AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯಮದ ಹೆಸರಲ್ಲಿ ವಂಚನೆ: 1.5 ಕೋಟಿ ಹೂಡಿಕೆ ಮಾಡಿ ಹಣ ಕಳೆದುಕೊಂಡ ತುಮಕೂರಿನ ಕುಟುಂಬ

ಬೆಂಗಳೂರಿನ ಕೆಂಗೇರಿಯ ಪೆಟ್ರೋಲ್ ಬಂಕ್‌ನಲ್ಲಿ ಪಾಲುದಾರಿಕೆ ನೀಡುವುದಾಗಿ ನಂಬಿಸಿ ತುಮಕೂರಿನ ಕುಟುಂಬದಿಂದ 1.5 ಕೋಟಿ ರೂಪಾಯಿ ಹಾಗೂ 100 ಗ್ರಾಂ ಚಿನ್ನ ಪಡೆದು ವಂಚಿಸಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಬ್ರೋಕರ್​​ಗಳು ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಎಸ್ಕೇಪ್​​ ಆಗಿದ್ದಾನೆ ಎನ್ನಲಾಗಿದ್ದು, ತನಿಖೆ ವೇಳೆ ಹಲವು ಸ್ಫೋಟಕ ವಿಚಾರಗಳು ಬಯಲಾಗಿವೆ.

ಉದ್ಯಮದ ಹೆಸರಲ್ಲಿ ವಂಚನೆ: 1.5 ಕೋಟಿ ಹೂಡಿಕೆ ಮಾಡಿ ಹಣ ಕಳೆದುಕೊಂಡ ತುಮಕೂರಿನ ಕುಟುಂಬ
1.5 ಕೋಟಿ ಹೂಡಿಕೆ ಮಾಡಿ ಹಣ ಎಲ್ಲವನ್ನು ಕಳೆದುಕೊಂಡ ತುಮಕೂರಿನ ಕುಟುಂಬ
ಜಗದೀಶ ಬಿ.
| Edited By: |

Updated on:Nov 27, 2026 | 12:00 PM

Share

ತುಮಕೂರು, ನವೆಂಬರ್​​ 27: ಉದ್ಯಮದ ಪಾಲುದಾರಿಕೆ ಸಿಗುತ್ತೆಂದು ನಂಬಿ ಸಾಲ ಮಾಡಿ ಒಂದೂವರೆ ಕೋಟಿ ರೂಪಾಯಿ ಹೂಡಿಕೆ ಮಾಡಿದ್ದ ತುಮಕೂರಿನ (Tumakuru) ಕುಟುಂಬವೊಂದು ಈಗ ಎಲ್ಲವನ್ನೂ ಕಳೆದುಕೊಂಡು ಕಂಗಾಲಾಗಿದೆ. ಬೆಂಗಳೂರಿನ ಕೆಂಗೇರಿಯ ಪೆಟ್ರೋಲ್ ಬಂಕ್​​ನಲ್ಲಿ ಪಾಲುದಾರಿಕೆಗೆಂದು ತುಮಕೂರು ಮೂಲದ ಪ್ರಭು ಎಂಬವರು ಹಣ ಹೂಡಿಕೆ ಮಾಡಿದ್ದರು. ಆದರೆ ಮಧ್ಯವರ್ತಿಗಳ ಜೊತೆಗೂಡಿ ಹಣ ಮತ್ತು 100 ಗ್ರಾಂ ಚಿನ್ನ ಪಡೆದಿದ್ದ ಬೆಂಗಳೂರಿನ ಕುಟುಂಬ ವಂಚಿಸಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಓರ್ವ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಶೇ.30ರಷ್ಟು ಪಾಲುದಾರಿಕೆಯ ಆಮಿಷ

ವೀಣಾ ಮತ್ತು ಆಕೆಯ ಮಗ ನಮಿತ್​​ ಸಿಂಗ್​​ ಬಂಧಿತರಾಗಿದ್ದು, ಕಿಂಗ್​​ಪಿನ್ ಯಶವಂತ್ ಸಿಂಗ್ ನಾಪತ್ತೆಯಾಗಿದ್ದಾನೆ. ಪ್ರಕರಣ ಸಂಬಂಧ ಬ್ರೋಕರ್​​ಗಳಾದ ಉಮಾಪತಿ ಮತ್ತು ರಮೇಶ್ ಎಂಬವರನ್ನೂ ತುಮಕೂರು ನಗರದ ಹೊಸ ಬಡಾವಣೆ ಪೊಲೀಸರು ಅರೆಸ್ಟ್​​ ಮಾಡಿದ್ದಾರೆ. ಇದೇ ವರ್ಷ ಮೇ ತಿಂಗಳಲ್ಲಿ ತುಮಕೂರಿನ ನಿವಾಸಿ ಫ್ರಭು ಭೇಟಿಯಾಗಿದ್ದ ಮಧ್ಯವರ್ತಿಗಳು, ಎರಡು ಕೋಟಿಗೆ ಬೆಂಗಳೂರಿನ ಕೆಂಗೇರಿಯ ಖಾಸಗಿ ಪೆಟ್ರೋಲ್ ಬಂಕ್​​ನಲ್ಲಿ ಪಾಲುದಾರಿಕೆ ಸಿಗಲಿದೆ. ಹೂಡಿಕೆ ಮಾಡಿದರೆ ಪ್ರತಿ ತಿಂಗಳ ಲಾಭದ ಶೇ. 30ರಷ್ಟು ಹಣ ಬರುತ್ತದೆ ಎಂದು ಆಮಿಷ ತೋರಿಸಿದ್ದರು. ಇದನ್ನು ನಂಬಿ ಯಶವಂತ್​​ ಮತ್ತು ವೀಣಾರನ್ನು ಪ್ರಭು ಭೇಟಿಯಾಗಿದ್ದರು. ಈ ವೇಳೆ ಬಂಕ್​​ನ ಪಾಲುದಾರಿಕೆಯಲ್ಲಿ ಶೇಕಡ 70ರಷ್ಟು ನಮ್ಮದಿದ್ದರೆ ಉಳಿದ ಶೇಕಡಾ 30ನ್ನು ನಿಮಗೆ ನೀಡುತ್ತೇವೆ ಎಂದು ನಂಬಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ:  ‘ಟಿ-ಶರ್ಟ್ ಖರೀದಿಸಿದರೆ ಐಫೋನ್ ಉಚಿತ’: ವಂಚಕರ ಮಾತು ನಂಬಿ 1.6 ಲಕ್ಷ ಕಳೆದುಕೊಂಡ ಮಂಗಳೂರಿನ ಯುವಕ

ಹಣ ಕೇಳಿದರೆ ಬೆದರಿಕೆ ಆರೋಪ

ಮಗ ಮತ್ತು ಸೊಸೆ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಹಿನ್ನಲೆ ಹೂಡಿಕೆಯ ಬಗ್ಗೆ ಪ್ರಭು ಅವರು ಕೂಡ ಚಿಂತಿಸಿದ್ದರು. ಅದರಂತೆ ಮೊದಲಿಗೆ 100 ಗ್ರಾಂ ಚಿನ್ನ ನೀಡಿದ್ದ ಅವರು, ಬಳಿಕ ಹಂತ ಹಂತವಾಗಿ ಒಂದುವರೆ ಕೋಟಿ ಹಣವನ್ನು ಬ್ಯಾಂಕ್​​ ಮುಖಾಂತರ ವರ್ಗಾಯಿಸಿದ್ದರು. ಎಲ್ಲವೂ ಪಕ್ಕ ಎಂಬಂತೆ ದಾಖಲೆ, ಆಡಿಟರ್ ಜೊತೆ ಚರ್ಚೆ ಸೇರಿ ಪೆಟ್ರೋಲ್ ಬಂಕ್ ವಿಸಿಟ್ ಸಹ ನಡೆದಿತ್ತು. ನಂತರ ಯಶವಂತ್ ಹಾಗೂ ವೀಣಾ ದಂಪತಿ ಅಂಗ್ರಿಮೆಂಟ್ ಸಹ ಮಾಡಿಸಿದ್ದರು. ಈ ನಡುವೆ ಈ ಹಿಂದೆ ಅಶೋಕ್​​ ಎಂಬವರು ನಿಮ್ಮ ರೀತಿ ಬಂಕ್​​ ಪಾಲುದಾರರಾಗಿದ್ದರು ಎಂದು ವೀಣಾ ದಂಪತಿ ತಿಳಿಸಿದ್ದರು. ವೀಣಾ ದಂಪತಿ ಮಾತು ಕೇಳಿ ಗೊಂದಲಗೊಂಡ ಪ್ರಭು ಅವರು ಅಸಲಿ ಸಂಗತಿ ಪತ್ತೆಗೆ ಪ್ರಯತ್ನಿಸಿದ್ದಾರೆ. ಹೀಗಿರುವಾಗಲೇ ಪ್ರತಿ ತಿಂಗಳು ಲಾಭಾಂಶ ನೀಡೋದಾಗಿದಾಗಿ ಹೇಳಿದ್ದವರು ಅಲ್ಪ ಹಣ ನೀಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಬೆದರಿಸಿದ್ದಾರೆ ಎನ್ನಲಾಗಿದೆ.

ಇವೆಲ್ಲದರ ನಡುವೆಯೇ ಯಶವಂತ್​​ ಮತ್ತು ವೀಣಾ ದಂಪತಿಯಿಂದ ವಂಚನೆಗೊಳಗಾಗಿರುವ ಬಗ್ಗೆ ಆರ್. ಸಿ. ಜಯರಾಂ, ವಿಜಯಲಕ್ಷ್ಮೀ, ಭಗವಾನ್, ಶಿವಣ್ಣ, ಸಿದ್ದಲಿಂಗಯ್ಯ ಎಂಬವರು ಪೊಲೀಸ್ ದೂರು ನೀಡಿರುವ ಮಾಹಿತಿ ಸಿಕ್ಕಿದೆ. ವೀಣಾ ವಿರುದ್ಧ ಬೆಂಗಳೂರಿನ ಕಾಡುಗೊಂಡನಹಳ್ಳಿ, ಸುಬ್ರಹ್ಮಣ್ಯಪುರ, ಬಸವೇಶ್ವರ ನಗರ, ಸುಬ್ರಮಣ್ಯ ನಗರದಲ್ಲಿ ವಿವಿಧ ಮಾದರಿಯ ವಂಚನೆ ಪ್ರಕರಣ ದಾಖಲಾಗಿರೊದು ಗೊತ್ತಾಗಿದೆ. ಅಲ್ಲದೆ ಮೆಲ್ನೋಟಕ್ಕೆ ಪೆಟ್ರೋಲ್​​ ಬಂಕ್​​ಗೆ ನಾಲ್ವರು ಪಾಲುದಾರರಿದ್ದಾರೆ. ಆ ಪೈಕಿ ವೀಣಾ ಕೂಡ ಒಬ್ಬರು ಎಂಬ ವಿಚಾರವೂ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:26 am, Fri, 27 November 26

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್
ಇಂದು ರಾಶಿಯವರ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತವೆ
ಇಂದು ರಾಶಿಯವರ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತವೆ
ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ:ಕೊರಳಲ್ಲಿ ಅರಿಶಿಣ ಕೊಂಬು ಪತ್ತೆ
ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ:ಕೊರಳಲ್ಲಿ ಅರಿಶಿಣ ಕೊಂಬು ಪತ್ತೆ
ಆಶಾ ಕಾರ್ಯಕರ್ತೆಯರ 2ನೇ ಸುತ್ತಿನ ಸಭೆಯೂ ವಿಫಲ: ಶುಕ್ರವಾರದ ಸಭೆಯತ್ತ ಚಿತ್ತ
ಆಶಾ ಕಾರ್ಯಕರ್ತೆಯರ 2ನೇ ಸುತ್ತಿನ ಸಭೆಯೂ ವಿಫಲ: ಶುಕ್ರವಾರದ ಸಭೆಯತ್ತ ಚಿತ್ತ
ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟ ‘ಪವಿತ್ರ ಬಂಧನ’ದ ದೇವ್
ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟ ‘ಪವಿತ್ರ ಬಂಧನ’ದ ದೇವ್
ಬೆಳಗಾವಿ ಜಿಲ್ಲಾ ಕೋರ್ಟ್​ಗೆ ಬಾಂಬ್ ಬೆದರಿಕೆ
ಬೆಳಗಾವಿ ಜಿಲ್ಲಾ ಕೋರ್ಟ್​ಗೆ ಬಾಂಬ್ ಬೆದರಿಕೆ
ಹಿರಿಯೂರು ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ಹಿರಿಯೂರು ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ