AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು’; ಜನತಾ ಮಹಾಭಿಯೋಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಇಂಡಿಯ ಮೈತ್ರಿಕೂಟದಿಂದ ದೆಹಲಿಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಜನತಾ ಮಹಾಭಿಯೋಗ ಕಾರ್ಯಕ್ರಮ ನಡೆಯುತ್ತಿದೆ. ಲೋಕಸಭೆ ಮಾಜಿ ಸ್ಪೀಕರ್ ಮೀರಾ ಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ 6 ಗಂಭೀರ ಆರೋಪಪಟ್ಟಿ ಮಂಡನೆ ಮಾಡಲಾಗಿದೆ. ಜನತಾ ಮಹಾಭಿಯೋಗದಲ್ಲಿ ಆರೋಪಪಟ್ಟಿ ಮಂಡಿಸಿದ ಮಲ್ಲಿಕಾರ್ಜುನ ಖರ್ಗೆ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಿರ್ಣಯ ಮಂಡಿಸಿದ್ದಾರೆ. ಜ್ಞಾನೇಶ್ ಕುಮಾರ್ ವಿರುದ್ಧ ಕಾನೂನು ಪ್ರಕಾರ ವಿಚಾರಣೆ ನಡೆಸಬೇಕು, ದೇಶದ್ರೋಹ ಆರೋಪದಡಿ ಸಿಇಸಿ ಜ್ಞಾನೇಶ್ ವಿಚಾರಣೆ ನಡೆಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.

'ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು'; ಜನತಾ ಮಹಾಭಿಯೋಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಆಗ್ರಹ
ಖರ್ಗೆ ನಿವಾಸದಲ್ಲಿ ಜನತಾ ಮಹಾಭಿಯೋಗ
ಸುಷ್ಮಾ ಚಕ್ರೆ
|

Updated on:Oct 31, 2026 | 5:48 PM

Share

ಮುಖ್ಯಾಂಶಗಳು

  • ಇಂಡಿಯ ಬ್ಲಾಕ್​ನಿಂದ ಖರ್ಗೆ ನಿವಾಸದಲ್ಲಿ ಜನತಾ ಮಹಾಭಿಯೋಗ
  • ಅಣಕು ಸಂಸತ್​​ ಮೂಲಕ ಮಹಾಭಿಯೋಗ ನಡಾವಳಿ ಮಂಡನೆ
  • ಜ್ಞಾನೇಶ್ ಕುಮಾರ್ ರಾಜೀನಾಮೆಗೆ ವಿಪಕ್ಷಗಳ ಒತ್ತಾಯ

ನವದೆಹಲಿ, ಅಕ್ಟೋಬರ್ 31: ವಿಪಕ್ಷಗಳ ಇಂಡಿಯ ಮೈತ್ರಿಕೂಟವು ಇಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸಾಂಕೇತಿಕ ‘ಜನತಾ ಮಹಾಭಿಯೋಗ‘ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಇಸಿ ಜ್ಞಾನೇಶ್ ಕುಮಾರ್ ಅವರು ಮತ ಕಳ್ಳತನ ಪ್ರಕ್ರಿಯೆಗೆ ನೆರವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಆಜ್ಞೆಯಂತೆ ಕೆಲಸ ಮಾಡುತ್ತಿದ್ದಾರೆ, ಹೀಗಾಗಿ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.

ನವದೆಹಲಿಯ ಖರ್ಗೆ ಅವರ ನಿವಾಸದಲ್ಲಿ ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಾಂಕೇತಿಕ ಮಹಾಭಿಯೋಗ ನಡಾವಳಿಯಲ್ಲಿ ಸಿಇಸಿ ವಿರುದ್ಧ ಪ್ರಮುಖ ಆರೋಪಗಳನ್ನು ಮಂಡಿಸಲಾಯಿತು. 145 ವಿಪಕ್ಷ ಸಂಸದರನ್ನು ಅಮಾನತುಗೊಳಿಸಿ 2023ರಲ್ಲಿ ಜಾರಿಗೆ ತಂದ ಕಾಯ್ದೆಯು ಚುನಾವಣಾ ಆಯುಕ್ತರಿಗೆ ದೇಶದ ರಾಷ್ಟ್ರಪತಿ ಅಥವಾ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗಿಂತಲೂ ಹೆಚ್ಚಿನ  ರಕ್ಷಣಾ ಕವಚ ನೀಡಿದೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಖರ್ಗೆ ಆರೋಪಿಸಿದ್ದಾರೆ. ಚುನಾವಣಾ ಆಯೋಗವು ರಾತ್ರೋರಾತ್ರಿ ಜಾರಿಗೆ ತಂದ ಎಸ್​ಐಆರ್​ ಬಿಜೆಪಿಯನ್ನು ವಿರೋಧಿಸುವ ನೈಜ ಮತದಾರರ ಹೆಸರುಗಳನ್ನು ಕಂಪ್ಯೂಟರ್‌ನಿಂದ ಅಳಿಸಿಹಾಕುವ ಸಂಚಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ‘ಅಣಕು ಪಾರ್ಲಿಮೆಂಟ್’ ರದ್ದು; ಜ್ಞಾನೇಶ್ ಕುಮಾರ್ ವಿರುದ್ಧ ಜನ ಮಹಾಭಿಯೋಗಕ್ಕೆ ಇಂಡಿಯಾ ಒಕ್ಕೂಟ ಮಾಸ್ಟರ್ ಪ್ಲಾನ್

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ‘ಇಂಡಿಯಾ’ ಮೈತ್ರಿಕೂಟ ಹೊರಿಸಿದ 6 ಪ್ರಮುಖ ಆರೋಪಗಳು:

ಮತ ಕಳ್ಳತನಕ್ಕೆ ಸಂಚು: ಚುನಾವಣೆಯಲ್ಲಿ ಅಕ್ರಮಗಳನ್ನು ಎಸಗಲು ಪ್ರಚೋದನೆ ಮತ್ತು ಸಹಕಾರ ನೀಡಿರುವುದು.

13.2 ಕೋಟಿ ಮತದಾರರ ಹೆಸರು ಡಿಲೀಟ್: ಅತ್ಯಂತ ಅಕ್ರಮವಾಗಿ ದೇಶದ ಬೃಹತ್ ಸಂಖ್ಯೆಯ 13.2 ಕೋಟಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆರವುಗೊಳಿಸಿರುವುದು.

ಸಂಸತ್ತಿನ ಒಪ್ಪಿಗೆಯಿಲ್ಲದೆ ‘ಫಾರ್ಮ್ 6’ ಬದಲಾವಣೆ: ಸಂಸತ್ತಿನ ಅನುಮೋದನೆ ಪಡೆಯದೇ ನಿಯಮಬಾಹಿರವಾಗಿ ಫಾರ್ಮ್ 6 ಮರುರಚಿಸಿರುವುದು.

ECINET ಮೂಲಕ ಮತದಾರರ ಪಟ್ಟಿ ವಶ: ‘ಈಸಿಐನೆಟ್’ ಡಿಜಿಟಲ್ ತಂತ್ರಜ್ಞಾನ ವೇದಿಕೆಯನ್ನು ಬಳಸಿ ಮತದಾರರ ಪಟ್ಟಿಯ ಸಂಪೂರ್ಣ ನಿಯಂತ್ರಣವನ್ನು ಆಯೋಗ ಪಡೆದುಕೊಂಡಿರುವುದು.

ಉಳಿದ ಇಬ್ಬರು ಚುನಾವಣಾ ಆಯುಕ್ತರ ಕಡೆಗಣನೆ: ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇಬ್ಬರು ಚುನಾವಣಾ ಆಯುಕ್ತರನ್ನು ಪ್ರಕ್ರಿಯೆಯಿಂದ ದೂರವಿಟ್ಟಿರುವುದು.

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕೈಗೊಂಬೆಯಾಗಿರುವುದು: ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗವನ್ನು ಪ್ರಧಾನಿ ಮತ್ತು ಗೃಹ ಸಚಿವರ ಕೈಗೊಂಬೆಯಾಗಿ ನಡೆಸುತ್ತಿರುವುದು.

ಮತದಾನದ ಹಕ್ಕು ಮತ್ತು ಇತಿಹಾಸ ಸ್ಮರಿಸಿದ ಖರ್ಗೆ:

ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಮತ್ತು ಫ್ರಾನ್ಸ್‌ನಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೂ ಮಹಿಳೆಯರಿಗೆ ತಕ್ಷಣಕ್ಕೆ ಮತದಾನದ ಹಕ್ಕು ಸಿಕ್ಕಿರಲಿಲ್ಲ. ಆದರೆ, ಭಾರತ ಸಂವಿಧಾನ ಜಾರಿಯಾದ ಮೊದಲ ದಿನವೇ ಮಹಿಳೆಯರು, ದಲಿತರು ಹಾಗೂ ಬಡವರು ಸೇರಿದಂತೆ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಮತದಾನದ ಹಕ್ಕು ನೀಡಿದೆ. ಅಂದು ಸಂವಿಧಾನ ಜಾರಿಯಾದಾಗಲೂ ಆರ್‌ಎಸ್‌ಎಸ್ ಸಾರ್ವತ್ರಿಕ ಮತದಾನದ ಹಕ್ಕನ್ನು ವಿರೋಧಿಸಿತ್ತು ಎಂದು ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್: ಮಹಾಭಿಯೋಗಕ್ಕೆ ‘ಇಂಡಿ’ಒಕ್ಕೂಟ ಸಿದ್ಧತೆ

“ಸಿಇಸಿ ಜ್ಞಾನೇಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನೇರ ನಿರ್ದೇಶನದಂತೆ ಚುನಾವಣಾ ಆಯೋಗವನ್ನು ನಡೆಸುತ್ತಿದ್ದಾರೆ. ಆಯೋಗವು ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡಿದೆ. 7 ತಿಂಗಳ ಹಿಂದೆ 193 ವಿಪಕ್ಷ ಸಂಸದರು ಸಿಇಸಿ ವಜಾಗಾಗಿ ಸಂಸತ್ತಿನಲ್ಲಿ ನೋಟಿಸ್ ನೀಡಿದ್ದರೂ ಅದನ್ನು ತಿರಸ್ಕರಿಸಲಾಗಿತ್ತು” ಎಂದು ಖರ್ಗೆ ಟೀಕಿಸಿದ್ದಾರೆ.

“ಸಿಇಸಿ ವಿರುದ್ಧ ನಮಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಸಂವಿಧಾನದ ಆಶಯದಂತೆ ಆಯೋಗವು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು ಮತ್ತು ಸಾಮಾನ್ಯ ಜನರ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂಬುದಷ್ಟೇ ನಮ್ಮ ಉದ್ದೇಶ. ದೆಹಲಿಯಲ್ಲಿ ಕುಳಿತ ಯಾರೋ ಒಬ್ಬರು ಬಡವರು, ಮಹಿಳೆಯರು ಮತ್ತು ಯುವಕರ ಮತಗಳನ್ನು ಕಂಪ್ಯೂಟರ್‌ನಿಂದ ಅಳಿಸಿಹಾಕದಂತೆ ತಡೆಯುವುದು ನಮ್ಮ ಕರ್ತವ್ಯ” ಎಂದಿದ್ದಾರೆ.

ಮೀರಾ ಕುಮಾರ್ ಹೇಳಿದ್ದೇನು?:

ನಡಾವಳಿಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಸ್ಪೀಕರ್ ಮೀರಾ ಕುಮಾರ್ ಮಾತನಾಡಿ, “ನಮ್ಮ ದೇಶದ ಪ್ರಜಾಪ್ರಭುತ್ವದ ಮಾದರಿಯನ್ನು ಇಡೀ ವಿಶ್ವವೇ ಗೌರವಿಸುತ್ತದೆ. ಈ ವ್ಯವಸ್ಥೆಯ ಶಕ್ತಿ ಇರುವುದು ಚುನಾವಣೆಯಲ್ಲಿ, ಮತ್ತು ಚುನಾವಣೆಯ ಆತ್ಮವೇ ಮತದಾರ. ಒಬ್ಬನೇ ಒಬ್ಬ ಅರ್ಹ ಮತದಾರನಿಗೆ ಮತದಾನದ ಹಕ್ಕು ನಿರಾಕರಿಸಲ್ಪಟ್ಟರೂ ಅದು ಪ್ರಜಾಪ್ರಭುತ್ವದ ಆತ್ಮಕ್ಕೆ ತಗಲುವ ಭಾರಿ ಪೆಟ್ಟು. ಈ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ರಾಜ್ಯಸಭೆಯಲ್ಲಿ ರಾಜ್ಯಸಭಾ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಮಹಾಭಿಯೋಗ ಪ್ರಸ್ತಾವನೆ ಮಂಡಿಸಲಿದ್ದಾರೆ” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:43 pm, Sat, 31 October 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
TV9 ಬಿಗ್ ಇಂಪ್ಯಾಕ್ಟ್;ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ
TV9 ಬಿಗ್ ಇಂಪ್ಯಾಕ್ಟ್;ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ
ಜ್ಞಾನಭಾರತಿ ವಿವಿ ಬಳಿ ಸಿಕ್ಕಿದ್ದು ಫೇಕ್​ ಬಾಂಬ್​! ಖಾಲಿ ಪೈಪ್ ಪತ್ತೆ
ಜ್ಞಾನಭಾರತಿ ವಿವಿ ಬಳಿ ಸಿಕ್ಕಿದ್ದು ಫೇಕ್​ ಬಾಂಬ್​! ಖಾಲಿ ಪೈಪ್ ಪತ್ತೆ
ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ; ಕರವೇ ನಾರಾಯಣ ಗೌಡ ಹೇಳಿದ್ದೇನು?
ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ; ಕರವೇ ನಾರಾಯಣ ಗೌಡ ಹೇಳಿದ್ದೇನು?
ಯಶಸ್​​ಗೆ ಫೇವರ್ ಮಾಡಲು ಗಗನ್ ತಂಡಕ್ಕೆ ಸೌಂದರ್ಯಾ ಮೋಸ? ಸುದೀಪ್ ಕ್ಲಾಸ್
ಯಶಸ್​​ಗೆ ಫೇವರ್ ಮಾಡಲು ಗಗನ್ ತಂಡಕ್ಕೆ ಸೌಂದರ್ಯಾ ಮೋಸ? ಸುದೀಪ್ ಕ್ಲಾಸ್
ವಿಜಯಪುರ ವಿಮಾನ ನಿಲ್ದಾಣ ಜೊತೆಗೆ ಪೈಲಟ್ ಟ್ರೈನಿಂಗ್ ಶಾಲೆ ಆರಂಭಕ್ಕೆ ಪ್ಲಾನ್
ವಿಜಯಪುರ ವಿಮಾನ ನಿಲ್ದಾಣ ಜೊತೆಗೆ ಪೈಲಟ್ ಟ್ರೈನಿಂಗ್ ಶಾಲೆ ಆರಂಭಕ್ಕೆ ಪ್ಲಾನ್
ಕಾಗೋಡು ತಿಮ್ಮಪ್ಪಗೆ ಡಿಕೆಶಿ​ ವಿಡಿಯೋ ಕಾಲ್​​: ಆರೋಗ್ಯ ವಿಚಾರಿಸಿದ ಸಿಎಂ
ಕಾಗೋಡು ತಿಮ್ಮಪ್ಪಗೆ ಡಿಕೆಶಿ​ ವಿಡಿಯೋ ಕಾಲ್​​: ಆರೋಗ್ಯ ವಿಚಾರಿಸಿದ ಸಿಎಂ
ಸೌಜನ್ಯ ಶವ ಪತ್ತೆಯಾದ ಸ್ಥಳದಲ್ಲಿ ಎಸ್‌ಐಟಿ ತಂಡದಿಂದ ಕ್ರೈಂ ಸೀನ್ ಮರುಸೃಷ್ಟಿ
ಸೌಜನ್ಯ ಶವ ಪತ್ತೆಯಾದ ಸ್ಥಳದಲ್ಲಿ ಎಸ್‌ಐಟಿ ತಂಡದಿಂದ ಕ್ರೈಂ ಸೀನ್ ಮರುಸೃಷ್ಟಿ
ಬೆಂಗಳೂರಿನಲ್ಲಿ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆ
ಬೆಂಗಳೂರಿನಲ್ಲಿ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆ
ಕೋರಮಂಗಲದಲ್ಲಿ ಬಿಎಂಟಿಸಿ ಬಸ್ ಅಗ್ನಿ ಅವಘಡ; ತಪ್ಪಿದ ಅನಾಹುತ!
ಕೋರಮಂಗಲದಲ್ಲಿ ಬಿಎಂಟಿಸಿ ಬಸ್ ಅಗ್ನಿ ಅವಘಡ; ತಪ್ಪಿದ ಅನಾಹುತ!
ಮುಗಿಯಿತು ಮದುವೆ ಸಂಭ್ರಮ, ಶುರು ಆಯ್ತು ಎವಿಕ್ಷನ್ ಭಯ: ವಿಡಿಯೋ
ಮುಗಿಯಿತು ಮದುವೆ ಸಂಭ್ರಮ, ಶುರು ಆಯ್ತು ಎವಿಕ್ಷನ್ ಭಯ: ವಿಡಿಯೋ