್ಣ’, ‘ಗಿರಿ’, ‘ವಾರೆವಾ’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ, ನಾಗಾರ್ಜುನ, ಚಿರಂಜೀವಿ ಇನ್ನೂ ಹಲವು ಸ್ಟಾರ್ ನಟರುಗಳೊಡನೆ ನಟಿಸಿರುವ ಫ್ಲೋರಾ ಸೈನಿಗೆ ಬಿಗ್​​ಬಾಸ್ ಮನೆಯಲ್ಲಿ ಇರಲು ಒಂದು ವಾರಕ್ಕೆ ಮೂರು ಲಕ್ಷ ರೂಪಾಯಿ ಸಂಭಾವನೆ ಕೊಡಲಾಗುತ್ತಿದೆಯಂತೆ. ಫ್ಲೋರಾ ಸೈನಿ ಸಹ ಮೊದಲ ವಾರದಲ್ಲಿ ಚೆನ್ನಾಗಿಯೇ ಗಮನ ಸೆಳೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
ಟಾಕ್ಸಿಕ್ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್
ಟಾಕ್ಸಿಕ್ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್
ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ಸಿಐಡಿ ದಾಳಿ
ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ಸಿಐಡಿ ದಾಳಿ