AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಳ್ಳುತ್ತೇವೆ, ಪ್ರತಿಭಟನೆ ಕೈಬಿಡಿ’: ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿಕೆಶಿ ಮನವಿ

ಫ್ರೀಡಂ ಪಾರ್ಕ್‌ನಲ್ಲಿ 11ನೇ ದಿನಕ್ಕೆ ಕಾಲಿಟ್ಟಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕೈಬಿಡುವಂತೆ ಸಿಎಂ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಸೇವೆ ಮಾಡಬೇಕು ಎಂದು ನೀವು ಮುಂದಕ್ಕೆ ಬಂದಿದ್ದೀರಿ. ನೀವು ಹೋರಾಟ ಮಾಡಬೇಕು ಎಂದು ಬಂದಿಲ್ಲ, ಹೋರಾಟ ನಿಮ್ಮದಲ್ಲ. ನೀವು ಪಟ್ಟು ಹಿಡಿದು ಸಹಿ ಹಾಕಿ ಅಂದ್ರೆ ಅದು ಸಾಧ್ಯವಿಲ್ಲ ಎಂದವರು ತಿಳಿಸಿದ್ದಾರೆ. ಆದರೆ, ಲಿಖಿತ ಭರವಸೆ ನೀಡದ ಕಾರಣ ಹೋರಾಟ ಮುಂದುವರಿಸುವುದಾಗಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

'ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಳ್ಳುತ್ತೇವೆ, ಪ್ರತಿಭಟನೆ ಕೈಬಿಡಿ': ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿಕೆಶಿ ಮನವಿ
ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿಕೆಶಿ ಮನವಿ
ಈರಣ್ಣಾ ಬಸವಾ
| Edited By: |

Updated on: Nov 27, 2026 | 2:13 PM

Share

ಬೆಂಗಳೂರು, ನವೆಂಬರ್​​ 27: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ 11ನೇ ದಿನಕ್ಕೆ ತಲುಪಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್​​, ಪ್ರಣಾಳಿಕೆಯಲ್ಲಿ ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ. ಆಶಾ ಕಾರ್ಯಕರ್ತೆಯರ ಕಷ್ಟದ ಬಗ್ಗೆ ನನಗೆ ಅರಿವಿದ್ದು, ಹೋರಾಟವನ್ನು ಹಿಂಪಡೆಯುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ. ರಾಜಕಾರಣ ಮಾಡುವವರು ರಾಜಕಾರಣ ಮಾಡುತ್ತಾರೆ. ಆಶಾ ಕಾರ್ಯಕರ್ತೆಯರು ನನ್ನ ಸಹೋದರಿಯರಿದ್ದಂತೆ ಎಂದವರು ತಿಳಿಸಿದ್ದಾರೆ.

‘ಎನ್​ಡಿಎ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ’

ಆಶಾ ಕಾರ್ಯಕರ್ತೆಯರ ಹೋರಾಟ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಟೀಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿರುವ ಸಿಎಂ, ಈ ಕುರಿತ ಎನ್​ಡಿಎ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಅವರಿಗೆ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ. ಎನ್​ಡಿಎ ನಾಯಕರು ಈ ಬಗ್ಗೆ ಧ್ವನಿ ಎತ್ತಿ ಕೇಂದ್ರದಿಂದ ಕೊಡಿಸಬೇಕು. ಆಶಾ ಕಾರ್ಯಕರ್ತೆಯರ ಮೇಲೆ ಕನಿಕರ ಇದ್ದರೆ, ಬಿಜೆಪಿಯವರು ಕೇಂದ್ರದಿಂದ ಹಣ ಕೊಡಿಸುವ ಕೆಲಸ ಮಾಡಲಿ. ಹೀಗಾಗಿ ಹೆಚ್​.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿಯವರಿಗೆ ಮಾತಾಡೋದಕ್ಕೆ ಹಕ್ಕಿಲ್ಲ. ಆಶಾ ಕಾರ್ಯಕರ್ತೆಯರ ಸಂಬಳವನ್ನು ನಾವೇ ಹೆಚ್ಚಳ ಮಾಡಿದ್ದೇವೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: “ಹಳ್ಳಿಗಳಲ್ಲಿ ಮನೆ ಹೆರಿಗೆ, ಸಾವುಗಳಾಗುತ್ತಿವೆ, ವರದಿ ಕೊಡ್ತೇವೆ”:ಯು.ಟಿ. ಖಾದರ್ ಹೇಳಿಕೆಗೆ ನಾಗಲಕ್ಷ್ಮೀ ಕಿಡಿ

‘ಹಲವು ಆಶಾ ಕಾರ್ಯಕರ್ತೆಯರು ಸಂದೇಶ ಕಳಿಸಿದ್ದಾರೆ’

ನಿಮ್ಮ ಮೇಲೆ ನಮಗೆ ಭರವಸೆ ಇದೆ ಎಂದು ನನಗೆ ಹಲವು ಆಶಾ ಕಾರ್ಯಕರ್ತೆಯರು ಸಂದೇಶ ಕಳಿಸಿದ್ದಾರೆ. ನಾವು ಮತ್ತೆ ಕೆಲಸಕ್ಕೆ ಹೋಗಲು ಸಿದ್ಧವಿದ್ದೇವೆ ಅಂತ ಹೇಳಿದ್ದಾರೆ. ನಾನು ಅದನ್ನೆಲ್ಲಾ ಬಹಿರಂಗ ಮಾಡಿ ಒಡೆಯಲು ಹೋಗಲ್ಲ. ಹಿಂದೆ ಸಿದ್ದರಾಮಯ್ಯ, ದಿನೇಶ್​ ಏನು ಹೇಳಿದ್ರು ಅಂತ ಗೊತ್ತಿದೆ. ನನಗೆ ಇದೆಲ್ಲದರ ಬಗ್ಗೆ ಅರಿವು ಇದೆ. ಸೇವೆ ಮಾಡಬೇಕು ಎಂದು ನೀವು ಮುಂದಕ್ಕೆ ಬಂದಿದ್ದೀರಿ. ನೀವು ಹೋರಾಟ ಮಾಡಬೇಕು ಎಂದು ಬಂದಿಲ್ಲ, ಹೋರಾಟ ನಿಮ್ಮದಲ್ಲ. ನೀವು ಪಟ್ಟು ಹಿಡಿದು ಸಹಿ ಹಾಕಿ ಅಂದ್ರೆ ಅದು ಸಾಧ್ಯವಿಲ್ಲ ಎಂದವರು ತಿಳಿಸಿದ್ದಾರೆ.

‘ನಿಮಗೆ ಸಂದೇಶ ಕಳುಹಿಸಿದ್ದು ಯಾರೆಂದು ಹೇಳಿ’

ಆದರೆ ಸಿಎಂ ಹೇಳಿಕೆಗೆ ಕೌಂಟರ್​​ ಕೊಟ್ಟಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಸೋಮಶೇಖರ್​​, ಎಷ್ಟು ಜನರ ಬಳಿ ಮುಖ್ಯ ಮಂತ್ರಿ ನಂಬರ್ ಇರುತ್ತೆ? ನಮ್ಮ ಬಳಿಯೇ ಸಿಎಂ ಪೋನ್ ನಂಬರ್‌ ಇಲ್ಲ. ಯಾವ ಆಶಾ ಕಾರ್ಯಕರ್ತೆ ನಿಮಗೆ ಕಾಲ್, ಮೇಸೆಜ್ ಮಾಡಿದ್ದಾರೆ ಹೇಳಿ ಎಂದು ಆಗ್ರಹಿಸಿದ್ದಾರೆ. ನಮ್ಮ ಬೇಡಿಕೆ ವಿಚಾರವಾಗಿ ಕೇಂದ್ರಕ್ಕೂ ಪತ್ರ ಬರೆದಿದ್ದೇವೆ. ಸಾಮಾಜಿಕ ಹೋರಾಟದ ದುರುಪಯೋಗಕ್ಕೆ ನಾವು ಆಸ್ಪದ ಕೊಟ್ಟಿಲ್ಲ. ಹೀಗಾಗಿ ಯಾವುದೇ ಪಕ್ಷಕ್ಕೂ ನಾವು ವೇದಿಕೆ ನೀಡಿಲ್ಲ. ಖಚಿತವಾಗಿ, ಲಿಖಿತವಾಗಿ ಏನೂ ಹೇಳಿಲ್ಲ. ಸರ್ಕಾರ ಏನು ಕೊಡುತ್ತೆ ಹೇಳೋಕೆ ಇವರು ರೆಡಿ ಇಲ್ಲ. ಹೀಗಾಗಿ ಹೋರಾಟ ಮುಂದುವರಿಯುತ್ತೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಈರಣ್ಣಾ ಬಸವಾ
ಈರಣ್ಣಾ ಬಸವಾ

ಈರಣ್ಣಾ ಬಸವಾ.. ಮೂಲತಃ ವಾಣಿಜ್ಯ ನಗರಿ ಹುಬ್ಬಳ್ಳಿಯವರು. ಈರಣ್ಣಾ ಬಿ.ಕಾಮ್ ಪದವೀಧರರಾಗಿದ್ದಾರೆ. ಕಂಟೆಂಟ್ ರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ನಂತರ ಕನ್ನಡದ ಬೇರೆ ಬೇರೆ ಸುದ್ದಿ ಮಾದ್ಯಮದಲ್ಲಿ ಸುಮಾರು ೬ ವರ್ಷ ಕಾಲ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಸತತ ಪರಿಶ್ರಮದಿಂದ ಟಿವಿ9 ಕನ್ನಡದಲ್ಲಿ ರಾಜಕೀಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಎಂ, ಡಿಸಿಎಂ ಬೀಟ್ ಜವಾಬ್ದಾರಿ ಇವರ ಮೇಲಿದ್ದು ಜನರಿಗೆ ಸಿಗಬೇಕಾದ ಅಮೂಲ್ಯ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಬರವಣಿಗೆ, ಕತೆ, ಕವನ ಇವರ ಆಸಕ್ತಿಯ ಕ್ಷೇತ್ರ.

Read More
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್
ಇಂದು ರಾಶಿಯವರ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತವೆ
ಇಂದು ರಾಶಿಯವರ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತವೆ
ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ:ಕೊರಳಲ್ಲಿ ಅರಿಶಿಣ ಕೊಂಬು ಪತ್ತೆ
ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ:ಕೊರಳಲ್ಲಿ ಅರಿಶಿಣ ಕೊಂಬು ಪತ್ತೆ
ಆಶಾ ಕಾರ್ಯಕರ್ತೆಯರ 2ನೇ ಸುತ್ತಿನ ಸಭೆಯೂ ವಿಫಲ: ಶುಕ್ರವಾರದ ಸಭೆಯತ್ತ ಚಿತ್ತ
ಆಶಾ ಕಾರ್ಯಕರ್ತೆಯರ 2ನೇ ಸುತ್ತಿನ ಸಭೆಯೂ ವಿಫಲ: ಶುಕ್ರವಾರದ ಸಭೆಯತ್ತ ಚಿತ್ತ