AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈರುಳ್ಳಿ ಬೆಲೆ ಕುಸಿತ: ರೈತರು ಈರುಳ್ಳಿಯ ಜತೆಗೆ ಚೀಲವನ್ನೂ ಉಚಿತವಾಗಿ ಕೊಟ್ಟು ಹೋಗಬೇಕಾದ ದುಸ್ಥಿತಿ

ದಾವಣಗೆರೆ ಈರುಳ್ಳಿ ಮಾರುಕಟ್ಟೆಯಲ್ಲಿ ಜಾಗತಿಕ ಯುದ್ಧದ ಪರಿಣಾಮದಿಂದ ತೀವ್ರ ಬೆಲೆ ಕುಸಿತವಾಗಿದೆ. ಕೆಜಿಗೆ 6-12 ರೂ.ಗೆ ಇಳಿದಿದ್ದು, ರೈತರು ಕಂಗಾಲಾಗಿದ್ದಾರೆ. ಇಂಧನ ಬೆಲೆ ಏರಿಕೆಯಿಂದ ಹೋಟೆಲ್‌ಗಳಿಂದ ಬೇಡಿಕೆ ಕಡಿಮೆಯಾಗಿರುವುದು ಮತ್ತು ಖಾಲಿ ಚೀಲದ ಬೆಲೆ ಹೆಚ್ಚಾಗಿರುವುದು ರೈತರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. ಕೃಷಿಕರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಣ್ಣೀರು ಹಾಕುತ್ತಿದ್ದಾರೆ.

ಈರುಳ್ಳಿ ಬೆಲೆ ಕುಸಿತ: ರೈತರು ಈರುಳ್ಳಿಯ ಜತೆಗೆ ಚೀಲವನ್ನೂ ಉಚಿತವಾಗಿ ಕೊಟ್ಟು ಹೋಗಬೇಕಾದ ದುಸ್ಥಿತಿ
ಸಾಂದರ್ಭಿಕ ಚಿತ್ರ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Mar 19, 2026 | 8:53 AM

Share

ದಾವಣಗೆರೆ, ಮಾ.19: ಎಲ್ಲಿಯೋ ನಡೆಯುತ್ತಿರುವ ಯುದ್ಧದ ಪರಿಣಾಮ ದಾವಣಗೆರೆಯ ಈರುಳ್ಳಿ ಮಾರುಕಟ್ಟೆಯ ಮೇಲೆ ಭೀಕರವಾಗಿ ಪರಿಣಾಮವನ್ನು ಉಂಟು ಮಾಡಿದೆ. ಬೆಲೆ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದು, ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದ ಕೂಲಿಯೂ ಸಿಗದೆ ಒದ್ದಾಡಿದ್ದಾರೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪ್ರತಿ ಕೆಜೆಗೆ ಕೇವಲ 6 ರಿಂದ 12 ರೂಪಾಯಿಗೆ ಕುಸಿದಿದೆ. ಉತ್ತಮ ಗಾತ್ರದ ಈರುಳ್ಳಿಗೂ ಕೇವಲ 10-12 ರೂಪಾಯಿ ಸಿಗುತ್ತಿದ್ದರೆ, ಸಣ್ಣ ಗಾತ್ರದ ಈರುಳ್ಳಿಗೆ 6-8 ರೂಪಾಯಿ ಮಾತ್ರ ಲಭಿಸುತ್ತಿದೆ.

ಜಾಗತಿಕ ಯುದ್ಧದ ಭೀತಿಯಿಂದಾಗಿ ಇಂಧನ ಮತ್ತು ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಹಲವು ಹೋಟೆಲ್‌ಗಳು ವಹಿವಾಟು ಸ್ಥಗಿತಗೊಳಿಸಿವೆ. ಇದು ಈರುಳ್ಳಿಯ ಬೇಡಿಕೆಯ ಮೇಲೆ ನೇರ ಪರಿಣಾಮ ಬೀರಿದೆ. ಈರುಳ್ಳಿ ಬೆಲೆ ಕುಸಿದಿದ್ದರೆ, ಅದನ್ನು ತುಂಬುವ ಖಾಲಿ ಚೀಲದ ಬೆಲೆ ಮಾತ್ರ 18 ರಿಂದ 20 ರೂಪಾಯಿಗೆ ಏರಿಕೆಯಾಗಿದೆ. ರೈತರು ಈರುಳ್ಳಿಯ ಜೊತೆಗೆ ಚೀಲವನ್ನೂ ಉಚಿತವಾಗಿ ಕೊಟ್ಟು ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಅಬ್ಬರ: ಕಾಶ್ಮೀರದಂತಾದ ಮಲೆನಾಡು; ರೈತರಿಗೆ ತಪ್ಪದ ಬೆಳೆ ಹಾನಿ ಸಂಕಷ್ಟ!

ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ರಾಜ್ಯದ ಕೊಪ್ಪಳ, ಬಳ್ಳಾರಿ, ವಿಜಯಪುರ ಮತ್ತು ಹೊಸಪೇಟೆಯಿಂದ ನೂರಾರು ಕ್ವಿಂಟಾಲ್ ಈರುಳ್ಳಿ ಹೊತ್ತು ತಂದ ರೈತರು ದರ ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಸ್ಥಳೀಯವಾಗಿ ಬೆಳೆದ ಈರುಳ್ಳಿಗೆ ನಾಸಿಕ್ ಈರುಳ್ಳಿಯ ಅರ್ಧದಷ್ಟು ದರವೂ ಸಿಗುತ್ತಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮೈಸೂರು ದಸರಾ 2026: ಅರಮನೆಗೆ ಬಂದ ಗಜಪಡೆಗೆ ಭವ್ಯ ಸ್ವಾಗತ
ಮೈಸೂರು ದಸರಾ 2026: ಅರಮನೆಗೆ ಬಂದ ಗಜಪಡೆಗೆ ಭವ್ಯ ಸ್ವಾಗತ
ಸೂರತ್‌ನಲ್ಲಿ ಗೋಮಯ ರಾಖಿಗಳ ಮೂಲಕ ಪರಿಸರ ಸ್ನೇಹಿ ರಕ್ಷಾಬಂಧನ ಆಚರಣೆ
ಸೂರತ್‌ನಲ್ಲಿ ಗೋಮಯ ರಾಖಿಗಳ ಮೂಲಕ ಪರಿಸರ ಸ್ನೇಹಿ ರಕ್ಷಾಬಂಧನ ಆಚರಣೆ
ಲೋಕಾ ದಾಳಿಗೆ ಹೆದರಿ ರಾಜೀನಾಮೆ ಕೊಟ್ಟಿದ್ದ ವಿಶೇಷ ಭೂ ಸ್ವಾಧೀನ ಅಧಿಕಾರಿ!
ಲೋಕಾ ದಾಳಿಗೆ ಹೆದರಿ ರಾಜೀನಾಮೆ ಕೊಟ್ಟಿದ್ದ ವಿಶೇಷ ಭೂ ಸ್ವಾಧೀನ ಅಧಿಕಾರಿ!
NEET-PG Exam: ನೀಟ್-ಪಿಜಿ 2026 ಪರೀಕ್ಷೆಗೆ ಸಂಪೂರ್ಣ ಸಿದ್ಧತೆ
NEET-PG Exam: ನೀಟ್-ಪಿಜಿ 2026 ಪರೀಕ್ಷೆಗೆ ಸಂಪೂರ್ಣ ಸಿದ್ಧತೆ
ಇಂದು ಅರಮನೆ ಪ್ರವೇಶಿಸಲಿರುವ ಗಜಪಡೆ, ಅರಣ್ಯ ಭವನದಲ್ಲಿ ವಿಶೇಷ ಪೂಜೆ
ಇಂದು ಅರಮನೆ ಪ್ರವೇಶಿಸಲಿರುವ ಗಜಪಡೆ, ಅರಣ್ಯ ಭವನದಲ್ಲಿ ವಿಶೇಷ ಪೂಜೆ
ಜಾತ್ರೆ ಸಮಯದಲ್ಲಿ ಮನೆಯಲ್ಲಿ ಒಲೆ ಹಚ್ಚುವಂತಿಲ್ಲ!
ಜಾತ್ರೆ ಸಮಯದಲ್ಲಿ ಮನೆಯಲ್ಲಿ ಒಲೆ ಹಚ್ಚುವಂತಿಲ್ಲ!
ಬೆಂಗಳೂರಿನಲ್ಲಿ ದಕ್ಷಿಣ ಕೊರಿಯಾ ಕಂಪನಿ ಕಾರ್ಯಾರಂಭ: 350 ಜನರಿಗೆ ಉದ್ಯೋಗ
ಬೆಂಗಳೂರಿನಲ್ಲಿ ದಕ್ಷಿಣ ಕೊರಿಯಾ ಕಂಪನಿ ಕಾರ್ಯಾರಂಭ: 350 ಜನರಿಗೆ ಉದ್ಯೋಗ
ಇಂದು ಯಜುರುಪಾಕರ್ಮ, ರಕ್ಷಾ ಬಂಧನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯಜುರುಪಾಕರ್ಮ, ರಕ್ಷಾ ಬಂಧನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ