AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rates 29 November: ಹತ್ತು ಗ್ರಾಮ್ ಚಿನ್ನದ ಬೆಲೆ 4 ದಿನದಲ್ಲಿ 4,200 ರೂ ಹೆಚ್ಚಳ

Gold Price 29 November 2026: ಚಿನ್ನದ ಬೆಲೆ ಇವತ್ತು ಏರಿದರೆ, ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಬಂಗಾರದ ಬೆಲೆ ಈ ವಾರಾಂತ್ಯದಲ್ಲಿ ಗ್ರಾಮ್​ಗೆ 120 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ 11,600 ರೂನಿಂದ 11,720 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 12,786 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 170 ರೂ ಇದೆ. ಚೆನ್ನೈ ಮೊದಲಾದೆಡೆಯೂ ಬೆಲೆ 170 ರೂ ಇದೆ.

Gold Rates 29 November: ಹತ್ತು ಗ್ರಾಮ್ ಚಿನ್ನದ ಬೆಲೆ 4 ದಿನದಲ್ಲಿ 4,200 ರೂ ಹೆಚ್ಚಳ
ಚಿನ್ನImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 29, 2026 | 10:52 AM

Share

ನವದೆಹಲಿ, ನವೆಂಬರ್ 29: ಚಿನ್ನದ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ನಾಲ್ಕು ದಿನಗಳ ಹಿಂದೆ, ನ. 25ರಂದು 11,300 ರೂ ಇದ್ದ ಆಭರಣ ಬಂಗಾರದ ಬೆಲೆ ಇದೀಗ 420 ರೂ ಹೆಚ್ಚಳಗೊಂಡಿದೆ. ವಾರಾಂತ್ಯದಲ್ಲಿ ಸ್ಪಾಟ್ ಚಿನ್ನ ಬೆಲೆಯಲ್ಲಿ ಭರ್ಜರಿ ಏರಿಕೆಯಾಗಿದೆ. ವಿವಿಧ ದೇಶಗಳಲ್ಲಿ ಇದರ ಬೆಲೆ ಸ್ವಲ್ಪಮಟ್ಟಿಗೆ ಏರಿದೆ. ರುಪಾಯಿ ಬೆಲೆ ಕೊಂಚ ಇಳಿದಿರುವುದರಿಂದ ಭಾರತದಲ್ಲಿ ಬೆಲೆ ಹೆಚ್ಚು ಏರಿಕೆಯಾದಂತೆ ಕಾಣುತ್ತದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,17,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,27,860 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 17,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,17,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 17,000 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 29ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,786
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,720
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,589
  • ಬೆಳ್ಳಿ ಬೆಲೆ 1 ಗ್ರಾಂಗೆ: 170 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,720 ರೂ
  • ಚೆನ್ನೈ: 11,720 ರೂ
  • ಮುಂಬೈ: 11,720 ರೂ
  • ದೆಹಲಿ: 11,735
  • ಕೋಲ್ಕತಾ: 11,720 ರೂ
  • ಕೇರಳ: 11,720 ರೂ
  • ಅಹ್ಮದಾಬಾದ್: 11,725 ರೂ
  • ಜೈಪುರ್: 11,735
  • ಲಕ್ನೋ: 11,735
  • ಭುವನೇಶ್ವರ್: 11,720 ರೂ

ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)

  • ಎಂಸಿಎಕ್ಸ್ ಚಿನ್ನ 1 ಗ್ರಾಮ್​ಗೆ 12,535 ರೂ
  • ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್​ಗೆ 153 ರೂ

ಭಾರತದಲ್ಲಿ ಸ್ಪಾಟ್ ದರಗಳು

  • ಚಿನ್ನ (24 ಕ್ಯಾರಟ್) 1 ಗ್ರಾಮ್​ಗೆ 12,583 ರೂ
  • ಬೆಳ್ಳಿ 1 ಗ್ರಾಮ್​ಗೆ 154 ರೂ

ಇದನ್ನೂ ಓದಿ: ಚಿನ್ನ vs ಬೆಳ್ಳಿ: 2027ರಲ್ಲಿ ಹೆಚ್ಚು ಲಾಭ ತಂದುಕೊಡೋದು ಯಾವುದು? ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 117.48 ಡಾಲರ್ (10,925 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 1.406 ಡಾಲರ್ (131 ರುಪಾಯಿ)

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 12,786 ರುಪಾಯಿ
  • ಮಲೇಷ್ಯಾ: 498 ರಿಂಗಿಟ್ (11,229 ರುಪಾಯಿ)
  • ದುಬೈ: 439 ಡಿರಾಮ್ (11,108 ರುಪಾಯಿ)
  • ಅಮೆರಿಕ: 119.50 ಡಾಲರ್ (11,105 ರುಪಾಯಿ)
  • ಸಿಂಗಾಪುರ: 160.90 ಸಿಂಗಾಪುರ್ ಡಾಲರ್ (11,592 ರುಪಾಯಿ)
  • ಕತಾರ್: 441.50 ಕತಾರಿ ರಿಯಾಲ್ (11,270 ರೂ)
  • ಸೌದಿ ಅರೇಬಿಯಾ: 452 ಸೌದಿ ರಿಯಾಲ್ (11,200 ರುಪಾಯಿ)
  • ಓಮನ್: 46.40 ಒಮಾನಿ ರಿಯಾಲ್ (11,214 ರುಪಾಯಿ)
  • ಕುವೇತ್: 36.87 ಕುವೇತಿ ದಿನಾರ್ (11,019 ರುಪಾಯಿ)

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More