ನಿವೃತ್ತ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೆ ಗುಡ್ನ್ಯೂಸ್: ಬರಲಿದೆ ‘ಸಂಧ್ಯಾ ಕಿರಣ’ ಉಚಿತ ಆರೋಗ್ಯ ಸೇವೆ
ಸಚಿವ ಯು.ಟಿ. ಖಾದರ್ ಅವರು ನಿವೃತ್ತ ಸರಕಾರಿ ನೌಕರರಿಗಾಗಿ ರೂಪಿಸಲಾದ ಸಂಧ್ಯಾಕಿರಣ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. 60-70 ವರ್ಷ ವಯಸ್ಸಿನವರಿಗೆ ತಮ್ಮ ಪಿಂಚಣಿಯ 1.25% ಕೊಡುಗೆಯೊಂದಿಗೆ ಆರೋಗ್ಯ ಸೌಲಭ್ಯ ಒದಗಿಸಲಾಗುವುದು. 70 ವರ್ಷ ಮೇಲ್ಪಟ್ಟವರಿಗೆ ವಯೋ ವಂದನ ಯೋಜನೆ ಜಾರಿಗೆ ಕೇಂದ್ರ ಸರಕಾರದಿಂದ ಸ್ಪಷ್ಟತೆ ಕೇಳಿದ್ದಾರೆ. ಎಪಿಎಲ್ ಕುಟುಂಬಗಳಿಗೂ ಯೋಜನೆ ವಿಸ್ತರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಮಂಗಳೂರು, ಆಗಸ್ಟ್ 06: ರಾಜ್ಯ ಸರ್ಕಾರಿ ನೌಕರರು ನಿವೃತ್ತಿಯಾದ ಬಳಿಕ 60 ರಿಂದ 70 ವರ್ಷದವರೆಗೆ ಅವರ ಮತ್ತು ಅವರ ಕುಟುಂಬಸ್ಥರ ಆರೋಗ್ಯ ರಕ್ಷಣೆಗಾಗಿ ‘ಸಂಧ್ಯಾ ಕಿರಣ’ ಎಂಬ ಸ್ವಯಂ-ಧನಸಹಾಯ ಯೋಜನೆಯನ್ನು ರೂಪಿಸಲಾಗಿದ್ದು, ಈ ಯೋಜನೆಯಡಿ ನಿವೃತ್ತ ನೌಕರರು ತಮ್ಮ ಮಾಸಿಕ ಪಿಂಚಣಿಯ ಶೇ. 1.25 ರಷ್ಟು ಮೊತ್ತವನ್ನು ಹಾಗೂ ಒಂದು ವೇಳೆ ನೌಕರ ಮೃತಪಟ್ಟರೆ ಅವರ ಕುಟುಂಬದವರು ಶೇ. 0.75 ರಷ್ಟು ಮೊತ್ತವನ್ನು ಪಾವತಿಸಿ ಉಚಿತ ಆರೋಗ್ಯ ಸೇವೆ ಪಡೆಯಬಹುದು. ಇದರೊಂದಿಗೆ, ಕೇಂದ್ರ ಸರ್ಕಾರದ ‘ವಯೋ ವಂದನಾ’ ಯೋಜನೆಯಡಿ 70 ವರ್ಷ ಮೇಲ್ಪಟ್ಟ ಎಪಿಎಲ್ ಕಾರ್ಡ್‌ದಾರರಿಗೂ ಉಚಿತ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಸಿದ್ಧವಿದ್ದು, ಕೇಂದ್ರದಿಂದ ಅನುದಾನ ಹಾಗೂ ಮಾರ್ಗದರ್ಶನದಲ್ಲಿ ಸ್ಪಷ್ಟತೆ ಕೋರಿ ಶೀಘ್ರವೇ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ರೂಪರೇಷೆ ಸಿದ್ಧಪಡಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ಫುಟ್ಪಾತ್ನಲ್ಲಿ ಕಸ ಸುರಿದ ಕಟ್ಟಡ ಮಾಲೀಕನಿಗೆ 50,000 ರೂ. ದಂಡ!
ಧಾರಾಕಾರ ಮಳೆಯಿಂದ ಬಾಗಲಕುಂಟೆಯಲ್ಲಿ ಮನೆಗಳಿಗೆ ನುಗ್ಗಿದ ನೀರು!
ನಾಮಿನೇಷನ್ ವಿಷಯದಲ್ಲಿ ಉರಿದುಬಿದ್ದ ಶಾಸ್ತ್ರಿ; ನಡೆಯಿತು ಮತ್ತೊಂದು ಜಗಳ
ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿತ್ತು 10 ಟನ್ ಕೆಮಿಕಲ್ ಮಿಶ್ರಿತ ಅಡಿಕೆ

