AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮಾನಿಗಳೊಟ್ಟಿಗೆ ಕೂತು ಸಿನಿಮಾ ನೋಡಲು ಸಿಎಂ ಅನುಮತಿ ಕೇಳಿದ ನಾನಿ

ತೆಲುಗಿನ ಜನಪ್ರಿಯ ನಟ ನಾನಿಯ ‘ದಿ ಪ್ಯಾರಡೈಸ್’ ಸಿನಿಮಾ ಸೆಪ್ಟೆಂಬರ್ 25ಕ್ಕೆ ರಿಲೀಸ್ ಆಗಲಿದೆ. ಆದರೆ ಇಂದು (ಸೆಪ್ಟೆಂಬರ್ 23) ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶಿಸಲಾಗುತ್ತಿದೆ. ಪ್ರೀಮಿಯರ್ ಶೋ ಅನ್ನು ಅಭಿಮಾನಿಗಳೊಟ್ಟಿಗೆ ಕೂತು ನೋಡುವ ಆಸೆಯನ್ನು ನಟ ನಾನಿ ವ್ಯಕ್ತಪಡಿಸಿದ್ದು, ಇದಕ್ಕಾಗಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿಯ ಅನುಮತಿ ಕೋರಿದ್ದಾರೆ. ಅನುಮತಿ ದೊರಕಿತೆ?

ಅಭಿಮಾನಿಗಳೊಟ್ಟಿಗೆ ಕೂತು ಸಿನಿಮಾ ನೋಡಲು ಸಿಎಂ ಅನುಮತಿ ಕೇಳಿದ ನಾನಿ
The Paradise
ಮಂಜುನಾಥ ಸಿ.
|

Updated on: Sep 23, 2026 | 11:41 AM

Share

ಮುಖ್ಯಾಂಶಗಳು

  • ನಾನಿ ನಟನೆಯ ‘ದಿ ಪ್ಯಾರಡೈಸ್’ ಸಿನಿಮಾ
  • ಅಭಿಮಾನಿಗಳ ಜೊತೆ ಸಿನಿಮಾ ನೋಡಲು ಅನುಮತಿ ಕೇಳಿದ ನಟ
  • ಅನುಮತಿ ಕೊಟ್ಟರೇ ರೇವಂತ್ ರೆಡ್ಡಿ

ತೆಲುಗಿನ ಸ್ಟಾರ್ ನಟ ನಾನಿಯ ನಟನೆಯ ಹೊಸ ಸಿನಿಮಾ ‘ದಿ ಪ್ಯಾರಡೈಸ್’ ಬಿಡುಗಡೆ ಆಗುತ್ತಿದೆ. ನಾನಿಯ ವೃತ್ತಿ ಜೀವನದ ಮೊಟ್ಟ ಮೊದಲ ‘ಎ’ ಸರ್ಟಿಫಿಕೇಟ್ ಸಿನಿಮಾ ಇದಾಗಿದ್ದು, ಸಿನಿಮಾದ ಬಗ್ಗೆ ಖುದ್ದು ನಾನಿ ಬಹಳ ಭರವಸೆ ಇರಿಸಿಕೊಂಡಿದ್ದಾರೆ. ಸಂಪೂರ್ಣ ಆಕ್ಷನ್ ಕತೆಯುಳ್ಳ ಸಿನಿಮಾ ಇದಾಗಿದೆ. ಸಿನಿಮಾನಲ್ಲಿ ನಾನಿ ಜೊತೆಗೆ ಖಯಾದು ಲೋಹರ್ ನಾಯಕಿ. ನಾನಿ ಪೂರ್ಣ ಶ್ರಮ ಹಾಕಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾ ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ. ಇದೇ ಸಮಯದಲ್ಲಿ ಅಭಿಮಾನಿಗಳೊಟ್ಟಿಗೆ ಕೂತು ಸಿನಿಮಾ ನೋಡಲು ನಟ ನಾನಿ, ಸಿಎಂ ರೇವಂತ್ ರೆಡ್ಡಿ ಬಳಿ ಅನುಮತಿ ಕೋರಿದ್ದಾರೆ.

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಸಿನಿಮಾಟೊಗ್ರಫಿ ಸಚಿವ ಕೊಮಟಿ ರೆಡ್ಡಿ ಅವರನ್ನುದ್ದೇಶಿಸಿ ಟ್ವೀಟ್ ಮಾಡಿರುವ ನಟ ನಾನಿ, ‘ಅಭಿಮಾನಿಗಳಿಗಾಗಿ ಸಿನಿಮಾ ಮಾಡಿದ್ದೇವೆ ಅವರೊಟ್ಟಿಗೆ ಕೂತು ಸಿನಿಮಾ ನೋಡಿದಾಗ ಅನುಭವ ಪೂರ್ಣವಾದಂತಾಗುತ್ತದೆ. ನಾನು ಹೈದರಾಬಾದ್​​ನ ಆರ್​ಟಿಎಕ್ಸ್ ರಸ್ತೆಯ ಚಿತ್ರಮಂದಿರದಲ್ಲಿ ಅಭಿಮಾನಿಗಳೊಟ್ಟಿಗೆ ‘ದಿ ಪ್ಯಾರಡೈಸ್’ ಸಿನಿಮಾದ ಪ್ರೀಮಿಯರ್ ಶೋ ಅನ್ನು ಸೆಪ್ಟೆಂಬರ್ 23ರಂದು ವೀಕ್ಷಿಸಲು ಇಚ್ಛಿಸಿದ್ದೇನೆ. ದಯವಿಟ್ಟು ಅನುಮತಿ ಕೊಡಿ’ ಎಂದಿದ್ದಾರೆ.

ನಾನಿಯ ಕೋರಿಕೆಗೆ ಸ್ಪಂದಿಸಿರುವ ಸಿಎಂ ರೇವಂತ್ ರೆಡ್ಡಿ, ‘ಭದ್ರತೆ ಮತ್ತು ನಿಯಮಕ್ಕೆ ಮೊದಲ ಆದ್ಯತೆಯನ್ನು ಕೊಡುವ ನಿಮ್ಮ ವ್ಯಕ್ತಿತ್ವವನ್ನು ಗೌರವಿಸುತ್ತೇನೆ. ‘ಜನಸಂದಣಿಯ ಸುಗಮ ನಿರ್ವಹಣೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಲು, ದಯವಿಟ್ಟು ಸಂಬಂಧಿತ ಸ್ಥಳೀಯ ಪೊಲೀಸ್ ಠಾಣೆಗೆ ಅಧಿಕೃತ ಅರ್ಜಿಯನ್ನು ಸಲ್ಲಿಸಿ. ಸಂಬಂಧಪಟ್ಟ ತಂಡವು ಅರ್ಜಿಯನ್ನು ಪರಿಶೀಲಿಸಿ, ಅದಕ್ಕನುಗುಣವಾಗಿ ನಿರ್ಧಾರ ಕೈಗೊಳ್ಳುತ್ತದೆ’ ಎಂದಿದ್ದಾರೆ ಸಿಎಂ.

ಇದನ್ನೂ ಓದಿ:ಟ್ರೈಲರ್ ಇಲ್ಲದೇ ರಿಲೀಸ್ ಆಗಲಿದೆ ನಾನಿಯ ‘ದಿ ಪ್ಯಾರಡೈಸ್’ ಏಕೆ?

ಈ ಹಿಂದೆ ‘ಪುಷ್ಪ 2’ ಸಿನಿಮಾದ ಬಿಡುಗಡೆ ಸಮಯದಲ್ಲಿ ನಟ ಅಲ್ಲು ಅರ್ಜುನ್ ಹೈದರಾಬಾದ್​​ನ ಪ್ರಸಾದ್ ಚಿತ್ರಮಂದಿರದಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ ನಡೆದಿದ್ದ ಕಾಲ್ತುಳಿತದ ಸಂದರ್ಭದಲ್ಲಿ ಒಬ್ಬ ಮಹಿಳೆ ನಿಧನ ಹೊಂದಿದ್ದು, ಒಬ್ಬ ಬಾಲಕ ಕೋಮಾಕ್ಕೆ ಜಾರಿದ್ದ. ಈಗಲೂ ಆತ ಕೋಮಾನಲ್ಲಿಯೇ ಇದ್ದಾನೆ. ಆ ಘಟನೆಯ ಬಳಿಕ ತೆಲಂಗಾಣ ಸರ್ಕಾರವು ಹಲವು ಕಠಿಣ ನಿಯಮಗಳನ್ನು ಜಾರಿ ಮಾಡಿತ್ತು. ಪ್ರೀಮಿಯರ್ ಶೋ, ಫ್ಯಾನ್ಸ್ ಶೋ, ಸ್ಟಾರ್​​ಗಳ ಚಿತ್ರಮಂದಿರ ಭೇಟಿಯನ್ನು ಸಹ ರದ್ದು ಮಾಡಿತ್ತು. ಅದೇ ಕಾರಣಕ್ಕೆ ಈಗ ನಾನಿ, ಸಿಎಂ ಅವರ ಅನುಮತಿ ಕೋರಿ ಚಿತ್ರಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us