AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಠ ಮಾಡಿ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್

ವಿಷ್ಣುವರ್ಧನ್ ಅವರ 75ನೇ ಜನ್ಮದಿನೋತ್ಸವ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಅವರೊಂದಿಗೆ ಅಭಿನಯಿಸಿದ ಅಕ್ಷಯ್ ಕುಮಾರ್ ಅವರ "ವಿಷ್ಣು ವಿಜಯ" ಚಿತ್ರವನ್ನು ನೆನಪಿಸಿಕೊಳ್ಳೋಣ. ಅಕ್ಷಯ್ ಅವರು ಹಠ ಹಿಡಿದು ಈ ಚಿತ್ರದಲ್ಲಿ ನಟಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ವಿಷ್ಣುವರ್ಧನ್ ಅವರ ಆಹ್ವಾನದ ಮೇರೆಗೆ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಹಠ ಮಾಡಿ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್
ಅಕ್ಷಯ್-ವಿಷ್ಣು
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Sep 11, 2025 | 8:15 AM

Share

ವಿಷ್ಣುವರ್ಧನ್ (Vishnuvardhan) ಜನ್ಮದಿನೋತ್ಸವ ಸಮೀಪಿಸುತ್ತಿದೆ. ಸೆಪ್ಟೆಂಬರ್ 18ರಂದು ಅವರ ಜನ್ಮದಿನ. ಅವರು ಬದುಕಿದ್ದರೆ 75ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ಇಂದು ಅವರು ನಮ್ಮ ಜೊತೆ ಇಲ್ಲ. ಈ ವಿಚಾರದಲ್ಲಿ ಅಭಿಮಾನಿಗಳಿಗೆ ಬೇಸರ ಇದೆ. ಆದರೂ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆರಿಸಲು, ಸಾಮಾಜಿಕ ಕೆಲಸದ ಜೊತೆ ಮಾಡಲು ಫ್ಯಾನ್ಸ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಒಂದು ಹಳೆಯ ಘಟನೆಯನ್ನು ನಾವು ನೆನಪಿಸಿಕೊಳ್ಳೋಣ.

ಅಕ್ಷಯ್ ಕುಮಾರ್ ಅವರು ಕನ್ನಡದ ‘ವಿಷ್ಣು ವಿಜಯ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ 1993ರಲ್ಲಿ ತೆರೆಗೆ ಬಂತು. ಈ ಚಿತ್ರಕ್ಕೆ ವಿಷ್ಣುವರ್ಧನ್ ಹೀರೋ. ಈ ಚಿತ್ರದಲ್ಲಿ ಇಬ್ಬರು ಹೀರೋಗಳು ಇದ್ದರು. ವಿಷ್ಣು ಜೊತೆ ಅಕ್ಷಯ್ ಕುಮಾರ್ ಅವರು ತೆರೆ ಹಂಚಿಕೊಂಡಿದ್ದರು. ಹಠ ಮಾಡಿ ಅಕ್ಷಯ್ ಈ ಸಿನಿಮಾದಲ್ಲಿ ನಟಿಸಿದ್ದರು. ಹಲವು ವರ್ಷಗಳ ಹಿಂದೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಅಕ್ಷಯ್ ಕುಮಾರ್ ಮಾತನಾಡಿದ್ದರು.

ಸಂದರ್ಶನ ಒಂದರಲ್ಲಿ ಶ್ರುತಿ ಹಾಸನ್ ಹಾಗೂ ಅಕ್ಷಯ್ ಮಾತನಾಡುತ್ತಿದ್ದರು. ಈ ವೇಳೆ ದಕ್ಷಿಣದಲ್ಲಿ ಸಿನಿಮಾ ಮಾಡುವಂತೆ ಶ್ರುತಿ ಅವರು ಅಕ್ಷಯ್​ಗೆ ಆಹ್ವಾನ ನೀಡಿದರು. ಇದನ್ನು ಅಕ್ಷಯ್ ಖುಷಿಯಿಂದ ಒಪ್ಪಿಕೊಂಡರು. ಈ ವೇಳೆ ಅವರು ತಾವು ಹಠ ಮಾಡಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾಗಿ ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ.

ಇದನ್ನೂ ಓದಿ
Image
ಲೂಸಿಯಾದಲ್ಲಿ ರಿಷಬ್ ಶೆಟ್ಟಿ ಮಾಡಿದ ಪಾತ್ರ ನೆನಪಿದೆಯೇ? ಅದೆಷ್ಟು ಬದಲಾವಣೆ
Image
‘ಹಳ್ಳಿ ಪವರ್​’ನಲ್ಲಿ 1 ವಾರಕ್ಕೆ 4 ಮಂದಿ ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿ
Image
ಸು ಫ್ರಮ್ ಸೋಗೆ OTTಯಲ್ಲಿ ಬೇರೆಯದೇ ರೀತಿಯ ವಿಮರ್ಶೆ; ಸಮಸ್ಯೆ ಆಗಿದ್ದೆಲ್ಲಿ?
Image
Video: ‘ತಡ ಮಾಡದೇ ಮಗು ಮಾಡಿಕೊಳ್ಳಿ’ ಎಂದು ಸಲಹೆ; ಓಕೆ ಎಂದ ಅನುಶ್ರೀ

‘ನನಗೆ ದಕ್ಷಿಣದಲ್ಲಿ ಸಿನಿಮಾ ಮಾಡಲು ಇಷ್ಟ. ಹಠ ಹಿಡಿದು ಕನ್ನಡ ಸಿನಿಮಾ ಮಾಡಿದ್ದೆ. ನಾನು ಹಿಂದಿಯಲ್ಲಿ ಸಿನಿಮಾ ಮಾಡುತ್ತಿದ್ದೆ. ಹಿಂದಿಯಲ್ಲಿ ‘ಅಶಾಂತ್’ ಹೆಸರಿನಲ್ಲಿ ಚಿತ್ರ ಆಗುತ್ತಿತ್ತು. ವಿಷ್ಣುವರ್ಧನ್ ಇದಕ್ಕೆ ಹೀರೋ. ನಾನು ಇದನ್ನು ಕನ್ನಡದಲ್ಲೂ ಮಾಡುತ್ತೇನೆ ಎಂದು ವಿಷ್ಣುವರ್ಧನ್ ಹೇಳಿದರು. ನನ್ನ ಪಾತ್ರವನ್ನು ಕನ್ನಡದಲ್ಲಿ ನಾನೇ ಮಾಡುತ್ತೇನೆ ಎಂದು ಹೇಳಿದೆ. ವಿಷ್ಣು ವಿಜಯ ಹೆಸರಲ್ಲಿ ಸಿನಿಮಾ ಆಯಿತು’ ಎಂದಿದ್ದರು ಅಕ್ಷಯ್.

ಅಕ್ಷಯ್ ಕುಮಾರ್ ಅವರು ನಟಿಸಿದ ಏಕೈಕ ಕನ್ನಡ ಸಿನಿಮಾ ಇದಾಗಿದೆ. ವಿಷ್ಣುವರ್ಧನ್ ಅವರು ಬೆಂಗಳೂರು ಪೊಲೀಸ್ ಎಸಿಪಿ ವಿಷ್ಣು ಆಗಿ ಕಾಣಿಸಿಕೊಂಡರೆ, ಅಕ್ಷಯ್ ಬಾಂಬೆ ಪೊಲೀಸ್ ಎಸಿಪಿ ವಿಜಯ್ ಆಗಿ ಮಿಂಚಿದ್ದರು. ವಿಷ್ಣು ಬರ್ತ್​ಡೇ ಸಂದರ್ಭದಲ್ಲಿ ಇದನ್ನು ನೆನಪಿಸಿಕೊಳ್ಳಬೇಕು.

ಇದನ್ನೂ ಓದಿ: ವಿಷ್ಣುವರ್ಧನ್ ಸಮಾಧಿ ನೆಲಸಮ: ‘ಎಲ್ಲದಕ್ಕೂ ಅವನೇ ಕಾರಣ’

ಅಕ್ಷಯ್ ಕುಮಾರ್ ಅವರು ಈಗ ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ದಕ್ಷಿಣದಲ್ಲಿ ಸಿನಿಮಾ ಮಾಡಲು ಸಮಯ ಇಲ್ಲ. ಆದಾಗ್ಯೂ ಇತ್ತೀಚೆಗೆ ರಿಲೀಸ್ ಆದ ತೆಲುಗಿನ ‘ಕಣ್ಣಪ್ಪ’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದುರು. ಶಿವನಾಗಿ ಕಾಣಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:14 am, Thu, 11 September 25