AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಬಳಿಕ ಕೆಲಸಕ್ಕೆ ಮರಳಿದ ಅನುಶ್ರೀ ಈ ವಿಚಾರದಲ್ಲಿ ತಪ್ಪು ಮಾಡಲಿಲ್ಲ; ಮೆಚ್ಚುಗೆಯ ಮಹಾಪೂರ

ಜೀ ಕನ್ನಡದ ಆ್ಯಂಕರ್ ಅನುಶ್ರೀ ಅವರು ವಿವಾಹದ ನಂತರ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಮಾಂಗಲ್ಯ ಧರಿಸಿ ಕಾಣಿಸಿಕೊಂಡ ಅವರನ್ನು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ. ಸೆಲೆಬ್ರಿಟಿಗಳು ವಿವಾಹದ ನಂತರ ಮಾಂಗಲ್ಯ ಧರಿಸದಿರುವುದು ಸಾಮಾನ್ಯವಾದರೂ, ಅನುಶ್ರೀ ಅವರ ಸಂಪ್ರದಾಯ ಪಾಲನೆ ಎಲ್ಲರ ಗಮನ ಸೆಳೆದಿದೆ.

ಮದುವೆ ಬಳಿಕ ಕೆಲಸಕ್ಕೆ ಮರಳಿದ ಅನುಶ್ರೀ ಈ ವಿಚಾರದಲ್ಲಿ ತಪ್ಪು ಮಾಡಲಿಲ್ಲ; ಮೆಚ್ಚುಗೆಯ ಮಹಾಪೂರ
ಅನುಶ್ರೀ
ರಾಜೇಶ್ ದುಗ್ಗುಮನೆ
|

Updated on: Sep 12, 2025 | 6:59 AM

Share

ಆ್ಯಂಕರ್ ಅನುಶ್ರೀ (Anushree) ಅವರು ಇತ್ತೀಚೆಗೆ ವಿವಾಹ ಆದರು. ಅವರು ರೋಷನ್ ಹೆಸರಿನ ವ್ಯಕ್ತಿ ಜೊತೆ ಹಸಮಣೆ ಏರಿದ್ದಾರೆ. ಇಬ್ಬರೂ ಪುನೀತ್ ರಾಜ್​ಕುಮಾರ್ ಫ್ಯಾನ್ಸ್ ಅನ್ನೋದು ವಿಶೇಷ. ವಿವಾಹದ ಬಳಿಕ ಅನುಶ್ರೀ ಸ್ವಲ್ಪ ಸಮಯ ಹಾಯಾಗಿ ಕಳೆದರು. ಈಗ ಅವರು ತಮ್ಮ ಕೆಲಸಕ್ಕೆ ಮರಳೋ ಸಮಯ ಬಂದಿದೆ. ಈ ವೇಳೆ ಅವರು ಸಂಪ್ರದಾಯ ಮುರಿಯಲಿಲ್ಲ ಅನ್ನೋದು ವಿಶೇಷ. ಈ ವಿಚಾರದಲ್ಲಿ ಅನುಶ್ರೀ ಅವರನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ.

ಅನುಶ್ರೀ ಅವರು ಜೀ ಕನ್ನಡದ ಕೆಲ ರಿಯಾಲಿಟಿ ಶೋಗಳಿಗೆ ಆ್ಯಂಕರಿಂಗ್ ಮಾಡುತ್ತಾರೆ. ‘ಸರಿಗಮಪ’ ಬಳಿಕ ಅವರು ಬ್ರೇಕ್​ನಲ್ಲಿ ಇದ್ದರು. ಈಗ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಹಾಗೂ ‘ಕಾಮಿಡಿ ಕಿಲಾಡಿಗಳು’ ಶೋಗಳು ಬರುತ್ತಿದ್ದು, ಆಡಿಷನ್ ನಡೆಯುತ್ತಿದೆ. ಈ ಶೋಗಳ ಪೈಕಿ ಅವರು ಡಿಕೆಡಿಯ ಭಾಗ ಆಗೋ ಸಾಧ್ಯತೆ ಇದೆ. ಆಡಿಷನ್ ಬಗ್ಗೆ ಅಪ್​ಡೇಟ್ ನೀಡಲು ಅನುಶ್ರೀ ಅವರು ಆಗಮಿಸಿದ್ದರು. ಈ ವೇಳೆ ಅವರ ಕತ್ತಿನಲ್ಲಿ ಮಾಂಗಲ್ಯ ಸರ ಕಂಡಿದೆ. ಅನೇಕರು ಇದನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಸಂಪ್ರದಾಯ ಮರೆಯದ ಅನುಶ್ರೀಯನ್ನು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ
Image
ಹಠ ಮಾಡಿ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ್ದ ನಟ ಅಕ್ಷಯ್ ಕುಮಾರ್
Image
ಲೂಸಿಯಾದಲ್ಲಿ ರಿಷಬ್ ಶೆಟ್ಟಿ ಮಾಡಿದ ಪಾತ್ರ ನೆನಪಿದೆಯೇ? ಅದೆಷ್ಟು ಬದಲಾವಣೆ
Image
‘ಹಳ್ಳಿ ಪವರ್​’ನಲ್ಲಿ 1 ವಾರಕ್ಕೆ 4 ಮಂದಿ ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿ
Image
ಸು ಫ್ರಮ್ ಸೋಗೆ OTTಯಲ್ಲಿ ಬೇರೆಯದೇ ರೀತಿಯ ವಿಮರ್ಶೆ; ಸಮಸ್ಯೆ ಆಗಿದ್ದೆಲ್ಲಿ?

ಇದನ್ನೂ ಓದಿ: ಮದುವೆ ಬಳಿಕ ಗುಡ್ ನ್ಯೂಸ್ ನೀಡಿದ ನಿರೂಪಕಿ ಅನುಶ್ರೀ

ವಿವಾಹ ಆದ ಬಳಿಕ ಕೆಲ ಸೆಲೆಬ್ರಿಟಿಗಳು ಶೋಗಳಲ್ಲಿ ಕಾಣಿಸಿಕೊಳ್ಳುವಾಗ ಮಾಂಗಲ್ಯ ಧರಿಸಲು ಹೆಚ್ಚು ಆದ್ಯತೆ ನೀಡೋದಿಲ್ಲ. ಕೆಲವರು ವಿವಾಹ ಆಗಿದೆ ಎಂದು ಕೂಡ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಬೇಡಿಕೆ ಕಡಿಮೆ ಆಗಬಹುದು ಎಂಬ ಭಯ ಇದಕ್ಕೆ ಕಾರಣ. ಆದರೆ, ಅನುಶ್ರೀ ಮಾತ್ರ ಇದಕ್ಕೆ ಭಿನ್ನ. ಅವರು ಮಾಂಗಲ್ಯ ಸರ ಧರಿಸಿಯೇ ಕಾಣಿಸಿಕೊಂಡಿದ್ದಾರೆ. ಈ ವಿಚಾರ ಅನೇಕರಿಗೆ ಖುಷಿ ಕೊಟ್ಟಿದೆ. ಕಮೆಂಟ್ ಬಾಕ್ಸ್​ನಲ್ಲಿ ಅನೇಕರು ಈ ವಿಚಾರವನ್ನು ಹೇಳಿದ್ದಾರೆ. ‘ಮಾಂಗಲ್ಯ ನೋಡಿ ಖುಷಿ ಆಯ್ತು’ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು, ‘ನೀವು ತುಂಬಾ ಲಕ್ಷಣವಾಗಿ ಕಾಣಿಸುತ್ತಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.

View this post on Instagram

A post shared by Zee Kannada (@zeekannada)

‘ಡಿಕೆಡಿ’ ಹಾಗೂ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋಗೆ ಸದ್ಯ ಆಡಿಷನ್ ನಡೆಯುತ್ತಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ತೆರಳಿ ಆಡಿಷನ್ ಮಾಡಲಾಗುತ್ತಿದೆ. ಆಸಕ್ತರು ಜೀ ಕನ್ನಡ ಸೂಚಿಸಿದ ಸ್ಥಳಕ್ಕೆ ತೆರಳಿ ಆಡಿಷನ್ ನೀಡಬಹುದು. ಅದರಲ್ಲಿ ಆಯ್ಕೆ ಆದರೆ, ನಿಮ್ಮ ಪ್ರತಿಭೆಯನ್ನು ರಾಜ್ಯದ ಮುಂದೆ ಅನಾವರಣ ಮಾಡುವ ಅವಕಾಶ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ