AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರ್ಮುಜ್ ಜಲಸಂಧಿ ಅಮೆರಿಕ, ಇಸ್ರೇಲ್, ಯೂರೋಪ್​ಗೆ ಮಾತ್ರ ಬಂದ್; ಬೇರೆ ದೇಶಗಳಿಗಿಲ್ಲ ತಡೆ: ಇರಾನ್ ಸ್ಪಷ್ಟನೆ

Iran Says Hormuz Strait Only Closed To US, Israel, Europe: ಹಾರ್ಮುಜ್ ಜಲಸಂಧಿ ಮೂಲಕ ತೈಲ ಹಡಗುಗಳನ್ನು ಸಾಗಲು ಬಿಡದೆ ತಡೆ ಹಾಕಿದ್ದ ಇರಾನ್ ಇದೀಗ ಒಂದಷ್ಟು ಸಡಿಲಿಕೆ ಮಾಡಿದೆ. ಅಮೆರಿಕ, ಇಸ್ರೇಲ್, ಯೂರೋಪ್ ರಾಷ್ಟ್ರಗಳಿಗೆ ಇಲ್ಲಿಂದ ತೈಲ ಪೂರೈಕೆ ಆಗಲು ಬಿಡುವುದಿಲ್ಲ. ಉಳಿದ ದೇಶಗಳಿಗೆ ಯಾವ ತಡೆ ಇರುವುದಿಲ್ಲ ಎಂದು ಇರಾನ್​ನ ರೆವಲ್ಯೂಶನರಿ ಗಾರ್ಡ್ ಸೇನೆ ತಿಳಿಸಿದೆ.

ಹಾರ್ಮುಜ್ ಜಲಸಂಧಿ ಅಮೆರಿಕ, ಇಸ್ರೇಲ್, ಯೂರೋಪ್​ಗೆ ಮಾತ್ರ ಬಂದ್; ಬೇರೆ ದೇಶಗಳಿಗಿಲ್ಲ ತಡೆ: ಇರಾನ್ ಸ್ಪಷ್ಟನೆ
ಹಾರ್ಮುಜ್ ಜಲಸಂಧಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 05, 2026 | 7:53 PM

Share

ನವದೆಹಲಿ, ಮಾರ್ಚ್ 5: ಹಾರ್ಮುಜ್ ಜಲಸಂಧಿಯಲ್ಲಿ ತೈಲ ನೌಕೆಗಳನ್ನು ಸಾಗಲು ಬಿಡುವುದಿಲ್ಲ ಎಂದು ಹೇಳಿ ತಡೆ ಹಾಕಿದ್ದ ಇರಾನ್ ದೇಶ ಈಗ ತನ್ನ ನಿಲುವನ್ನು ಸಡಿಲಿಸಿದೆ. ಅಮೆರಿಕ, ಇಸ್ರೇಲ್, ಯೂರೋಪ್ ಹಾಗೂ ಅವರ ಇತರ ಪಶ್ಚಿಮ ಮಿತ್ರರಿಗೆ ಮಾತ್ರ ಈ ಮಾರ್ಗದಿಂದ ತೈಲ ಪೂರೈಕೆಗೆ ಅವಕಾಶ ಕೊಡುವುದಿಲ್ಲ ಎಂದು ಇರಾನ್​ನ ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಾರ್ಪ್ಸ್ ಸೇನೆ ಹೇಳಿದೆ.

ಇದರೊಂದಿಗೆ, ಭಾರತ ಹಾಗೂ ಇತರ ಹಲವು ದೇಶಗಳು ತುಸು ನಿರಾಳಗೊಂಡಂತಾಗಿದೆ. ಹಾರ್ಮುಜ್ ಜಲಸಂಧಿಯು ಪಶ್ಚಿಮ ಏಷ್ಯಾ ಭಾಗದಲ್ಲಿ ಇರಾನ್ ಮತ್ತು ಓಮನ್ ನಡುವಿನ ಸಮುದ್ರ ಭಾಗ. ಇದು ಪರ್ಷಿಯನ್ ಕೊಲ್ಲಿ ಹಾಗೂ ಅರೇಬಿಯನ್ ಸಮುದ್ರವನ್ನು ಇದು ಸಂಪರ್ಕಿಸುತ್ತದೆ. ಬಹಳ ಕಿರಿದಾಗಿರುವ ಈ ಜಲಸಂಧಿಯಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಹಡಗುಗಳು ಸಾಗುತ್ತವೆ. ಗಲ್ಫ್ ರಾಷ್ಟ್ರಗಳ ತೈಲ ನೌಕೆಗಳು ಬೇರೆ ದೇಶಗಳನ್ನು ತಲುಪಬೇಕಾದರೆ ಇಲ್ಲಿಂದಲೇ ಹೊರಗೆ ಹೋಗಬೇಕು. ವಿಶ್ವದ ಶೇ. 20ಕ್ಕಿಂತ ಹೆಚ್ಚು ತೈಲ ಪೂರೈಕೆ ಈ 33 ಕಿಮೀ ಕಿರಿದಾದ ಜಲಸಂಧಿ ಮೂಲಕ ಹೋಗಬೇಕು. ಇದಕ್ಕೆ ತಡೆ ಹಾಕುವುದು ಇರಾನ್​ಗೆ ಸುಲಭ.

ಇದನ್ನೂ ಓದಿ: ಇಂಧನಕ್ಕೆ ಯಾವ ತೊಂದರೆ ಇಲ್ಲ, ಸಾಕಷ್ಟು ದಾಸ್ತಾನು ಇದೆ; ದಿನವೂ ಭರಿಸುತ್ತಿದ್ದೇವೆ: ಸರ್ಕಾರದ ಮೂಲಗಳು

ಅಮೆರಿಕ ಮತ್ತು ಇಸ್ರೇಲ್ ಶನಿವಾರ ಇರಾನ್ ಮೇಲೆ ಜಂಟಿಯಾಗಿ ದಾಳಿ ಆರಂಭಿಸಿದಾಗಿನಿಂದ ಈ ಜಲಸಂಧಿಗೆ ತಡೆ ಬಿದ್ದಿದೆ. ಈ ಮಾರ್ಗದಲ್ಲಿ ಶೇ. 90ರಷ್ಟು ಹಡಗುಗಳ ಸಾಗಣೆ ಕಡಿಮೆ ಆಗಿದೆ. ಪರಿಣಾಮವಾಗಿ ಬ್ಯಾರಲ್​ಗೆ 65 ಡಾಲರ್ ಆಸುಪಾಸಿನಲ್ಲಿದ್ದ ತೈಲ ಬೆಲೆ 80 ಡಾಲರ್​ಗಿಂತಲೂ ಮೇಲೆ ಹೋಗಿದೆ.

ಮೊನ್ನೆ ಮಂಗಳವಾರ ಇರಾನ್ ದೇಶವು ಚೀನೀ ಹಡಗುಗಳಿಗೆ ಮಾತ್ರವೇ ಸಾಗಲು ಅವಕಾಶ ಕೊಡುವುದಾಗಿ ಹೇಳಿತ್ತು. ಈಗ ಅಮೆರಿಕ ಹಾಗೂ ಅದರ ಮಿತ್ರ ದೇಶಗಳನ್ನು ಬಿಟ್ಟು ಉಳಿದ ದೇಶಗಳಿಗೆ ಹಾರ್ಮುಜ್ ಜಲಸಂಧಿ ದಾಟಲು ಅವಕಾಶ ಕೊಡುವುದಾಗಿ ಹೇಳುತ್ತಿದೆ.

ಇದನ್ನೂ ಓದಿ: ಬೇರೆಡೆಗೆ ಹೋಗುತ್ತಿದ್ದ ರಷ್ಯನ್ ತೈಲ ಟ್ಯಾಂಕರ್​ಗಳು ಭಾರತದ ಕಡೆಗೆ; ಆಪತ್ಕಾಲದಲ್ಲಿ ಭಾರತಕ್ಕೆ ದಕ್ಕಿದ ನೆರವು

ಹಾರ್ಮುಜ್ ಜಲಸಂಧಿಗೆ ಈ ರೀತಿ ಹಡಗು ಸಾಗಣೆಗೆ ನಿರ್ಬಂಧ ಬಿದ್ದಿದ್ದು ಇದೇ ಪ್ರಥಮ ಬಾರಿಗೆ. ಹಿಂದೆ ಇರಾಕ್ ಅಮೆರಿಕ ಯುದ್ಧದ ಸಂದರ್ಭದಲ್ಲೂ ಇಲ್ಲಿ ಅನಿರ್ಬಂಧಿತವಾಗಿ ತೈಲ ನೌಕೆಗಳ ಸಾಗಣೆ ಆಗುತ್ತಿತ್ತು. ಈಗ ನಿರ್ಬಂಧವನ್ನು ಕೆಲವೇ ದೇಶಗಳಿಗೆ ಸೀಮಿತಗೊಳಿಸಿರುವುದು ಭಾರತ, ಚೀನಾದಂತಹ ದೇಶಗಳು ನಿರಾಳಗೊಳ್ಳುವಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ಜನತೆಗೆ ಡಿಕೆಶಿ ಧನ್ಯವಾದ
ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ಜನತೆಗೆ ಡಿಕೆಶಿ ಧನ್ಯವಾದ
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ
ದಸರಾ ಸಂಭ್ರಮದಲ್ಲಿ ಭಾಗಿಯಾದ ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ
ದಸರಾ ಸಂಭ್ರಮದಲ್ಲಿ ಭಾಗಿಯಾದ ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ
ನಂದಿ ಧ್ವಜಕ್ಕೆ ಡಿಕೆಶಿ ಪೂಜೆ ಸಲ್ಲಿಕೆ:ಮೈಸೂರಿನಲ್ಲಿ ಮರುಕಳಿಸಿದ ಗತ ವೈಭವ
ನಂದಿ ಧ್ವಜಕ್ಕೆ ಡಿಕೆಶಿ ಪೂಜೆ ಸಲ್ಲಿಕೆ:ಮೈಸೂರಿನಲ್ಲಿ ಮರುಕಳಿಸಿದ ಗತ ವೈಭವ
ಮೊದಲ ಬಾರಿ ವಜ್ರಮುಷ್ಠಿ ಕಾಳಗ ರದ್ದು, ಮೈಸೂರಿನ ಜಟ್ಟಿ ಮಹೇಶ್ ರಿಯಾಕ್ಷನ್
ಮೊದಲ ಬಾರಿ ವಜ್ರಮುಷ್ಠಿ ಕಾಳಗ ರದ್ದು, ಮೈಸೂರಿನ ಜಟ್ಟಿ ಮಹೇಶ್ ರಿಯಾಕ್ಷನ್
ಸೌಜನ್ಯ ಪ್ರಕರಣ: ಇನ್ನೆರಡು ದಿನದಲ್ಲಿ ಅಪರಾಧ ಸ್ಥಳಕ್ಕೆ ಎಸ್​ಐಟಿ ಭೇಟಿ
ಸೌಜನ್ಯ ಪ್ರಕರಣ: ಇನ್ನೆರಡು ದಿನದಲ್ಲಿ ಅಪರಾಧ ಸ್ಥಳಕ್ಕೆ ಎಸ್​ಐಟಿ ಭೇಟಿ
Live: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ನೇರಪ್ರಸಾರ
Live: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ನೇರಪ್ರಸಾರ
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಡಿಕೆಶಿ ಭೇಟಿ!
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಡಿಕೆಶಿ ಭೇಟಿ!
ಅರಮನೆಯಿಂದಲೇ ಅಮ್ಮನ ಜೊತೆಗೆ ಆದ್ಯವೀರ್, ಯುಗಾಧ್ಯಕ್ಷ ಪೂಜೆ ವೀಕ್ಷಣೆ
ಅರಮನೆಯಿಂದಲೇ ಅಮ್ಮನ ಜೊತೆಗೆ ಆದ್ಯವೀರ್, ಯುಗಾಧ್ಯಕ್ಷ ಪೂಜೆ ವೀಕ್ಷಣೆ
ಜಂಬೂ ಸವಾರಿಗೆ ಚಾಲನೆ ನೀಡಲು ಮೈಸೂರಿಗೆ ಬಂದ ಸಿಎಂ ಹೇಳಿದ್ದೇನು ನೋಡಿ
ಜಂಬೂ ಸವಾರಿಗೆ ಚಾಲನೆ ನೀಡಲು ಮೈಸೂರಿಗೆ ಬಂದ ಸಿಎಂ ಹೇಳಿದ್ದೇನು ನೋಡಿ