AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CWG 2026: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ 30 ಪದಕಗಳು ಖಚಿತ

commonwealth games 2026: ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಇದುವರೆಗೆ 17 ಪದಕಗಳನ್ನು ಗೆದ್ದಿದ್ದು, 30 ಪದಕಗಳನ್ನು ಖಚಿತಪಡಿಸಿಕೊಂಡಿದೆ. ಬಾಕ್ಸಿಂಗ್‌ನಲ್ಲಿ 10 ಹಾಗೂ ಜೂಡೋದಲ್ಲಿ ಅಸ್ಮಿತಾ ಡೇ, ಹರ್ಷ್ ಸಿಂಗ್, ಯಾಮಿನಿ ಮೌರ್ಯ ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿದ್ದಾರೆ. 9ನೇ ದಿನದ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳ ಅಸಾಧಾರಣ ಪ್ರದರ್ಶನ ಪದಕ ಪಟ್ಟಿಯಲ್ಲಿ ಮೇಲೇರಲು ಸಹಕಾರಿಯಾಗಿದೆ.

CWG 2026: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ 30 ಪದಕಗಳು ಖಚಿತ
Commonwealth Games
ಪೃಥ್ವಿಶಂಕರ
|

Updated on:Jul 31, 2026 | 8:21 PM

Share

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್ (commonwealth games 2026) ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ 17 ಪದಕಗಳನ್ನು ಗೆದ್ದಿದೆ. ಇದರಲ್ಲಿ 3 ಚಿನ್ನ, 10 ಬೆಳ್ಳಿ ಮತ್ತು 4 ಕಂಚಿನ ಪದಕಗಳು ಸೇರಿವೆ. ಈ ಮೂಲಕ ಭಾರತ ಪದಕಗಳ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ. ಆದಾಗ್ಯೂ ಭಾರತಕ್ಕೆ ಇನ್ನು 13 ಪದಕಗಳು ಧಕ್ಕುವುದು ಖಚಿತವಾಗಿದೆ. ಅಂದರೆ 9ನೇ ದಿನದ ಪ್ರದರ್ಶನಗಳ ಆಧಾರದ ಮೇಲೆ ಭಾರತಕ್ಕೆ 30 ಪದಕಗಳು ಲಭಿಸುವುದು ಖಚಿತವಾಗಿದೆ. ಬಾಕ್ಸಿಂಗ್‌ನಲ್ಲಿ ಭಾರತ ಈಗಾಗಲೇ 10 ಪದಕಗಳನ್ನು ಖಚಿತ ಪಡಿಸಿಕೊಂಡಿದ್ದು, ಇದೀಗ ಜೂಡೋದಲ್ಲಿಯೂ ಅಸಾಧಾರಣ ಪ್ರದರ್ಶನ ನೀಡಿದ ಅಸ್ಮಿತಾ ಡೇ, ಹರ್ಷ್ ಸಿಂಗ್ ಮತ್ತು ಯಾಮಿನಿ ಮೌರ್ಯ ತಮ್ಮ ಸೆಮಿಫೈನಲ್ ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಮುನ್ನಡೆದಿದ್ದು, ಈ ಮೂವರು ಫೈನಲ್‌ನಲ್ಲಿ ಸೋತರೂ ಕನಿಷ್ಠ ಬೆಳ್ಳಿ ಪದಕ ಸಿಗುವುದು ಖಚಿತವಾಗಿದೆ.

ಬಾಕ್ಸಿಂಗ್‌ನಲ್ಲಿ 10 ಪದಕಗಳು

ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ 9ನೇ ದಿನದಂದು, ಭಾರತೀಯ ಬಾಕ್ಸರ್‌ಗಳಾದ ಪ್ರೀತಿ ಪವಾರ್ ಮತ್ತು ಅಂಕುಶ್ ಪಂಗಲ್ ತಮ್ಮ ಸೆಮಿಫೈನಲ್ ಪಂದ್ಯಗಳನ್ನು ಗೆದ್ದು ಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಮೂಲಕ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ 10 ಪದಕಗಳು ಸಿಗುವುದು ಖಚಿತ. ಇದೀಗ ಭಾರತದ ಮಹಿಳಾ ಜೂಡೋ ಆಟಗಾರ್ತಿ ಅಸ್ಮಿತಾ ಡೇ 48 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಸ್ಕಾಟ್ಲೆಂಡ್‌ನ ಸಮ್ಮರ್ ಶಾ ಅವರನ್ನು ಸೋಲಿಸಿ ಫೈನಲ್‌ಗೇರಿದ್ದಾರೆ. ಅಸ್ಮಿತಾ ಇದೀಗ ಫೈನಲ್​ನಲ್ಲಿ ಗೆದ್ದರೆ ಚಿನ್ನದ ಪದಕ ಸಿಗಲಿದ್ದು, ಸೋತರೆ ಬೆಳ್ಳಿಗೆ ಕೊರಳೊಡ್ಡಲಿದ್ದಾರೆ.

CWG 2026: ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ ಕಂಚು ಗೆದ್ದ ಸೀಮಾ ಕಲಿರಾಮನ್

ಜೂಡೋದಲ್ಲಿ 3 ಪದಕಗಳು

ಹಾಗೆಯೇ 57 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಯಾಮಿನಿ ಮೌರ್ಯ ದಕ್ಷಿಣ ಆಫ್ರಿಕಾದ ಡೊನ್ನಾ ಬ್ರೈಟೆನ್‌ಬಾಚ್ ಅವರನ್ನು ಸೋಲಿಸಿ ಫೈನಲ್​ಗೆ ಅರ್ಹತೆ ಪಡೆದರು. ಅವರು ಕೂಡ ಫೈನಲ್​ನಲ್ಲಿ ಗೆದ್ದರೆ ಚಿನ್ನ ಸಿಗಲಿದ್ದು, ಸೋತರೆ, ಕನಿಷ್ಠ ಬೆಳ್ಳಿ ಪದಕ ಸಿಗುವುದು ಖಚಿತ. ಇನ್ನು ಹರ್ಷ್ ಸಿಂಗ್ ಪುರುಷರ 60 ಕೆಜಿ ವಿಭಾಗದಲ್ಲಿ ಆಸ್ಟ್ರೇಲಿಯಾದ ಪೆಡ್ರೊ ಕಾರ್ಲೋಸ್ ಅಂತುನ್ ಅವರನ್ನು ಸೋಲಿಸಿ ಫೈನಲ್‌ಗೇರಿದ್ದಾರೆ. ಈ ಮೂಲಕ ಅವರ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದು, ಫೈನಲ್‌ನಲ್ಲಿ ಗೆದ್ದರೆ ಚಿನ್ನದ ಪದಕವನ್ನು ತನ್ನದಾಗಿಸಿಕೊಳ್ಳಲಿದ್ದಾರೆ.

ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಖಚಿತವಾಗಿರುವ ಪದಕಗಳು

  • ಲವ್ಲಿನಾ ಬೊರ್ಗೊಹೈನ್ (75 ಕೆಜಿ)- ಸೆಮಿಫೈನಲ್‌
  • ಪ್ರೀತಿ ಪವಾರ್ (54 ಕೆಜಿ) – ಫೈನಲ್
  • ಪ್ರಿಯಾ ಘಂಘಾಸ್ (60 ಕೆಜಿ)- ಸೆಮಿಫೈನಲ್‌
  • ಸಾಕ್ಷಿ ಚೌಧರಿ (51 ಕೆಜಿ)- ಸೆಮಿಫೈನಲ್‌
  • ಜಾದುಮಣಿ ಸಿಂಗ್ (55 ಕೆಜಿ)- ಸೆಮಿಫೈನಲ್‌
  • ಅರುಂಧತಿ ಚೌಧರಿ (70 ಕೆಜಿ)- ಸೆಮಿಫೈನಲ್‌
  • ಸಚಿನ್ ಸಿವಾಚ್ (60 ಕೆಜಿ)- ಸೆಮಿಫೈನಲ್‌
  • ಅಂಕುಶ್ ಪಂಗಲ್ (80 ಕೆಜಿ) – ಫೈನಲ್
  • ನರೇಂದ್ರ ಬರ್ವಾಲ್ (90 ಕೆಜಿ)- ಸೆಮಿಫೈನಲ್‌
  • ಜಾಸ್ಮಿನ್ ಲಂಬೋರಿಯಾ (57 ಕೆಜಿ)- ಸೆಮಿಫೈನಲ್‌

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:18 pm, Fri, 31 July 26

Follow Us