Ashneer Grover: ಉದ್ಯೋಗಿಗಳ ವಜಾ ಬೇಡ, ಬೇಕಿದ್ದರೆ ವೇತನ ಕಡಿತ ಮಾಡಿ; ಕಂಪನಿಗಳಿಗೆ ಅಶ್ನೀರ್ ಗ್ರೋವರ್ ಸಲಹೆ
ಪ್ರತಿ ದಿನ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಕುರಿತು ಸುದ್ದಿಗಳನ್ನು ಕೇಳುವುದು ಬೇಸರದ ಸಂಗತಿಯಾಗಿದೆ. ಕಂಪನಿಗಳ ಸ್ಥಾಪಕರು ಉದ್ಯೋಗಿಗಳ ವಜಾಕ್ಕೆ ಪರ್ಯಾಯವಾಗಿ ವೇತನ ಕಡಿತದ ನಿರ್ಧಾರ ಕೈಗೊಳ್ಳಲಿ ಎಂದು ಭಾರತ್ ಪೇ ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್ ಹೇಳಿದ್ದಾರೆ.
ದೊಡ್ಡ ಕಂಪನಿಗಳು ವೆಚ್ಚ ಕಡಿಮೆ ಮಾಡುವುದಕ್ಕಾಗಿ ಸಾಮೂಹಿಕವಾಗಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಕ್ಕೆ ಭಾರತ್ ಪೇ (lay off employees, layoff synonym, layoffs meaning in Kannada, layoff in hrm, layoff india, lay off meaning flight) ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್ (Ashneer Grover) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರ ಬದಲು ಅನಿವಾರ್ಯವಾದರೆ ವೇತನ ಕಡಿತ ಮಾಡಲಿ ಎಂದು ಸಲಹೆ ನೀಡಿದ್ದಾರೆ. ಮಾರುಕಟ್ಟೆ ಅನಿಶ್ಚಿತತೆಗಳ ಸಂದರ್ಭದಲ್ಲಿ ತಾವು ಎಂದಿಗೂ ಉದ್ಯೋಗಿಗಳನ್ನು ವಜಾಗೊಳಿಸಿಲ್ಲ ಎಂದಿರುವ ಅವರು, ಎಲ್ಲ ಸಂದರ್ಭಗಳಲ್ಲೂ ನಿಯಮಿತವಾಗಿ ನೇಮಕಾತಿ ಮಾಡಿಕೊಂಡಿದ್ದೆ ಎಂದು ಹೇಳಿದ್ದಾರೆ. ಸಂಸ್ಥಾಪಕರಾಗಿ ಕಂಪನಿಯ ದೀರ್ಘಾವಧಿಯ ಕುರಿತು ಯೋಚಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಲಿಂಕ್ಡ್ಇನ್ನಲ್ಲಿ ಅವರು ಸಂದೇಶ ಪ್ರಕಟಿಸಿದ್ದಾರೆ. ‘ಪ್ರತಿ ದಿನ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಕುರಿತು ಸುದ್ದಿಗಳನ್ನು ಕೇಳುವುದು ಬೇಸರದ ಸಂಗತಿಯಾಗಿದೆ. ಮಾರುಕಟ್ಟೆ ಅನಿಶ್ಚಿತತೆಗಳ ಸಂದರ್ಭದಲ್ಲಿಯೂ ನಾನು ಉದ್ಯೋಗಿಗಳನ್ನು ವಜಾಗೊಳಿಸಿಲ್ಲ. ಬದಲಿಗೆ ನೇಮಕ ಮಾಡಿಕೊಂಡಿದ್ದೆ. ಒಬ್ಬ ಸಂಸ್ಥಾಪಕನಾಗಿ ನೀವು ದೀರ್ಘಾವಧಿಯ ಬಗ್ಗೆ ಯೋಚಿಸಬೇಕಾಗಿದೆ’ ಎಂದು ಅವರು ಲಿಂಕ್ಡ್ಇನ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.
ಸಾಮೂಹಿಕವಾಗಿ ಉದ್ಯೋಗಿಗಳನ್ನು ವಜಾಗೊಳಿಸುವ ಬದಲು ಶೇ 25ರಿಂದ 40ರ ವೇತನ ಕಡಿತ ಮಾಡಿದ್ದೆ. ಕಂಪನಿಗಳ ಸ್ಥಾಪಕರು ಯಾಕೆ ಈ ಬಗ್ಗೆ ಯೋಚನೆ ಮಾಡುವುದಿಲ್ಲ ಎಂಬುದು ಅಚ್ಚರಿ ಉಂಟುಮಾಡಿದೆ. ಯಾಕೆಂದರೆ ಇಂಧನ, ಬಂಡವಾಳ, ತಂತ್ರಜ್ಞಾನ ಎಲ್ಲವೂ ಬದಲಾಗುತ್ತವೆ ಎಂದು ಅವರು ಹೇಳಿದ್ದಾರೆ.
ತಮ್ಮ ಮುಂದಿನ ಸ್ಟಾರ್ಟಪ್ನಲ್ಲಿ ಗರಿಷ್ಠ 50 ಮಂದಿಯನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗುವುದು. ತಂಡವನ್ನು ಸೇರುವವರು ಬೆಳವಣಿಗೆಯ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Spotify Layoff: ಮತ್ತೆ ಉದ್ಯೋಗ ಕಡಿತಕ್ಕೆ ಸ್ಪಾಟಿಫೈ ಚಿಂತನೆ; ಶೀಘ್ರ ಘೋಷಣೆ ಸಾಧ್ಯತೆ
ದೊಡ್ಡ ತಂತ್ರಜ್ಞಾನ ಕಂಪನಿಗಳು ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಸಂದರ್ಭದಲ್ಲೇ ಗ್ರೋವರ್ ಅವರು ಈ ಸಲಹೆ ನೀಡಿದ್ದಾರೆ. ಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಕಳೆದ ವಾರ ಗೂಗಲ್ ಘೋಷಿಸಿತ್ತು. ಅಮೆಜಾನ್ ಕೂಡ 18,000 ಉದ್ಯೋಗ ಕಡಿತ ಘೋಷಿಸಿತ್ತು. 2022ರ ನವೆಂಬರ್ನಲ್ಲಿ ಮೆಟಾ 11,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಟ್ವಿಟರ್ ಮೊತ್ತ ಮೊದಲಾಗಿ 2,300 ಮಂದಿಯನ್ನು ಕೆಲಸದಿಂದ ವಜಾಗೊಳಿಸುವ ಮೂಲಕ ಟೆಕ್ ಕಂಪನಿಗಳ ಉದ್ಯೋಗ ಕಡಿತಕ್ಕೆ ನಾಂದಿ ಹಾಡಿತ್ತು. ಭಾರತದಲ್ಲಿಯೂ ಟೆಕ್ ಕಂಪನಿಗಳು ಉದ್ಯೋಗ ಕಡಿತದ ನಿರ್ಧಾರಗಳನ್ನು ಕೈಗೊಳ್ಳುತ್ತಿವೆ. ವಿಪ್ರೋ ಸುಮಾರು 450 ಮಂದಿ ಹೊಸ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಸ್ವಿಗ್ಗಿ, ಡುಂಜೊ, ಓಲಾ ಇತ್ಯಾದಿ ಕಂಪನಿಗಳೂ ವೆಚ್ಚ ಕಡಿತಕ್ಕಾಗಿ ಉದ್ಯೋಗಿಗಳನ್ನು ವಜಾಗೊಳಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:32 pm, Mon, 23 January 23