AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2027: ಹಾರ್ದಿಕ್ or ರಿಂಕು; ಯಾರಿಗೆ ಸಿಗಲಿದೆ ಕೆಕೆಆರ್ ನಾಯಕತ್ವ?

KKR new captain: ಟೀಂ ಇಂಡಿಯಾ ಆಟಗಾರ ಅಜಿಂಕ್ಯ ರಹಾನೆ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ರಹಾನೆ ನಿರ್ಗಮನದಿಂದ ಐಪಿಎಲ್ 2027ಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಹೊಸ ನಾಯಕನನ್ನು ಹುಡುಕುವ ಸವಾಲು ಎದುರಾಗಿದೆ. ರಹಾನೆ ನಾಯಕತ್ವದಲ್ಲಿ ಕೆಕೆಆರ್ ಮಿಶ್ರ ಪ್ರದರ್ಶನ ನೀಡಿತ್ತು. ಇದೀಗ ರಿಂಕು ಸಿಂಗ್ ಅಥವಾ ಟ್ರೇಡ್ ವಿಂಡೋ ಮೂಲಕ ಹೊಸ ನಾಯಕನನ್ನು ನೇಮಿಸುವ ಕುರಿತು ಕೆಕೆಆರ್ ಚಿಂತನೆ ನಡೆಸಿದೆ.

ಪೃಥ್ವಿಶಂಕರ
|

Updated on: Jul 30, 2026 | 7:18 PM

Share
ಟೀಂ ಇಂಡಿಯಾ ಆಟಗಾರ ಅಜಿಂಕ್ಯ ರಹಾನೆ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ರಹಾನೆ, ಅಂತರರಾಷ್ಟ್ರೀಯ, ದೇಶೀಯ ಮತ್ತು ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್​ಗೂ ನಿವೃತ್ತಿ ಘೋಷಿಸಿದ್ದಾರೆ. ಅಜಿಂಕ್ಯ ರಹಾನೆ ಅವರ ಈ ನಿವೃತ್ತಿ ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮತ್ತೊಂದು ಚಾಲೆಂಜ್ ತಂಡದಿದೆ(PC-PTI).

1 / 6
ಏಕೆಂದರೆ ಅಜಿಂಕ್ಯ ರಹಾನೆ ಕಳೆದ ಎರಡು ಆವೃತ್ತಿಗಳಲ್ಲಿ ಈ ತಂಡವನ್ನು ಮುನ್ನಡೆಸಿದ್ದರು. ಇದೀಗ ರಹಾನೆ ನಿವೃತ್ತಿ ಘೋಷಿಸಿರುವ ಕಾರಣ ಕೆಕೆಆರ್ ಐಪಿಎಲ್ 2027 ರ ಸೀಸನ್​ಗೂ ಮೊದಲು ತಂಡಕ್ಕೆ ಹೊಸ ನಾಯಕನನ್ನು ಹುಡುಕಬೇಕಿದೆ. ಈಗಾಗಲೇ ಕಳಪೆ ಪ್ರದರ್ಶನದಿಂದ ಬಳಲುತ್ತಿರುವ ಕೆಕೆಆರ್‌ಗೆ ಒಬ್ಬ ಸಮರ್ಥ ನಾಯಕನ ಅಗತ್ಯವುದೆ. ಹೀಗಾಗಿ ಕೆಕೆಆರ್ ಯಾರನ್ನು ನಾಯಕನಾಗಿ ನೇಮಿಸಲಿದೆ ಎಂಬುದು ಪ್ರಶ್ನೆಯಾಗಿದೆ(PC-PTI).

2 / 6
ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದ ನಂತರ, ಕೆಕೆಆರ್ ಐಪಿಎಲ್ 2025 ರಲ್ಲಿ ಅಜಿಂಕ್ಯ ರಹಾನೆಗೆ ನಾಯಕತ್ವ ವಹಿಸಿತ್ತು. ರಹಾನೆ ಅವರ ನಾಯಕತ್ವದಲ್ಲಿ, ಕೆಕೆಆರ್‌ನ ಪ್ರದರ್ಶನ ಮಿಶ್ರವಾಗಿತ್ತು. ಅಜಿಂಕ್ಯ ರಹಾನೆ ಮುನ್ನಡೆಸಿದ ಒಟ್ಟು 26 ಪಂದ್ಯಗಳಲ್ಲಿ, ತಂಡವು 14 ಪಂದ್ಯಗಳನ್ನು ಸೋತು 11 ಪಂದ್ಯಗಳನ್ನು ಗೆದ್ದಿತು. ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಅವರ ನಾಯಕತ್ವದಲ್ಲಿ ಕೆಕೆಆರ್‌ನ ಗೆಲುವಿನ ಶೇಕಡಾವಾರು ಶೇಕಡಾ 42.3 ರಷ್ಟಿತ್ತು(PC-PTI).

3 / 6
ಇದೀಗ ಹೊಸ ನಾಯಕನ ಹುಡುಕಾಟದಲ್ಲಿರುವ ಕೆಕೆಆರ್​ ತಂಡದಲ್ಲಿರುವ ಆಟಗಾರನಿಗೆ ಈ ಜವಾಬ್ದಾರಿ ನೀಡುತ್ತಾದ ಅಥವಾ ಹೊಸ ಆಟಗಾರನಿಗೆ ಈ ಪಟ್ಟ ಕಟ್ಟುತ್ತದಾ ಎಂಬುದನ್ನು ಕಾದುನೋಡಬೇಕಿದೆ. ಸದ್ಯಕ್ಕೆ ತಂಡದಲ್ಲಿರುವ ಆಟಗಾರರಲ್ಲಿ ನಾಯಕತ್ವದ ರೇಸ್​ನಲ್ಲಿರುವ ಆಟಗಾರನೆಂದರೆ ಅದು ರಿಂಕು ಸಿಂಗ್ ಮಾತ್ರ(PC-PTI).

4 / 6
ರಿಂಕು ಸಿಂಗ್ ಪ್ರಸ್ತುತ ಫಾರ್ಮ್‌ನಲ್ಲಿಲ್ಲ. ಆದ್ದರಿಂದ, ಟೀಂ ಇಂಡಿಯಾದಲ್ಲಿ ಅವರ ಸ್ಥಾನವೂ ಸುರಕ್ಷಿತವಾಗಿಲ್ಲ.  ಆದಾಗ್ಯೂ ಕೆಕೆಆರ್ ತಂಡದಲ್ಲಿ ಪ್ರಸ್ತುತ ಉಪನಾಯಕನಾಗಿರುವ ರಿಂಕು ಸಿಂಗ್ ನಾಯಕತ್ವದ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ. ಅಲ್ಲದೆ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅನುಭವ ರಿಂಕುಗೆ ಇದೆ. ಆದರೆ ಆ ಪಂದ್ಯದಲ್ಲಿ ತಂಡಕ್ಕೆ ಗೆಲುವು ತಂದುಕೊಡಲು ಅವರಿಗೆ ಸಾಧ್ಯವಾಗಿರಲಿಲ್ಲ(PC-PTI).

5 / 6
ಕೆಕೆಆರ್ ನಾಯಕತ್ವಕ್ಕಾಗಿ ಎರಡು ಆಯ್ಕೆಗಳನ್ನು ಹೊಂದಿದೆ. ಒಂದು ಐಪಿಎಲ್ 2027 ರ ಹರಾಜಿನಲ್ಲಿ ನಾಯಕನಾಗುವ ಆಟಗಾರನನ್ನು ಬಿಡ್ ಮಾಡುವುದು. ಇಲ್ಲದಿದ್ದರೆ, ಅವರು ಟ್ರೇಡ್ ವಿಂಡೋ ಮೂಲಕ ನಾಯಕತ್ವಕ್ಕೆ ಪರ್ಯಾಯವನ್ನು ಕಂಡುಹಿಡಿಯಬೇಕಾಗುತ್ತದೆ. ಪ್ರಸ್ತುತ, ಹಾರ್ದಿಕ್ ಪಾಂಡ್ಯ ಅವರ ಹೆಸರು ಟ್ರೇಡ್ ವಿಂಡೋದಲ್ಲಿ ಚರ್ಚೆಯಾಗುತ್ತಿದೆ(PC-PTI).

6 / 6
Follow Us