AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷೇತ್ರ ಮರುವಿಂಗಡಣೆಗೆ ಕೇಂದ್ರದ ಹೊಸ ಸೂತ್ರ: ಲೋಕಸಭೆಯಲ್ಲಿ ಶೇ.50ರಷ್ಟು ಸ್ಥಾನ ಹೆಚ್ಚಳಕ್ಕೆ ಕೇಂದ್ರ ಅಸ್ತು, 2051ರವರೆಗೆ ಈ ಹೊಸ ನಿಯಮ

ಕೇಂದ್ರ ಸರ್ಕಾರ ಲೋಕಸಭೆ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಿದೆ, ಇದರಿಂದ ಸುಮಾರು 815 ಸ್ಥಾನಗಳಿಗೆ ಏರಿಕೆಯಾಗಬಹುದು. ರಾಜ್ಯಗಳ ನಡುವಿನ ಪ್ರಸ್ತುತ ಸ್ಥಾನ ಹಂಚಿಕೆ ಈ ಹೊಸ ಅನುಪಾತವು 2051ರವರೆಗೆ ಮುಂದುವರಿಯಲಿದೆ. ಮೋದಿ ಸಂಪುಟವು ಇದಕ್ಕೆ ಅನುಮೋದನೆ ನೀಡಿದ್ದು, ವಿಶೇಷ ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ. ಇದು ದಕ್ಷಿಣ ಭಾರತದ ರಾಜ್ಯಗಳ ಆತಂಕವನ್ನು ನಿವಾರಿಸಲು ಸಹಕಾರಿಯಾಗಲಿದೆ.

ಕ್ಷೇತ್ರ ಮರುವಿಂಗಡಣೆಗೆ ಕೇಂದ್ರದ ಹೊಸ ಸೂತ್ರ: ಲೋಕಸಭೆಯಲ್ಲಿ ಶೇ.50ರಷ್ಟು ಸ್ಥಾನ ಹೆಚ್ಚಳಕ್ಕೆ ಕೇಂದ್ರ ಅಸ್ತು, 2051ರವರೆಗೆ ಈ ಹೊಸ ನಿಯಮ
ನರೇಂದ್ರ ಮೋದಿ
ನಯನಾ ರಾಜೀವ್
|

Updated on:Nov 27, 2026 | 3:13 PM

Share

ನವದೆಹಲಿ, ನವೆಂಬರ್ 27: ಲೋಕಸಭೆಯ ಸ್ಥಾನಗಳ ಸಂಖ್ಯೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈಗಿರುವ 543 ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸಿ ಸುಮಾರು 815ಕ್ಕೆ ಏರಿಸಲು ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದೆ. ಇದರ ಜೊತೆಗೆ ರಾಜ್ಯಗಳ ನಡುವಿನ ಸ್ಥಾನ ಹಂಚಿಕೆಯಲ್ಲಿನ ಈ ಹೊಸ ಅನುಪಾತವನ್ನೇ 2051ರವರೆಗೆ ಕಾಯ್ದಿರಿಸಲು ಕೇಂದ್ರ ಚಿಂತನೆ ನಡೆಸಿದೆ. ಈ ಬಗ್ಗೆ ನವೆಂಬರ್ 30ರಿಂದ ಆರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.

ಪ್ರಸ್ತುತ ಲೋಕಸಭೆಯಲ್ಲಿ 543 ಚುನಾಯಿತ ಸ್ಥಾನಗಳಿವೆ. ಕೇಂದ್ರ ಸರ್ಕಾರದ ಹೊಸ ಪ್ರಸ್ತಾವನೆಯ ಪ್ರಕಾರ, ಪ್ರತಿ ರಾಜ್ಯದಲ್ಲೂ ಈಗಿರುವ ಸ್ಥಾನಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದರಿಂದ ಲೋಕಸಭೆಯ ಒಟ್ಟು ಸ್ಥಾನಗಳು ಸುಮಾರು 815ಕ್ಕೆ ಏರಿಕೆಯಾಗಬಹುದು.

2051ರವರೆಗೆ ಸ್ಥಾನಗಳ ಹಂಚಿಕೆ ಬದಲಾವಣೆ ಇಲ್ಲ

ರಾಜ್ಯಗಳ ನಡುವೆ ಹೊಸದಾಗಿ ಸೃಷ್ಟಿಸಿರುವ ಲೋಕಸಭಾ ಸ್ಥಾನಗಳ ಹಂಚಿಕೆಯನ್ನು ಮುಂದಿನ 25 ವರ್ಷಗಳವರೆಗೆ ಮುಂದುವರೆಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದಕ್ಕಾಗಿ 1971ರ ಜನಗಣತಿಯನ್ನು ಆಧಾರವಾಗಿ ಬಳಸುವ ಪ್ರಸ್ತಾವನೆ ಇದೆ. ಅಂದರೆ, ರಾಜ್ಯಗಳ ನಡುವಿನ ಸ್ಥಾನಗಳ ಅನುಪಾತವನ್ನು 2051ರವರೆಗೆ ಕಾಯ್ದಿರಿಸಲು ಯೋಜಿಸಲಾಗಿದೆ.

ದಕ್ಷಿಣ ಭಾರತದ ರಾಜ್ಯಗಳಿಗೆ ಏಕೆ ಮುಖ್ಯ?

ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾಗಿವೆ. ಆದರೆ ಜನಸಂಖ್ಯೆ ಆಧರಿಸಿ ಕ್ಷೇತ್ರ ಮರುವಿಂಗಡಣೆ ಮಾಡಿದರೆ  ಜನಸಂಖ್ಯೆ ಹೆಚ್ಚಿರುವ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಸ್ಥಾನಗಳು ಸಿಗಬಹುದು. ಇದರಿಂದ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗುವ ಆತಂಕವಿದ್ದ ಕಾರಣ ಈ ಹಿಂದೆ ಇದನ್ನು ಕೈಬಿಡಲಾಗಿತ್ತು. ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದವು. ಈ ಆತಂಕವನ್ನು ನಿವಾರಿಸಲು ಎಲ್ಲ ರಾಜ್ಯಗಳಿಗೂ ಸಮಾನವಾಗಿ ಶೇ.50ರಷ್ಟು ಸ್ಥಾನ ಹೆಚ್ಚಿಸುವ ಪ್ರಸ್ತಾವನೆ ಮುಂದಿಡಲಾಗಿದೆ.

ಇದನ್ನೂ ಓದಿ: ಡಿಲಿಮಿಟೇಶನ್ ಮಸೂದೆಗೆ ವೈಎಸ್‌ಆರ್‌ಸಿಪಿ ಬೆಂಬಲ, ದಕ್ಷಿಣ ರಾಜ್ಯಗಳ ಹಿತಾಸಕ್ತಿ ಕಾಪಾಡಲು ಷರತ್ತು

ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ

ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡುವ ಕಾಯ್ದೆ ಈಗಾಗಲೇ ಅಂಗೀಕಾರವಾಗಿದೆ. ಆದರೆ ಕ್ಷೇತ್ರ ಮರುವಿಂಗಡಣೆ ಮತ್ತು ಜನಗಣತಿ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಜಾರಿಗೆ ಬರಬೇಕಿದೆ. ಈಗ 2029ರ ಲೋಕಸಭಾ ಚುನಾವಣೆಯಿಂದಲೇ ಮಹಿಳಾ ಮೀಸಲಾತಿ ಜಾರಿಗೆ ತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಈಗಿನ ಬೆಳವಣಿಗೆಯನ್ನು ಗಮನಿಸಿದರೆ ಈ ಕ್ಷೇತ್ರ ಮರುವಿಂಗಡಣೆಯಲ್ಲಿ ಶೇ.50ರಷ್ಟು ಸ್ಥಾನಗಳು ಏರಿಕೆಯಾಗುವಾಗ ಮಹಿಳೆಯರಿಗೂ ಅದರಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗುವ ನಿರೀಕ್ಷೆ ಇದೆ.

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಸೂದೆ

ನವೆಂಬರ್ 30ರಿಂದ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಮಸೂದೆಗಳನ್ನು ಮಂಡಿಸುವ ಸಾಧ್ಯತೆಯಿದೆ. ಕೇಂದ್ರ ಸಚಿವ ಸಂಪುಟ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದರೂ, ಸಂಸತ್ತಿನ ಅನುಮೋದನೆ ದೊರೆತ ಬಳಿಕವಷ್ಟೇ ಅದು ಕಾನೂನಾಗಲಿದೆ.

ಕೇಂದ್ರ ಸರ್ಕಾರ ಇದೇ ರೀತಿಯ ಮಸೂದೆಯನ್ನು 2026ರ ಏಪ್ರಿಲ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಿತ್ತು. ಆದರೆ ಲೋಕಸಭೆಯಲ್ಲಿ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಸಿಗದ ಕಾರಣ ಮಸೂದೆ ಅಂಗೀಕಾರವಾಗಿರಲಿಲ್ಲ. ಆಗ 528 ಸದಸ್ಯರು ಮತದಾನದಲ್ಲಿ ಭಾಗವಹಿಸಿದ್ದು, ಮಸೂದೆಯ ಪರವಾಗಿ 298 ಮತಗಳು ಮತ್ತು ವಿರುದ್ಧವಾಗಿ 230 ಮತಗಳು ಬಂದಿದ್ದವು. ಅಂಗೀಕಾರಕ್ಕೆ 352 ಮತಗಳ ಅಗತ್ಯವಿತ್ತು. ಈ ಬಾರಿ ರಾಜ್ಯಗಳ ನಡುವಿನ ಸ್ಥಾನ ಹಂಚಿಕೆಯ ಅನುಪಾತವನ್ನು ಮುಂದಿನ 25 ವರ್ಷಗಳವರೆಗೆ ಉಳಿಸುವುದಾಗಿ ಮಸೂದೆಯಲ್ಲಿ ಸ್ಪಷ್ಟವಾಗಿ ಸೇರಿಸುವ ಮೂಲಕ ಪ್ರತಿಪಕ್ಷಗಳ ಆಕ್ಷೇಪಗಳನ್ನು ನಿವಾರಿಸಲು ಕೇಂದ್ರ ಪ್ರಯತ್ನಿಸುತ್ತಿದೆ.

ನವೆಂಬರ್ 30ರಂದು ಲೋಕಸಭೆ ಮತ್ತು ಡಿಸೆಂಬರ್ 2ರಂದು ರಾಜ್ಯಸಭೆಯ ಕಲಾಪ ಆರಂಭವಾಗಲಿದ್ದು, ಡಿಸೆಂಬರ್ 3ರಂದು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಈ ಅಧಿವೇಶನದಲ್ಲಿ ತಿದ್ದುಪಡಿ ಮಾಡಲಾದ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಮಸೂದೆಗಳನ್ನು ಮಂಡಿಸುವ ಸಾಧ್ಯತೆಯಿದೆ. ಮಸೂದೆಗೆ ಸಂಸತ್ತಿನ ಅನುಮೋದನೆ ಸಿಕ್ಕರೆ ಮಾತ್ರ ಮುಂದಿನ ಹಂತದ ಪ್ರಕ್ರಿಯೆ ಆರಂಭವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:12 pm, Fri, 27 November 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್