AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಜ ‘ಧುರಂಧರ್’ ಬಗ್ಗೆ ಸಿನಿಮಾ: ಯಾರಿದು ಆರ್​​ಎನ್ ಕಾವ್? ಅವರ ಸಾಧನೆ ಏನು?

ಪಾಕಿಸ್ತಾನದಲ್ಲಿ ಭಾರತದ ಏಜೆಂಟ್ ಹೇಗೆ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಾನೆ ಎಂಬ ಕತೆಯನ್ನು ‘ಧುರಂಧರ್’ ಒಳಗೊಂಡಿತ್ತು. ಆದರೆ ಇದೀಗ ಬಾಲಿವುಡ್​​ನ ಸ್ಟಾರ್ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್, ನಿಜ ‘ಧುರಂಧರ್’ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗ ವಿಶ್ವದ ಅತ್ಯುತ್ತಮ ಭದ್ರತಾ ಸಂಸ್ಥೆಗಳಲ್ಲಿ ಒಂದೆನಿಸಿಕೊಂಡಿರುವ ‘ರಾ’ (RAW)ನ ಸ್ಥಾಪನೆ ಮಾಡಿದ ವ್ಯಕ್ತಿಯ ಕುರಿತ ಸಿನಿಮಾ ಮಾಡಲು ಕರಣ್ ಮುಂದಾಗಿದ್ದಾರೆ.

ನಿಜ ‘ಧುರಂಧರ್’ ಬಗ್ಗೆ ಸಿನಿಮಾ: ಯಾರಿದು ಆರ್​​ಎನ್ ಕಾವ್? ಅವರ ಸಾಧನೆ ಏನು?
Rn Kao
ಮಂಜುನಾಥ ಸಿ.
|

Updated on: Sep 23, 2026 | 12:58 PM

Share

ಮುಖ್ಯಾಂಶಗಳು

  • ನಿಜ ಧುರಂಧರ್ ಬಗ್ಗೆ ಕರಣ್ ಜೋಹರ್ ಸಿನಿಮಾ
  • ರಾ ಸಂಸ್ಥೆ ಜನಕ ಆರ್​​ಎನ್ ಕಾವ್ ಬಗ್ಗೆ ಸಿನಿಮಾ
  • ಯಾರಿದು ಆರ್​​ಎನ್ ಕಾವ್? ಏನವರ ಸಾಧನೆ?

ಧುರಂಧರ್’ ಸಿನಿಮಾ ಭಾರತದ ‘ರಾ’ (RAW) ಸಂಸ್ಥೆಯ ಆಪರೇಷನ್​​ಗಳ ಸಣ್ಣ ಝಲಕ್ ಅನ್ನು ಭಾರತದ ಪ್ರೇಕ್ಷಕರಿಗೆ ನೀಡಿತ್ತು. ಪಾಕಿಸ್ತಾನದಲ್ಲಿ ಭಾರತದ ಏಜೆಂಟ್ ಹೇಗೆ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಾನೆ ಎಂಬ ಕತೆಯನ್ನು ಸಿನಿಮಾ ಒಳಗೊಂಡಿತ್ತು. ಆದರೆ ಇದೀಗ ಬಾಲಿವುಡ್​​ನ ಸ್ಟಾರ್ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್, ನಿಜ ‘ಧುರಂಧರ್’ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗ ವಿಶ್ವದ ಅತ್ಯುತ್ತಮ ಭದ್ರತಾ ಸಂಸ್ಥೆಗಳಲ್ಲಿ ಒಂದೆನಿಸಿಕೊಂಡಿರುವ ‘ರಾ’ (RAW)ನ ಸ್ಥಾಪನೆ ಮಾಡಿದ ವ್ಯಕ್ತಿಯ ಕುರಿತ ಸಿನಿಮಾ ಮಾಡಲು ಕರಣ್ ಮುಂದಾಗಿದ್ದಾರೆ.

ಆರ್​​ಎನ್ ಕಾವ್, ಭಾರತದ ‘ಸ್ಪೈ ಮಾಸ್ಟರ್’ ಎಂದೇ ಇವರನ್ನು ಕರೆಯಲಾಗುತ್ತದೆ. ಭಾರತದ ಮೊಟ್ಟ ಮೊದಲ ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥ ಮತ್ತು ‘ರಾ’ ಏಜೆನ್ಸಿಯ ಸಂಸ್ಥಾಪಕ. ಇವರ ಜೀವನ ಕುರಿತ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಕರಣ್ ಜೋಹರ್. ಭಾರತಕ್ಕೆ ಗೂಢಚಾರಿಕೆಯ ಮಹತ್ವ ತಿಳಿಸಿದ ಮಾತ್ರವಲ್ಲದೆ ತಮ್ಮ ಇಂಟೆಲಿಜೆನ್ಸ್ ಬ್ಯೂರೋದ ಶಕ್ತಿಯಿಂದ ಭಾರತವನ್ನು ವಿದೇಶಿ ಶಕ್ತಿಯಾಗಿ ಮಾಡಿದ ಶ್ರೇಯ ಆರ್​​ಎನ್ ಕಾವ್ ಅವರಿಗೆ ಸಲ್ಲುತ್ತದೆ. ಅಂಥಹಾ ಮಹಾನ್ ವ್ಯಕ್ತಿಯ ಜೀವನವನ್ನು ತೆರೆಯ ಮೇಲೆ ತರುತ್ತಿದ್ದಾರೆ ಕರಣ್ ಜೋಹರ್.

ಜವಾಹಾರ್​​ ಲಾಲ್ ನೆಹರು, ಇಂದಿರಾ ಗಾಂಧಿ ಅವರುಗಳೊಟ್ಟಿಗೆ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಮಹತ್ವದ ಕೆಲಸ ಮಾಡಿದ ಆರ್​​ಎನ್ ಕಾವ್, ಬಾಂಗ್ಲಾದೇಶ ವಿಮೋಚನೆ, 22ನೇ ರಾಜ್ಯವಾಗಿ ಸಿಕ್ಕಿಂ ಅನ್ನು ಏಕೀಕರಣ ಇನ್ನೂ ಕೆಲವು ಮಹತ್ವದ ಐತಿಹಾಸಿಕ ಘಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಸಹ ತಮ್ಮ ಚಾಣಾಕ್ಷತನ, ಶಿಸ್ತು, ನಿರ್ಧಾರ ತೆಗೆದುಕೊಳ್ಳುವ ಛಾತಿಯಿಂದ ಬಲು ಜನಪ್ರಿಯತೆ ಗಳಿಸಿದ್ದ ಕಾವ್ ಅವರನ್ನು ‘ಸ್ಪೈ ಮಾಸ್ಟರ್’ ಎಂದೇ ಕರೆಯಲಾಗುತ್ತಿತ್ತು.

ಇದನ್ನೂ ಓದಿ:ಅಭಿಮಾನಿಗಳೊಟ್ಟಿಗೆ ಕೂತು ಸಿನಿಮಾ ನೋಡಲು ಸಿಎಂ ಅನುಮತಿ ಕೇಳಿದ ನಾನಿ

ಈಗಿನ ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್ ಅವರು ಮುನ್ನುಡಿ ಬರೆದಿರುವ ‘ಎ ಜಂಟಲ್​​ಮ್ಯಾನ್ ಸ್ಪೈಮಾಸ್ಟರ್’ ಪುಸ್ತಕ ಕಾವ್ ಅವರ ಅದ್ಭುತ ಕಾರ್ಯಗಳ ಉಲ್ಲೇಖವನ್ನು ಒಳಗೊಂಡಿದೆ. ಇದೇ ಪುಸ್ತಕವನ್ನು ಆಧರಿಸಿ ಇದೀಗ ಸಿನಿಮಾ ಮಾಡಲಾಗುತ್ತಿದೆ. ಜೊತೆಗೆ ‘ಇನ್​​ಸೈಡ್ ರಾ’ ಪುಸ್ತಕವೂ ಸಹ ಕಾವ್ ಅವರ ಚಾಣಾಕ್ಷತನದ ಹಲವು ಘಟನೆಗಳನ್ನು ಉದಾಹರಣೆಯಾಗಿ ಒಳಗೊಂಡಿದೆ. ಇದೀಗ ಈ ವ್ಯಕ್ತಿಯ ಬಗ್ಗೆ ಸಿನಿಮಾ ನಿರ್ಮಾಣ ಆಗುತ್ತಿದೆ. ಧರ್ಮಾ ಪ್ರೊಡಕ್ಷನ್ಸ್ ಮತ್ತು ಲಿಯೋ ಮೀಡಿಯಾ ಕಲೆಕ್ಟಿವ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us