AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮ ಬದುಕು ಹಾಳು ಮಾಡಬೇಡಿ’: ದಾವಣಗೆರೆಯಲ್ಲಿ ಪ್ಲಾಟಿನಮ್-ಮ್ಯಾಂಗನೀಸ್ ಶೋಧಕ್ಕೆ ರೈತರ ತಕರಾರು

ದಾವಣಗೆರೆ ಜಿಲ್ಲೆಯ ಉಬ್ರಾಣಿಯಲ್ಲಿ ಪ್ಲಾಟಿನಂ ಮತ್ತು ಮ್ಯಾಂಗನೀಸ್ ನಿಕ್ಷೇಪಗಳ ಶೋಧಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಆದರೆ, ರೈತರು ತಮ್ಮ ಭೂಮಿ ಮತ್ತು ಅಡಿಕೆ ತೋಟಗಳ ರಕ್ಷಣೆಗಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 2006ರಲ್ಲೂ ಇದೇ ರೀತಿಯ ಯೋಜನೆಯನ್ನು ವಿರೋಧಿಸಿ ಕೈಬಿಡಲಾಗಿತ್ತು. ಈ ಬಾರಿಯೂ ರೈತರು ತಮ್ಮ ಜೀವನೋಪಾಯ ಹಾಳಾಗುವುದನ್ನು ತಪ್ಪಿಸಲು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

‘ನಮ್ಮ ಬದುಕು ಹಾಳು ಮಾಡಬೇಡಿ’: ದಾವಣಗೆರೆಯಲ್ಲಿ ಪ್ಲಾಟಿನಮ್-ಮ್ಯಾಂಗನೀಸ್ ಶೋಧಕ್ಕೆ ರೈತರ ತಕರಾರು
ದಾವಣಗೆರೆಯಲ್ಲಿ ಪ್ಲಾಟಿನಮ್-ಮ್ಯಾಂಗನೀಸ್ ಶೋಧಕ್ಕೆ ರೈತರ ತಕರಾರು
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Feb 25, 2026 | 12:12 PM

Share

ದಾವಣಗೆರೆ, ಫೆಬ್ರವರಿ 25: ಜಿಲ್ಲೆಯ ಚನ್ನಗಿರಿ (Davanagere) ತಾಲೂಕಿನ ಉಬ್ರಾಣಿ ಹೋಬಳಿ ವ್ಯಾಪ್ತಿಯಲ್ಲಿ ಪ್ಲಾಟಿನಮ್ ಹಾಗೂ ಮ್ಯಾಂಗನೀಸ್ ಖನಿಜ ನಿಕ್ಷೇಪಗಳಿರುವ ಸಾಧ್ಯತೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆ ಖನಿಜಾನ್ವೇಷಣೆಗೆ ಜಿಲ್ಲಾಡಳಿತ ಮುಂದಾಗಿದ್ದು, ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಖನಿಜಾನ್ವೇಷಣೆ ಮುಂದುವರಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ

ಉಬ್ರಾಣಿ ಹೋಬಳಿಯ ಅರಣ್ಯ ಪ್ರದೇಶದ ಗುಡ್ಡಗಳು ಹಾಗೂ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಪ್ಲಾಟಿನಮ್ ಮತ್ತು ಮ್ಯಾಂಗನೀಸ್ ಅದಿರು ಲಭ್ಯವಿರಬಹುದು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಈ ಕುರಿತು ಅಭಿಪ್ರಾಯ ಸಂಗ್ರಹಿಸಲು ಹೊನ್ನಾಳಿ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ ಅವರ ನೇತೃತ್ವದಲ್ಲಿ ಚನ್ನಗಿರಿಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ರೈತರು ಖನಿಜಾನ್ವೇಷಣೆಗೆ ಕಠಿಣ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ದಾವಣಗೆರೆ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ: ಇಡೀ ರಾತ್ರಿ ದೇಗುಲದ ಆವರಣದಲ್ಲೇ ಕಾದು ಕುಳಿತ ಡಿಸಿ, ಎಸ್​​ಪಿ

ನೆಲ್ಲಿಹಂಕಲು, ಕಗ್ಗಿ, ಮುಗಳಿಹಳ್ಳಿ, ತಾವರೆಕೆರೆ, ಉಬ್ರಾಣಿ, ಹನಮಂತಾಪುರ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳ ವ್ಯಾಪ್ತಿಯಲ್ಲಿ ನಿಕ್ಷೇಪಗಳಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದೇ ಪ್ರದೇಶದಲ್ಲಿ 2006ರಲ್ಲಿ ಕೂಡ ಶೋಧ ಕಾರ್ಯ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದರೂ, ರೈತರ ತೀವ್ರ ವಿರೋಧದ ಹಿನ್ನೆಲೆ ಯೋಜನೆ ಕೈಬಿಡಲಾಗಿತ್ತು. ಮತ್ತೆ ಇದೇ ವಿಚಾರವಾಗಿ ನಡೆದ ಸಭೆಯಲ್ಲಿಯೂ ವಿರೋಧ ವ್ಯಕ್ತಪಡಿಸಿದ ರೈತರು, ನಾವು ಅಡಿಕೆ ತೋಟ ಮಾಡಿಕೊಂಡು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದೇವೆ. ಪ್ಲಾಟಿನಂ ಮತ್ತು ಮ್ಯಾಂಗನೀಸ್ ಹೆಸರಿನಲ್ಲಿ ನಮ್ಮ ಭೂಮಿ ಹಾಗೂ ಜೀವನ ಹಾಳು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಖನಿಜಾನ್ವೇಷಣೆ ಮುಂದುವರಿದರೆ ಉಗ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us