‘ಮಿಸ್ಟರ್ ಜಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ; ನಂದಿನಿ ಪಾತ್ರದ ಬಗ್ಗೆ ಮಾಹಿತಿ
ಸಿನಿಮಾಗಳ ಆಯ್ಕೆ ಕುರಿತು ಸ್ಪಷ್ಟನೆ ನೀಡಿರುವ ನಟಿ ತಪಸ್ವಿನಿ ಪೂಣಚ್ಚ, ಕಥೆ ಹಾಗೂ ಪಾತ್ರಗಳಿಗೆ ಪ್ರಾಮುಖ್ಯತೆ ನೀಡುತ್ತೇನೆ ಎಂದಿದ್ದಾರೆ. 60ಕ್ಕೂ ಹೆಚ್ಚು ಚಿತ್ರಗಳನ್ನು ನಿರಾಕರಿಸಿದ ಕುರಿತು ಮಾತನಾಡಿದ ಅವರು, ಮಿಸ್ಟರ್ ಜಾಕ್ ಚಿತ್ರದ ಮೂಲಕ ನಂದಿನಿಯಾಗಿ ಪ್ರೇಕ್ಷಕರನ್ನು ತಲುಪಲು ಸಿದ್ಧರಾಗಿದ್ದಾರೆ. ಕನ್ನಡವನ್ನು ಪ್ರತಿನಿಧಿಸುವ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಿತ್ರರಂಗದ ನಟಿ ತಪಸ್ವಿನಿ ಪೂಣಚ್ಚ ಅವರು ತಮ್ಮ ಸಿನಿಮಾ ಆಯ್ಕೆಗಳ ಬಗ್ಗೆ ಅಭಿಮಾನಿಗಳಲ್ಲಿ ಇರುವ ಕೆಲವು ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಹಿಂದೆ 60ಕ್ಕೂ ಹೆಚ್ಚು ಚಿತ್ರಗಳನ್ನು ನಿರಾಕರಿಸಿದ ಕುರಿತು ಮಾತನಾಡಿದ್ದ ಅವರು, ‘ನಾನು ಹೇಳಿದ್ದು ಆ ಇಂಟೆನ್ಶನ್‌ನಲ್ಲಿ ಅಲ್ಲ, ಏನೇ ಹೇಳಿದ್ರೂ ಪ್ರಾಬ್ಲಂ ಸರ್’ ಎಂದಿದ್ದಾರೆ.
ಪ್ರತಿ ಚಿತ್ರದಲ್ಲೂ ಪಾತ್ರದ ಗುಣಮಟ್ಟ ಮತ್ತು ಅದು ನೀಡುವ ಸಂದೇಶಕ್ಕೆ ತಾನು ಪ್ರಾಮುಖ್ಯತೆ ನೀಡುತ್ತೇನೆ ಎಂದು ತಪಸ್ವಿನಿ ಹೇಳಿದ್ದಾರೆ. ಕೇವಲ ಹಣಕ್ಕಾಗಿ ಅಥವಾ ಹೆಚ್ಚಿನ ಸಂಖ್ಯೆಯ ಚಿತ್ರಗಳನ್ನು ಮಾಡುವುದಕ್ಕಿಂತ ಉತ್ತಮ ಕಥಾಹಂದರ ಇರುವ, ಪ್ರೇಕ್ಷಕರನ್ನು ತಲುಪುವ ಒಂದು ಸಿನಿಮಾವನ್ನು ಮಾಡುವುದು ನನ್ನ ಆಶಯ ಎಂದಿದ್ದಾರೆ.
ಡಿಸೆಂಬರ್ 4ರಂದು ತೆರೆಕಾಣಲಿರುವ ಮಿಸ್ಟರ್ ಜಾಕ್ ಚಿತ್ರದಲ್ಲಿ ತಪಸ್ವಿನಿ ಪೂಣಚ್ಚ ನಂದಿನಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರದ ಮೂಲಕ ಪ್ರೇಕ್ಷಕರಿಗೆ ವಿಶೇಷ ಸಂದೇಶ ನೀಡುವ ಭರವಸೆ ನೀಡಿದ್ದಾರೆ. ‘ನಾನು ಸೌಂದರ್ಯದಿಂದ ನಿಮ್ಮನ್ನು ಗೆಲ್ಲಲು ಬಂದಿಲ್ಲ, ಡಿ-ಗ್ಲಾಮ್ ಲುಕ್‌ನಲ್ಲಿ ಆರ್ಥೋಡಾಕ್ಸ್ ಟೀಚರ್ ಪಾತ್ರ ನಿರ್ವಹಿಸಿದ್ದೇನೆ. ನಿಮ್ಮ ಸುತ್ತಮುತ್ತ ನಡೆಯುವ ಕಥೆಯಾಗಿರುವುದರಿಂದ ಇದು ಪ್ರೇಕ್ಷಕರಿಗೆ ಕನೆಕ್ಟ್ ಆಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಮಷಿನ್ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ

