AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರ ಓಟು ಇನ್ಯಾರಿಗೋ, ಮನೆಯಿಂದ ಹೊರ ಹೋಗಿದ್ದು ಯಾರು?

Bigg Boss Kannada: ಬಿಗ್​​ಬಾಸ್ ಮನೆಯಲ್ಲಿ ಯಾವುದೂ ನಿರೀಕ್ಷಗೆ ತಕ್ಕಂತೆ ನಡೆಯುವುದಿಲ್ಲ. ಅದರಲ್ಲೂ ಆಟಗಾರರ ನಿರೀಕ್ಷೆಯಂತೆ ಅಂತೂ ನಡೆಯುವುದೇ ಇಲ್ಲ. ಈಗಲೂ ಹಾಗೆಯೇ ಆಗಿದೆ. ಕಳೆದ ವಾರ ಎಲಿಮಿನೇಷನ್ ಹೆಸರಲ್ಲಿ ಮನೆಯವರನ್ನು ಫೂಲ್ ಮಾಡಿದ್ದ ಬಿಗ್​​ಬಾಸ್ ಈ ವಾರ ದೊಡ್ಡ ಶಾಕ್ ಅನ್ನೇ ನೀಡಿದ್ದಾರೆ. ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆದಿದ್ದು, ಯಾರೂ ಊಹಿಸದ ಸ್ಪರ್ಧಿ ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ಮನೆಯ ಸದಸ್ಯರಿಗೆ ಇದು ಭಾರಿ ದೊಡ್ಡ ಶಾಕ್ ಆಗಿ ಪರಿಣಮಿಸಿದೆ.

ಯಾರ ಓಟು ಇನ್ಯಾರಿಗೋ, ಮನೆಯಿಂದ ಹೊರ ಹೋಗಿದ್ದು ಯಾರು?
Bigg Boss Kannada 13
ಮಂಜುನಾಥ ಸಿ.
|

Updated on: Sep 24, 2026 | 11:01 PM

Share

ಮುಖ್ಯಾಂಶಗಳು

  • ಬಿಗ್​​ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್
  • ಮನೆಯ ಮೆಚ್ಚಿನ ಸ್ಪರ್ಧಿಯೇ ಹೊರಕ್ಕೆ
  • ವಾರದ ಮಧ್ಯ ಭಾಗದಲ್ಲಿ ಹೊರ ಹೋಗಿದ್ದು ಯಾರು?

ಬಿಗ್​​ಬಾಸ್ ಮನೆಯಲ್ಲಿ ಯಾವುದೂ ನಿರೀಕ್ಷಗೆ ತಕ್ಕಂತೆ ನಡೆಯುವುದಿಲ್ಲ. ಅದರಲ್ಲೂ ಆಟಗಾರರ ನಿರೀಕ್ಷೆಯಂತೆ ಅಂತೂ ನಡೆಯುವುದೇ ಇಲ್ಲ. ಈಗಲೂ ಹಾಗೆಯೇ ಆಗಿದೆ. ಕಳೆದ ವಾರ ಎಲಿಮಿನೇಷನ್ ಹೆಸರಲ್ಲಿ ಮನೆಯವರನ್ನು ಫೂಲ್ ಮಾಡಿದ್ದ ಬಿಗ್​​ಬಾಸ್ ಈ ವಾರ ದೊಡ್ಡ ಶಾಕ್ ಅನ್ನೇ ನೀಡಿದ್ದಾರೆ. ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆದಿದ್ದು, ಯಾರೂ ಊಹಿಸದ ಸ್ಪರ್ಧಿ ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ಮನೆಯ ಸದಸ್ಯರಿಗೆ ಇದು ಭಾರಿ ದೊಡ್ಡ ಶಾಕ್ ಆಗಿ ಪರಿಣಮಿಸಿದೆ.

ವಾರದ ಮಧ್ಯ ಭಾಗದಲ್ಲಿ ನಡೆದ ಮಿಡ್ ವೀಕ್ ಎಲಿಮಿನೇಷನ್​​​ನಲ್ಲಿ ಬಿಗ್​​ಬಾಸ್ ಬಹಳ ಭಿನ್ನವಾದ ಎಲಿಮಿನೇಷನ್ ಮಾಡಿಸಿದರು. ಮನೆಯಲ್ಲಿ ಹಲವರ ಅಚ್ಚು ಮೆಚ್ಚಿನ ಸ್ಪರ್ಧಿ ಆಗಿದ್ದ ತಾಂಡವ್ ರಾಮ್ ಅವರನ್ನು ಮನೆಯಿಂದ ಹೊರಗೆ ಕಳಿಲಾಗಿದೆ. ವಿಶೇಷವೆಂದರೆ ತಾಂಡವ್ ಅವರು ಕಡಿಮೆ ಮತ ಪಡೆದು ಹೊರಗೆ ಹೋಗಿದ್ದಲ್ಲ, ಬದಲಿಗೆ ಅದೃಷ್ಟ ಕೈಕೊಟ್ಟ ಕಾರಣ ಹೊರಗೆ ಹೋಗಿದ್ದು. ಅಲ್ಲಿಗೆ ಈ ವಾರ ಜನ ಬಯಸಿದವರು ಹೊರಗೆ ಹೋಗಿಲ್ಲ ಬದಲಿಗೆ ಅದೃಷ್ಟ ಯಾರಿಗೆ ಇರಲಿಲ್ಲವೋ ಅವರು ಹೊರಗೆ ಹೋಗಿದ್ದಾರೆ.

ಸಂಗೀತಾ ಬಿಟ್ಟು ಮನೆ ಮಂದಿಯೆಲ್ಲ ನಾಮಿನೇಟ್ ಆಗಿದ್ದರು. ಟಾಸ್ಕ್​​ ಗಳಲ್ಲಿ ಗೆದ್ದ ಆಸಿಯಾ, ಕಿರಣ್, ಧನುಶ್ ಮತ್ತು ಕಾವ್ಯಾ ಅಡ್ವಾಂಟೇಜ್ ಪಡೆದಿದ್ದರು. ಅವರಿಗೆ ವಿಶೇಷ ಅವಕಾಶ ಕೊಟ್ಟ ಬಿಗ್​​ಬಾಸ್, ಬೇರೆಯವರ 50% ಮತ ಪಡೆದುಕೊಂಡು ನೀವು ಸೇಫ್ ಆಗಬಹುದು ಎಂದರು. ಆದರೆ ಯಾರ ಮತ ಪಡೆಯುತ್ತೀರೋ ಅವರಲ್ಲಿ ಕಡಿಮೆ ಮತ ಉಳಿಸಿಕೊಂಡವರು ಮನೆಗೆ ಹೋಗುತ್ತಾರೆ ಎಂದರು.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಅಣ್ಣಾವ್ರ ಡೈಲಾಗ್: ವಿಡಿಯೋ ನೋಡಿ

ಕಿರಣ್ ಶಾಸ್ತ್ರಿ, ಸೌಂಧರ್ಯ ಹೆಸರು ತೆಗೆದುಕೊಂಡ, ಕಾವ್ಯಾ ಅವರು ಜಗ್ಗಿ ಹೆಸರು ತೆಗೆದುಕೊಂಡರು. ಆಸಿಯಾ, ಲಿಖಿತ್ ಮನೆಯಿಂದ ಹೊರಗೆ ಹೋಗಬೇಕೆಂದು ಅವರ ಹೆಸರು ತೆಗೆದುಕೊಂಡರು. ಅಂತಿಮವಾದಿ ಧನುಶ್, ತಾಂಡವ್ ಹೆಸರು ತೆಗೆದುಕೊಂಡ. ಆಸಿಯಾ ಬಿಟ್ಟು ಇನ್ನೆಲ್ಲರೂ, ಹೆಚ್ಚು ಮತ ಬಂದಿರಬಹುದು ಎಂಬ ಕಾರಣಕ್ಕಾಗಿಯೇ ಹೆಸರುಗಳನ್ನು ತೆಗೆದುಕೊಂಡರು.

ಧನುಶ್ ಅಂತೂ, ತಾಂಡವ್ ಅವರಿಗೆ ಎಲ್ಲರಿಗಿಂತಲೂ ಹೆಚ್ಚು ಮತ ಸಿಕ್ಕಿರುತ್ತದೆ. ಅವರು ಹೀರೋ ರೀತಿ ಇದ್ದಾರೆ ಎಂದೆಲ್ಲ ಹೇಳುತ್ತಿದ್ದರು. ಆದರೆ ಅವರ ಆಯ್ಕೆ, ಲೆಕ್ಕಾಚಾರ ಉಲ್ಟಾ ಹೊಡೆಯಿತು. ತಾಂಡವ್ ಅವರು ಮನೆಯಿಂದ ಎವಿಕ್ಟ್ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಕಲಬುರ್ಗಿಯಲ್ಲಿ ಕನೇರಿ ಶ್ರೀಗಳ ಸಮಾವೇಶಕ್ಕೆ ತೀವ್ರ ವಿರೋಧ
ಕಲಬುರ್ಗಿಯಲ್ಲಿ ಕನೇರಿ ಶ್ರೀಗಳ ಸಮಾವೇಶಕ್ಕೆ ತೀವ್ರ ವಿರೋಧ
ಮತದಾರರ ಹೆಸರು ಡಿಲೀಟ್: ಬಿಜೆಪಿ ಎಂಎಲ್​​ಎ ವಿರುದ್ಧ ದಾಖಲೆ ಬಿಡುಗಡೆ
ಮತದಾರರ ಹೆಸರು ಡಿಲೀಟ್: ಬಿಜೆಪಿ ಎಂಎಲ್​​ಎ ವಿರುದ್ಧ ದಾಖಲೆ ಬಿಡುಗಡೆ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್