Kolkata Knight Riders
Kolkata Knight Riders
IPL 2026: ರಿಷಭ್ ಪಂತ್ ಜೊತೆಗೆ ಈ 4 ತಂಡಗಳ ನಾಯಕರಿಗೂ ಗೇಟ್ಪಾಸ್ ಖಚಿತ
IPL 2026 Captaincy Shake-Up: ಐಪಿಎಲ್ 2026 ಮುಗಿಯುವುದಕ್ಕೂ ಮುನ್ನವೇ ಲಕ್ನೋ ನಾಯಕತ್ವದಿಂದ ರಿಷಭ್ ಪಂತ್ ಅವರನ್ನು ತೆಗೆದುಹಾಕಲಾಗಿದೆ. ತಂಡದ ಕಳಪೆ ಪ್ರದರ್ಶನವೇ ಇದಕ್ಕೆ ಕಾರಣ. ಪಂತ್ ಜೊತೆಗೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ ಮತ್ತು ರುತುರಾಜ್ ಗಾಯಕ್ವಾಡ್ ಅವರೂ ನಾಯಕತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇವರೆಲ್ಲರ ವೈಯಕ್ತಿಕ ಮತ್ತು ತಂಡದ ಪ್ರದರ್ಶನ ಕಳಪೆಯಾಗಿದ್ದು, ಮುಂಬರುವ ಆವೃತ್ತಿಗೆ ಹೊಸ ನಾಯಕರ ನೇಮಕವಾಗುವ ಸಾಧ್ಯತೆಗಳಿವೆ.
- pruthvi Shankar
- Updated on: May 29, 2026
- 6:50 pm
DC vs KKR: ಔಪಚಾರಿಕ ಪಂದ್ಯದಲ್ಲಿ ಕೆಕೆಆರ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್
IPL 2026: ಐಪಿಎಲ್ 2026 ರ ಅಂತಿಮ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿ ಭರ್ಜರಿ ಗೆಲುವು ಸಾಧಿಸಿತು. ಕೆಎಲ್ ರಾಹುಲ್ ಅವರ ಆಕರ್ಷಕ ಅರ್ಧಶತಕದ (60 ರನ್) ನೆರವಿನಿಂದ ಡೆಲ್ಲಿ 203 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕೆಕೆಆರ್, ಅಜಿಂಕ್ಯ ರಹಾನೆ (63 ರನ್) ಅವರ ಉತ್ತಮ ಆಟದ ಹೊರತಾಗಿಯೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಡೆಲ್ಲಿ ಪಾಯಿಂಟ್ಸ್ ಟೇಬಲ್‌ನಲ್ಲಿ 6ನೇ ಸ್ಥಾನಕ್ಕೇರಿತು.
- pruthvi Shankar
- Updated on: May 24, 2026
- 11:29 pm
MI vs RR: ಮುಂಬೈ ಮಣಿಸಿ 4ನೇ ತಂಡವಾಗಿ ಪ್ಲೇಆಫ್‌ಗೇರಿದ ರಾಜಸ್ಥಾನ್
MI vs RR IPL 2026 Match 69: ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2026 ರ 69ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪ್ಲೇಆಫ್‌ಗೆ ಅರ್ಹತೆ ಗಳಿಸಿತು. ರಾಜಸ್ಥಾನ್‌ಗೆ ಇದು ಅತ್ಯಂತ ನಿರ್ಣಾಯಕ ಪಂದ್ಯವಾಗಿತ್ತು. ಈ ಗೆಲುವಿನಿಂದಾಗಿ ರಾಜಸ್ಥಾನ್ ನಾಲ್ಕನೇ ತಂಡವಾಗಿ ಪ್ಲೇಆಫ್ ಪ್ರವೇಶಿಸಿತು. ಮುಂಬೈ ಇಂಡಿಯನ್ಸ್ ಸೋಲಪ್ಪಿಕೊಂಡಿತು, ಹಾಗೂ ಪಂಜಾಬ್ ಕಿಂಗ್ಸ್ ಮತ್ತು ಕೆಕೆಆರ್ ತಂಡಗಳ ಪ್ಲೇಆಫ್ ಕನಸು ಕೊನೆಗೊಂಡಿತು.
- pruthvi Shankar
- Updated on: May 24, 2026
- 8:07 pm
IPL 2026: ಮಾಡು ಇಲ್ಲವೇ ಮಡಿ ಪಂದ್ಯಕ್ಕೂ ಮುನ್ನ ಕೆಕೆಆರ್ ತೊರೆದ 18 ಕೋಟಿಯ ಬೌಲರ್
IPL 2026, KKR's Do-or-Die vs DC: ಐಪಿಎಲ್ 2026ರಲ್ಲಿ ಕೆಕೆಆರ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ಮಾಡು ಇಲ್ಲವೇ ಮಡಿ ಪಂದ್ಯವಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು ಭಾರಿ ಅಂತರದಿಂದ ಗೆಲ್ಲಬೇಕು. ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಸ್ಟಾರ್ ವೇಗಿ ಮಥಿಶಾ ಪತಿರಾನ ಮಂಡಿರಜ್ಜು ಗಾಯದಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಕರ್ನಾಟಕದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಲುವ್ನಿತ್ ಸಿಸೋಡಿಯಾ ಕೆಕೆಆರ್ ತಂಡ ಸೇರಿಕೊಂಡಿದ್ದಾರೆ. ಇದು ಕೆಕೆಆರ್‌ನ ಪ್ಲೇಆಫ್ ಕನಸಿಗೆ ಸವಾಲು ಒಡ್ಡಿದೆ.
- pruthvi Shankar
- Updated on: May 24, 2026
- 6:49 pm
ಬದಲಾಗದ ಸೋಲಿನ ಕಾರಣ: ಹಾರ್ದಿಕ್ ಪಾಂಡ್ಯ ಬೇಸರ
IPL 2026 KKR vs MI: ಕೊಲ್ಕತ್ತಾದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 18.5 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ ಬಾರಿಸಿ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
- Zahir Yusuf
- Updated on: May 21, 2026
- 8:26 am
KKR vs MI: ಕನ್ನಡಿಗ ಮನೀಶ್, ಪೊವೆಲ್ ಆಟಕ್ಕೆ ಕೆಕೆಆರ್‌ಗೆ ಒಲಿದ ಜಯ
KKR vs MI IPL 2026: ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2026 ರ 65 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಮಳೆ ಪೀಡಿತ ಪಂದ್ಯದಲ್ಲಿ ಕನ್ನಡಿಗ ಮನೀಶ್ ಪಾಂಡೆ (45 ರನ್) ಅವರ ಸಮಯೋಜಿತ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ ಗೆಲುವು ಸಾಧಿಸಿತು. ಮುಂಬೈ ತನ್ನ 9ನೇ ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಇದು ಕೆಕೆಆರ್‌ಗೆ ನಿರ್ಣಾಯಕ ಗೆಲುವಾಗಿದೆ.
- pruthvi Shankar
- Updated on: May 21, 2026
- 12:20 am
KKR vs MI, IPL 2026 Highlights: ಮುಂಬೈ ವಿರುದ್ಧ ಕೆಕೆಆರ್‌ಗೆ 4 ವಿಕೆಟ್ ಜಯ
Kolkata Knight Riders vs Mumbai Indians Indian Premier League 2026 Highlights: ಐಪಿಎಲ್ 2026 ರ 65 ನೇ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಮತ್ತು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕೆಕೆಆರ್, ಮುಂಬೈ ಇಂಡಿಯನ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ, ಕೆಕೆಆರ್ ತಮ್ಮ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿತು.
- pruthvi Shankar
- Updated on: May 21, 2026
- 12:24 am
KKR vs GT: ಕಳಪೆ ಫಿಲ್ಡಿಂಗ್ಗೆ ಸೋಲಿನ ಬೆಲೆ ತೆತ್ತ ಗುಜರಾತ್; ಕೆಕೆಆರ್‌ಗೆ 29 ರನ್ ಜಯ
IPL 2026 KKR vs GT: ಐಪಿಎಲ್ 2026 ರ 60 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಗುಜರಾತ್ ಟೈಟಾನ್ಸ್ ತಂಡವನ್ನು 29 ರನ್‌ಗಳಿಂದ ಸೋಲಿಸಿ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಕೆಕೆಆರ್ ಸುಲಭ ಜಯ ದಾಖಲಿಸಲು ಗುಜರಾತ್‌ನ ಕಳಪೆ ಫಿಲ್ಡಿಂಗ್ ಹಾಗೂ ಬ್ಯಾಟರ್‌ಗಳ ಸ್ಫೋಟಕ ಬ್ಯಾಟಿಂಗ್ ಕಾರಣವಾಯಿತು. ಕೆಕೆಆರ್ 247 ರನ್ ಗಳಿಸಿದರೆ, ಗುಜರಾತ್ 218 ರನ್ ಗಳಿಸಲಷ್ಟೇ ಶಕ್ತವಾಯಿತು.
- pruthvi Shankar
- Updated on: May 16, 2026
- 11:51 pm
KKR vs GT: 34 ರನ್ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
Finn Allen 93 Runs: ಐಪಿಎಲ್ 2026 ರ KKR vs GT ಪಂದ್ಯದಲ್ಲಿ ಫಿನ್ ಅಲೆನ್ 93 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 35 ಎಸೆತಗಳಲ್ಲಿ 10 ಸಿಕ್ಸರ್ ಸಿಡಿಸಿ ಶತಕದ ಸನಿಹಕ್ಕೆ ಬಂದರು. ಎರಡು ಜೀವದಾನಗಳನ್ನು ಪಡೆದು ತಂಡಕ್ಕೆ ಭರ್ಜರಿ ಆರಂಭ ನೀಡಿದ ಅಲೆನ್, ಈಡನ್ ಗಾರ್ಡನ್ಸ್‌ನಲ್ಲಿ ಸಿಕ್ಸರ್‌ಗಳ ಮಳೆ ಸುರಿಸಿದರು. ಅವರ ಬಿರುಸಿನ ಆಟ ಗುಜರಾತ್ ಬೌಲರ್‌ಗಳನ್ನು ಕಂಗೆಡಿಸಿತು.
- pruthvi Shankar
- Updated on: May 16, 2026
- 9:47 pm
KKR vs GT: ಐಪಿಎಲ್‌ನಲ್ಲಿ ವಿಶೇಷ ದ್ವಿಶತಕ ಪೂರೈಸಿದ ಸುನಿಲ್ ನರೈನ್
Sunil Narine Makes IPL History: ಐಪಿಎಲ್ 2026 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ 60ನೇ ಪಂದ್ಯ ಪ್ಲೇಆಫ್ ದೃಷ್ಟಿಯಿಂದ ಮಹತ್ವದ್ದಾಗಿದೆ. ಈ ಐತಿಹಾಸಿಕ ಪಂದ್ಯದಲ್ಲಿ ಸ್ಟಾರ್ ಆಲ್‌ರೌಂಡರ್ ಸುನಿಲ್ ನರೈನ್ ತಮ್ಮ 200ನೇ ಐಪಿಎಲ್ ಪಂದ್ಯವಾಡುತ್ತಿದ್ದಾರೆ. ಕೆಕೆಆರ್ ಪರ ಸುದೀರ್ಘ ಕಾಲ ಆಡಿರುವ ನರೈನ್, ಈ ಮೂಲಕ 200 ಐಪಿಎಲ್ ಪಂದ್ಯಗಳನ್ನಾಡಿದ ಮೊದಲ ವಿದೇಶಿ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. 200ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಏಕೈಕ ವಿದೇಶಿ ಬೌಲರ್ ಎಂಬ ಹೆಗ್ಗಳಿಕೆಯೂ ನರೈನ್ ಹೆಸರಿಗಿದೆ.
- pruthvi Shankar
- Updated on: May 16, 2026
- 8:44 pm
KKR vs GT IPL 2026 Highlights: ಗೆಲ್ಲಲೇಬೇಕಾದ ಪಂದ್ಯದಲ್ಲಿ ಗೆದ್ದ ಕೆಕೆಆರ್
Kolkata Knight Riders vs Gujarat Titans, IPL 2026 Highlights: ಐಪಿಎಲ್ 2026 ರ 60 ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ಉಭಯ ತಂಡಗಳು ಈ ಆವೃತ್ತಿಯಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಎರಡನೇ ಬಾರಿ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
- pruthvi Shankar
- Updated on: May 16, 2026
- 11:38 pm
ಕಾಡಿನ ರಾಜ ‘ಸಿಂಹ’ ಕಣ್ರೋ… KKR ಟ್ರೋಲ್ಗೆ RCB ತಿರುಗೇಟು!
IPL 2026 RCB vs KKR: ಐಪಿಎಲ್ನ 57ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು 20 ಓವರ್ಗಳಲ್ಲಿ 192 ರನ್ ಕಲೆಹಾಕಿದ್ದರು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ 19.1 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಆರ್ಸಿಬಿ ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
- Zahir Yusuf
- Updated on: May 14, 2026
- 10:39 am