AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಮಾತೆಗೆ ಅದ್ಧೂರಿ ಸೀಮಂತ ಮಾಡಿ ಹೋಳಿಗೆ ಊಟ ಹಾಕಿಸಿದ ರೈತ!

ಗೋಮಾತೆಗೆ ಅದ್ಧೂರಿ ಸೀಮಂತ ಮಾಡಿ ಹೋಳಿಗೆ ಊಟ ಹಾಕಿಸಿದ ರೈತ!

ಜಗದೀಶ ಬಿ.
| Edited By: |

Updated on: Jul 31, 2026 | 3:08 PM

Share

ಜಿಲ್ಲೆಯ ಗುಬ್ಬಿ ತಾಲೂಕಿನ ತೋಟಸಾಗರ ಗ್ರಾಮದಲ್ಲಿ ರೈತ ಕರೇಗೌಡ ಎಂಬುವವರು ತಮ್ಮ ಮನೆಯಲ್ಲಿ ಪ್ರೀತಿಯಿಂದ ಸಾಕಿದ ‘ಲಕ್ಷ್ಮಿ’ ಎಂಬ ಗರ್ಭಿಣಿ ಹಸುವಿಗೆ ಅತ್ಯಂತ ಸಂಭ್ರಮದಿಂದ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಗ್ರಾಮದ ಮಹಿಳೆಯರು ಸಾಂಪ್ರದಾಯಿಕವಾಗಿ ಹಸುವಿಗೆ ಅರಿಶಿನ-ಕುಂಕುಮ ಹಚ್ಚಿ, ಆರತಿ ಬೆಳಗಿ, ಮಡಿಲು ತುಂಬಿ ಹಾರೈಸಿದರು. ಈ ಅಪರೂಪದ ಹಾಗೂ ವಿಶೇಷ ಕಾರ್ಯಕ್ರಮದ ನೆಪದಲ್ಲಿ ಇಡೀ ಊರಿನ ನೂರಾರು ಜನರಿಗೆ ಘಮಘಮಿಸುವ ಹೋಳಿಗೆ ಊಟದ ಸತ್ಕಾರ ಏರ್ಪಡಿಸಲಾಗಿತ್ತು. ರೈತನ ಈ ಗೋಪ್ರೇಮಕ್ಕೆ ತೋಟಸಾಗರ ಗ್ರಾಮಸ್ಥರು ಸಾಕ್ಷಿಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

ತುಮಕೂರು, ಜುಲೈ 31: ಜಿಲ್ಲೆಯ ಗುಬ್ಬಿ ತಾಲೂಕಿನ ತೋಟಸಾಗರ ಗ್ರಾಮದಲ್ಲಿ ರೈತ ಕರೇಗೌಡ ಎಂಬುವವರು ತಮ್ಮ ಮನೆಯಲ್ಲಿ ಪ್ರೀತಿಯಿಂದ ಸಾಕಿದ ‘ಲಕ್ಷ್ಮಿ’ ಎಂಬ ಗರ್ಭಿಣಿ ಹಸುವಿಗೆ ಅತ್ಯಂತ ಸಂಭ್ರಮದಿಂದ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಗ್ರಾಮದ ಮಹಿಳೆಯರು ಸಾಂಪ್ರದಾಯಿಕವಾಗಿ ಹಸುವಿಗೆ ಅರಿಶಿನ-ಕುಂಕುಮ ಹಚ್ಚಿ, ಆರತಿ ಬೆಳಗಿ, ಮಡಿಲು ತುಂಬಿ ಹಾರೈಸಿದರು. ಈ ಅಪರೂಪದ ಹಾಗೂ ವಿಶೇಷ ಕಾರ್ಯಕ್ರಮದ ನೆಪದಲ್ಲಿ ಇಡೀ ಊರಿನ ನೂರಾರು ಜನರಿಗೆ ಘಮಘಮಿಸುವ ಹೋಳಿಗೆ ಊಟದ ಸತ್ಕಾರ ಏರ್ಪಡಿಸಲಾಗಿತ್ತು. ರೈತನ ಈ ಗೋಪ್ರೇಮಕ್ಕೆ ತೋಟಸಾಗರ ಗ್ರಾಮಸ್ಥರು ಸಾಕ್ಷಿಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More