AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

'ಬಿಜೆಪಿ ಒಮ್ಮೆ ಡಿಕ್ಷನರಿ ಓದಲಿ'; ಮಲ್ಲಿಕಾರ್ಜುನ ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ

‘ಬಿಜೆಪಿ ಒಮ್ಮೆ ಡಿಕ್ಷನರಿ ಓದಲಿ’; ಮಲ್ಲಿಕಾರ್ಜುನ ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ

ಸುಷ್ಮಾ ಚಕ್ರೆ
|

Updated on: Nov 09, 2026 | 7:12 PM

Share

ಬಿಜೆಪಿ ಆರೋಪಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್ ಖೇರಾ, "ಬಿಜೆಪಿಯವರ ಮನೆಯಲ್ಲಿ ಯಾರಿಗಾದರೂ ಡಿಕ್ಷನರಿ (ನಿಘಂಟು) ನೋಡುವ ಅಭ್ಯಾಸವಿದೆಯೇ? ಅವರ ಬಳಿ ಮೊಬೈಲ್ ಇದೆಯಲ್ಲವೇ, 'ಈದ್' ಎಂದರೆ ಏನು ಎಂದು ಗೂಗಲ್ ಮಾಡಿ ನೋಡಲಿ. 'ಈದ್' ಎಂದರೆ ಮೂಲತಃ 'ಹಬ್ಬ' (ಸಂಭ್ರಮ) ಎಂದರ್ಥ. ದೀಪಾವಳಿ ಹಬ್ಬ, ಹೋಳಿ ಹಬ್ಬ ಎಂಬ ಅರ್ಥದಲ್ಲೇ ಖರ್ಗೆಯವರು ಆ ಮಾತು ಹೇಳಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.

ನವದೆಹಲಿ, ನವೆಂಬರ್ 9: ದೀಪಾವಳಿಯನ್ನು ‘ಸಂತೋಷದ ಈದ್’ ಎಂದು ಬಣ್ಣಿಸಿ ಶುಭಾಶಯ ಕೋರಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಆದರೆ, ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ‘ಈದ್’ ಎಂದರೆ ಕೇವಲ ಮುಸ್ಲಿಂ ಧರ್ಮದ ಹಬ್ಬ ಮಾತ್ರವಲ್ಲ, ಶಬ್ದಕೋಶದ ಪ್ರಕಾರ “ಆನಂದ ಹಾಗೂ ಸಂಭ್ರಮದ ಕೂಟ” ಎಂಬ ವಿಶಾಲ ಅರ್ಥದಲ್ಲೂ ಬಳಸಲಾಗುತ್ತದೆ. ದೇಶದ ಒಗ್ಗಟ್ಟು ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಎತ್ತಿಹಿಡಿಯಲು ಅವರು ಈ ರೂಪಕವನ್ನು ಬಳಸಿದ್ದಾರೆಯೇ ಹೊರತು ಯಾರ ಭಾವನೆಗೂ ಧಕ್ಕೆ ತರುವ ಉದ್ದೇಶ ಅವರಿಗಿರಲಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಬಿಜೆಪಿ ಆರೋಪಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್ ಖೇರಾ, “ಬಿಜೆಪಿಯವರ ಮನೆಯಲ್ಲಿ ಯಾರಿಗಾದರೂ ಡಿಕ್ಷನರಿ (ನಿಘಂಟು) ನೋಡುವ ಅಭ್ಯಾಸವಿದೆಯೇ? ಅವರ ಬಳಿ ಮೊಬೈಲ್ ಇದೆಯಲ್ಲವೇ, ‘ಈದ್’ ಎಂದರೆ ಏನು ಎಂದು ಗೂಗಲ್ ಮಾಡಿ ನೋಡಲಿ. ‘ಈದ್’ ಎಂದರೆ ಮೂಲತಃ ‘ಹಬ್ಬ’ (ಸಂಭ್ರಮ) ಎಂದರ್ಥ. ದೀಪಾವಳಿ ಹಬ್ಬ, ಹೋಳಿ ಹಬ್ಬ ಎಂಬ ಅರ್ಥದಲ್ಲೇ ಖರ್ಗೆಯವರು ಆ ಮಾತು ಹೇಳಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More