AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಪ್ ಲೇ ಆಫ್ ಶಾಕ್; 10,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವ ಸಾಫ್ಟ್​ವೇರ್ ಕಂಪನಿ

ಕೃತಕ ಬುದ್ಧಿಮತ್ತೆ (AI) ಆಧಾರಿತ ಬ್ಯುಸಿನೆಸ್ ಮಾಡಲ್​ನತ್ತ ವೇಗವಾಗಿ ಸಾಗುತ್ತಿರುವ ಜರ್ಮನಿಯ ಸಾಫ್ಟ್‌ವೇರ್ ದೈತ್ಯ ಸ್ಯಾಪ್ (SAP), ಜಾಗತಿಕವಾಗಿ ಕನಿಷ್ಠ 10,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತಿದೆ. ಇದರಿಂದ ಭಾರತದಲ್ಲಿರುವ ಉದ್ಯೋಗಿಗಳ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ. ಭಾರತದಲ್ಲಿ ಸ್ಯಾಪ್​ನ 16,000 ಉದ್ಯೋಗಿಗಳಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚಿನ ಉದ್ಯೋಗಿಗಳಿದ್ದಾರೆ.

ಸ್ಯಾಪ್ ಲೇ ಆಫ್ ಶಾಕ್; 10,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವ ಸಾಫ್ಟ್​ವೇರ್ ಕಂಪನಿ
ಲೇ ಆಫ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 27, 2026 | 3:18 PM

Share

ನವದೆಹಲಿ, ನವೆಂಬರ್ 27: ಜರ್ಮನಿಯ ಸಾಫ್ಟ್‌ವೇರ್ ದೈತ್ಯ ಸ್ಯಾಪ್ (SAP SE) ದೊಡ್ಡ ಲೇ ಆಫ್ ಕ್ರಮಕ್ಕೆ ಮುಂದಾಗಿದೆ. ಎರಡು ವರ್ಷಗಳ ಹಿಂದೆ 8,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದ ಈ ಕಂಪನಿ ಇದೀಗ ಅದಕ್ಕಿಂತಲೂ ಹೆಚ್ಚಿನ ಕತ್ತರಿ ಹಾಕಲು ಯೋಜಿಸಿದೆ. ಕೃತಕ ಬುದ್ಧಿಮತ್ತೆ (AI) ಯುಗಕ್ಕೆ ತಕ್ಕಂತೆ ತನ್ನ ಬ್ಯುಸಿನೆಸ್ ಅನ್ನು ಪುನರ್‌ರಚಿಸುವ ಭಾಗವಾಗಿ ಜಾಗತಿಕವಾಗಿ ಕನಿಷ್ಠ 10,000 ಹುದ್ದೆಗಳನ್ನು ಕಡಿತಗೊಳಿಸಲು ಚಿಂತನೆ ನಡೆಸುತ್ತಿದೆ.

ವಿಶ್ವಾದ್ಯಂತ 1.10 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಯ ಒಟ್ಟು ಉದ್ಯೋಗಬಲದ ಸುಮಾರು ಶೇ. 9-10ರಷ್ಟು ಮಂದಿಯ ಮೇಲೆ ಈ ಪುನರ್‌ರಚನೆ ಪರಿಣಾಮ ಬೀರಲಿದೆ. ಕಾರ್ಮಿಕ ಪ್ರತಿನಿಧಿಗಳೊಂದಿಗಿನ ಮಾತುಕತೆಯ ನಂತರ ಅಂತಿಮ ಲೇ ಆಫ್ ಸಂಖ್ಯೆ ನಿರ್ಧಾರವಾಗಲಿದೆ.

ಸ್ಯಾಪ್​ನ ಉತ್ಪನ್ನ ಅಭಿವೃದ್ಧಿ (Product Development), ಎಂಜಿನಿಯರಿಂಗ್ ಮತ್ತು ಮಾರಾಟ (Sales) ವಿಭಾಗಗಳಲ್ಲಿ ಉದ್ಯೋಗ ಕಡಿತದ ಸಾಧ್ಯತೆಗಳನ್ನು ಗುರುತಿಸುವಂತೆ ಎಲ್ಲಾ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಜೆಟ್ ಏರ್ವೇಸ್ ಉದ್ಯೋಗಿಗಳಿಗೆ ಬಾಕಿ ಇರುವ ಗ್ರಾಚ್ಯುಟಿ, ಪಿಎಫ್ ಹಣ ನೀಡಿ: ಎನ್​ಸಿಎಲ್​ಎಟಿ ಆದೇಶ; 7 ವರ್ಷಗಳ ಹೋರಾಟಕ್ಕೆ ಜಯ

ಎಐ ಕಾರ್ಯತಂತ್ರ ಮತ್ತು ನಾಯಕತ್ವದ ಬದಲಾವಣೆ

ಎಸ್​ಎಪಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಕ್ರಿಶ್ಚಿಯನ್ ಕ್ಲೈನ್ ಅವರು ಕಂಪನಿಯನ್ನು ‘ಎಐ-ಫಸ್ಟ್’ (AI-first) ಕಾರ್ಯತಂತ್ರದತ್ತ ಕೊಂಡೊಯ್ಯಲು ಮುಂದಾಗಿದ್ದು, ಸಾಫ್ಟ್‌ವೇರ್ ಉತ್ಪನ್ನಗಳ ಅಭಿವೃದ್ಧಿ ಮತ್ತು ಮಾರಾಟ ವಿಧಾನವನ್ನು ಮರುವಿನ್ಯಾಸಗೊಳಿಸುತ್ತಿದ್ದಾರೆ.

ಈ ವರ್ಷ ಸ್ಯಾಪ್ ತನ್ನ ಎಕ್ಸಿಕ್ಯೂಟಿವ್ ಬೋರ್ಡ್ ಅನ್ನು ಎರಡು ಬಾರಿ ಪುನರ್‌ರಚಿಸಿದ್ದು, ಆರು ಮಂಡಳಿ ಸದಸ್ಯರಲ್ಲಿ ಇಬ್ಬರು ಮುಂದಿನ ಮಾರ್ಚ್‌ನಲ್ಲಿ ಕಂಪನಿಯಿಂದ ನಿರ್ಗಮಿಸಲಿದ್ದಾರೆ; ಕಳೆದ ವಾರ ಮುಖ್ಯ ಹಣಕಾಸು ಅಧಿಕಾರಿ (CFO) ಡೊಮಿನಿಕ್ ಅಸಮ್ ಸಹ ಮುಂದಿನ ದಿನಗಳಲ್ಲಿ ಉದ್ಯೋಗಿಗಳ ಸಂಖ್ಯೆ ಇಳಿಕೆಯಾಗುವ ಮುನ್ಸೂಚನೆ ನೀಡಿದ್ದರು.

ಈ ಹಿಂದೆ 2024ರಲ್ಲೂ ಸ್ಯಾಪ್ ಸುಮಾರು 8,000-10,000 ಹುದ್ದೆಗಳನ್ನು ಪುನರ್‌ರಚಿಸಿತ್ತು; ಪ್ರಸ್ತುತ ವರದಿಗಳ ಕುರಿತು ಪ್ರತಿಕ್ರಿಯಿಸಲು ಕಂಪನಿ ನಿರಾಕರಿಸಿದೆ.

ಭಾರತೀಯ ಉದ್ಯೋಗಿಗಳ ಮೇಲಿನ ಸಂಭಾವ್ಯ ಪರಿಣಾಮ

ಸ್ಯಾಪ್‌ನ ಜಾಗತಿಕ ಉದ್ಯೋಗಿಗಳಲ್ಲಿ ಸುಮಾರು ಶೇ. 16ರಷ್ಟು ಮಂದಿ (ಸುಮಾರು 18,000 ಉದ್ಯೋಗಿಗಳು) ಬೆಂಗಳೂರು, ಗುರುಗ್ರಾಮ, ಮುಂಬೈ, ಪುಣೆ, ಹೈದರಾಬಾದ್, ನವದೆಹಲಿ ಮತ್ತು ಕೋಲ್ಕತ್ತಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಂಗಳೂರು ಸ್ಯಾಪ್‌ನ ಅತಿದೊಡ್ಡ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೇಂದ್ರಗಳಲ್ಲಿ ಒಂದಾಗಿರುವುದರಿಂದ, ಪ್ರಸ್ತಾವಿತ 10,000 ಉದ್ಯೋಗ ಕಡಿತವನ್ನು ಅನುಪಾತಕ್ಕೆ ತಕ್ಕಂತೆ ಜಾರಿಗೊಳಿಸಿದರೆ ಭಾರತದಲ್ಲಿ ಸುಮಾರು 1,600 ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಎಚ್1ಬಿ ವೀಸಾ, ಗ್ರೀನ್ ಕಾರ್ಡ್ ಸ್ಪಾನ್ಸರ್​ಶಿಪ್ ಸ್ಥಗಿತಗೊಳಿಸಿದ ಐಬಿಎಂ; ಕೆಲಸ ತೊರೆಯಲು ಅಥವಾ ಬೇರೆ ದೇಶಕ್ಕೆ ವರ್ಗವಾಗಲು ಸೂಚನೆ

ಸ್ಯಾಪ್​ನ ಪೂರ್ಣ ಹೆಸರು, ಅದರ ಉತ್ಪನ್ನಗಳು…

ಸ್ಯಾಪ್ ಅಥವಾ SAP ಪೂರ್ಣ ಹೆಸರು ಸಿಸ್ಟಮ್ಸ್, ಅಪ್ಲಿಕೇಶನ್ಸ್ ಮತ್ತು ಪ್ರಾಡಕ್ಟ್ಸ್ (Systems, Applications and Products in Data Processing). ಇದು ಜರ್ಮನ್ ಕಂಪನಿಯಾಗಿದ್ದು ಅದರಲ್ಲಿ ಪೂರ್ಣ ಹೆಸರು Systemanalyse Programmentwicklung ಎಂದಿದೆ.

ಸ್ಯಾಪ್ ಕಂಪನಿಯು ಸಾಫ್ಟ್​ವೇರ್ ಸಲ್ಯೂಶನ್ಸ್ ಒದಗಿಸುತ್ತದೆ. ಇದರ ERP ಬಹಳ ಜನಪ್ರಿಯವಾಗಿರುವ ಮತ್ತು ಕಾರ್ಪೊರೇಟ್ ಕಂಪನಿಗಳಲ್ಲಿ ಹೆಚ್ಚಾಗಿ ಬಳಕೆಯಾಗಿರುವ ಎಂಟರ್​ಪ್ರೈಸ್ ಸಲ್ಯೂಶನ್ ಸಾಫ್ಟ್​ವೇರ್ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್