- Kannada News Photo gallery Cricket photos KKR IPL 2026 Setback: Moeen Ali Chooses PSL Over IPL After Russell Exit
IPL 2026: ಪಾಕ್ ಸೂಪರ್ ಲೀಗ್ ಹೊಗಳಿ ಐಪಿಎಲ್‌ನಿಂದ ಹಿಂದೆ ಸರಿದ ಕೆಕೆಆರ್ ಆಟಗಾರ
Moeen Ali Leaves KKR for PSL: 2026 ರ ಐಪಿಎಲ್ ಆರಂಭಕ್ಕೂ ಮುನ್ನ ಕೆಕೆಆರ್ ತಂಡಕ್ಕೆ ಸತತ ಆಘಾತಗಳು ಎದುರಾಗುತ್ತಿವೆ. ಆಂಡ್ರೆ ರಸೆಲ್ ನಂತರ ಇದೀಗ ಮೊಯಿನ್ ಅಲಿ ಕೂಡ ಐಪಿಎಲ್ಗೆ ವಿದಾಯ ಹೇಳಿ ಪಾಕಿಸ್ತಾನ ಸೂಪರ್ ಲೀಗ್ (PSL) ಸೇರಿದ್ದಾರೆ. ಕೆಕೆಆರ್ ತಂಡದ ಪ್ರಮುಖ ಆಟಗಾರರ ಈ ನಿರ್ಧಾರ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ಐಪಿಎಲ್‌ನಲ್ಲಿ ಅವರ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ.
Updated on: Dec 01, 2025 | 8:58 PM

2026 ರ ಐಪಿಎಲ್ ಆರಂಭಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಆಘಾತಗಳು ಎದುರಾಗುತ್ತಿವೆ. ಕೆಲವೇ ದಿನಗಳ ಹಿಂದೆ ತಂಡದ ಸ್ಫೋಟಕ ಆಲ್‌ರೌಂಡರ್ ಆಂಡ್ರೆ ರಸೆಲ್ ಐಪಿಎಲ್ಗೆ ವಿದಾಯ ಹೇಳಿದ್ದರು. ಇದೀಗ ಇಂಗ್ಲೆಂಡ್ ತಂಡದ ಮೊಹಿಲ್ ಅಲಿ ಕೂಡ ಐಪಿಎಲ್ 2026 ರಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

ಕಳೆದ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದ ಮೊಯಿನ್ ಅಲಿ, ಈ ಬಾರಿಯ ಹರಾಜಿನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಮೊಯಿನ್ ಅಲಿ 2026 ರಲ್ಲಿ ಐಪಿಎಲ್ ಬದಲಿಗೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುವುದಾಗಿ ಘೋಷಿಸಿದ್ದಾರೆ. ಇದು ತಮ್ಮ ವೃತ್ತಿಜೀವನದಲ್ಲಿ ಹೊಸ ಆರಂಭವಾಗಿದ್ದು, ಪಿಎಸ್‌ಎಲ್‌ನಲ್ಲಿ ಆಡಲು ತುಂಬಾ ಉತ್ಸುಕನಾಗಿದ್ದೇನೆ ಎಂದು ಮೊಯಿನ್ ಅಲಿ ಹೇಳಿದ್ದಾರೆ.

ಪಾಕಿಸ್ತಾನ ಸೂಪರ್ ಲೀಗ್ ಅನ್ನು ಶ್ಲಾಘಿಸಿರುವ ಮೊಯಿನ್ ಅಲಿ, ‘ಹೊಸ ಆರಂಭಕ್ಕೆ ಇದು ಸರಿಯಾದ ಸಮಯ. ಪಾಕಿಸ್ತಾನ ಸೂಪರ್ ಲೀಗ್‌ನ ಹೊಸ ಯುಗವನ್ನು ಸೇರಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಪಾಕಿಸ್ತಾನ ಸೂಪರ್ ಲೀಗ್ ಟಿ20 ಕ್ರಿಕೆಟ್‌ನಲ್ಲಿ ಪ್ರಮುಖ ಹೆಸರು ಏಕೆಂದರೆ ಅದು ವಿಶ್ವ ದರ್ಜೆಯ ಪ್ರತಿಭಾನ್ವಿತ ಆಟಗಾರರನ್ನು ಹುಟ್ಟುಹಾಕುತ್ತದೆ ಎಂದಿದ್ದಾರೆ.

ವಾಸ್ತವವಾಗಿ ಪಿಎಸ್‌ಎಲ್ ಆಡುವುದಾಗಿ ಹೇಳಿ ಐಪಿಎಲ್‌ನಿಂದ ಹೊರನಡೆದ ಎರಡನೇ ಆಟಗಾರ ಮೊಯಿನ್ ಅಲಿ. ಅವರಿಗಿಂತ ಮೊದಲು, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಫಾಫ್ ಡು ಪ್ಲೆಸಿಸ್ ಕೂಡ ಐಪಿಎಲ್‌ನಿಂದ ಹಿಂದೆ ಸರಿದು ಪಾಕಿಸ್ತಾನ ಸೂಪರ್ ಲೀಗ್ ಅನ್ನು ಆಯ್ಕೆ ಮಾಡಿಕೊಂಡಿದ್ದರು.

ಕಳೆದ ಆವೃತ್ತಿಯಲ್ಲಿ ಕೆಕೆಆರ್ ಪರ ಆಡಿದ್ದ ಮೊಯಿನ್ ಅಲಿ ಅವರನ್ನು 2 ಕೋಟಿ ರೂ. ಮೂಲ ಬೆಲೆಗೆ ಖರೀದಿಸಲಾಗಿತ್ತು. ಅದರಂತೆ 2025 ರ ಐಪಿಎಲ್‌ನಲ್ಲಿ ಆರು ಪಂದ್ಯಗಳನ್ನು ಆಡಿದ್ದ ಅಲಿ, ಕೇವಲ ಐದು ರನ್ ಬಾರಿಸಿ, ಬೌಲಿಂಗ್ನಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದರು.

ಮೊಯಿನ್ ಅಲಿ ಬಗ್ಗೆ ಹೇಳುವುದಾದರೆ, 2018 ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದರು. ಇದುವರೆಗೆ 73 ಪಂದ್ಯಗಳನ್ನಾಡಿರುವ ಅಲಿ 41 ವಿಕೆಟ್ ಮತ್ತು 1167 ರನ್‌ಗಳನ್ನು ಬಾರಿಸಿದ್ದಾರೆ. ಮೊಯಿನ್ ಅಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವೂ ಆಡಿದ್ದಾರೆ.
