AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೆ ಸಚಿವ ಸ್ಥಾನ ಸಿಗುತ್ತಾ ಸರ್​​ ಎಂದಿದ್ದೇ ತಡ ಸ್ಫೋಟಕ ಹೇಳಿಕೆ ಕೊಟ್ಟ ಜಮೀರ್​​ ಅಹ್ಮದ್​​

ನಿಮಗೆ ಸಚಿವ ಸ್ಥಾನ ಸಿಗುತ್ತಾ ಸರ್​​ ಎಂದಿದ್ದೇ ತಡ ಸ್ಫೋಟಕ ಹೇಳಿಕೆ ಕೊಟ್ಟ ಜಮೀರ್​​ ಅಹ್ಮದ್​​

Anil Kalkere
| Edited By: |

Updated on:Jun 17, 2026 | 2:19 PM

Share

ಮಾಜಿ ಸಚಿವ ಜಮೀರ್ ಅಹ್ಮದ್ ಡಿ.ಕೆ. ಸುರೇಶ್ ಅವರೊಂದಿಗಿನ ಭೇಟಿಯ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಇದು ಕೇವಲ ಸೌಹಾರ್ದಯುತ ಭೇಟಿಯಾಗಿದ್ದು, ರಾಜಕೀಯ ಅಥವಾ ಸಚಿವ ಸ್ಥಾನದ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದಿದ್ದಾರೆ. ತಮ್ಮನ್ನು ಮಂತ್ರಿಯನ್ನಾಗಿ ಮಾಡಬೇಕೆಂದು ಅಭಿಮಾನಿಗಳು ಕೇಳುವುದು ಸಹಜ. ಆದರೆ, ಸಚಿವ ಸ್ಥಾನದ ಬಗ್ಗೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಜಮೀರ್ ಹೇಳಿದ್ದಾರೆ.

ಬೆಂಗಳೂರು, ಜೂನ್​​ 17:  ಸಚಿವ ಸ್ಥಾನದ ನಿರೀಕ್ಷೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್​​ ಶಾಸಕ ಜಮೀರ್​​ ಅಹ್ಮದ್​​, ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೋ ಅದಕ್ಕೆ ನಾನು ಬದ್ಧ ಎಂದು ಹೇಳಿದ್ದಾರೆ. ಅಭಿಮಾನಿಗಳು ಪ್ರತಿಭಟಿಸುವುದು ಸಹಜ. ಆದರೆ, ತಾವು ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಸಚಿವ ಸ್ಥಾನ ಸಿಗದಿದ್ದರೂ ಯಾವುದೇ ಸಮಸ್ಯೆ ಇಲ್ಲ ಎಂದ್ದಾರೆ.  ಇತ್ತೀಚೆಗೆ ಡಿ.ಕೆ. ಸುರೇಶ್ ಅವರನ್ನು ಭೇಟಿ ಮಾಡಿರುವ ಬಗ್ಗೆಯೂ ಸ್ಪಷ್ಟನೆ ನೀಡಿರುವ ಅವರು, ತಾವು ಸುರೇಶ್ ಅವರನ್ನು ಭೇಟಿ ಮಾಡುವುದು ಹೊಸದೇನಲ್ಲ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸ್ನೇಹಪೂರ್ವಕ ಭೇಟಿ. ನಾವು ತಿಂಗಳಿಗೆ ನಾಲ್ಕು ಬಾರಿ ಭೇಟಿ ಮಾಡುತ್ತೇವೆ. ಬೆಂಗಳೂರಿನಲ್ಲಿ ನಾನು ಕ್ವಾರ್ಟರ್ಸ್‌ನಲ್ಲಿದ್ದರೆ ಅವರು ಬರುತ್ತಾರೆ, ಅವರು ತಮ್ಮ ಮನೆಯಲ್ಲಿದ್ದರೆ ನಾನು ಹೋಗಿ ಭೇಟಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jun 17, 2026 02:18 PM

Follow Us