Spotify Layoff: ಮತ್ತೆ ಉದ್ಯೋಗ ಕಡಿತಕ್ಕೆ ಸ್ಪಾಟಿಫೈ ಚಿಂತನೆ; ಶೀಘ್ರ ಘೋಷಣೆ ಸಾಧ್ಯತೆ

ಸ್ಪಾಟಿಫೈ ಟೆಕ್ನಾಲಜಿ 2022ರ ಅಕ್ಟೋಬರ್​​ನಲ್ಲಿ ತನ್ನ ‘ಗಿಲ್​​ಮೆಟ್ ಮೀಡಿಯಾ’ ಮತ್ತು ‘ಪ್ಯಾರ್​ಕಾಸ್ಟ್ ಪಾಡ್​ಕಾಸ್ಟ್​​​’ನಿಂದ 38 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ಮತ್ತಷ್ಟು ಮಂದಿ ಉದ್ಯೋಗಿಗಳ ವಜಾಕ್ಕೆ ಮುಂದಾಗಿದೆ.

Spotify Layoff: ಮತ್ತೆ ಉದ್ಯೋಗ ಕಡಿತಕ್ಕೆ ಸ್ಪಾಟಿಫೈ ಚಿಂತನೆ; ಶೀಘ್ರ ಘೋಷಣೆ ಸಾಧ್ಯತೆ
ಸ್ಪಾಟಿಫೈ (ಬ್ಲೂಮ್​​ಬರ್ಗ್ ಚಿತ್ರ)Image Credit source: Bloomberg
Follow us
ಗಣಪತಿ ಶರ್ಮ
|

Updated on:Jan 23, 2023 | 11:28 AM

ನವದೆಹಲಿ: ಗೂಗಲ್, ಅಮೆಜಾನ್, ಮೈಕ್ರೋಸಾಫ್ಟ್ ಬೆನ್ನಲ್ಲೇ ಮತ್ತೊಂದು ತಂತ್ರಜ್ಞಾನ ಕಂಪನಿ ಸ್ಪಾಟಿಫೈ ಟೆಕ್ನಾಲಜಿ (Spotify Technology) ಎರಡನೇ ಹಂತದ ಉದ್ಯೋಗ ಕಡಿತಕ್ಕೆ (Layoff) ಚಿಂತನೆ ನಡೆಸಿದೆ. ವೆಚ್ಚ ಕಡಿಮೆ ಮಾಡುವುದಕ್ಕಾಗಿ ಕಂಪನಿಯು ಉದ್ಯೋಗಿಗಳನ್ನು ವಜಾಗೊಳಿಸುವ ಕುರಿತು ಚಿಂತನೆ ನಡೆಸುತ್ತಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದೆ ಎಂದು ‘ಬ್ಲೂಮ್​ಬರ್ಗ್’ ತಾಣ ವರದಿ ಮಾಡಿದೆ. ಸ್ಪಾಟಿಫೈ ಟೆಕ್ನಾಲಜಿ 2022ರ ಅಕ್ಟೋಬರ್​​ನಲ್ಲಿ ತನ್ನ ‘ಗಿಲ್​​ಮೆಟ್ ಮೀಡಿಯಾ’ ಮತ್ತು ‘ಪ್ಯಾರ್​ಕಾಸ್ಟ್ ಪಾಡ್​ಕಾಸ್ಟ್​​​’ನಿಂದ 38 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ಮತ್ತಷ್ಟು ಮಂದಿ ಉದ್ಯೋಗಿಗಳ ವಜಾಕ್ಕೆ ಮುಂದಾಗಿದೆ ಎಂದು ವರದಿ ಹೇಳಿದೆ. ಆದರೆ, ಎಷ್ಟು ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ಮೂರನೇ ತ್ರೈಮಾಸಿಕ ವರದಿಯ ಪ್ರಕಾರ ಸ್ಪಾಟಿಫೈಯಲ್ಲಿ 9,800 ಮಂದಿ ಉದ್ಯೋಗಿಗಳಿದ್ದಾರೆ ಎಂಬುದು ತಿಳಿದುಬಂದಿದೆ. 2019ರಲ್ಲಿ ಕಂಪನಿಯು ಜನಪ್ರಿಯ ಶೋಗಳ ಖರೀದಿ ಮತ್ತು ಇತರ ಚಟುವಟಿಕೆಗಳಿಗಾಗಿ ಕೋಟ್ಯಂತರ ಡಾಲರ್ ಹೂಡಿಕೆ ಮಾಡಿತ್ತು. ಆದರೆ ಈ ಹೂಡಿಕೆಗಳಿಂದ ಈವರೆಗೂ ಹೇಳಿಕೊಳ್ಳುವಂಥ ರಿಟರ್ನ್ಸ್ ಬಂದಿಲ್ಲ ಎನ್ನಲಾಗಿದೆ. ಕಳೆದ ವರ್ಷ ಕಂಪನಿಯ ಷೇರುಗಳು ಶೇ 66ರ ಕುಸಿತ ಕಂಡಿದ್ದವು. ಆದಾಗ್ಯೂ, ಪಾಡ್​​ಕಾಸ್ಟ್ ವ್ಯವಹಾರವು ಮುಂದಿನ ಒಂದರಿಂದ ಎರಡು ವರ್ಷಗಳಲ್ಲಿ ಲಾಭದಾಯಕವಾಗಲಿದೆ ಎಂದು ಸ್ಪಾಟಿಫೈ ಕಾರ್ಯನಿರ್ವಹಾಕರು ಕಳೆದ ಜೂನ್​ನಲ್ಲಿ ಹೇಳಿದ್ದರು. ಈ ಮಧ್ಯೆ, ಉದ್ಯೋಗ ಕಡಿತಕ್ಕೆ ಸಂಬಂಧಿಸಿ ಸ್ಪಾಟಿಫೈ ವಕ್ತಾರರು ಈವರೆಗೆ ಪ್ರತಿಕ್ರಿಯೆ ನೀಡಿಲ್ಲ ಎಂದೂ ‘ಬ್ಲೂಮ್​​ಬರ್ಗ್’ ವರದಿ ಉಲ್ಲೇಖಿಸಿದೆ.

ಟೆಕ್ ಕಂಪನಿಗಳಲ್ಲಿ ಮುಂದುವರಿದ ಉದ್ಯೋಗ ಕಡಿತ

ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಕಂಪನಿಗಳು ಉದ್ಯೋಗ ಕಡಿತ ಮುಂದುವರಿಸಿದ್ದು, ಇತ್ತೀಚಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಹೆಚ್ಚು ಲಾಭ ಗಳಿಸುತ್ತಿರುವ ಕೆಲವು ದೊಡ್ಡ ಕಂಪನಿಗಳೂ ವೆಚ್ಚ ಕಡಿಮೆ ಮಾಡುವುದಕ್ಕಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಕಳೆದ ವಾರ ಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಗೂಗಲ್ ಘೋಷಿಸಿತ್ತು. ಅಮೆಜಾನ್ ಕೂಡ 18,000 ಉದ್ಯೋಗ ಕಡಿತ ಘೋಷಿಸಿತ್ತು. 2022ರ ನವೆಂಬರ್​​ನಲ್ಲಿ ಮೆಟಾ 11,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಟ್ವಿಟರ್ ಮೊತ್ತ ಮೊದಲಾಗಿ 2,300 ಮಂದಿಯನ್ನು ಕೆಲಸದಿಂದ ವಜಾಗೊಳಿಸುವ ಮೂಲಕ ಟೆಕ್ ಕಂಪನಿಗಳ ಉದ್ಯೋಗ ಕಡಿತಕ್ಕೆ ನಾಂದಿ ಹಾಡಿತ್ತು. ಆ ಬಳಿಕ ಒಂದೊಂದೇ ಟೆಕ್ ಕಂಪನಿಗಳು ಉದ್ಯೋಗ ಕಡಿತ ಘೋಷಿಸುತ್ತಾ ಬಂದವು.

ಇದನ್ನೂ ಓದಿ: Job Cuts: ಕುಸಿಯುತ್ತಿವೆ ಅಮೆರಿಕ ಮಾಧ್ಯಮ ಸಂಸ್ಥೆಗಳು; ವ್ಯಾಪಕ ಉದ್ಯೋಗ ಕಡಿತ, ಹೊಸ ನೇಮಕಾತಿಗೆ ಹಿಂಜರಿಕೆ

ಈ ಮಧ್ಯೆ, ಭಾರತದಲ್ಲಿಯೂ ಟೆಕ್ ಕಂಪನಿಗಳು ಉದ್ಯೋಗ ಕಡಿತದ ನಿರ್ಧಾರಗಳನ್ನು ಕೈಗೊಳ್ಳುತ್ತಿವೆ. ವಿಪ್ರೋ ಸುಮಾರು 450 ಮಂದಿ ಹೊಸ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿರುವ ಬಗ್ಗೆ ಎರಡು ದಿನಗಳ ಹಿಂದಷ್ಟೇ ವರದಿಯಾಗಿತ್ತು. ಆಂತರಿಕ ಪರೀಕ್ಷೆ ನಡೆಸಿದ ಬಳಿಕ ಕಳಪೆ ಕಾರ್ಯಕ್ಷಮತೆಯ ಕಾರಣ ನೀಡಿ ಉದ್ಯೋಗಿಗಳನ್ನು ವಜಾಗೊಳಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:07 am, Mon, 23 January 23

ವಿಕ್ರಂಗೌಡ ಮೊದಲು ವಿಮೋಚನಾರಂಗದೊಂದಿಗೆ ಗುರುತಿಸಿಕೊಂಡಿದ್ದ: ಗ್ರಾಮಸ್ಥ
ವಿಕ್ರಂಗೌಡ ಮೊದಲು ವಿಮೋಚನಾರಂಗದೊಂದಿಗೆ ಗುರುತಿಸಿಕೊಂಡಿದ್ದ: ಗ್ರಾಮಸ್ಥ
ಕುಕ್ಕರ್ ಬ್ರ್ಯಾಂಡ್ ಜನರನ್ನು ಸಿದ್ದರಾಮಯ್ಯ ಬ್ರದರ್ಸ್ ಅನ್ನುತ್ತಾರೆ: ಅಶೋಕ
ಕುಕ್ಕರ್ ಬ್ರ್ಯಾಂಡ್ ಜನರನ್ನು ಸಿದ್ದರಾಮಯ್ಯ ಬ್ರದರ್ಸ್ ಅನ್ನುತ್ತಾರೆ: ಅಶೋಕ
ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ..ಇಲ್ಲದಿದ್ರೆ ಎನ್‌ಕೌಂಟರ್​?
ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ..ಇಲ್ಲದಿದ್ರೆ ಎನ್‌ಕೌಂಟರ್​?
ಮುಡಾ ಪ್ರಕರಣ ವಿಚಾರಣೆಯ ಬಗ್ಗೆ ನಟೇಶ್ ಯಾವುದೇ ವಿವರಣೆ ನೀಡಲಿಲ್ಲ
ಮುಡಾ ಪ್ರಕರಣ ವಿಚಾರಣೆಯ ಬಗ್ಗೆ ನಟೇಶ್ ಯಾವುದೇ ವಿವರಣೆ ನೀಡಲಿಲ್ಲ
ಎನ್​ಕೌಂಟರ್​ನಲ್ಲಿ ಹತ್ಯೆಯಾದ ವಿಕ್ರಂ ಗೌಡನ ಜಾತಕ ಬಿಚ್ಚಿಟ್ಟ ಐಜಿಪಿ!
ಎನ್​ಕೌಂಟರ್​ನಲ್ಲಿ ಹತ್ಯೆಯಾದ ವಿಕ್ರಂ ಗೌಡನ ಜಾತಕ ಬಿಚ್ಚಿಟ್ಟ ಐಜಿಪಿ!
ಬಿಗ್​ಬಾಸ್​ ಮನೆಯಲ್ಲಿ ಮಡಿಕೆಗಳ ಜೊತೆಗೆ ಒಡೆದ ಮನಸುಗಳು
ಬಿಗ್​ಬಾಸ್​ ಮನೆಯಲ್ಲಿ ಮಡಿಕೆಗಳ ಜೊತೆಗೆ ಒಡೆದ ಮನಸುಗಳು
ವಿರೋಧ ಪಕ್ಷದ ತಾಕತ್ತನ್ನು ಸರ್ಕಾರಕ್ಕೆ ತೋರಿಸಿದ್ದೇವೆ: ಅರ್ ಆಶೋಕ
ವಿರೋಧ ಪಕ್ಷದ ತಾಕತ್ತನ್ನು ಸರ್ಕಾರಕ್ಕೆ ತೋರಿಸಿದ್ದೇವೆ: ಅರ್ ಆಶೋಕ
ಬೀದರ್​: ನ.24ರಿಂದ ಎರಡು ದಿನಗಳ ಕಾಲ ಅನುಭವಮಂಟಪ ಉತ್ಸವ
ಬೀದರ್​: ನ.24ರಿಂದ ಎರಡು ದಿನಗಳ ಕಾಲ ಅನುಭವಮಂಟಪ ಉತ್ಸವ
IND vs AUS: ಮೊದಲ ಪಂದ್ಯಕ್ಕೆ ನಾನು ರೆಡಿ ಎಂದ ಕನ್ನಡಿಗ ಕೆಎಲ್ ರಾಹುಲ್
IND vs AUS: ಮೊದಲ ಪಂದ್ಯಕ್ಕೆ ನಾನು ರೆಡಿ ಎಂದ ಕನ್ನಡಿಗ ಕೆಎಲ್ ರಾಹುಲ್
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ