ಅಸಲಿ ಮುಖ ಬಯಲಾಯ್ತು; ದೀಪಾವಳಿಗೆ ಶುಭಾಶಯ ಕೋರಿದರೂ ಬಿಜೆಪಿ ಕೆಂಗಣ್ಣಿಗೆ ಗುರಿಯಾದ ಮಲ್ಲಿಕಾರ್ಜುನ ಖರ್ಗೆ!
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಸ್ತ ಭಾರತೀಯರಿಗೆ ದೀಪಾವಳಿಯ ಶುಭಾಶಯ ಕೋರಿದ್ದಾರೆ. ಆದರೆ, ಈ ಶುಭಾಶಯ ಕೋರುವಾಗ ಅವರು ಬಳಸಿದ ಪದಗಳು ಇದೀಗ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿವೆ. ಹಬ್ಬದ ಶುಭಾಶಯ ವಿನಿಮಯವೂ ಇದೀಗ ರಾಜಕೀಯವಾಗಿ ವಾಗ್ವಾದಕ್ಕೆ ಕಾರಣವಾಗಿದೆ. ಮಲ್ಲಿಕಾರ್ಜುನ ಖರ್ಗೆಯವರು ಅವರು ದೀಪಾವಳಿಯನ್ನು "ಖುಷಿಯ ಈದ್" ಎಂದು ಬಣ್ಣಿಸಿದ್ದರು. ಇದನ್ನು ಖಂಡಿಸಿ ಬಿಜೆಪಿ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ನಾಯಕರು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ನವದೆಹಲಿ, ನವೆಂಬರ್ 9: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೀಪಾವಳಿಯನ್ನು “ಖುಷಿಯ ಈದ್” ಎಂದು ಬಣ್ಣಿಸಿ ಶುಭಾಶಯ ಕೋರಿರುವುದು ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಖರ್ಗೆ ಅವರ ಈ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದ್ದು, ಇದು ಕಾಂಗ್ರೆಸ್‌ನ “ಸನಾತನ ವಿರೋಧಿ ಹಾಗೂ ಮುಸ್ಲಿಂ ತುಷ್ಟೀಕರಣ ರಾಜಕೀಯ”ಕ್ಕೆ ಪ್ರತ್ಯಕ್ಷ ನಿದರ್ಶನ ಎಂದು ಆರೋಪಿಸಿದೆ.
ದೀಪಾವಳಿ ಶುಭಾಶಯ ಕೋರುವಾಗ ಮಲ್ಲಿಕಾರ್ಜುನ ಖರ್ಗೆ, ದೀಪಾವಳಿಯು ಪ್ರತಿಯೊಬ್ಬರೂ ಆಚರಿಸುವ ಹಬ್ಬವಾಗಿದ್ದು, ಇದು ಸುದೀರ್ಘ ದಿನಗಳ ಕಾಲ ನಡೆಯುವ “ಖುಷಿಯ ಈದ್” ಇದ್ದಂತೆ ಎಂದು ಹೇಳಿದ್ದರು. ಈ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ್ದ 84 ವರ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, “ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ನಮ್ಮ ಭಾರತದಲ್ಲಿ ಪ್ರತಿಯೊಬ್ಬರೂ ಆಚರಿಸುವ ಪ್ರಮುಖ ಹಬ್ಬ ಇದಾಗಿದೆ. ಇದಕ್ಕೆ ಒಂದೇ ಕಾರಣವೆಂದರೆ ಇದು ಸಂತೋಷದ ಈದ್ ಇದ್ದಂತೆ ಮತ್ತು ಸುದೀರ್ಘ ದಿನಗಳ ಕಾಲ ನಡೆಯುವ ಹಬ್ಬವಾಗಿದೆ” ಎಂದು ಹೇಳಿದ್ದರು.
Kharge Ji was so uncomfortable wishing everyone a Happy Diwali that he had to bring Eid into it!!
Calling Diwali “an Eid of happiness” is next level ‘hyper secularism’!!
Such is the Congress obsession with Minority Appeasement that even a Diwali greeting cannot be kept simple.
These people are beyond repair!!
— Priti Gandhi (@MrsGandhi) November 8, 2026
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, “ದೀಪಾವಳಿಯು ದೀಪಾವಳಿಯೇ, ಈದ್ ಎಂದರೆ ಈದ್ ಅಷ್ಟೇ. ತನ್ನದೇ ಆದ ಪವಿತ್ರತೆ, ಪರಂಪರೆ ಮತ್ತು ಅನನ್ಯತೆ ಹೊಂದಿರುವ ದೀಪಾವಳಿಯ ಶುಭಾಶಯ ಕೋರುವಾಗ ಅದನ್ನು ‘ಈದ್’ ಎಂದು ಕರೆಯುವ ಅಗತ್ಯವೇನಿತ್ತು?” ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸತತವಾಗಿ ಹಿಂದೂ ಹಬ್ಬಗಳ ಅಸ್ಮಿತೆಯನ್ನು ತಗ್ಗಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
#WATCH | Delhi: On Congress chief Mallikarjun Kharge’s Diwali-Eid remark, BJP national spokesperson Gaurav Bhatia says, “…This is the DNA of the Congress party – 1) indulge in blatant appeasement of the Muslim class, 2) even during a festival that is a festival of joy, happiness, inclusiveness, hurt these sentiments of the Hindu community. Mallikarjun Kharge is the remote-controlled national president of Congress; a battery by Sonia Gandhi, a finger of Rahul Gandhi. Whatever statement Mallikarjun Kharge makes, he is actually furthering the anti-Hindu, anti-Sanatana mindset of Rahul Gandhi and Sonia Gandhi in his own words.”
— ANI (@ANI) November 9, 2026
ಕಾಂಗ್ರೆಸ್ ನಾಯಕರ ಮಾತುಗಳು ಅವರ ಪಕ್ಷದ ದೃಷ್ಟಿಕೋನವನ್ನು ತೋರಿಸುತ್ತವೆ ಎಂದ ಭಾಟಿಯಾ, “ಮುಸ್ಲಿಮರನ್ನು ಓಲೈಸುವ ರಾಜಕಾರಣ ಕಾಂಗ್ರೆಸ್ ಪಕ್ಷದ ಡಿಎನ್‌ಎಯಲ್ಲೇ ಇದೆ. ಬಹುಸಂಖ್ಯಾತ ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವುದನ್ನು ಕಾಂಗ್ರೆಸ್ ಪರಿಪಾಠವಾಗಿ ಮಾಡಿಕೊಂಡಿದೆ” ಎಂದು ಹರಿದಾಯ್ದರು. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕೂಡ ಖರ್ಗೆ ಮತ್ತು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ದೀಪಾವಳಿಯ ಸೋಲಿಗೆ ಮಕ್ಕಳ ದಿನಾಚರಣೆಯಂದು ಸೇಡು ತೀರಿಸಿಕೊಳ್ಳುತ್ತಾ ಭಾರತ?
ಬಿಜೆಪಿಯ ಮತ್ತೊಬ್ಬ ವಕ್ತಾರ ಪ್ರದೀಪ್ ಭಂಡಾರಿ ಮಾತನಾಡಿ, “ಮುಂದಿನ ಉತ್ತರ ಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಖರ್ಗೆ ಅವರು ಈದ್ ಹಬ್ಬವನ್ನು ಯಾವುದಾದರೂ ಹಿಂದೂ ಹಬ್ಬಕ್ಕೆ ಹೋಲಿಸಿ ಶುಭಾಶಯ ಕೋರಲು ಸಾಧ್ಯವೇ?” ಎಂದು ಪ್ರಶ್ನಿಸಿದರು. ಅಲ್ಲದೆ, ಸೋನಿಯಾ ಗಾಂಧಿ ಅವರು ಬಾಬ್ರಿ ಮಸೀದಿ ಧ್ವಂಸ ಮತ್ತು ಬಾಟ್ಲಾ ಹೌಸ್ ಎನ್‌ಕೌಂಟರ್ ಸಂದರ್ಭದಲ್ಲಿ ಭಾವುಕರಾಗಿದ್ದರೆಂದು ಉಲ್ಲೇಖಿಸಿ, ಕಾಂಗ್ರೆಸ್ ಸಾಲು ಸಾಲಾಗಿ ಸನಾತನ ವಿರೋಧಿ ನಿಲುವು ತಳೆಯುತ್ತಿದೆ ಎಂದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




