AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಶ್ರೀಲಂಕಾ ವಿರುದ್ಧ ದ್ವಿಶತಕ ಬಾರಿಸಿರುವ ಭಾರತೀಯರಿವರು

Indian Batsmen Double Hundreds vs Sri Lanka: ಭಾರತ ತಂಡ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಕೊಲಂಬೊಗೆ ಪ್ರಯಾಣಿಸಿದೆ. ಶುಭಮನ್ ಗಿಲ್ ನಾಯಕತ್ವದಲ್ಲಿ ತಂಡ ಉತ್ತಮ ಫಾರ್ಮ್‌ನಲ್ಲಿದೆ. ಈ ಸರಣಿ WTC ಫೈನಲ್‌ಗೆ ನಿರ್ಣಾಯಕ. ಆದರೆ, ಶ್ರೀಲಂಕಾ ವಿರುದ್ಧ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ ಕೇವಲ ಮೂವರು ಭಾರತೀಯ ಬ್ಯಾಟ್ಸ್‌ಮನ್‌ಗಳಿದ್ದಾರೆ. ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಈ ಎಲೈಟ್ ಪಟ್ಟಿಯಲ್ಲಿದ್ದಾರೆ

ಪೃಥ್ವಿಶಂಕರ
|

Updated on: Aug 05, 2026 | 7:46 PM

Share
ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡ ಕೊಲಂಬೊಗೆ ಪ್ರಯಾಣ ಬೆಳೆಸಿದೆ. 2025-27 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ಗೇರಲು ಈ ಸರಣಿ ನಿರ್ಣಾಯಕವಾಗಿದೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಆಗಸ್ಟ್ 15, 2026 ರಂದು ಪ್ರಾರಂಭವಾಗಲಿದೆ. ಅದಕ್ಕೂ ಮೊದಲು, ಶುಭಮನ್ ಗಿಲ್ ನೇತೃತ್ವದ ತಂಡವು ಶ್ರೀಲಂಕಾದ XI ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ(PC-PTI).

1 / 5
ಟೆಸ್ಟ್ ತಂಡದ ನಾಯಕನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಗಿಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಒಂದು ದ್ವಿಶತಕ ಮತ್ತು 5 ಶತಕಗಳನ್ನು ಗಳಿಸಿದ್ದಾರೆ. ಆದಾಗ್ಯೂ, ಟೆಸ್ಟ್ ಪಂದ್ಯಗಳಲ್ಲಿ ಶ್ರೀಲಂಕಾ ವಿರುದ್ಧ ಕೇವಲ 3 ಭಾರತೀಯ ಬ್ಯಾಟ್ಸ್‌ಮನ್‌ಗಳು ದ್ವಿಶತಕಗಳನ್ನು ಬಾರಿಸಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಹಾಗಿದ್ದರೆ ಉಳಿದ ಇಬ್ಬರು ಯಾರು ಎಂಬುದನ್ನು ನೋಡುವುದಾದರೆ(PC-PTI)..

2 / 5
ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದ್ವಿಶತಕದ ಇನ್ನಿಂಗ್ಸ್ ಆಡಿದ ದಾಖಲೆ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದೆ. 2009 ರಲ್ಲಿ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಸೆಹ್ವಾಗ್ ಅತ್ಯಧಿಕ 293 ರನ್​ಗಳ ಇನ್ನಿಂಗ್ಸ್ ಆಡಿದ್ದರು. ವಿರಾಟ್ ಕೊಹ್ಲಿಯಂತೆಯೇ, ಸೆಹ್ವಾಗ್ ಕೂಡ ಶ್ರೀಲಂಕಾ ವಿರುದ್ಧ 2 ದ್ವಿಶತಕಗಳನ್ನು ಸಿಡಿಸಿದ್ದಾರೆ. 2008 ರಲ್ಲಿ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಔಟಾಗದೆ 201 ರನ್ ಕಲೆಹಾಕಿದ್ದರು(PC-PTI).

3 / 5
2025ರಲ್ಲಿ ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ ಕೊಹ್ಲಿ, ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ದ್ವಿಶತಕಗಳನ್ನು ಬಾರಿಸಿದ್ದಾರೆ. 2017ರ ನವೆಂಬರ್​ನಲ್ಲಿ ನಾಗ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 213 ರನ್ ಬಾರಿಸಿದ್ದ ವಿರಾಟ್ ಮುಂದಿನ ಟೆಸ್ಟ್ ಪಂದ್ಯದಲ್ಲಿಯೂ ಮತ್ತೊಂದು ದ್ವಿಶತಕ ಬಾರಿಸಿದ್ದರು. ದೆಹಲಿಯಲ್ಲಿ ನಡೆದ ಆ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 243 ರನ್ ಸಿಡಿಸಿದ್ದರು(PC-PTI).

4 / 5
ಕ್ರಿಕೆಟ್ ದೇವರು ಎಂದೇ ಖ್ಯಾತರಾದ ಸಚಿನ್ ತೆಂಡೂಲ್ಕರ್, ಜುಲೈ 2010 ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಅದ್ಭುತ 203 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಈ ದ್ವಿಶತಕದ ಇನ್ನಿಂಗ್ಸ್​ನಲ್ಲಿ ಸಚಿನ್ 23 ಬೌಂಡರಿ ಮತ್ತು 1 ಸಿಕ್ಸರ್ ಕೂಡ ಬಾರಿಸಿದ್ದರು(PC-PTI).

5 / 5
Follow Us
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​

ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ

ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ

ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು

ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ

ನಾಗೇಂದ್ರಗೆ ಮಂತ್ರಿ ಸ್ಥಾನ ಹೈಕಮಾಂಡ್ ತೀರ್ಮಾನ

ಸಚಿವರ ಪ್ರಮಾಣವಚನಕ್ಕೆ ಸಿದ್ದು ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು?

ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್

ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ