AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ಬಗ್ಗೆ ಆಡಿದ್ದ ಮಾತನ್ನು ಅಶ್ನೀರ್ ಎದುರೇ ಎತ್ತಿದ ಸಲ್ಲು: ಉದ್ಯಮಿಗೆ ನಡುಕ

Salman Khan: ಈ ಹಿಂದೆ ಉದ್ಯಮಿ ಅಶ್ನೀರ್ ಗ್ರೋವರ್ ಸಲ್ಮಾನ್ ಖಾನ್ ಜೊತೆ ಜಾಹೀರಾತು ಒಪ್ಪಂದ ಮಾಡಿಕೊಂಡ ಸಂಗತಿ ಬಗ್ಗೆ ಲಘುವಾಗಿ ಮಾತನಾಡಿದ್ದರು. ಸಲ್ಮಾನ್ ಖಾನ್ ಬಗ್ಗೆಯೂ ಲಘುವಾಗಿ ಮಾತನಾಡಿದ್ದರು. ಈಗ ಬಿಗ್​ಬಾಸ್​ ವೇದಿಕೆಗೆ ಬಂದಿದ್ದ ಅಶ್ನೀರ್ ಗ್ರೋವರ್​ಗೆ ಸಲ್ಮಾನ್ ಖಾನ್ ಪಾಠ ಕಲಿಸಿದ್ದಾರೆ.

ತಮ್ಮ ಬಗ್ಗೆ ಆಡಿದ್ದ ಮಾತನ್ನು ಅಶ್ನೀರ್ ಎದುರೇ ಎತ್ತಿದ ಸಲ್ಲು: ಉದ್ಯಮಿಗೆ ನಡುಕ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 19, 2024 | 11:09 AM

Share

ಸಲ್ಮಾನ್ ಖಾನ್ ಅವರು ತಮ್ಮ ಬಗ್ಗೆ ಯಾರಾದರೂ ಏನಾದರೂ ಹೇಳಿದರೆ ಅದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಅದು ಕೆಟ್ಟ ವಿಚಾರ ಆಗಿದ್ದರೆ ಅದಕ್ಕೆ ಸಲ್ಮಾನ್ ಖಾನ್ ಅವರು ತಿರುಗೇಟು ನೀಡಿಯೇ ನೀಡುತ್ತಾರೆ. ಈಗ ಉದ್ಯಮಿ ಅಶ್ನೀರ್ ಗ್ರೋವರ್​ಗೂ ಹಾಗೆಯೇ ಆಗಿದೆ. ಸಲ್ಮಾನ್ ಖಾನ್ ಅವರನ್ನು ಬ್ರ್ಯಾಂಡ್ ಅಬಾಸಿಡರ್ ಆಗಿ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿ ಅಶ್ನೀರ್ ಹೇಳಿದ ಮಾತನ್ನು ಸಲ್ಮಾನ್ ಖಾನ್ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಇದಕ್ಕೆ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ.

‘ಸಲ್ಮಾನ್ ಖಾನ್ ಅವರ ಜೊತೆ ಚೌಕಾಸಿ ಮಾಡಿ ಕಡಿಮೆ ಹಣಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಲು ಒಪ್ಪಿಸಿದ್ದೆ. ಅಲ್ಲದೆ, ಸಲ್ಮಾನ್ ಖಾನ್ ಜೊತೆ ಫೋಟೋ ತೆಗೆಸಿಕೊಳ್ಳಬಾರದು ಎಂದು ಅವರ ಮ್ಯಾನೇಜರ್ ಹೇಳಿದ್ದರು. ನನಗೇಕೆ ಅವರ ಜೊತೆ ಫೋಟೋ ಬೇಕು ಎಂದು ಕೇಳಿದ್ದೆ’ ಎಂಬ ಮಾತನ್ನು ಅಶ್ನೀರ್ ಹೇಳಿದ್ದರು. ಈ ಮಾತನ್ನು ಅವರು ಗರ್ವದಿಂದ ಹೇಳಿಕೊಂಡಿದ್ದರು. ಇದು ಸಲ್ಮಾನ್ ಖಾನ್ ಗಮನಕ್ಕೆ ಬಂದಿತ್ತು. ಅಶ್ನೀರ್ ಅವರು ಬಿಗ್ ಬಾಸ್ ವೇದಿಕೆ ಏರಿದಾಗ ಸಲ್ಮಾನ್ ಖಾನ್ ಅವರು ಈ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

‘ನಿಮ್ಮ ಹೆಸರೂ ನನಗೆ ಗೊತ್ತಿರಲಿಲ್ಲ. ನನ್ನ ಬಗ್ಗೆ ನೀವು ಮಾತನಾಡುವುದನ್ನು ಕೇಳಿದ್ದೇನೆ. ನೀವು ಮಾತನಾಡುವಾಗ ಹೇಗೆ ಮಾತನಾಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ನಾವು ಅಲ್ಲಿ ಇಲ್ಲದೆ ಇದ್ದರೂ ಉತ್ತಮವಾಗಿ ಮಾತನಾಡಬೇಕು. ಇದು ಸಣ್ಣ ಇಂಡಸ್ಟ್ರಿ. ಮತ್ತೆ ಮತ್ತೆ ಭೇಟಿ ಮಾಡಬೇಕಾಗುತ್ತದೆ. ನೀವು ಆ ರೀತಿ ಯಾಕೆ ಮಾತಾನಿಡಿದ್ದೀರಿ ಎಂಬುದು ನಂಗೆ ಗೊತ್ತಿಲ್ಲ’ ಎಂದಿದ್ದಾರೆ ಸಲ್ಮಾನ್ ಖಾನ್. ಆ ಬಳಿಕ ಕ್ಷಮೆ ಕೇಳಿದರು ಅಶ್ನೀರ್. ‘ಆ ರೀತಿಯ ಆ್ಯಟಿಟ್ಯೂಡ್ ಸರಿ ಅಲ್ಲ’ ಎಂದ ಸಲ್ಮಾನ್ ಖಾನ್, ‘ಈಗ ಸರಿಯಾದ ಆ್ಯಟಿಟ್ಯೂಡ್ ಬರ್ತಿದೆ’ ಎಂದರು. ಸಲ್ಮಾನ್ ಖಾನ್ ಈ ರೀತಿ ಮಾತನಾಡುವಾಗ ಅಶ್ನೀರ್ ಸ್ವಲ್ಪ ಭಯದಲ್ಲಿ, ವಿನಮ್ರವಾಗಿ ನಡೆದುಕೊಳ್ಳುತ್ತಿದ್ದರು.

ಇದನ್ನೂ ಓದಿ:ಮೌನಿ ರಾಯ್ ಬಿಕಿನಿ ಫೋಟೋ ಲೈಕ್ ಮಾಡಿದ ಅಶ್ನೀರ್ ಗ್ರೋವರ್; ಜಗಳಕ್ಕೆ ಇಳಿದ ಪತ್ನಿ

ಈ ಘಟನೆ ಬಳಿಕ ಅಶ್ನೀರ್ ಅವರು ಟ್ವೀಟ್ ಮಾಡಿದ್ದಾರೆ. ‘ನೀವು ಬಿಗ್ ಬಾಸ್​ನ ವೀಕೆಂಡ್ ಕಾ ವಾರ್ನ ಎಂಜಾಯ್ ಮಾಡಿದಿರಿ ಎಂದುಕೊಳ್ಳುತ್ತೇನೆ. ನನಗೆ ಫನ್ ಸಿಕ್ಕಿತು. ಆ ಎಪಿಸೋಡ್ ಒಳ್ಳೆಯ ಟಿಆರ್ಪಿ ಪಡೆಯಿತು ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ ಅಶ್ನೀರ್. ಅಲ್ಲದೆ, ಸಲ್ಮಾನ್ ಬಗ್ಗೆ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ಸಲ್ಮಾನ್ ಖಾನ್ ಓರ್ವ ಗ್ರೇಟ್ ಹೋಸ್ಟ್ ಹಾಗೂ ನಟ. ಬಿಗ್ ಬಾಸ್​ನಲ್ಲಿ ಏನು ತಂದರೆ ಅದು ಗೆಲ್ಲುತ್ತದೆ ಎಂಬುದನ್ನು ತಿಳಿದಿದ್ದಾರೆ. ಇದಕ್ಕೆ ನಾನು ಸಲ್ಮಾನ್​ ಅನ್ನು ಮೆಚ್ಚುತ್ತೇನೆ. ನಾನು ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದೇನೆ ಮತ್ತು ನಾನು ಹೇಳಿದ ಡೀಲ್ ನಂಬರ್ ಸರಿ ಇದೆ’ ಎಂದಿದ್ದರು ಸಲ್ಮಾನ್ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು