AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವೈಡ್’ ವಿವಾದಕ್ಕೆ ಕಾರಣವಾದ ಭಾರತ vs ಜಪಾನ್ ಪಂದ್ಯ!

ಸಾನೋ ಇಂಟರ್ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಮತ್ತು ಜಪಾನ್ ನಡುವಣ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿತು. ಮಳೆಯ ಕಾರಣದಿಂದಾಗಿ ಕೇವಲ 5 ಓವರ್​ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ಭಾರತ 4 ವಿಕೆಟ್ ನಷ್ಟಕ್ಕೆ ಕಲೆಹಾಕಿದ್ದು ಕೇವಲ 32 ರನ್​ಗಳನ್ನು ಮಾತ್ರ. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಜಪಾನ್ ತಂಡ 5 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 30 ರನ್​ಗಳಿಸಲಷ್ಟೇ ಶಕ್ತವಾಗಿ, ಕೇವಲ 2 ರನ್​ಗಳಿಂದ ಸೋಲೊಪ್ಪಿಕೊಂಡಿತು.

'ವೈಡ್' ವಿವಾದಕ್ಕೆ ಕಾರಣವಾದ ಭಾರತ vs ಜಪಾನ್ ಪಂದ್ಯ!
ಟೀಮ್ ಇಂಡಿಯಾ
ಝಾಹಿರ್ ಯೂಸುಫ್
|

Updated on: Sep 23, 2026 | 10:03 AM

Share

ಭಾರತ ಮತ್ತು ಜಪಾನ್ ನಡುವೆ ನಡೆದ ಐತಿಹಾಸಿಕ ಕ್ರಿಕೆಟ್ ಪಂದ್ಯವು, ಇದೀಗ ಅಂಪೈರ್ ತೀರ್ಪಿನ ವಿವಾದದಿಂದಾಗಿ ಭಾರಿ ಚರ್ಚೆಯಲ್ಲಿದೆ. ಸಾನೋ ಇಂಟರ್ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ, ಆನ್-ಫೀಲ್ಡ್ ಅಂಪೈರ್ ಮೊದಲು ನೀಡಿದ ತೀರ್ಪನ್ನು ಆ ಬಳಿಕ ಬದಲಾಯಿಸಿದ್ದು ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಕೇವಲ 5 ಓವರ್‌ಗಳಿಗೆ ಸೀಮಿತಗೊಂಡಿದ್ದ ಈ ಮಳೆ ಬಾಧಿತ ಪಂದ್ಯದಲ್ಲಿ ಜಪಾನ್ ತಂಡವು ಭಾರತಕ್ಕೆ ಆಘಾತ ನೀಡುವ ಹಂತಕ್ಕೆ ತಲುಪಿತ್ತು. ಆದರೆ, ಕೊನೆಯ ಓವರ್‌ನಲ್ಲಿ ನಡೆದ ಒಂದು ‘ವೈಡ್’ ವಿವಾದ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿತು.

ವಿವಾದಕ್ಕೆ ಕಾರಣವಾದ ಆ ಒಂದು ಎಸೆತ!

ಜಪಾನ್ ಗೆಲುವಿಗೆ ಕೊನೆಯ 4 ಎಸೆತಗಳಲ್ಲಿ 6 ರನ್‌ಗಳ ಅಗತ್ಯವಿತ್ತು. ಈ ವೇಳೆ ಭಾರತದ ಸ್ಪಿನ್ನರ್ ಅಕ್ಷರ್ ಪಟೇಲ್ ಬೌಲಿಂಗ್ ಮಾಡುತ್ತಿದ್ದರು. ಜಪಾನ್‌ನ ಎಡಗೈ ಬ್ಯಾಟರ್ ಅಲೆಕ್ಸಾಂಡರ್ ಶಿರಾಯ್-ಪ್ಯಾಟ್‌ಮೋರ್ ರಿವರ್ಸ್ ಸ್ವೀಪ್  ಮಾಡಲು ಯತ್ನಿಸಿದರು. ಚೆಂಡು ಅವರ ಲೆಗ್ ಸೈಡ್‌ಗಿಂತ ಹೊರಗೆ ಹೋದಾಗ ತಕ್ಷಣವೇ ಆನ್-ಫೀಲ್ಡ್ ಅಂಪೈರ್ ಕ್ರಿಸ್ ಥುರ್ಗೇಟ್ ಅದನ್ನು ‘ವೈಡ್’ ಎಂದು ಘೋಷಿಸಿದರು.

ಆದರೆ, ಬ್ಯಾಟರ್ ರಿವರ್ಸ್ ಸ್ವೀಪ್‌ಗೆ ಯತ್ನಿಸಿದ್ದರಿಂದ ಅದು ವೈಡ್ ಅಲ್ಲ ಎಂದು ಅಕ್ಷರ್ ಪಟೇಲ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅಂಪೈರ್ ಬಳಿ ಆಕ್ಷೇಪ ವ್ಯಕ್ತಪಡಿಸಿದರು. ನಂತರ ಇಬ್ಬರೂ ಅಂಪೈರ್‌ಗಳು ಚರ್ಚಿಸಿ, ಆ ವೈಡ್ ತೀರ್ಪನ್ನು ಹಿಂಪಡೆದು, ಅದನ್ನು ‘ಡಾಟ್ ಬಾಲ್’ ಎಂದು ಘೋಷಿಸಿದರು. ಕೊನೆಗೆ ಭಾರತ 2 ರನ್‌ಗಳ ರೋಚಕ ಜಯ ಸಾಧಿಸಿತು.

ಅಂಪೈರ್ ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಹಾಗಾದರೆ ಈ ಕುರಿತು ಕ್ರಿಕೆಟ್ ನಿಯಮಗಳು ಮತ್ತು ಮೆರಿಲಿಬೋನ್ ಕ್ರಿಕೆಟ್ ಕ್ಲಬ್ ನಿಯಮಗಳು ಏನು ಹೇಳುತ್ತವೆ? ಅಂಪೈರ್‌ಗೆ ತೀರ್ಪು ಬದಲಿಸುವ ಹಕ್ಕಿದೆಯೇ? ಇಲ್ಲಿದೆ ಸಂಪೂರ್ಣ ವಿವರ…

ವೈಡ್ ನಿಯಮದ ಬಗ್ಗೆ ಐಸಿಸಿ/ಎಂಸಿಸಿ ರೂಲ್ಸ್ ಏನು ಹೇಳುತ್ತೆ?

  • ಬ್ಯಾಟರ್ ತನ್ನ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸಿಕೊಂಡಾಗ ಸಾಂಪ್ರದಾಯಿಕ ವೈಡ್ ನಿಯಮಗಳು ಅನ್ವಯಿಸುವುದಿಲ್ಲ.
  • ಬ್ಯಾಟರ್ ಮೂವ್‌ಮೆಂಟ್ ಲಾ: ಈ ನಿಯಮದ ಪ್ರಕಾರ, ಬ್ಯಾಟರ್ ಕ್ರೀಸ್‌ನಲ್ಲಿ ಆಕಡೆ ಈಕಡೆ ಚಲಿಸುವ ಮೂಲಕ ಚೆಂಡನ್ನು ತಲುಪಲು ಸಾಧ್ಯವಿದ್ದರೆ ಅಥವಾ ಚೆಂಡು ಅವರಿಂದ ದೂರ ಹೋಗುವಂತೆ ಮಾಡಿದರೆ ಅದನ್ನು ವೈಡ್ ಎಂದು ಪರಿಗಣಿಸಲಾಗುವುದಿಲ್ಲ.
  • ಎರಡೂ ಬದಿಯೂ ಆಫ್-ಸೈಡ್: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬ್ಯಾಟರ್ ರಿವರ್ಸ್ ಸ್ವೀಪ್ ಅಥವಾ ಸ್ವಿಚ್ ಹಿಟ್ ಮಾಡಲು ತನ್ನ ಸ್ಟಾನ್ಸ್​  ಬದಲಾಯಿಸಿದಾಗ, ವಿಕೆಟ್‌ನ ಎರಡೂ ಬದಿಗಳನ್ನು ‘ಆಫ್ ಸೈಡ್’ ಎಂದೇ ಪರಿಗಣಿಸಲಾಗುತ್ತದೆ.

ಜಪಾನ್ ಬ್ಯಾಟರ್ ರಿವರ್ಸ್ ಸ್ವೀಪ್ ಆಡಲು ತಿರುಗಿದ್ದರಿಂದ, ಲೆಗ್ ಸೈಡ್‌ನಲ್ಲಿ ಬಂದ ಚೆಂಡು ಅವರ ಹೊಡೆಯುವ ವ್ಯಾಪ್ತಿಯೊಳಗೆ ಇತ್ತು. ಹೀಗಾಗಿ ಅಂಪೈರ್‌ಗಳು ವೈಡ್ ತೀರ್ಪನ್ನು ರದ್ದುಗೊಳಿಸಿದ್ದು ನಿಯಮದ ಪ್ರಕಾರ ನೂರಕ್ಕೆ ನೂರು ಸರಿಯಾಗಿದೆ.

ಅಂಪೈರ್ ತಮಗೆ ತಾವೇ ತೀರ್ಪು ಬದಲಾಯಿಸಬಹುದೇ?

ಖಂಡಿತವಾಗಿಯೂ ಹೌದು. ಈ ಪಂದ್ಯದಲ್ಲಿ ಡಿಆರ್‌ಎಸ್ ಅಥವಾ ಟಿವಿ ಅಂಪೈರ್ ತಂತ್ರಜ್ಞಾನ ಲಭ್ಯವಿರಲಿಲ್ಲ. ಆದರೂ ಆನ್-ಫೀಲ್ಡ್ ಅಂಪೈರ್‌ಗಳಿಗೆ ತಮ್ಮ ತಪ್ಪು ನಿರ್ಧಾರವನ್ನು ತಿದ್ದಿಕೊಳ್ಳುವ ಸಂಪೂರ್ಣ ಅಧಿಕಾರವನ್ನು ಕ್ರಿಕೆಟ್ ನಿಯಮಗಳು ನೀಡಿವೆ.

  • ಅಂಪೈರ್ ತೀರ್ಪು ಬದಲಾವಣೆ: ಕ್ರಿಕೆಟ್‌ನ ಕಾನೂನು 2.12ರ ಪ್ರಕಾರ, “ಅಂಪೈರ್ ಯಾವುದೇ ನಿರ್ಧಾರವನ್ನು ತಕ್ಷಣವೇ ಬದಲಾಯಿಸಲು ಅವಕಾಶವಿದೆ. ಆದರೆ ಆ ತೀರ್ಪು ಮುಂದಿನ ಎಸೆತವನ್ನು ಎಸೆಯುವ ಮುನ್ನವೇ ಬದಲಾಗಬೇಕು.
  • ಈ ಪಂದ್ಯದಲ್ಲಿ ಸ್ಕ್ವೇರ್-ಲೆಗ್‌ನಲ್ಲಿದ್ದ ಅನುಭವಿ ಐಸಿಸಿ ಎಲೈಟ್ ಪ್ಯಾನಲ್ ಅಂಪೈರ್ ಕ್ರಿಸ್ ಬ್ರೌನ್ ಅವರು ಮುಖ್ಯ ಅಂಪೈರ್‌ಗೆ ಬ್ಯಾಟರ್ ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದ ನಿಯಮವನ್ನು ನೆನಪಿಸಿದರು. ಅದರಂತೆ ಮುಖ್ಯ ಅಂಪೈರ್ ತಕ್ಷಣವೇ ತಮ್ಮ ನಿರ್ಧಾರವನ್ನು ಬದಲಾಯಿಸಿದರು.

ಇದನ್ನೂ ಓದಿ: ಸಿಎಸ್‌ಕೆ ಪ್ಲೇಯಿಂಗ್ 11 ಸೋರಿಕೆ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪ!

ನಿರ್ಧಾರ ಕಾನೂನುಬದ್ಧ!

ಭಾರತ ತಂಡದ ಆಟಗಾರರು ಅಂಪೈರ್ ಮೇಲೆ ಒತ್ತಡ ಹೇರಿ ತೀರ್ಪು ಬದಲಾಯಿಸಿಕೊಂಡರು ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಟೀಕಿಸುತ್ತಿದ್ದಾರೆ. ಆದರೆ ಕ್ರಿಕೆಟ್ ತಜ್ಞರ ಪ್ರಕಾರ, ಭಾರತೀಯ ಆಟಗಾರರು ಕೇವಲ ನಿಯಮವನ್ನು ನೆನಪಿಸಿಕೊಟ್ಟರಷ್ಟೇ. ಅಂತಿಮವಾಗಿ ಅಂಪೈರ್‌ಗಳು ತೆಗೆದುಕೊಂಡ ನಿರ್ಧಾರವು ಐಸಿಸಿ ಕ್ರಿಕೆಟ್ ನಿಯಮಾವಳಿಗಳಿಗೆ ಸಂಪೂರ್ಣವಾಗಿ ಬದ್ಧವಾಗಿದೆ. ತಂತ್ರಜ್ಞಾನ ಇಲ್ಲದಿದ್ದರೂ ಮೈದಾನದಲ್ಲಿ ಸರಿಯಾದ ನಿರ್ಧಾರ ಹೊರಬೀಳಲು ಈ ನಿಯಮ ನೆರವಾಗಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ
ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
ಒಂದೇ ಕುಟುಂಬ 7 ಜನರ ಹತ್ಯೆ: ಶವಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ
ಒಂದೇ ಕುಟುಂಬ 7 ಜನರ ಹತ್ಯೆ: ಶವಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ
70 ಕೋಟಿ ರೂ. ವೆಚ್ಚದ ಸೋಲಾರ್ ಪ್ಲಾಂಟ್‌ಗೆ ಭಾರಿ ಯಶಸ್ಸು
70 ಕೋಟಿ ರೂ. ವೆಚ್ಚದ ಸೋಲಾರ್ ಪ್ಲಾಂಟ್‌ಗೆ ಭಾರಿ ಯಶಸ್ಸು
ಪಂಜಾಬ್‌ನಲ್ಲಿ ಕರ್ಮಭೂಮಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ
ಪಂಜಾಬ್‌ನಲ್ಲಿ ಕರ್ಮಭೂಮಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ