AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನನ್ನು ಆಸ್ಪತ್ರೆಗೆ ದಾಖಲಿಸಿ ನೋಡಿಕೊಳ್ತಿದ್ದ ಕುಟುಂಬಕ್ಕೆ ಶಾಕ್​​: ಮನೆ ಬಾಗಿಲು ಮುರಿದು ಅರ್ಧ ಕೆಜಿ ಚಿನ್ನ ಕದ್ದ ಖದೀಮರು!

ಅನಾರೋಗ್ಯಕ್ಕೆ ಒಳಗಾಗಿದ್ದ ಮಗನ ಚಿಕಿತ್ಸೆಗಾಗಿ ಕುಟುಂಬ ಆಸ್ಪತ್ರೆಯಲ್ಲಿದ್ದಾಗ ಖದೀಮರು ಮನೆ ಬೀಗ ಮುರಿದು ಸುಮಾರು ಅರ್ಧ ಕೆಜಿ (450-500 ಗ್ರಾಂ) ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ವಿವೇಕಾನಂದ ನಗರದಲ್ಲಿ ನಡೆದಿದೆ. ಕುಟುಂಬದ ಸದಸ್ಯರು ಮನೆಗೆ ಬಂದಾಗ ಬಾಗಿಲು ಮುರಿದುರೋದು ಕಂಡುಬಂದಿದ್ದು, ಪರಿಶೀಲಿಸಿದಾಗ ಮಲಗುವ ಕೋಣೆಯಲ್ಲಿದ್ದ ಕಬ್ಬಿಣದ ಅಲ್ಮೆರಾದಲ್ಲಿ ಇಡಲಾಗಿದ್ದ ಆಭರಣಗಳನ್ನು ಖದೀಮರು ದೋಚಿರೋದು ಕಂಡುಬಂದಿದೆ.

ಮಗನನ್ನು ಆಸ್ಪತ್ರೆಗೆ ದಾಖಲಿಸಿ ನೋಡಿಕೊಳ್ತಿದ್ದ ಕುಟುಂಬಕ್ಕೆ ಶಾಕ್​​: ಮನೆ ಬಾಗಿಲು ಮುರಿದು ಅರ್ಧ ಕೆಜಿ ಚಿನ್ನ ಕದ್ದ ಖದೀಮರು!
ಸಾಂದರ್ಭಿಕ ಚಿತ್ರImage Credit source: Getty Images
ಪ್ರಸನ್ನ ಹೆಗಡೆ
|

Updated on: Sep 23, 2026 | 1:04 PM

Share

ಬೆಂಗಳೂರು, ಸೆಪ್ಟೆಂಬರ್​​ 23: ಅನಾರೋಗ್ಯದಿಂದ ಬಳಲುತ್ತಿದ್ದ ಮಗನನ್ನು ಆಸ್ಪತ್ರೆಗೆ ದಾಖಲಿಸಿ ನೋಡಿಕೊಳ್ಳುತ್ತಿದ್ದ ಕುಟುಂಬಕ್ಕೆ ಕಳ್ಳರು ಭರ್ಜರಿ ಶಾಕ್​​ ಕೊಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯ ವಿವೇಕಾನಂದನಗರದಲ್ಲಿ ನಡೆದಿದೆ. ಅತ್ತ ಕುಟುಂಬ ಆಸ್ಪತ್ರೆಯಲ್ಲಿ ಇದ್ದರೆ ಇತ್ತ ಖದೀಮರು ಮನೆಯ ಬಾಗಿಲು ಮುರಿದು ಒಳನುಗ್ಗಿ ಸುಮಾರು 450-500 ಗ್ರಾಂ ತೂಕದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ಸಿಸಿ ಕ್ಯಾಮರಾಗಳ ದೃಶ್ಯಾವಳಿ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಮನೆ ಬಾಗಲು ತೆರೆದಿರುವು ಕಂಡು ಕುಟುಂಬಸ್ಥರು ಕಂಗಾಲು

ಖಾಸಗಿ ಸಂಸ್ಥೆಯ ಉದ್ಯೋಗಿ ಎಬೆನೆಜರ್ ವಿ. ಅವರು ನೀಡಿದ ದೂರಿನ ಪ್ರಕಾರ, ಸೆಪ್ಟೆಂಬರ್ 17ರಂದು ಚಿಕಿತ್ಸೆಗಾಗಿ ತಮ್ಮ ಕಿರಿಯ ಮಗನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಅವರು ಹಾಗೂ ಅವರ ಪತ್ನಿ ಮಗನ ಆರೈಕೆಗಾಗಿ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದರು. ಸೆಪ್ಟೆಂಬರ್ 19ರ ಬೆಳಗ್ಗೆ ಎಬೆನೆಜರ್ ಅವರ ಹಿರಿಯ ಪುತ್ರ ಶಟಲ್ ಕಾಕ್ ಮತ್ತು ರ‍್ಯಾಕೆಟ್ ತೆಗೆದುಕೊಂಡು ಹೋಗಲು ಮನೆಗೆ ಬಂದಿದ್ದರು. ಬಳಿಕ ಮನೆಯನ್ನು ಲಾಕ್ ಮಾಡಿ ಕೀಲಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದರು. ಮರುದಿನ ಬೆಳಗ್ಗೆ ಸುಮಾರು 8.30ರ ವೇಳೆಗೆ ಎಬೆನೆಜರ್ ಅವರ ಪತ್ನಿ ಮನೆಗೆ ವಾಪಸ್ ಬಂದಾಗ, ಮನೆಯ ಮುಂಭಾಗದ ಬಾಗಿಲು ತೆರೆದಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಪತಿಗೆ ಮಾಹಿತಿ ನೀಡಿದ್ದು, ಅವರು ಮನೆಗೆ ಧಾವಿಸಿ ಪರಿಶೀಲಿಸಿದ್ದಾರೆ.

LIVE TV

ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಭರ್ಜರಿ ಬೇಟೆ: 28 ಕೋಟಿ ರೂ ಹೈಡ್ರೋ ಗಾಂಜಾ, 1.75 ಕೋಟಿ ರೂ ಚಿನ್ನ ಜಪ್ತಿ!

ಈ ವೇಳೆ ಮುಖ್ಯ ಬಾಗಿಲಿನ ಬೀಗ ಒಡೆದಿರುವುದು ಕಂಡುಬಂದಿದ್ದು, ಮಲಗುವ ಕೋಣೆಯಲ್ಲಿದ್ದ ಕಬ್ಬಿಣದ ಅಲ್ಮೆರಾದಲ್ಲಿ ಇಡಲಾಗಿದ್ದ ಆಭರಣಗಳಿದ್ದ ಡಬ್ಬಿಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿದ್ದವು. ಕುಟುಂಬದವರು ನೆಕ್ಲೆಸ್‌ಗಳು, ಚಿನ್ನದ ಸರಗಳು, ಬ್ರೇಸ್‌ಲೆಟ್‌ಗಳು, ಬಳೆಗಳು, ಕಿವಿಯೋಲೆಗಳು ಹಾಗೂ ಉಂಗುರಗಳು ಸೇರಿದಂತೆ ಹಲವು ಚಿನ್ನಾಭರಣಗಳನ್ನು ಅಲ್ಮೆರಾದಲ್ಲಿ ಇರಿಸಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 305 (ವಾಸದ ಮನೆ, ವಾಹನ ಅಥವಾ ಪೂಜಾ ಸ್ಥಳದಲ್ಲಿ ಕಳ್ಳತನ) ಮತ್ತು 331 (ಮನೆಗೆ ಅಕ್ರಮ ಪ್ರವೇಶ ಅಥವಾ ಮನೆ ಒಡೆದು ಪ್ರವೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us