AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಕ್ತರ ಮೂಢನಂಬಿಕೆಗೆ ಕಲುಷಿತಗೊಂಡ ಜೀವನದಿ: ಭೀಮಾನದಿಯಲ್ಲಿ ಸ್ನಾನ ಮಾಡಿ ಸಾವಿರಾರು ಸೀರೆ, ಬಳೆ, ಹಳೆ ಪಾದುಕೆ ವಿಸರ್ಜಿಸಿದ ಮಹಿಳೆಯರು

ಯಾದಗಿರಿಯ ಭೀಮಾನದಿ ಮೂಢನಂಬಿಕೆ ಆಚರಣೆಗಳಿಂದ ಸಂಪೂರ್ಣ ಕಲುಷಿತಗೊಂಡಿದೆ. ಯಲ್ಲಮ್ಮ ಭಕ್ತರು ಸ್ನಾನ ಮಾಡಿ ಹಳೆಯ ಸೀರೆ, ಚಪ್ಪಲಿ, ಅಡುಗೆ ಎಣ್ಣೆಯನ್ನು ನದಿಗೆ ಎಸೆಯುತ್ತಿರುವುದರಿಂದ ನದಿ ಕಸದ ರಾಶಿಯಾಗಿದೆ. ಇದು ಯಾದಗಿರಿ ನಗರದ ಏಕೈಕ ಕುಡಿಯುವ ನೀರಿನ ಮೂಲವಾಗಿದ್ದು, ನೀರು ವಿಷವಾಗಿ ಪರಿಣಮಿಸಿದೆ. ಸಾಂಕ್ರಾಮಿಕ ರೋಗಗಳ ಭೀತಿಯಿದ್ದು, ಜಿಲ್ಲಾಡಳಿತದ ತುರ್ತು ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಭಕ್ತರ ಮೂಢನಂಬಿಕೆಗೆ ಕಲುಷಿತಗೊಂಡ ಜೀವನದಿ: ಭೀಮಾನದಿಯಲ್ಲಿ ಸ್ನಾನ ಮಾಡಿ ಸಾವಿರಾರು ಸೀರೆ, ಬಳೆ, ಹಳೆ ಪಾದುಕೆ ವಿಸರ್ಜಿಸಿದ ಮಹಿಳೆಯರು
ಭೀಮಾನದಿ ಮಾಲಿನ್ಯImage Credit source: Tv9 kannada
ಅಮೀನ್​ ಸಾಬ್​
| Edited By: |

Updated on: Nov 27, 2026 | 3:07 PM

Share

ಯಾದಗಿರಿ, ನ.27: ಇಡೀ ಯಾದಗಿರಿ ನಗರದ ಜನತೆಗೆ ನಿತ್ಯ ಕುಡಿಯುವ ನೀರಿನ ಏಕೈಕ ಮೂಲವಾಗಿರುವ ಭೀಮಾನದಿ ಮೂಢನಂಬಿಕೆಯ ಆಚರಣೆಗಳಿಂದಾಗಿ ಸಂಪೂರ್ಣ ಕಲುಷಿತಗೊಂಡಿದೆ. ನಗರದ ಹೊರಭಾಗದಲ್ಲಿರುವ ಭೀಮಾನದಿಯಲ್ಲಿ ಇಂದು (ನವೆಂಬರ್ 27) ಕೂಡ ಯಲ್ಲಮ್ಮ ದೇವಿ ಭಕ್ತರು ಸ್ನಾನ ಹಾಗೂ ಪೂಜೆ ನೆರವೇರಿಸಿ, ಸಾವಿರಾರು ಹಳೆಯ ಸೀರೆಗಳು, ಬಳೆ, ಹಳೆ ಪಾದುಕೆ ಮತ್ತು ಪೂಜಾ ಸಾಮಗ್ರಿಗಳನ್ನು ನದಿ ನೀರಿಗೆ ಎಸೆದು ಹೋಗಿರುವುದರಿಂದ ನದಿ ಒಡಲು ಕಸದ ವಿಲೇವಾರಿ ಘಟಕದಂತಾಗಿ ಮಾರ್ಪಟ್ಟಿದೆ.

ಸೀರೆ, ಹಳೆ ಚಪ್ಪಲಿ, ಅಡುಗೆ ಎಣ್ಣೆ ವಿಸರ್ಜನೆ; ನದಿ ನೀರು ಸಂಪೂರ್ಣ ಮಲಿನ

ಇಂದಿನ ಶುಕ್ರವಾರವೂ ಸೇರಿದಂತೆ ಕಳೆದ ಎರಡು ಮಂಗಳವಾರ ಮತ್ತು ಎರಡು ಶುಕ್ರವಾರಗಳಂದು ಸಾವಿರಾರು ಮಹಿಳೆಯರು ಭೀಮಾನದಿಗೆ ಆಗಮಿಸಿ ಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಳೆದ ಬಾರಿಗಿಂತ ಇಂದು ಭಕ್ತರ ಸಂಖ್ಯೆ ಸ್ವಲ್ಪ ಕಡಿಮೆಯಿದ್ದರೂ, ಕಳೆದ ಮಂಗಳವಾರ ಮತ್ತು ಇಂದಿನ ಪೂಜೆಯ ಪರಿಣಾಮವಾಗಿ ನದಿಯಲ್ಲಿ ಸಾವಿರಾರು ಸೀರೆಗಳು ಮತ್ತು ಹಳೆಯ ಬಟ್ಟೆಗಳ ರಾಶಿಯೇ ಬಿದ್ದಿದೆ.

ನದಿಯಲ್ಲಿ ಮಿಂದೆದ್ದ ಮಹಿಳೆಯರು ತಮ್ಮ ಮೈಮೇಲಿದ್ದ ಹಳೆಯ ಬಟ್ಟೆ, ಬಳೆಗಳ ಜೊತೆಗೆ ಹಳೆಯ ಪಾದುಕೆಗಳನ್ನು (ಚಪ್ಪಲಿ) ನದಿಯಲ್ಲೇ ಬಿಟ್ಟು ಹೊಸ ಪಾದುಕೆಗಳನ್ನು ಧರಿಸಿ ತೆರಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಹೂವು, ಹಣ್ಣು ಮತ್ತು ಅಡುಗೆ ಎಣ್ಣೆಯನ್ನೂ ನೇರವಾಗಿ ನದಿ ನೀರಿಗೆ ವಿಸರ್ಜಿಸಿರುವುದರಿಂದ ನೀರಿನ ಮೇಲೆ ಎಣ್ಣೆಯ ಪದರ ತೇಲುತ್ತಿದ್ದು, ಕುಡಿಯುವ ನೀರು ಸಂಪೂರ್ಣ ಹಾಳಾಗಿದೆ.

ಇದನ್ನೂ ಓದಿ: ಯಲ್ಲಮ್ಮನ ಪಾದುಕೆ ಸರ್ಪ ನುಂಗಿದ ವದಂತಿ: ಭೀಮಾ ನದಿ ಮತ್ತೆ ಕಲುಷಿತ, 25 ಲೋಡ್ ಬಟ್ಟೆ ತೆರವು

25 ಟ್ರಾಕ್ಟರ್ ತ್ಯಾಜ್ಯ ತೆರವುಗೊಳಿಸಿದ್ದರೂ ನಿಲ್ಲದ ಮಾಲಿನ್ಯ; ನಗರವಾಸಿಗಳಲ್ಲಿ ಆತಂಕ

ಇದಕ್ಕೂ ಮೊದಲು ನದಿಯಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ನಗರಸಭೆ ಪೌರ ಕಾರ್ಮಿಕರು ಸ್ವಚ್ಛಗೊಳಿಸಿ, ಸುಮಾರು 25 ಟ್ರಾಕ್ಟರ್‌ಗಳಷ್ಟು ಕಸ ಹಾಗೂ ಹಳೆ ಬಟ್ಟೆಗಳನ್ನು ವಿಲೇವಾರಿ ಮಾಡಿದ್ದರು. ಆದರೆ ಕಳೆದ ಮಂಗಳವಾರ ಹಾಗೂ ಇಂದು ಪೌರ ಕಾರ್ಮಿಕರು ಸ್ವಚ್ಛತೆಗೆ ಬಾರದ ಕಾರಣ ನದಿಯಲ್ಲಿ ಮತ್ತೆ ಹತ್ತಾರು ಟ್ರಾಕ್ಟರ್‌ಗಳಷ್ಟು ತ್ಯಾಜ್ಯ ರಾಶಿ ಬಿದ್ದಿದೆ.

ಯಾದಗಿರಿ ನಗರದ ಸಮಸ್ತ ಜನತೆಗೆ ಕುಡಿಯುವ ನೀರು ಪೂರೈಕೆಯಾಗುವುದು ಇದೇ ಭೀಮಾನದಿಯಿಂದ. ಜನರು ನಿತ್ಯ ಸೇವಿಸುವ ನೀರಿನ ಮೂಲಕ್ಕೆ ಈ ರೀತಿ ಬಟ್ಟೆ, ಚಪ್ಪಲಿ, ಎಣ್ಣೆ ಮತ್ತು ತ್ಯಾಜ್ಯವನ್ನು ಎಸೆಯುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದ್ದು, ಜಿಲ್ಲಾಡಳಿತ ಮತ್ತು ನಗರಸಭೆ ತಕ್ಷಣವೇ ಕಠಿಣ ಕ್ರಮ ಕೈಗೊಂಡು ನದಿಯನ್ನು ರಕ್ಷಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಮೀನ್​ ಸಾಬ್​
ಅಮೀನ್​ ಸಾಬ್​

ಅಮೀನ್​ ಸಾಬ್​ ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದಾರೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿಸಿದ್ದಾರೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಹವ್ಯಾಸ ಕ್ರಿಕೆಟ್ ಆಡುವುದು, ಮಾನವೀಯ ಮೌಲ್ಯಗಳುಳ್ಳ ಸುದ್ದಿಗಳನ್ನ ವರದಿ ಮಾಡುವುದು.

Read More
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್
ಇಂದು ರಾಶಿಯವರ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತವೆ
ಇಂದು ರಾಶಿಯವರ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತವೆ