AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇರೆಡೆಗೆ ಹೋಗುತ್ತಿದ್ದ ರಷ್ಯನ್ ತೈಲ ಟ್ಯಾಂಕರ್​ಗಳು ಭಾರತದ ಕಡೆಗೆ; ಆಪತ್ಕಾಲದಲ್ಲಿ ಭಾರತಕ್ಕೆ ದಕ್ಕಿದ ನೆರವು

Russian Oil Cargoes Diverted To India Following Supply Disruptions Amid Iran-US-Israel War: ರಷ್ಯನ್ ತೈಲ ಹೊತ್ತ ಮೂರು ಹಡಗುಗಳು ಭಾರತಕ್ಕೆ ಬರುತ್ತಿವೆ. ಬೇರೆ ಕಡೆಗೆ ಸಾಗಣೆ ಆಗುತ್ತಿದ್ದ ಈ ಹಡಗುಗಳನ್ನು ಭಾರತದತ್ತ ತಿರುಗಿಸಲಾಗಿದೆ. ಪೆಟ್ರೋಲ್ ಅವಶ್ಯಕತೆ ಹೊಂದಿರುವ ಭಾರತಕ್ಕೆ ರಷ್ಯಾ ಸರಿಯಾದ ಸಮಯಕ್ಕೆ ತೈಲ ಪೂರೈಕೆ ಮಾಡುತ್ತಿದೆ. ಈ ಮೂರು ಹಡುಗಗಳಲ್ಲಿ 21,60,000 ಬ್ಯಾರಲ್ ತೈಲ ಇದೆ. ಒಂದು ಟ್ಯಾಂಕರ್ ಈಗಾಗಲೇ ಭಾರತದ ಪೋರ್ಟ್​ವೊಂದಕ್ಕೆ ಬಂದಾಗಿದೆ. ಇನ್ನೆರಡು ಟ್ಯಾಂಕರ್​ಗಳು ಬರುತ್ತಿವೆ.

ಬೇರೆಡೆಗೆ ಹೋಗುತ್ತಿದ್ದ ರಷ್ಯನ್ ತೈಲ ಟ್ಯಾಂಕರ್​ಗಳು ಭಾರತದ ಕಡೆಗೆ; ಆಪತ್ಕಾಲದಲ್ಲಿ ಭಾರತಕ್ಕೆ ದಕ್ಕಿದ ನೆರವು
ಒಡುನೆ ಹಡಗಿನ ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 05, 2026 | 4:40 PM

Share

ನವದೆಹಲಿ, ಮಾರ್ಚ್ 5: ಪಶ್ಚಿಮ ಏಷ್ಯನ್ ಯುದ್ಧದಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದರಿಂದ ಭಾರತವು ಪೆಟ್ರೋಲಿಯಂ ಕೊರತೆಗೆ ಸಿಲುಕುತ್ತಿದೆ. ಇದೇ ಹೊತ್ತಲ್ಲಿ ರಷ್ಯಾ ದೇಶದಿಂದ ನೆರವಿನ ಹಸ್ತ ಸಿಕ್ಕಿದೆ. ಬ್ಲೂಮ್​ಬರ್ಗ್ ವರದಿ ಪ್ರಕಾರ ರಷ್ಯಾದಿಂದ ತೈಲ ಹೊತ್ತ ಮೂರು ಹಡಗುಗಳು (Oil cargoes) ಭಾರತಕ್ಕೆ ಬರುತ್ತಿವೆ. ಇದರಲ್ಲಿ ಒಂದು ಹಡಗು ನಿನ್ನೆಯೇ (ಫೆ. 4) ಭಾರತಕ್ಕೆ ಬಂದಾಗಿದೆಯಂತೆ. ಈ ಮೂರು ಹಡಗುಗಳಲ್ಲಿ 21 ಲಕ್ಷಕ್ಕೂ ಅಧಿಕ ಬ್ಯಾರಲ್ ತೈಲ ಇದೆ.

ಒಡುನೆ, ಮಟಾರಿ ಮತ್ತು ಇಂದ್ರಿ ಹಡಗುಗಳ ಮೂಲಕ ಭಾರತಕ್ಕೆ ಈ ತೈಲ ಸಿಗುತ್ತಿದೆ. ಒಡುನೆ ಮತ್ತು ಇಂದ್ರಿ ಹಡಗುಗಳು ಸ್ಯೂಜ್​ಮ್ಯಾಕ್ಸ್ ದರ್ಜೆಯ ಹಡುಗಗಳಾಗಿದ್ದು, ತಲಾ 7,30,000 ಬ್ಯಾರಲ್​ಗಳನ್ನು ಸಾಗಿಸುತ್ತವೆ. ಮಟಾರಿ ಎಂಬುದು ಆಫ್ರಾಮ್ಯಾಕ್ಸ್ ದರ್ಜೆಯ ಹಡಗಾಗಿದ್ದು, ಇದು 7,00,000 ಬ್ಯಾರಲ್ ತೈಲ ಸಾಗಿಸುತ್ತದೆ.

ಇದನ್ನೂ ಓದಿ: ಪೆಟ್ರೋಲ್ ಕೊರತೆ ಎದುರಾಗದಂತೆ ಎಚ್ಚರವಹಿಸಲು ಮುನ್ನೆಚ್ಚರಿಕೆಯ ಪ್ಲಾನ್ ಹಾಕಿದ ಭಾರತ

7.3 ಲಕ್ಷ ಬ್ಯಾರಲ್ ತೈಲ ಹೊತ್ತ ಒಡುನೆ ಹಡಗು ಭಾರತದ ಪಾರದೀಪ್ ಬಂದರನ್ನು ತಲುಪಿದೆ. ಮಟಾರಿ ಟ್ಯಾಂಕರ್ ಗುಜರಾತ್​ನ ವಾಡಿನರ್ ಬಂದರಿನತ್ತ ಬರುತ್ತಿದೆ. ಇನ್ನು, ಸಿಂಗಾಪುರದತ್ತ ಹೋಗುತ್ತಿದ್ದ ಇಂದ್ರಿ ಟ್ಯಾಂಕರ್ ಭಾರತದತ್ತ ತಿರುಗಿದೆ ಎಂದು ಹೇಳಲಾಗುತ್ತಿದೆ.

ಭಾರತದ ಪೆಟ್ರೋಲಿಯಂ ರಿಫೈನರಿ ಕಂಪನಿಗಳು ರಷ್ಯಾದಿಂದ ಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಸಾಧ್ಯತೆ ಬಗ್ಗೆ ಸರ್ಕಾರದೊಂದಿಗೆ ಸಮಾಲೋಚನೆ ನಡೆಸುತ್ತಿರುವುದು ಕೂಡ ತಿಳಿದುಬಂದಿದೆ.

ಉಕ್ರೇನ್ ಯುದ್ಧ ಶುರುವಾಗಿ, ರಷ್ಯಾ ಮೇಲೆ ಪಾಶ್ಚಿಮಾತ್ಯ ದೇಶಗಳು ನಿಷೇಧ ಹಾಕಿದ ಬಳಿಕ ರಷ್ಯಾದಿಂದ ಭಾರತ ಹಾಗೂ ಚೀನಾ ಕಡಿಮೆ ಬೆಲೆಗೆ ತೈಲ ಖರೀದಿ ಮಾಡುತ್ತಿವೆ. ಆದರೆ, ಅಮೆರಿಕದ ಒತ್ತಡದಿಂದ ತಿಂಗಳ ಹಿಂದಷ್ಟೇ ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿತ್ತು. ಭಾರತಕ್ಕೆಂದು ಇದ್ದ ತೈಲವನ್ನು ಚೀನಾ ಮತ್ತಷ್ಟು ಕಡಿಮೆ ಬೆಲೆಗೆ ಕೊಂಡುಕೊಂಡಿತು.

ಇದನ್ನೂ ಓದಿ: ಹಾರ್ಮುಜ್ ಮಾರ್ಗದಲ್ಲಿ ಚೀನಾಗೆ ಮಾತ್ರ ಅವಕಾಶ ಎಂದ ಇರಾನ್; ಭಾರತಕ್ಕೆ ನಾವು ತೈಲ ಕೊಡುತ್ತೇವೆ ಎಂದ ರಷ್ಯಾ

ಈಗ ಗಲ್ಫ್ ದೇಶಗಳಿಂದ ತೈಲ ಪೂರೈಕೆ ಸ್ಥಗಿತಗೊಂಡಿರುವುದರಿಂದ ರಷ್ಯನ್ ತೈಲಕ್ಕೆ ಬೇಡಿಕೆ ಬರುತ್ತಿದೆ. ಭಾರತ ಮತ್ತು ಚೀನಾದ ಕಂಪನಿಗಳು ರಷ್ಯನ್ ತೈಲದ ಮೇಲೆ ಆಸಕ್ತಿ ತೋರಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ