ತಪ್ಪಾಯ್ತು ಧನುಶ್ ಲೆಕ್ಕಾಚಾರ, ಮನೆಯಿಂದ ಹೊರ ಹೋದ ಮೆಚ್ಚಿನ ಸ್ಪರ್ಧಿ
ಆರಂಭದ ಟಾಸ್ಕಿನಲ್ಲಿ ಗೆದ್ದ ಅಡ್ವಾಂಟೇಜ್ ಪಡೆದಿದ್ದ ಕಾವ್ಯಾ, ಆಸಿಯಾ, ಧನುಶ್ ಮತ್ತು ಶಾಸ್ತ್ರಿ ಅವರು ಎಲಿಮಿನೇಷನ್ನಿಂದ ಪಾರಾಗಲು ಇತರೆ ನಾಮಿನೇಟ್ ಸ್ಪರ್ಧಿಗಳಿಂದ 50% ಮತವನ್ನು ತಮ್ಮ ಖಾತೆಗೆ ಹಾಕಿಕೊಳ್ಳಬೇಕಿತ್ತು. ಈ ಕಾರ್ಯವನ್ನು ನಾಲ್ಕೂ ಸ್ಪರ್ಧಿಗಳು ಚರ್ಚಿಸಿ ಮಾಡಬೇಕಿತ್ತು. ಇದಕ್ಕಾಗಿ ನಾಲ್ವರನ್ನೂ ಪ್ರತ್ಯೇಕ ರೂಮಿನಲ್ಲಿ ಇರಿಸಲಾಗಿತ್ತು. ಒಳಗೆ ನಡೆಯುವ ಚರ್ಚೆಯಲ್ಲಿ ಇತರೆ ನಾಮಿನೇಟ್ ಸ್ಪರ್ಧಿಗಳಿಗೆ ತೋರಿಸಲಾಗಿತ್ತು.

ಮುಖ್ಯಾಂಶಗಳು
- ಬಿಗ್ಬಾಸ್ ಕನ್ನಡದಲ್ಲಿ ಮಿಡ್ ವೀಕ್ ಎಲಿಮಿನೇಷನ್
- ಉಲ್ಟಾ ಹೊಡೆಯಿತು ಧನುಶ್ ಹಾಕಿದ ಲೆಕ್ಕಾಚಾರ
- ತಾಂಡವ್ ಮನೆಯಿಂದ ಹೊರಗೆ ಬಂದಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳು ಎಣಿಸಿದಂತೆ ಏನೂ ನಡೆಯುವುದಿಲ್ಲ. ಸ್ಪರ್ಧಿಗಳು ಮಾತ್ರವಲ್ಲ ಪ್ರೇಕ್ಷಕರು ಎಣಿಸಿದಂತೆಯೂ ಸಹ ಆಗುವುದಿಲ್ಲ. ಈ ವಾರ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಮನೆಯ ಮೆಚ್ಚಿನ ಸದಸ್ಯರಲ್ಲಿ ಒಬ್ಬರಾಗಿದ್ದ ತಾಂಡವ್ ರಾಮ್ ಅವರು ಹೊರಗೆ ಹೋಗಿದ್ದಾರೆ. ಆದರೆ ಅವರು ಹೊರಗೆ ಹೋಗಿದ್ದಕ್ಕೆ ಕಾರಣವಾಗಿದ್ದು ಧನುಶ್. ಆ ವ್ಯಕ್ತಿಯ ತಪ್ಪು ಲೆಕ್ಕಾಚಾರದಿಂದ ತಾಂಡವ್ ರಾಮ್ ಅವರು ಹೊರಗೆ ಹೋದಂತೆ ಆಗಿದೆ.
ಆರಂಭದ ಟಾಸ್ಕಿನಲ್ಲಿ ಗೆದ್ದ ಅಡ್ವಾಂಟೇಜ್ ಪಡೆದಿದ್ದ ಕಾವ್ಯಾ, ಆಸಿಯಾ, ಧನುಶ್ ಮತ್ತು ಶಾಸ್ತ್ರಿ ಅವರು ಎಲಿಮಿನೇಷನ್ನಿಂದ ಪಾರಾಗಲು ಇತರೆ ನಾಮಿನೇಟ್ ಸ್ಪರ್ಧಿಗಳಿಂದ 50% ಮತವನ್ನು ತಮ್ಮ ಖಾತೆಗೆ ಹಾಕಿಕೊಳ್ಳಬೇಕಿತ್ತು. ಈ ಕಾರ್ಯವನ್ನು ನಾಲ್ಕೂ ಸ್ಪರ್ಧಿಗಳು ಚರ್ಚಿಸಿ ಮಾಡಬೇಕಿತ್ತು. ಇದಕ್ಕಾಗಿ ನಾಲ್ವರನ್ನೂ ಪ್ರತ್ಯೇಕ ರೂಮಿನಲ್ಲಿ ಇರಿಸಲಾಗಿತ್ತು. ಒಳಗೆ ನಡೆಯುವ ಚರ್ಚೆಯಲ್ಲಿ ಇತರೆ ನಾಮಿನೇಟ್ ಸ್ಪರ್ಧಿಗಳಿಗೆ ತೋರಿಸಲಾಗಿತ್ತು.
ಈ ವೇಳೆ ಕಿರಣ್, ಕಾವ್ಯಾ ಮತ್ತು ಧನುಶ್ ಅವರುಗಳು, ‘ತಲೆ ಓಡಿಸಿ’ ಸದಸ್ಯರನ್ನು ಆಯ್ಕೆ ಮಾಡಲು ಯತ್ನಿಸಿದರು. ಯಾರಿಗೆ ಹೆಚ್ಚು ಮತ ಬಂದಿರಬಹುದು ಎಂದು ಗೆಸ್ ಮಾಡಿ ಅವರಿಂದ 50% ತೆಗೆದುಕೊಂಡರೆ ತಾವೂ ಉಳಿಯುತ್ತೇವೆ ಸ್ಪರ್ಧಿಯೂ ಉಳಿಯುತ್ತಾನೆ ಎಂಬುದು ಅವರ ಲೆಕ್ಕಾಚಾರ ಆಗಿತ್ತು. ಅದರಂತೆ ಧನುಶ್, ತಾಂಡವ್ ಒಳ್ಳೆಯ ಸ್ಪರ್ಧಿ, ಒಳ್ಳೆಯ ವ್ಯಕ್ತಿ, ಹೊರಗೆ ಸಹ ಒಳ್ಳೆಯ ಫಾಲೋವರ್ ಇರುವ ನಟ ಅವರಿಗೆ ಎಲ್ಲರಿಗಿಂತಲೂ ಹೆಚ್ಚು ಮತ ಸಿಕ್ಕಿರುತ್ತದೆ ಎಂದು ಲೆಕ್ಕಾಚಾರ ಹಾಕಿ ತಾಂಡವ್ ಹೆಸರನ್ನು ತೆಗೆದುಕೊಂಡರು.
ಇದನ್ನೂ ಓದಿ:ಇನ್ಸ್ಟಾಗ್ರಾಂನಲ್ಲಿ ಕ್ಯೂಟ್ ವಿಡಿಯೋ ಹಂಚಿಕೊಂಡ ಮಾಜಿ ಬಿಗ್ಬಾಸ್ ಸ್ಪರ್ಧಿ ರಾಶಿಕಾ
ಆದರೆ ಧನುಶ್ ಲೆಕ್ಕಾಚಾರ ಉಲ್ಟಾ ಆಯ್ತು. ತಾಂಡವ್ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಮನೆಯಿಂದ ಹೊರಗೆ ಬಂದರು. ತಾಂಡವ್ ಅವರು ಹೊರಗೆ ಹೋಗುತ್ತಾರೆಂದು ಯಾರೂ ಊಹೆ ಮಾಡಿರಲಿಲ್ಲ. ತಾಂಡವ್ ಹಾಗೂ ಸೌಂದರ್ಯಾ ಕೊನೆಯ ಸ್ಪರ್ಧಿಗಳಾಗಿ ಉಳಿದುಕೊಂಡಾಗ, ಗಗನ್ ಕಣ್ಣೀರು ಹಾಕಿದರು. ತಾಂಡವ್ ಅವರನ್ನು ಉಳಿಸಿ ಎಂದು ಅಳುತ್ತಾ ಬಿಗ್ಬಾಸ್ ಬಳಿ ಕೇಳಿ ಕೊಂಡರು. ಆದರೆ ಅಂತಿಮವಾಗಿ ಉಳಿದಿದ್ದು, ಸೌಂದರ್ಯಾ, ಹೊರಗೆ ಹೋಗಿದ್ದು ತಾಂಡವ್.
ತಾಂಡವ್ ರಾಮ್ ಎವಿಕ್ಟ್ ಕಾರ್ಡ್ ತೋರಿಸುತ್ತಿದ್ದಂತೆ ಮನೆಯ ಹಲವು ಸದಸ್ಯರು ಕಣ್ಣೀರು ಹಾಕಿದರು. ಆದರೆ ತಾಂಡವ್ ಮಾತ್ರ ನಗುತ್ತಾ ಎಲ್ಲರಿಗೂ ಸಮಾಧಾನ ಮಾಡಿದ್ದು ವಿಶೇಷವಾಗಿತ್ತು. ಈಗ ಮುಗಿದಿರುವ ಎಪಿಸೋಡ್ನಲ್ಲಿ ತಾಂಡವ್ ಎವಿಕ್ಟ್ ಕಾರ್ಡನ್ನು ತೋರಿಸಿರುವುದನ್ನು ಮಾತ್ರ ತೋರಿಸಲಾಗಿದೆ. ಆದರೆ ತಾಂಡವ್ ಮನೆಯಿಂದ ಹೊರಗೆ ಹೋದ ದೃಶ್ಯಗಳನ್ನು ತೋರಿಸಲಾಗಿಲ್ಲ. ಹಾಗಾಗಿ ಸುದೀಪ್ ಬಂದು ಖಾತ್ರಿ ಪಡಿಸುವವರೆಗೆ ತಾಂಡವ್ ಎವಿಕ್ಷನ್ ಖಾತ್ರಿ ಇಲ್ಲವೆಂದೇ ಅನುಮಾನದಲ್ಲಿಯೇ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




