AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೌನಿ ರಾಯ್ ಬಿಕಿನಿ ಫೋಟೋ ಲೈಕ್ ಮಾಡಿದ ಅಶ್ನೀರ್ ಗ್ರೋವರ್; ಜಗಳಕ್ಕೆ ಇಳಿದ ಪತ್ನಿ

ಅಶ್ನೀರ್ ಅವರು ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಮೌನಿ ರಾಯ್ ಬಿಕಿನಿ ಫೋಟೋಗೆ ಲೈಕ್ ಒತ್ತಿದ ಪ್ರಸಂಗ ನೆನಪು ಮಾಡಿಕೊಂಡಿದ್ದಾರೆ.

ಮೌನಿ ರಾಯ್ ಬಿಕಿನಿ ಫೋಟೋ ಲೈಕ್ ಮಾಡಿದ ಅಶ್ನೀರ್ ಗ್ರೋವರ್; ಜಗಳಕ್ಕೆ ಇಳಿದ ಪತ್ನಿ
ಮಾಧುರಿ, ಅಶ್ನೀರ್-ಮೌನಿ ರಾಯ್
ರಾಜೇಶ್ ದುಗ್ಗುಮನೆ
|

Updated on:Apr 25, 2023 | 11:05 AM

Share

ಅಶ್ನೀರ್ ಗ್ರೋವರ್ (Ashneer Grover) ಖ್ಯಾತ ಉದ್ಯಮಿ. ಅವರು ಹೆಚ್ಚು ಜನಪ್ರಿಯತೆ ಪಡೆದಿದ್ದು ಶಾರ್ಕ್​ ​​ ಟ್ಯಾಂಕ್ ಇಂಡಿಯಾ ಮೂಲಕ. ಇದರಲ್ಲಿ ಜಡ್ಜ್​ ಆಗಿದ್ದ ಅವರು ಸಾಕಷ್ಟು ಗಮನ ಸೆಳೆದಿದ್ದರು. ಹೂಡಿಕೆ ಕೇಳಿಕೊಂಡು ಬರುವ ನವ ಉದ್ಯಮಿಗಳಿಗೆ ಅವರು ನೇರ ಮಾತುಗಳಿಂದ ಉತ್ತರ ನೀಡುತ್ತಿದ್ದರು. ಇದು ಅನೇಕರಿಗೆ ಬೇಸರ ಮೂಡಿಸಿದೆ ಕೂಡ. ಆದರೆ, ಅವರು ತಮ್ಮ ನಡೆಯಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಈಗ ಅವರು ಒಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ನಟಿ ಮೌನಿ ರಾಯ್ (Mouni Roy) ಬಿಕಿನಿ ಫೋಟೋ ಲೈಕ್ ಮಾಡಿ ಅವರು ಸಂಕಷ್ಟ ಅನುಭವಿಸಿದ್ದರು. ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಅಶ್ನೀರ್ ಅವರು ಫ್ಯಾಮಿಲಿ ಮ್ಯಾನ್. ಉದ್ಯಮದ ಜೊತೆ ಕುಟುಂಬಕ್ಕೂ ಹೆಚ್ಚು ಆದ್ಯತೆ ನೀಡುತ್ತಾರೆ. ಇತ್ತೀಚೆಗೆ ಅವರು ಪತ್ನಿ ಮಾಧುರಿ ಜೊತೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಮೌನಿ ರಾಯ್ ಬಿಕಿನಿ ಫೋಟೋಗೆ ಲೈಕ್ ಒತ್ತಿದ ಪ್ರಸಂಗ ನೆನಪು ಮಾಡಿಕೊಂಡಿದ್ದಾರೆ.

ಮಾಧುರಿ ಜೊತೆಗಿನ ದಾಂಪತ್ಯ ಜೀವನದ ಬಗ್ಗೆ ಅಶ್ನೀರ್​ಗೆ ಕೇಳಲಾಯಿತು. ಈ ವೇಳೆ ಅಶ್ನೀರ್ ಅವರು ಪತ್ನಿ ಬಗ್ಗೆ ಭಯ ಇದೆ ಎಂಬುದನ್ನು ಹೇಳಿಕೊಂಡರು. ‘ನನಗೆ ಪತ್ನಿ ಬಗ್ಗೆ ಭಾರೀ ಭಯ ಇದೆ. ಒಂದು ಘಟನೆ ಹೇಳುತ್ತೇನೆ. ನಾನು ಇನ್​ಸ್ಟಾಗ್ರಾಮ್​ನಲ್ಲಿ ತುಂಬಾನೇ ಕಡಿಮೆ ಜನರನ್ನು ಫಾಲೋ ಮಾಡುತ್ತೇನೆ. ಮೌನಿ ರಾಯ್​ ಅವರನ್ನು ಕೂಡ ಹಿಂಬಾಲಿಸುತ್ತಿದ್ದೆ. ಅವರು ಬಿಕಿನಿಯಲ್ಲಿ ಫೋಟೋ ಹಾಕಿದ್ದರು. ನಾನು ಅದಕ್ಕೆ ಲೈಕ್ ಒತ್ತಿದೆ’ ಎಂದು ಅಶ್ನೀರ್ ಹೇಳುತ್ತಿದ್ದಂತೆ ಅವರ ಪತ್ನಿ ಮಾಧುರಿ, ‘ಲೈಕ್ ಒತ್ತುವ ಅವಶ್ಯಕತೆ ಇತ್ತೇ’ ಎಂದು ಪ್ರಶ್ನೆ ಮಾಡಿದ್ದಾರೆ.

‘ಈ ಘಟನೆ ನಡೆದ ಬಳಿಕ ನಾನು ಮನೆಗೆ ಬಂದೆ. ನನ್ನ ಪತ್ನಿ ಸಿಟ್ಟಲ್ಲಿ ಇದ್ದರು. ನಾನು ಏನು ತಪ್ಪು ಮಾಡಿದೆ ಅನ್ನೋದು ಗೊತ್ತಿರಲಿಲ್ಲ. ನಾನು ಏನು ಮಾಡಿರಲಿಲ್ಲ. ಆಗ ಮಾಧುರಿ ವಿವರಿಸಲು ಪ್ರಾರಂಭಿಸಿದರು. ‘ಮೌನಿ ಬಿಕಿನಿ ಹಾಕಿದ್ದರು. ಹೀಗಿರುವಾಗ ನೀವೇಕೆ ಲೈಕ್ ಒತ್ತಿದಿರಿ’ ಎಂದು ನನ್ನನ್ನು ಮಾಧುರಿ ಪ್ರಶ್ನೆ ಮಾಡಿದರು’ ಎಂದಿದ್ದಾರೆ ಅಶ್ನೀರ್. ಇಬ್ಬರ ಮಧ್ಯೆ ಇದೇ ವಿಚಾರಕ್ಕೆ ಜಗಳ ನಡೆದಿತ್ತು.

ಇದನ್ನೂ ಓದಿ: Ashneer Grover: ಉದ್ಯೋಗಿಗಳ ವಜಾ ಬೇಡ, ಬೇಕಿದ್ದರೆ ವೇತನ ಕಡಿತ ಮಾಡಿ; ಕಂಪನಿಗಳಿಗೆ ಅಶ್ನೀರ್ ಗ್ರೋವರ್ ಸಲಹೆ

‘ಈ ಘಟನೆ ಬಳಿಕ ನಾನು ಮೌನಿ ರಾಯ್​ನ ಅನ್​ಫಾಲೋ ಮಾಡಿದೆ. ಇದರ ಜೊತೆಗೆ 15-20 ಲೇಡಿ ಸೆಲೆಬ್ರಿಟಿಗಳಿಗೂ ಅನ್​ಫಾಲೋ ಕೊಟ್ಟೆ. ಇದರಲ್ಲಿ ದಿಶಾ ಪಟಾಣಿ ಮೊದಲಾದವರು ಇದ್ದರು’ ಎಂದು ಅಶ್ನೀರ್ ವಿವರಿಸಿದ್ದಾರೆ. ಸದ್ಯ ಈ ಘಟನೆ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ‘ಶಾರ್ಕ್​ ಟ್ಯಾಂಕ್ ಇಂಡಿಯಾ’ ಮೊದಲ ಸೀಸನ್​​ನಲ್ಲಿ ಮಾತ್ರ ಅಶ್ನೀರ್ ಜಡ್ಜ್​ ಆಗಿದ್ದರು. ಎರಡನೇ ಸೀಸನ್​ಗೆ ಅವರು ಮುಂದುವರಿಯಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:05 am, Tue, 25 April 23