ಈರಣ್ಣಾ ಬಸವಾ.. ಮೂಲತಃ ವಾಣಿಜ್ಯ ನಗರಿ ಹುಬ್ಬಳ್ಳಿಯವರು. ಈರಣ್ಣಾ ಬಿ.ಕಾಮ್ ಪದವೀಧರರಾಗಿದ್ದಾರೆ. ಕಂಟೆಂಟ್ ರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ನಂತರ ಕನ್ನಡದ ಬೇರೆ ಬೇರೆ ಸುದ್ದಿ ಮಾದ್ಯಮದಲ್ಲಿ ಸುಮಾರು ೬ ವರ್ಷ ಕಾಲ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಸತತ ಪರಿಶ್ರಮದಿಂದ ಟಿವಿ9 ಕನ್ನಡದಲ್ಲಿ ರಾಜಕೀಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಎಂ, ಡಿಸಿಎಂ ಬೀಟ್ ಜವಾಬ್ದಾರಿ ಇವರ ಮೇಲಿದ್ದು ಜನರಿಗೆ ಸಿಗಬೇಕಾದ ಅಮೂಲ್ಯ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಬರವಣಿಗೆ, ಕತೆ, ಕವನ ಇವರ ಆಸಕ್ತಿಯ ಕ್ಷೇತ್ರ.
RSSಗೇ ಹೆದರಲಿಲ್ಲ, ನಿಮಗೆ ಹೆದರ್ತೀನಾ?: ಹೆಚ್.ಡಿ. ಕುಮಾರಸ್ವಾಮಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು
ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕವಚನದಲ್ಲಿ ಮಾತನಾಡುವುದರಿಂದ ತಾನು ಹೆದರುವುದಿಲ್ಲ, ಗಾಳಿಯಲ್ಲಿ ಗುಂಡು ಹಾರಿಸುವುದಕ್ಕಿಂತಲೂ ಮಾಹಿತಿ ಇದ್ದರೆ ಬಂದು ನೀಡಿ. ತನಿಖೆ ಹೇಗೆ ಮಾಡಬೇಕೆಂದು ಯಾರಿಂದಲೂ ಕಲಿಯಬೇಕಾಗಿಲ್ಲ ಎಂದು ಖರ್ಗೆ ತಿಳಿಸಿದ್ದಾರೆ.
- Iranna Basava
- Updated on: Oct 15, 2026
- 12:48 pm
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ ಡಿಸಿಎಂ ಪರಮೇಶ್ವರ್ರನ್ನು ಆಹ್ವಾನಿಸಿದ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್
KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಉಪ ಮುಖ್ಯಮಂತ್ರಿ ಪರಮೇಶ್ವರ ಅವರನ್ನು ಭೇಟಿ ಮಾಡಿದ್ದಾರೆ. ಅ.17ರಂದು ಬೆಂಗಳೂರಿನಲ್ಲಿ ನಡೆಯಲಿರುವ ಭಾರತ-ವೆಸ್ಟ್ ಇಂಡೀಸ್ T20 ಪಂದ್ಯಕ್ಕೆ ಡಿಸಿಎಂ ಅವರನ್ನು ಆಹ್ವಾನಿಸಿದ ಪ್ರಸಾದ್, ಚಿನ್ನಸ್ವಾಮಿ ಕ್ರೀಡಾಂಗಣದ ಸಿದ್ಧತೆಗಳ ಕುರಿತು ಚರ್ಚಿಸಿದ್ದಾರೆ. ಚಿನ್ನಸ್ವಾಮಿಗೆ ಎಕ್ಸ್ಪರ್ಟ್ ಕಮಿಟಿ ಬಂದಿತ್ತು. ನಾವು ಭದ್ರತಾ ವ್ಯವಸ್ಥೆ ಮಾಡಿದ್ದು ನೋಡಿ ಖುಷಿಯಾಗಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
- Iranna Basava
- Updated on: Oct 13, 2026
- 11:31 am
ಹಳೇ ರಾಜಕೀಯ ದಿನಗಳನ್ನ ಮೆಲುಕು ಹಾಕಿದ ಮಾಜಿ ಸಿಎಂ: ಸಿದ್ದರಾಮಯ್ಯ ಯಾರ ಫಾಲೋವರ್ ಗೊತ್ತಾ?
ಬೆಂಗಳೂರಿನ ಕೊಂಡಜ್ಜ ಸಭಾಂಗಣದಲ್ಲಿ ನಡೆದ ಸಾಹಿತಿ, ಪ್ರೋ ನಟರಾಜ್ ಹುಳಿಯಾರ್ ಬರೆದ ‘ಡಾಕ್ಟರ್ ಸಾಹೇಬ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸೋಷಿಯಲಿಸ್ಟ್ ಮತ್ತು ಜನತಾ ಪಾರ್ಟಿಯಿಂದ ಕಾಂಗ್ರೆಸ್ಗೆ ಬಂದು ಮುಖ್ಯಮಂತ್ರಿಯಾದ ತಮ್ಮ ರಾಜಕೀಯ ಪಯಣದ ಬಗ್ಗೆ ಎಳೆಎಳೆಯಾಗಿ ಬಿಚಿಟ್ಟಿದ್ದಾರೆ.
- Iranna Basava
- Updated on: Oct 12, 2026
- 9:23 pm
ಬೆಂಬಲಿಗರನ್ನು ಜೊತೆಗೆ ಬಿಡದ್ದಕ್ಕೆ ಸಿಎಂ ನಿವಾಸದ ಬಳಿ ಪೊಲೀಸರ ಮೇಲೆಯೇ ಶಾಸಕ ಕೊತ್ತೂರು ಮಂಜುನಾಥ್ ಗರಂ
ಶಾಸಕ ಕೊತ್ತೂರು ಮಂಜುನಾಥ್ ಅವರು ಸಿಎಂ ಡಿ.ಕೆ. ಶಿವಕುಮಾರ್ ಭೇಟಿಗಾಗಿ ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಪೊಲೀಸರು ಮಂಜುನಾಥ್ ಅವರ ಬೆಂಬಲಿಗರನ್ನು ಒಳಗೆ ಬಿಡಲು ನಿರಾಕರಿಸಿದರು. ಇದರಿಂದ ಸಿಟ್ಟಿಗೆದ್ದ ಮಂಜುನಾಥ್, ತನ್ನೊಂದಿಗೆ ಬಂದ 100 ಜನರನ್ನೂ ಒಳಗೆ ಬಿಡಬೇಕು ಎಂದು ಪೊಲೀಸರಿಗೆ ತರಾಟೆ ತೆಗೆದುಕೊಂಡ ಪ್ರಸಂಗ ನಡೆದಿದೆ.
- Iranna Basava
- Updated on: Oct 5, 2026
- 12:52 pm
ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಉಲ್ಬಣ: ತುರ್ತು ಪರಿಹಾರ ಕೋರಿ ಕೇಂದ್ರ ಸಚಿವರಾದ ಅಮಿತ್ ಶಾ, ಶಿವರಾಜ್ಸಿಂಗ್ ಚೌಹಾಣ್ಗೆ ಡಿಸಿಎಂ ಪರಮೇಶ್ವರ್ ಪತ್ರ
ಕರ್ನಾಟಕದಲ್ಲಿ ಭೀಕರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ 177 ತಾಲೂಕುಗಳಲ್ಲಿ 27,576 ಕೋಟಿ ರೂ. ಬೆಳೆ ಹಾನಿಯಾಗಿದ್ದು, ರಾಜ್ಯಕ್ಕೆ 7,142 ಕೋಟಿ ರೂ. ತುರ್ತು ಎನ್ಡಿಆರ್ಎಫ್ ನೆರವು ಕೋರಿ ಕೇಂದ್ರ ಸಚಿವರಿಗೆ ಡಿಸಿಎಂ ಪರಮೇಶ್ವರ್ ಪತ್ರ ಬರೆದಿದ್ದಾರೆ. ರೈತರಿಗೆ ನೀಡಲಾಗುವ ಪರಿಹಾರವು ಇಂದಿನ ಕೃಷಿ ವೆಚ್ಚ ಹಾಗೂ ಅವರು ಅನುಭವಿಸಿರುವ ನೈಜ ನಷ್ಟಕ್ಕೆ ಅನುಗುಣವಾಗಿರಬೇಕು. ಹೀಗಾಗಿ ರೈತರಿಗೆ ನೀಡುವ ಇನ್ಪುಟ್ ಸಬ್ಸಿಡಿ ಸೇರಿದಂತೆ SDRF/NDRF ಪರಿಹಾರ ಮಾನದಂಡಗಳನ್ನು ಪರಿಷ್ಕರಿಸುವಂತೆಯೂ ಅವರು ಮನವಿ ಮಾಡಿದ್ದಾರೆ.
- Iranna Basava
- Updated on: Oct 1, 2026
- 6:04 pm
‘ಗ್ಯಾರಂಟಿಗಳಿಂದ ಆರ್ಥಿಕ ಹೊರೆ ಎಂಬುದು ಸತ್ಯ’: ಡಿಸಿಎಂ ಪರಮೇಶ್ವರ್, ಸಚಿವ ಯತೀಂದ್ರರಿಂದಲೂ ಸಹಮತ
ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆಯಾಗುತ್ತಿರುವುದು ಸತ್ಯ ಎಂದು ಡಿಸಿಎಂ ಪರಮೇಶ್ವರ್ ಮತ್ತು ಸಚಿವ ಯತೀಂದ್ರ ಸಿದ್ದರಾಮಯ್ಯ ಕೂಡ ಹೇಳಿದ್ದಾರೆ. ಆದರೆ ಜನರಿಗೆ ಕೊಟ್ಟ ಮಾತಿಗಾಗಿ ಅವನ್ನು ನಿರ್ವಹಿಸುತ್ತೇವೆ ಎಂದವರು ತಿಳಿಸಿದ್ದಾರೆ. ‘ಉಚಿತ ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುವಂತಾಗಿದೆ’ ಎಂದು ಸಚಿವ ಬಾಲಕೃಷ್ಣ ಈ ಹಿಂದೆ ನೀಡಿದ್ದ ಹೇಳಿಕೆ ಕೂಡ ಭಾರಿ ಚರ್ಚೆಗೆ ಗ್ರಾಸವಾಗಿತ್ತು ಎಂಬುದಿಲ್ಲಿ ಗಮನಾರ್ಹ.
- Iranna Basava
- Updated on: Sep 28, 2026
- 12:36 pm
“ನಿನ್ನ ಮೇಲೆ ಬಹಳ ದೂರುಗಳಿವೆ”: ವಿಧಾನಸೌಧದ ಕೆಂಗಲ್ ಗೇಟ್ ಬಳಿ ಕಾರು ತೆಗೆಸಿದ್ದಕ್ಕೆ ಡಿಸಿಪಿ ಯೋಗೇಶ್ ವಿರುದ್ಧ ಸಿದ್ಧರಾಮಯ್ಯ ಗರಂ
ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ತಮ್ಮ ಕಾರನ್ನು ತೆಗೆಸಿದ ವಿಚಾರಕ್ಕೆ ಭದ್ರತಾ ಉಸ್ತುವಾರಿ ಡಿಸಿಪಿ ಯೋಗೇಶ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾರಿಗಾಗಿ ಕಾಯಬೇಕಾದ ಪರಿಸ್ಥಿತಿ ಬಂದಿದ್ದರಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ, ಸಾರ್ವಜನಿಕವಾಗಿ ಡಿಸಿಪಿಯನ್ನು ತರಾಟೆಗೆ ತೆಗೆದುಕೊಂಡರು. ಜನಪ್ರತಿನಿಧಿಗಳೊಂದಿಗೆ ಡಿಸಿಪಿ ವರ್ತನೆ ಬಗ್ಗೆ ಹಲವು ದೂರುಗಳಿದ್ದು, ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
- Iranna Basava
- Updated on: Sep 22, 2026
- 2:46 pm
ಕೆಪಿಎಸ್ಸಿಯನ್ನೆ ಮುಚ್ಚಿದರೆ ಹೇಗೆಂದು ಚಿಂತನೆ ಮಾಡುತ್ತಿದ್ದೇವೆ: ಸಿಎಂ ಡಿಕೆ ಶಿವಕುಮಾರ್ ಅಚ್ಚರಿಯ ಮಾತು
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಅಕ್ರಮಗಳ ತನಿಖೆ ನಡೆಯುತ್ತಿದ್ದು, ಕಾನೂನು ತೊಡಕುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕೆಪಿಎಸ್‌ಸಿ ವ್ಯವಸ್ಥೆಯ ಸುಧಾರಣೆ ಹಾಗೂ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ. ಕೆಪಿಎಸ್ಸಿಯನ್ನೇ ಮುಚ್ಚಿದರೆ ಹೇಗೆ ಎಂಬ ಬಗ್ಗೆಯೂ ಚಿಂತನೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.
- Iranna Basava
- Updated on: Sep 22, 2026
- 1:21 pm
ಸೌಜನ್ಯ ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಪ್ರಿಯಾಂಕ್ ಖರ್ಗೆ
ಸೌಜನ್ಯ ಪ್ರಕರಣದ ಮರು ತನಿಖೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನ ಅಧಿಕೃತ ಆದೇಶ ಇನ್ನೂ ಬಂದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾಗಿದ್ದರೂ, ನಿರ್ದಿಷ್ಟ ಆದೇಶಕ್ಕಾಗಿ ಕಾಯುತ್ತಿದ್ದು, ಅದು ಬಂದ ನಂತರ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಹಿಂದೆ ಸಿಬಿಐ ತನಿಖೆ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
- Iranna Basava
- Updated on: Sep 21, 2026
- 5:29 pm
ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದ ‘ಇಂಜಿನಿಯರ್ಸ್ ಡೇ’ ಆಚರಣೆ: ಸಿಎಂ ಡಿಕೆ ಶಿವಕುಮಾರ್ ಘೋಷಣೆ
ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದ ಇಂಜಿನಿಯರ್ಸ್ ಡೇ ಆಚರಿಸಲಾಗುವುದು ಎಂದು ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಸರ್ಕಾರದ ವತಿಯಿಂದ ಮಾಲಾರ್ಪಣೆ ಮಾಡಿ, ವಿಶ್ವೇಶ್ವರಯ್ಯ ಅವರ ಕೊಡುಗೆಯನ್ನು ಸ್ಮರಿಸಿದ ಡಿಕೆಶಿ, ಅಭಿವೃದ್ಧಿಗೆ ಅಡಿಪಾಯ ಹಾಕುವ ಇಂಜಿನಿಯರ್‌ಗಳು ದೇಶದ ಆಸ್ತಿ ಎಂದು ಹೇಳಿದ್ದಾರೆ.
- Iranna Basava
- Updated on: Sep 15, 2026
- 1:25 pm
ನಮ್ಮದು ವರ್ಷಕ್ಕೆ 2 ಸಾವಿರ ಕೋಟಿ ವಹಿವಾಟು: ವಿದೇಶದಲ್ಲಿ ಹೂಡಿಕೆಗೆ ಪ್ಲ್ಯಾನ್ ಇತ್ತು ಎಂದ ಸಚಿವ ಜಾರಕಿಹೊಳಿ
ಸಚಿವ ಸತೀಶ್ ಜಾರಕಿಹೊಳಿ ಸಾಮ್ರಾಜ್ಯದ ಮೇಲೆ ಇ.ಡಿ ಅಧಿಕಾರಿಗಳು ದಾಳಿ ವಿಚಾರ ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, ನಮ್ಮ ವಾರ್ಷಿಕ ವಹಿವಾಟೇ 2 ಸಾವಿರ ಕೋಟಿ ಇದೆ. ಮಕ್ಕಳ ಹೆಸರಿನಲ್ಲಿ ಆಫ್ರಿಕಾದಲ್ಲಿ ಕಂಪನಿ ಇರೋದು ನಿಜ, ಅದನ್ನ ಐಟಿಗೆ ಈಗಾಗಲೇ ತೋರಿಸಿದ್ದೇವೆ ಎಂದಿದ್ದಾರೆ.
- Iranna Basava
- Updated on: Sep 11, 2026
- 5:38 pm
ಅಕ್ರಮವಾಗಿ ಬಂದೂಕು ಇಟ್ಟುಕೊಂಡವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಸಿಎಂ ಡಿಕೆ ಶಿವಕುಮಾರ್
ಸಿಎಂ ಡಿಕೆ ಶಿವಕುಮಾರ್ ಅವರು ಅಕ್ರಮ ಬಂದೂಕು ಹೊಂದಿರುವವರಿಗೆ ನವೆಂಬರ್ 1 ರೊಳಗೆ ಶರಣಾಗಲು ಗಡುವು ನೀಡಿದ್ದಾರೆ. ಗಡುವಿನ ನಂತರ ಸಿಕ್ಕಿಬಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಪೊಲೀಸ್ ಸಿಬ್ಬಂದಿಯ ಬೇಡಿಕೆಗಳ ಕುರಿತು ಚರ್ಚಿಸುವುದಾಗಿ ತಿಳಿಸಿದ್ದು, ರೈತರ ಸಮಸ್ಯೆಗಳು, ಬರ ಮತ್ತು ಕಸ್ತೂರಿರಂಗನ್ ವರದಿ ಕುರಿತು ವಿಶೇಷ ಅಧಿವೇಶನ ನಡೆಯಲಿದೆ ಎಂದು ಹೇಳಿದ್ದಾರೆ.
- Iranna Basava
- Updated on: Sep 11, 2026
- 3:40 pm