ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.
ಅಂಗನವಾಡಿಯಲ್ಲಿ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಆಶ್ಚರ್ಯಗೊಂಡ ಸಚಿವ ಬಸವಂತಪ್ಪ
ದಾವಣಗೆರೆ ತಾಲೂಕಿನ ಕಾಟೀಹಳ್ಳಿ ಅಂಗನವಾಡಿಗೆ ಸಚಿವ ಕೆ.ಎಸ್. ಬಸವಂತಪ್ಪ ಭೇಟಿ ನೀಡಿದಾಗ ಅಚ್ಚರಿ ಕಾದಿತ್ತು. ಮಕ್ಕಳು ಸೊಳ್ಳೆಪರದೆ ಹಾಕಿ ಮಲಗಿದ್ದನ್ನು ನೋಡಿ, ಸಚಿವರು "ಪಾಠ ಮಾಡಿಸದೆ ಏಕೆ ಮಲಗಿಸಿದ್ದೀರಿ?" ಎಂದು ಶಿಕ್ಷಕಿಯರನ್ನು ಪ್ರಶ್ನಿಸಿದರು. ಇದಕ್ಕೆ ಶಿಕ್ಷಕಿಯರು, "ಇದು ಮಕ್ಕಳ ವಿಶ್ರಾಂತಿ ಸಮಯ" ಎಂದು ಸ್ಪಷ್ಟಪಡಿಸಿದರು.
- Basavaraj Doddamani
- Updated on: Sep 28, 2026
- 4:18 pm
ಶ್ರೀಮಂತ ಯುವಕರ ಟಾರ್ಗೆಟ್ ಮಾಡಿ ಹಣ ಪೀಕುತ್ತಿದ್ದ ಗ್ಯಾಂಗ್ ಅಂದರ್: ಬಂಧಿತರೆಲ್ಲ ಕಾಲೇಜು ವಿದ್ಯಾರ್ಥಿಗಳು!
ದಾವಣಗೆರೆಯ ಬಟ್ಟೆ ಅಂಗಡಿ ಮಾಲೀಕನನ್ನು ಅಪಹರಿಸಿ 10 ಲಕ್ಷ ರೂಪಾಯಿ ಹಣಕ್ಕಾಗಿ ಬೆದರಿಕೆ ಹಾಕಿದ್ದ 10 ಮಂದಿಯ ಗ್ಯಾಂಗ್ನ ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಓರ್ವ ಆರೋಪಿಯ ವಿರುದ್ಧ ದಾವಣಗೆರೆ ಮತ್ತು ಅನ್ಯ ಜಿಲ್ಲೆಗಳಲ್ಲಿ ಸೇರಿದಂತೆ ಒಟ್ಟು ಮೂರು ಪ್ರಕರಣ ಇರುವುದು ತನಿಖೆ ವೇಳೆ ಗೊತ್ತಾಗಿದೆ.
- Basavaraj Doddamani
- Updated on: Sep 28, 2026
- 3:19 pm
ಹರಿಹರ ಪಂಚಮಸಾಲಿ ಮಠದಲ್ಲಿ 10 ಕೋಟಿ ರೂ. ಅವ್ಯವಹಾರ ಆರೋಪ: ಸೂಕ್ತ ತನಿಖೆಗೆ ರಾಜ್ಯಪಾಲರ ಸೂಚನೆ
ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಮಠದ ಟ್ರಸ್ಟ್ನಲ್ಲಿ ನಡೆದಿದೆ ಎನ್ನಲಾದ ₹10 ಕೋಟಿ ಸರ್ಕಾರಿ ಅನುದಾನ ದುರ್ಬಳಕೆ ಆರೋಪದ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರ ರಾಜಭವನದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಪ್ರಕರಣದ ಪೂರ್ಣ ವಿವರ ಇಲ್ಲಿದೆ.
- Basavaraj Doddamani
- Updated on: Sep 27, 2026
- 7:45 am
‘ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ’: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ. ಈ ವ್ಯವಸ್ಥೆಯಲ್ಲಿ ಭಾಗವಹಿಸಿರುವವರು ಮೊದಲೇ ದೂರವಿರಬೇಕಿತ್ತು ಎಂದ ಮಹದೇವಪ್ಪ, ಪ್ರಜಾಪ್ರಭುತ್ವ ಸುಧಾರಣೆಗೆ ಚುನಾವಣಾ ಆಯೋಗ, ರಾಜ್ಯ ಚುನಾವಣಾ ನಿಧಿ ಹಾಗೂ ಮತದಾರರು ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದ್ದಾರೆ. ಹಣಕ್ಕಾಗಿ ಮತ ಮಾರಾಟ ಮಾಡದಂತೆ ಮತದಾರರಿಗೆ ಮನವಿ ಮಾಡಿದ್ದಾರೆ.
- Basavaraj Doddamani
- Updated on: Sep 20, 2026
- 7:58 pm
ಹರಿಹರ ಪಂಚಮಸಾಲಿ ಮಠದ ಟ್ರಸ್ಟ್ನಿಂದ 10 ಕೋಟಿ ರೂ. ಅವ್ಯವಹಾರ ಆರೋಪ: ಡಿಸಿಗೆ ದೂರು
ಹರಿಹರ ಪಂಚಮಸಾಲಿ ಮಠದ ಟ್ರಸ್ಟ್ ಸರ್ಕಾರಿ ಅನುದಾನದಲ್ಲಿ 10 ಕೋಟಿ ರೂಪಾಯಿ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿ 'ಮಠದ ಲೆಕ್ಕಕೊಡಿ ಚಳುವಳಿ ಸಮಿತಿ' ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ. ಕಟ್ಟಡ ಕಾಮಗಾರಿ ಮತ್ತು ಸ್ಥಳ ಪರಿಶೀಲನೆ ಮಾಡದೆ ಮಠದ ಕೆಲವು ಟ್ರಸ್ಟಿಗಳೊಂದಿಗೆ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಕಾಮಗಾರಿ ಪೂರ್ಣಗೊಳ್ಳದಿದ್ದರೂ ಕೇವಲ 44 ದಿನಗಳಲ್ಲಿ ಹಣ ಬಿಡುಗಡೆ ಮಾಡಿ ಸರ್ಕಾರದ ದುಡ್ಡನ್ನು ದುರುಪಯೋಗ ಮಾಡಿದ್ದಾರೆ ಎಂದು ಸಮಿತಿ ದೂರಿದೆ.
- Basavaraj Doddamani
- Updated on: Sep 17, 2026
- 3:15 pm
ತಿರುಪತಿ ಎಕ್ಸ್ಪ್ರೆಸ್ ಹೋರಿಗೆ ಅದ್ದೂರಿ ಜನ್ಮದಿನ ಆಚರಣೆ: ಕೇಕ್ ಕತ್ತರಿಸಿ ಸಂಭ್ರಮಿಸಿದ ಅಭಿಮಾನಿಗಳು!
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದಲ್ಲಿ ಹಲವು ಹೋರಿ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದಿರುವ ‘ತಿರುಪತಿ ಎಕ್ಸ್ಪ್ರೆಸ್’ ಹೋರಿಯ ಜನ್ಮದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು. ಇದೇ ವೇಳೆ ಮಲ್ಲಿಗೆನಹಳ್ಳಿಯಲ್ಲಿ ‘ಹೈ ಸ್ಪೀಡ್ ಸುಲ್ತಾನ್’ ಹೋರಿಯ ಜನ್ಮದಿನವೂ ನಡೆಯಿತು. ಎಂಪಿ ರೇಣುಕಾಚಾರ್ಯ ಸೇರಿ ಹಲವು ಗಣ್ಯರು ಸಹ ಭಾಗವಹಿಸಿ ಶುಭ ಹಾರೈಸಿದರು.
- Basavaraj Doddamani
- Updated on: Sep 14, 2026
- 2:47 pm
ದಾವಣಗೆರೆಯಲ್ಲಿ ಗಣೇಶೋತ್ಸವಕ್ಕೆ ಖಡಕ್ ರೂಲ್ಸ್: ಮೆರವಣಿಗೆಯಲ್ಲಿ ಡಿಜೆ ಸಂಪೂರ್ಣ ಬ್ಯಾನ್; 17 ರೌಡಿಗಳ ಗಡಿಪಾರಿಗೆ ಪ್ರಸ್ತಾವನೆ
ದಾವಣಗೆರೆ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಲು ಜಿಲ್ಲಾಡಳಿತ ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ 17 ಜನರನ್ನು ಗಡಿಪಾರು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ರೌಡಿಶೀಟರ್ಗಳ ಮೇಲೆ ನಿರಂತರ ನಿಗಾ ಇಡಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಗಾವಲು ಇರಿಸಲಾಗಿದೆ. ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಎಸ್ಪಿ ಎಚ್ಚರಿಸಿದ್ದಾರೆ.
- Basavaraj Doddamani
- Updated on: Sep 11, 2026
- 11:28 am
ಮಾಜಿ ಸಚಿವ ರೇಣುಕಾಚಾರ್ಯಗೆ ಸಂಕಷ್ಟ: 11 ವರ್ಷದ ಹಿಂದಿನ ಕೇಸ್ಗೆ ಮರುಜೀವ
ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಿರುದ್ಧ ಹನ್ನೊಂದು ವರ್ಷಗಳ ಹಿಂದೆ ದಾಖಲಾಗಿದ್ದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಇದೀಗ ಮರುಜೀವ ಬಂದಿದೆ. ಲೋಕಾಯುಕ್ತಕ್ಕೆ ದೂರು ನೀಡಿದ್ದ ದಾವಣಗೆರೆಯ ಗುರುಪಾದಯ್ಯ ಮಠದ, 11 ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದಾರೆ. ರೇಣುಕಾಚಾರ್ಯ ಮಾಜಿ ಜನಪ್ರತಿನಿಧಿಯಾಗಿರುವುದರಿಂದ ಪ್ರಾಸಿಕ್ಯೂಷನ್ಗೆ ಅನುಮತಿ ಅನಗತ್ಯವೆಂದು ಮಠದ ವಾದಿಸಿದ್ದಾರೆ.
- Basavaraj Doddamani
- Updated on: Sep 9, 2026
- 10:23 pm
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಮಧ್ಯ ಕರ್ನಾಟಕ ದಾವಣಗೆರೆಯ ಜಿಲ್ಲಾ ರಾಜಕೀಯದಲ್ಲಿ ಪರಸ್ಪರ ಕೀಳು ಮಟ್ಟದ ಶಬ್ದ ಬಳಸಿ ಬೀದಿಗೆ ಬಂದಿದೆ.ಒಂದು ಕಡೆ ಬರ ಇನ್ನೊಂದೆಡೆ ಡ್ಯಾಮ್ ನಲ್ಲಿ ನೀರು ಇದ್ದರೂ ಭದ್ರ ನೀರು ಬಿಟ್ಟಿಲ್ಲ, ಇಂತಹ ಸಮಸ್ಯೆಗಳ ಬಗ್ಗೆ ಆಲಿಸಬೇಕಾದ ಜನಪ್ರತಿನಿಧಿಗಳು ಕೀಳುಮಟ್ಟದ ಬೈಗುಳ, ವೈಯಕ್ತಿಕ ನಿಂದನೆಗೆ ಇಳಿದಿದ್ದಾರೆ. ಹರಿಹರ ಶಾಸಕ ಬಿ.ಪಿ. ಹರೀಶ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬಳಸಿರುವ ಅವಾಚ್ಯ ಶಬ್ದಗಳು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಪ್ರತಿಯಾಗಿ ಹರೀಶ್ ಕೂಡ ತೀಕ್ಷ್ಣ ಸವಾಲು ಹಾಕಿದ್ದು, ಇಬ್ಬರು ನಾಯಕರ ಜಟಾಪಟಿ ಸ್ವಪಕ್ಷ-ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
- Basavaraj Doddamani
- Updated on: Sep 10, 2026
- 7:06 am
ಭದ್ರಾ ನೀರು ವಿವಾದ ತಾರಕಕ್ಕೆ: ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಕೆಂಡಾಮಂಡಲ
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭದ್ರಾ ಜಲಾಶಯದ ನೀರು ಬಿಡುಗಡೆ ಕುರಿತು ಶಾಸಕ ಬಿ.ಪಿ. ಹರೀಶ್ ವಿರುದ್ಧ ‘ಮೆಟ್ಟಲ್ಲಿ ಹೊಡೆಯಿರಿ’ ಎಂಬ ಹೇಳಿಕೆ ನೀಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹರೀಶ್, ಬ್ಲಾಕ್ ಮಾರ್ಕೆಟ್ ಮಾಡಿ ಸಂಪತ್ತು ಗಳಿಸಿದವರಿಗೆ ಸಂಸ್ಕಾರ ಎಲ್ಲಿಂದ ಬರುತ್ತದೆ ಎಂದು ಮಲ್ಲಿಕಾರ್ಜುನ್ ಕುಟುಂಬದ ಹಿನ್ನೆಲೆ ಕೆದಕಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
- Basavaraj Doddamani
- Updated on: Sep 9, 2026
- 8:23 am
ದಾವಣಗೆರೆ: ಗಾಯಗೊಂಡು ಬಿದ್ದಿದೆ ಎಂದು ರಕ್ಷಣೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆಯೇ ಚಿರತೆ ದಾಳಿ!
ದಾವಣಗೆರೆ ತಾಲೂಕಿನ ಆನಗೋಡು ಬಳಿ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಬಿದ್ದಿದ್ದ ಚಿರತೆ ರಕ್ಷಣೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೆಯೇ ಏಕಾಏಕಿ ದಾಳಿ ನಡೆಸಿದ ಘಟನೆ ನಡೆದಿದೆ. ನಂತರ ಅರಿವಳಿಕೆ ನೀಡಿ ಸೆರೆಹಿಡಿದು ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಗಾಯಾಳು ಸಿಬ್ಬಂದಿಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
- Basavaraj Doddamani
- Updated on: Sep 8, 2026
- 3:00 pm
ದಾವಣಗೆರೆ ಆನೆಕೊಂಡ ಬಸವೇಶ್ವರ ಕಾರ್ಣೀಕ: ಭವಿಷ್ಯದ ಸಂಕಷ್ಟದ ಕುರಿತು ಎಚ್ಚರಿಕೆ ನುಡಿ!
ದಾವಣಗೆರೆ ನಗರದ ಐತಿಹಾಸಿಕ ಆನೆಕೊಂಡ ಬಸವೇಶ್ವರ ಸ್ವಾಮಿಯ ಕಾರ್ಣೀಕೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದಿದ್ದು, ಪೂಜಾರಿಯವರು ದೈವವಾಣಿ ನುಡಿದರು. "ಕೆಂಪಗೊಂದೀಹಾವಳಿ ಹೆಚ್ಚಾದೀತಲೇ ಎಚ್ಚರ" ಎಂಬ ಕಾರ್ಣೀಕವು ಬರುವ ದಿನಗಳಲ್ಲಿ ನಾಡಿಗೆ ದೊಡ್ಡ ಮಟ್ಟದ ಸಂಕಷ್ಟ ಹಾಗೂ ಆಪತ್ತು ಎದುರಾಗುವ ಸೂಚನೆಯಾಗಿದೆ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.
- Basavaraj Doddamani
- Updated on: Sep 8, 2026
- 8:15 am